
ಮುಂಬೈ (ಆ.10) ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಭಾರಿ ಜನಪ್ರಿಯತೆ ಪಡೆದ ನಟಿ ನಿಕ್ಕಿ ತಾಂಬೋಲಿ ಇದೀಗ ಭಾವುಕರಾಗಿದ್ದಾರೆ. ತಾವು ಕಳೆದ 13 ವರ್ಷಗಳಿಂದ ಸಾಕಿ ಸಲಹಿದ ಮುದ್ದಿನ ನಾಯಿ ಕ್ರಿಸ್ಟಿ ಸಾವು ನಟಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕ್ರಿಸ್ಟಿ ಕಳೆದಕೊಂಡ ನಟಿ ನಕ್ಕಿ ತಾಂಬೋಲಿ ಕಣ್ಣೀರಿಟ್ಟಿದ್ದಾರೆ. ಇದ ಕಳೆದ 13 ವರ್ಷಗಳ ಸುಂದರ ಕ್ಷಣಗಳ ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ. ನನ್ನ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಿಕ್ಕಿ ಕಣ್ಣೀರಿಟ್ಟಿದ್ದಾರೆ.
ನಿಕ್ಕಿ ತಾಂಬೋಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೋವು ಹಂಚಿಕೊಂಡಿದ್ದಾರೆ. ಕಳೆದ 13 ವರ್ಷಗಳ ಕಾಲ ಕ್ರಿಸ್ಟಿ ನನ್ನ ಜೀವನಕ್ಕೆ ಕೊಟ್ಟ ಪ್ರೀತಿ, ಸುಖ, ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ನೋವು ನಲಿವುಗಳಲ್ಲಿ ಕ್ರಿಸ್ಟಿ ಪಾಲುದಾರನಾಗಿದ್ದ. ನಾನು ಕುಗ್ಗಿದಾಗ, ಮನಸ್ಸು ಭಾರವಾದಾಗ ಅದೇ ಪ್ರೀತಿ, ಧೈರ್ಯ ನೀಡುತ್ತಿತ್ತ. ನನ್ನ ಪಕ್ಕದಲ್ಲೇ ನಿಂತು ನನ್ನ ಸಂತೈಸುತ್ತಿದ್ದ. ಕ್ರಿಸ್ಟಿಯನ್ನು ಕಳೆದುಕೊಂಡ ನನನಗೆ ಅನಾಥನಾದಂತೆ ಎನಿಸುತ್ತಿದೆ. ನಿನ್ನ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಲಿಲ್ಲ. ಮಗುವೆ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಹಿಂದಿ ಬಿಗ್ ಬಾಸ್ ಶೋ 14 ನೇ ಆವೃತ್ತಿಯಲ್ಲಿ ನಿಕ್ಕಿ ತಾಂಬೋಲಿ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮೂಲಕ ನಿಕ್ಕಿ ಭಾರಿ ಜನಪ್ರಿಯತೆ ಪಡೆದಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವು ಬಾರಿ ತಮ್ಮ ಸಾಕು ಪ್ರಾಣಿ ಕ್ರಿಸ್ಟಿ ಹಾಗೂ ಲಿಲ್ಲಿ ನೆನದು ಹಲವು ಬಾರಿ ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ವೇಳೆ ಸಾಕು ಪ್ರಾಣಿಗಳ ಬಿಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಹಲವು ಬಾರಿ ನಿಕ್ಕಿ ಭಾವುಕರಾಗಿದ್ದರು.
ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿ ಮನಗೆ ಮರಳಿದ ನಿಕ್ಕಿ ತಾಂಬೋಲಿ ಮೊದಲು ತಮ್ಮ ಮುದ್ದಿನ ಸಾಕು ಪ್ರಾಣಿಗಳ ಜೊತೆ ಮುದ್ದಾಡಿದ್ದರು. ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಪ್ರಾಣಿಗಳ ಕುರಿತು ಸದಾ ಧ್ವನಿ ಎತ್ತುವ ನಿಕ್ಕಿ ಇದೀಗ ತಮ್ಮ ಕ್ರಿಸ್ಟಿ ಕಳೆದುಕೊಂಡ ನೋವಿನಲ್ಲಿ ಭಾವುಕರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.