ಹಿಟ್ಲರ್‌ ಕಲ್ಯಾಣಕ್ಕೆ 600ರ ಸಂಭ್ರಮ: ನಕಲಿ ಅಂತರಾಳ ಬಣ್ಣ ಬಯಲಾಗುತ್ತಾ?

Published : Nov 13, 2023, 08:31 PM IST
ಹಿಟ್ಲರ್‌ ಕಲ್ಯಾಣಕ್ಕೆ 600ರ ಸಂಭ್ರಮ: ನಕಲಿ ಅಂತರಾಳ ಬಣ್ಣ ಬಯಲಾಗುತ್ತಾ?

ಸಾರಾಂಶ

ಹಿಟ್ಲರ್‌ ಕಲ್ಯಾಣ ಸೀರಿಯಲ್‌ಗೆ 600ನೇ ಕಂತಿನ ಸಂಭ್ರಮ: ನಕಲಿ ಅಂತರಾಳ ಬಣ್ಣ ಬಯಲಾಗೋದು ಯಾವಾಗ ಎನ್ನುತ್ತಿದ್ದಾರೆ ಫ್ಯಾನ್ಸ್‌.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಹಿಟ್ಲರ್‌ ಕಲ್ಯಾಣ ಸೀರಿಯಲ್‌ಗೆ ಈಗ 600ನೇ ಸಂಚಿಕೆಯ ಸಂಭ್ರಮ. 2021 ಆಗಸ್ಟ್‌ 6 ರಂದು ಶುರುವಾಗಿರುವ ಈ ಧಾರಾವಾಹಿ ಈಗ 600ನೇ ಸಂಚಿಕೆಯನ್ನು ತಲುಪಿದೆ. ಕುತೂಹಲ ಕೆರಳಿಸುತ್ತಿರುವ ಧಾರಾವಾಹಿಗಳಲ್ಲಿ ಒಂದು ಹಿಟ್ಲರ್​ ಕಲ್ಯಾಣ (Hitler Kalyana). ಈ ಧಾರಾವಾಹಿಯಲ್ಲಿ ಹೈಲೈಟ್​ ಆಗ್ತಿರೋದು ಪಾತ್ರಗಳಲ್ಲಿ ಒಂದು ಲೀಲಾದ್ದಾದರೆ, ಇನ್ನೊಂದು ಅಂತರಾ.  ಲೀಲಾ ಪಾತ್ರಧಾರಿ ಮಾಡುವುದೆಲ್ಲವೂ ಎಡವಟ್ಟೇ ಆಗಿದ್ದರೂ ಅದೆಲ್ಲವೂ ಪ್ಲಸ್​ ಪಾಯಿಂಟೇ ಆಗಿ ಈಕೆಯ ಮನೆಗೆ ನೆರವಾಗುತ್ತಿರುವುದು ಕೂಡ ಇಂಟರೆಸ್ಟಿಂಗ್​ ವಿಷಯ. ಯಾವುದೋ ಒಂದು ಸಂದರ್ಭದಲ್ಲಿ ವಯಸ್ಸಿನಲ್ಲಿ ತೀರಾ ದೊಡ್ಡವನಾಗಿರುವ ಎಜೆಗೆ ಮದುವೆಯಾಗಿ ತನಗಿಂತಲೂ ದೊಡ್ಡವರಾಗಿರುವ ಸೊಸೆಯಂದಿರಿಗೆ ಅತ್ತೆಯಾಗಿರುವ ಪಾತ್ರ ಲೀಲಂದು.   ಈ ಮೊದಲು ಗಂಡನ ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ ಲೀಲಾ ಈಗ ಎಲ್ಲರಿಗೂ ಹತ್ತಿರ. ಆಕೆಯನ್ನು ಬಿಟ್ಟು ಇರುವುದು ಕಷ್ಟ ಎನ್ನುವ ಸ್ಥಿತಿ. 

ಅದೇ ಇನ್ನೊಂದೆಡೆ ಎಜೆಯ ಮೊದಲ ಪತ್ನಿಯಾಗಿದ್ದ ಅಂತರಾ ಸತ್ತು ಹೋಗಿದ್ದಾಳೆ. ಆದರೆ ಅವಳದ್ದೇ ರೂಪ ಇರುವ ಪ್ರಾರ್ಥನಾ ಅಂತರಾ ಎಂದು ಹೇಳಿಕೊಂಡು ಎ.ಜೆ ಮನೆ ಸೇರಿದ್ದಾಳೆ. ಮೊದಲಿಗೆ ಸೌಮ್ಯ ರೂಪದ ಅಂತರಾಳ ರೂಪವನ್ನೇ ಪಡೆದಿರುವ ವಿಲನ್​ ಪ್ರಾರ್ಥನಾ ತಾನೇ ಅಂತರಾ ಎಂದುಕೊಂಡು ಮನೆಯವರನ್ನು ನಂಬಿಸುತ್ತಿದ್ದಾಳೆ. ಈಕೆಯ ಬಂಡವಾಳ ಬಯಲಾಗುವುದೇ ಎನ್ನುವುದು ಈಗಿರುವ ಕುತೂಹಲ.  

ನಿಜ ಜೀವನದ ಸತ್ಯಾಳ ರೂಪ ನೋಡಿರುವಿರಾ? ರೀಲ್​ ಲೈಫ್​ ಗಂಡ ಕಾರ್ತಿಕ್​ ಜೊತೆ ಬೊಂಬೆ ಹಾಡಿಗೆ ಬೊಂಬಾಟ್​ ಡ್ಯಾನ್ಸ್​​

ಈಗ ಕಿರುತೆರೆ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಮಹಿಳೆಯರೇ ನಾಯಕಿ, ಮಹಿಳೆಯೇ ವಿಲನ್​. ಒಂದು ಕುಟುಂಬದ ಸುತ್ತಲೂ ನಡೆಯುವ ಕಥೆಯೇ ಎಲ್ಲಾ ಧಾರಾವಾಹಿಗಳ ಕಥಾವಸ್ತುವಾಗಿರುತ್ತದೆ. ಒಬ್ಬಾಕೆ ಅತಿ ಎನ್ನುವಷ್ಟು ಮುಗ್ಧೆಯಾಗಿದ್ದರೆ ಇನ್ನೊಬ್ಬಳು ಅತಿ ಎನ್ನುವಷ್ಟು ಕ್ರೂರಿ. ಪ್ರತಿಯೊಂದು ಪಾತ್ರದಲ್ಲಿಯೂ ತಮ್ಮನ್ನೇ ಮಹಿಳೆಯರು ಆಹ್ವಾನಿಸಿಕೊಳ್ಳುವ ಕಾರಣ, ಧಾರಾವಾಹಿಗಳು ಇಂದು ಇಷ್ಟರಮಟ್ಟಿಗೆ ಜನಪ್ರಿಯವಾಗುತ್ತಿದೆ. ಇದೀಗ ಟಿಆರ್​ಪಿಗಾಗಿ ವಿಭಿನ್ನ ಕಥಾವಸ್ತು ಇರುವ ಧಾರಾವಾಹಿಗಳತ್ತ ನಿರ್ಮಾಪಕರು ಮುಂದಾಗುತ್ತಿದ್ದಾರೆ. ಕಥಾವಸ್ತುಗಳಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡುತ್ತಾ ಧಾರಾವಾಹಿ ಪ್ರಿಯರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ಧಾರಾವಾಹಿ ಕೆಲ ದಿನ ಚೆನ್ನಾಗಿ ಓಡಿಲ್ಲ ಎಂದರೆ ಅದನ್ನು ಬಿಟ್ಟು ಬೇರೆ ಧಾರಾವಾಹಿಗಳತ್ತ (TV Serials) ಗಮನ ಹರಿಸುವುದು ಮಾಮೂಲು.  ಆದ್ದರಿಂದ ಚ್ಯೂಯಿಂಗ್​ ಗಮ್​ನಂತೆ ಧಾರಾವಾಹಿಗಳನ್ನು ಎಳೆಯುವುದರ ಜೊತೆಜೊತೆಗೇ ಪ್ರತಿಯೊಂದು ಕಂತಿನಲ್ಲಿಯೂ ಕುತೂಹಲ ತಣಿಸುವಂತೆ  ಮಾಡಲೇಬೇಕಾದ ಅನಿವಾರ್ಯತೆಯೂ ಇದೆ. ಇಂಥ ಕುತೂಹಲದ ತಿರುವು ಹಿಟ್ಲರ್‌ ಕಲ್ಯಾಣದಲ್ಲಿ ಪ್ರಾರ್ಥನಾ ಪಾತ್ರಧಾರಿ ಮೂಡಿಸಿದ್ದಾಳೆ.

ಸದ್ಯ ಈಗ ಪ್ರಾರ್ಥನಾ, ಅಂತರ ಅಲ್ಲ ಎನ್ನುವುದು ಮನೆಯ ಸೊಸೆ ಲೀಲಾಳಿಗೆ ತಿಳಿದಿದೆ. ಜೊತೆಗೆ ಇನ್ನೋರ್ವ ಸೊಸೆ ದುರ್ಗಾಳಿಗೂ ಗೊತ್ತು. ಲೀಲಾ ಕಂಡರೆ ಸಿಟ್ಟು ಕಾರುತ್ತಿದ್ದ ದುರ್ಗಾ, ಆಕೆಯನ್ನು ಮನೆಯಿಂದ ಓಡಿಸಲು ಅಂತರಾ ರೂಪ ಹೊತ್ತ ಪ್ರಾರ್ಥಳಾನ್ನು ಕರೆದುಕೊಂಡು ಬಂದು ಈಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಲೀಲಾ ಈ ಸತ್ಯವನ್ನು ತನ್ನ ಗಂಡ ಎಜೆಗೆ ಹೇಳಿದರೆ ಅಲ್ಲಿಗೆ ಧಾರಾವಾಹಿ ಮುಗಿದೇ ಹೋಗುತ್ತದೆ. ಎಜೆಗೆ ಖುದ್ದಾಗಿ ಸತ್ಯ ಗೊತ್ತಾಗಬೇಕು ಎನ್ನುವುದು ಲೀಲಾಳ ವಾದ. ಆದ್ದರಿಂದ ಈ ಧಾರಾವಾಹಿಯನ್ನು ಇನ್ನಷ್ಟು ಎಳೆಯುತ್ತಲೇ ಇರಲಾಗಿದೆ.  ಈಗ ಧಾರಾವಾಹಿ ಶುರುವಾಗಿ ಎರಡೂವರೆ ವರ್ಷವಾಗಿದ್ದು, ಇನ್ನಾದರೂ ಪ್ರಾರ್ಥನಾ ಬಣ್ಣ ಬಯಲಾಗುವುದೇ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಹಲವರು ಚ್ಯೂಯಿಂಗ್‌ ಗಮ್‌ನಂತೆ ಎಳೆದದ್ದು ಸಾಕು, ಬೇಗ ಮುಗಿಸಿ ಎಂದೂ ಹೇಳುತ್ತಿದ್ದಾರೆ.

ಮುಂದಿನ ವಾರ ಮದುವೆ, ಕಾಟಾಚಾರಕ್ಕೆ ಕರಿಯಲ್ಲ... ಬಿಗ್​ಬಾಸ್​ ಪ್ರಥಮ್ ಇನ್ವಿಟೇಷನ್​ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!