ದೀಪಾ-ದಿಶಾಗೆ ವಿದಾಯ ಹೇಳಿ ಭಾವುಕರಾದ ದಿಯಾ ಪಾಲಕ್ಕಲ್: ‘ಬ್ರಹ್ಮಗಂಟು’ ನೆನೆದು ಏನಂದ್ರು?

Published : Aug 10, 2026, 07:41 PM IST
Diya Palakkal

ಸಾರಾಂಶ

Brahmagantu Serial: ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದ ದಿಯಾ, ಇದೀಗ ತಮ್ಮ ಪಾತ್ರಗಳಿಗೆ ಭಾವುಕವಾಗಿ ಗುಡ್‌ಬೈ ಹೇಳಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಬ್ರಹ್ಮಗಂಟು’ ಇದೀಗ ತನ್ನ ಪಯಣ ಮುಗಿಸಿದೆ. ಬರೋಬ್ಬರಿ ಮೂರು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸಿದ್ದ ಈ ಧಾರಾವಾಹಿಯ ಅಂತ್ಯ ಅಭಿಮಾನಿಗಳಿಗೆ ಭಾವುಕ ಕ್ಷಣವಾಗಿದ್ದರೆ, ನಾಯಕಿ ದಿಯಾ ಪಾಲಕ್ಕಲ್‌ ಅವರಿಗೂ ಇದು ಮರೆಯಲಾಗದ ವಿದಾಯವಾಗಿದೆ. ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದ ದಿಯಾ, ಇದೀಗ ತಮ್ಮ ಪಾತ್ರಗಳಿಗೆ ಭಾವುಕವಾಗಿ ಗುಡ್‌ಬೈ ಹೇಳಿದ್ದಾರೆ.

ಮೂರು ವರ್ಷಗಳ ಪಯಣಕ್ಕೆ ಭಾವುಕ ವಿದಾಯ!

‘ಬ್ರಹ್ಮಗಂಟು’ ಮುಗಿದ ಬೆನ್ನಲ್ಲೇ ದಿಯಾ ಪಾಲಕ್ಕಲ್‌ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮೂರು ವರ್ಷಗಳು ಹೇಗೆ ಕಳೆದುಹೋಯಿತೋ ಗೊತ್ತಾಗಲಿಲ್ಲ ಎಂದು ಹೇಳಿರುವ ಅವರು, ದೀಪಾ ಹಾಗೂ ದಿಶಾ ಪಾತ್ರಗಳಿಗೆ ವಿದಾಯ ಹೇಳುವಾಗ ತಮ್ಮ ಹೃದಯ ತುಂಬಿಬಂದಿತ್ತು ಎಂದು ಬರೆದುಕೊಂಡಿದ್ದಾರೆ. ದಿಯಾ ಪಾಲಿಗೆ ‘ಬ್ರಹ್ಮಗಂಟು’ ಕೇವಲ ಒಂದು ಧಾರಾವಾಹಿಯಾಗಿರಲಿಲ್ಲ. ದೀಪಾ ಪಾತ್ರ ತಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿತ್ತು ಎಂದು ಅವರು ಹೇಳಿದ್ದಾರೆ.

ತಮ್ಮ ನೈಜ ಜೀವನಶೈಲಿಗಿಂತ ಸಂಪೂರ್ಣ ವಿಭಿನ್ನವಾದ, ಗ್ಲಾಮರ್‌ ಇಲ್ಲದ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ದೊಡ್ಡ ಪಾಠ ಕಲಿಸಿತು ಎಂದು ದಿಯಾ ನೆನಪಿಸಿಕೊಂಡಿದ್ದಾರೆ. ಒಂದೇ ಧಾರಾವಾಹಿಯಲ್ಲಿ ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಶೇಡ್‌ಗಳ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದನ್ನು ತಮ್ಮ ಅದೃಷ್ಟವೆಂದೇ ದಿಯಾ ಭಾವಿಸಿದ್ದಾರೆ.

ನಿರ್ಮಾಪಕರಿಗೆ, ತಂಡಕ್ಕೆ ದಿಯಾ ಧನ್ಯವಾದ

ತಮ್ಮ ಮೂರು ವರ್ಷದ ಪಯಣದಲ್ಲಿ ಬೆಂಬಲವಾಗಿ ನಿಂತ ನಿರ್ಮಾಪಕರಾದ ದಿಲೀಪ್‌ ರಾಜ್‌ ಹಾಗೂ ಶ್ರೀವಿದ್ಯಾ ಅವರಿಗೆ ದಿಯಾ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಮೊದಲ ದಿನದಿಂದಲೂ ತಮ್ಮೊಂದಿಗೆ ನಿಂತು ಮಾರ್ಗದರ್ಶನ ನೀಡಿದ ವಿದ್ಯಾ ಮೇಡಂ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ದಿಲೀಪ್‌ ರಾಜ್‌ ಅವರಿಂದ ಕಲಿತ ಪ್ರತಿಯೊಂದು ವಿಚಾರವೂ ಸದಾ ತಮ್ಮ ಹೃದಯದಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರಶಾಂತ್‌ ಟೋನಿ, ನಿಶ್ಚಿತಾ ಶರತ್‌, ರಾಕೇಶ್‌ ಸೇರಿದಂತೆ ‘ಬ್ರಹ್ಮಗಂಟು’ ತಂಡದ ಪ್ರತಿಯೊಬ್ಬರಿಗೂ ದಿಯಾ ಧನ್ಯವಾದ ಅರ್ಪಿಸಿದ್ದಾರೆ.

‘ಮೂರು ವರ್ಷಗಳಲ್ಲಿ ಇಲ್ಲೊಂದು ಮುದ್ದು ಕುಟುಂಬವೇ ನಿರ್ಮಾಣವಾಯಿತು’

ಧಾರಾವಾಹಿಯ ಸೆಟ್‌ ತಮ್ಮ ಪಾಲಿಗೆ ಕೇವಲ ಕೆಲಸ ಮಾಡುವ ಸ್ಥಳವಾಗಿರಲಿಲ್ಲ. ಮೂರು ವರ್ಷಗಳ ಅವಧಿಯಲ್ಲಿ ಅಲ್ಲೊಂದು ಮುದ್ದಾದ ಕುಟುಂಬವೇ ನಿರ್ಮಾಣವಾಗಿತ್ತು ಎಂದು ದಿಯಾ ಭಾವುಕರಾಗಿದ್ದಾರೆ. ತಮ್ಮ ಸಹನಟ ಭುವಿ ಅವರನ್ನೂ ದಿಯಾ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಸೆಟ್‌ನಲ್ಲಿ ಪ್ರತಿದಿನವೂ ಮೋಜಿನಿಂದ ಕೂಡಿರುವಂತೆ ನೋಡಿಕೊಂಡ ಸೂಪರ್‌ ಕೋ-ಸ್ಟಾರ್‌ ಎಂದು ಅವರನ್ನು ಬಣ್ಣಿಸಿರುವ ದಿಯಾ, ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಭಿಮಾನಿಗಳ ಪ್ರೀತಿಯೇ ದೊಡ್ಡ ಶಕ್ತಿ!

ತಮ್ಮ ಪೋಸ್ಟ್‌ನ ಕೊನೆಯಲ್ಲಿ ದಿಯಾ ಪಾಲಕ್ಕಲ್‌ ತಮ್ಮ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ. ದೀಪಾ, ದಿಶಾ ಹಾಗೂ ತೆರೆಯ ಮೇಲಿನ ತಮ್ಮ ಜೋಡಿಯನ್ನು ಪ್ರೀತಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ವೀಕ್ಷಕರ ಪ್ರೀತಿಯೇ ತಮ್ಮ ಅತಿ ದೊಡ್ಡ ಶಕ್ತಿ ಎಂದು ಹೇಳಿರುವ ದಿಯಾ, ‘ಬ್ರಹ್ಮಗಂಟು’ ತಮ್ಮ ಬದುಕಿಗೆ ಮರೆಯಲಾಗದ ನೆನಪುಗಳು ಹಾಗೂ ಸುಂದರ ಸಂಬಂಧಗಳನ್ನು ಕೊಟ್ಟಿದೆ ಎಂದು ಭಾವುಕರಾಗಿದ್ದಾರೆ. ಮೂರು ವರ್ಷಗಳ ಕಾಲ ದೀಪಾ ಮತ್ತು ದಿಶಾ ಆಗಿ ಮನೆಮಾತಾಗಿದ್ದ ದಿಯಾ ಪಾಲಕ್ಕಲ್‌ ಇದೀಗ ಆ ಪಾತ್ರಗಳಿಗೆ ವಿದಾಯ ಹೇಳಿದ್ದಾರೆ. ಧಾರಾವಾಹಿ ಮುಗಿದರೂ, ದಿಯಾ ಅಭಿನಯಿಸಿದ ಈ ಎರಡು ಪಾತ್ರಗಳು ಹಾಗೂ ‘ಬ್ರಹ್ಮಗಂಟು’ಯೊಂದಿಗಿನ ಅವರ ಪಯಣ ವೀಕ್ಷಕರ ನೆನಪಿನಲ್ಲಿ ಉಳಿಯುವುದಂತೂ ಖಚಿತ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟ್ರೆಂಡಿಂಗ್‌ನಲ್ಲಿದೆ ಕಾರ್ಗಿಲ್‌ ಯುದ್ಧ ಆಧಾರಿತ ವೆಬ್ ಸೀರೀಸ್!: 6 ಎಪಿಸೋಡ್‌ಗಳ ಥ್ರಿಲ್ಲರ್‌ಗೆ ಆನಂದ್‌ ಮಹೀಂದ್ರಾ ಫಿದಾ
ಮುದ್ದಿನ ನಾಯಿ ಸಾವಿಗೆ ಕಣ್ಣೀರಿಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ, 13 ವರ್ಷದ ನೆನಪಿನೊಂದಿಗೆ ಭಾವುಕ ಪೋಸ್ಟ್