ಪೊಲೀಸರಿಂದ ಗಂಡ ತಾಂಡವ್‌ನನ್ನು ಬಚಾವ್‌ ಮಾಡಿ ಯಮಲೋಕಕ್ಕೆ ಕರ್ಕೊಂಡು ಹೋದ ಭಾಗ್ಯ?

By Suchethana D  |  First Published Nov 25, 2024, 5:19 PM IST

ಗಂಡನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡ ಭಾಗ್ಯ ಅವನ ಸಹಾಯಕ್ಕೆ ಧಾವಿಸಿದ್ದಾಳೆ. ಅವನನ್ನು ದರದರ ಎಳೆದುಕೊಂಡು ಹೋಗಿದ್ದಾಳೆ. ಮುಂದೇನಾಯ್ತು ನೋಡಿ!
 


ಕೊನೆಗೂ ಗಂಡನ ಸತ್ಯ ಭಾಗ್ಯಳಿಗೆ ತಿಳಿದಿದೆ. ಅವಳಿಗೆ ಭೂಮಿಯೇ ಕುಸಿದ ಅನುಭವ. ಕುಟುಂಬ, ಗಂಡ ಮಕ್ಕಳು ಎಂದು ತನ್ನ ಜೀವನ ಸವೆಸಿ, ಗಂಡನೇ ಸರ್ವಸ್ವ ಎಂದುಕೊಂಡ ತನ್ನ ಬಾಳು ಹೀಗಾಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅತ್ತೆ ಮತ್ತು ತಂಗಿ ಪೂಜಾ ವಿಷಯ ಮುಚ್ಚಿಟ್ಟಿರುವುದು ತಿಳಿದು ನೊಂದುಕೊಂಡಿದ್ದಾಳೆ. ಅದೇ ನೋವಿನಿಂದ ಮನೆಗೆ ಬಂದಿದ್ದಾಳೆ. ಆಗ ತಾಂಡವ್‌ ಕರೆ ಮಾಡಿದ್ದಾನೆ. ಅಷ್ಟಕ್ಕೂ ಗಂಡ ಕರೆ ಮಾಡಿದ್ದು, ಅವನನ್ನು ಬಚಾವ್‌ ಮಾಡುವುದಕ್ಕಾಗಿ. ಅಷ್ಟಕ್ಕೂ ಆಗಿದ್ದೇನೆಂದರೆ ತಾಂಡವ್‌ ಮತ್ತು ಶ್ರೇಷ್ಠಾ ಇಬ್ಬರೂ  ಫುಟ್‌ ಟೈಟ್‌ ಆಗಿದ್ದರು. ಮದ್ಯದ ಅಮಲಿನದ್ದ ತಾಂಡವ್‌ ತನಗೆ ಬೇರೆ ಮದುವೆಯಾಗಿದ್ದು, ಅವಳು ಸರಿಯಿಲ್ಲ, ಇವಳನ್ನು ಇಲ್ಲೇ ಮದುವೆಯಾಗುತ್ತೇನೆ ಎಂದುಬಿಟ್ಟ. ಅಲ್ಲಿಗೆ ಸ್ಟಾರ್‍‌ ಹೋಟೆಲ್‌ ಮಾಲೀಕರಿಗೆ ಈ ವಿಷಯ ತಿಳಿದು ಸ್ಥಳಕ್ಕೆ ಬಂದು ತಾಂಡವ್‌ನ ವಿರುದ್ಧ ಮಾತಾಡಿದರು. ಕೊತ ಕೊತ ಕುದ್ದ ಶ್ರೇಷ್ಠಾ ಬಾಯಿಗೆ ಬಂದಂತೆ ಮಾಲೀಕರನ್ನು ಬೈದಳು. ಅದರಿಂದ ಸಿಟ್ಟಿಗೆದ್ದ ಮಾಲೀಕರು ಪೊಲೀಸರಿಗೆ ಕರೆಯುವುದಾಗಿ ಹೇಳಿಫೋನ್ ರಿಸೀವ್‌ ಮಾಡುತ್ತಿದ್ದಂತೆಯೇ ತಾಂಡವ್‌ ಕಾಲಿಗೆ ಬೀಳೋದೊಂದೇ ಬಾಕಿ. ಆಗ ಮಾಲೀಕ, ಅಲ್ಲಿ ಪತ್ನಿ ಇದ್ದರೂ ಅವಳಿಗೆ ಮೋಸ ಮಾಡಿರುವ ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದಾಗ ತಾಂಡವ್‌ ಮತ್ತು ಶ್ರೇಷ್ಠಾ ಪೆಚ್ಚಾಗಿ ಹೋದರು.

ಕೊನೆಗೆ ಓನರ್‍‌ ಒಂದು ಚಾನ್ಸ್‌ ಕೊಡ್ತೇನೆ. ಪೊಲೀಸರಿಂದ ತಪ್ಪಿಸಿಕೊಳ್ಳಬೇಕು ಎಂದರೆ, ನೀನು ಪತ್ನಿಯನ್ನು ಇಲ್ಲಿಗೆ ಕರೆಸು ಎಂದರು. ತಾಂಡವ್‌ ಮತ್ತು ಶ್ರೇಷ್ಠಾಳಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ. ಆದರೆ ಅರೆಸ್ಟ್‌ ಆಗುವ ಬದಲು ಪತ್ನಿಯ ಸಹಾಯ ಕೇಳುವುದೇ ಬೆಸ್ಟ್‌ ಎಂದುಕೊಂಡು ಆಕೆಗೆ ಕಾಲ್‌ ಮಾಡಿದ್ದಾನೆ. ಇತ್ತ ಭೂಮಿಯೇ ಕುಸಿದ ಅನುಭವ ಭಾಗ್ಯಳಿಗೆ. ಕುಟುಂಬ, ಗಂಡ ಮಕ್ಕಳು ಎಂದು ತನ್ನ ಜೀವನ ಸವೆಸಿ, ಗಂಡನೇ ಸರ್ವಸ್ವ ಎಂದುಕೊಂಡ ತನ್ನ ಬಾಳು ಹೀಗಾಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅತ್ತೆ ಮತ್ತು ತಂಗಿ ಪೂಜಾ ವಿಷಯ ಮುಚ್ಚಿಟ್ಟಿರುವುದು ತಿಳಿದು ನೊಂದುಕೊಂಡಿದ್ದಾಳೆ. ಅದೇ ನೋವಿನಿಂದ ಮನೆಗೆ ಬಂದಿದ್ದಾಳೆ. ಆಗ ತಾಂಡವ್‌ ಕರೆ ಮಾಡಿದ್ದಾನೆ. 

Tap to resize

Latest Videos

undefined

ತಾಂಡವ್‌ ಕ್ರೂರತನಕ್ಕೆ ಕಾರಣ ತಿಳಿಸುತ್ತಲೇ ಪ್ರತಿ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್!

ಗಂಡನ ಕರೆ ಸ್ವೀಕರಿಸಿದ್ದಾಳೆ ಭಾಗ್ಯ. ಆಗ ಅವನು ನನಗೆ ಒಂದು ಹೆಲ್ಪ್‌ ಬೇಕು, ಕೂಡಲೇ ಬಾ ಎಂದಿದ್ದಾನೆ. ಇದನ್ನು ಕೇಳಿ ಭಾಗ್ಯ ತಾಂಡವ್‌ ಕರೆಯುತ್ತಾ ಇದ್ದಾರೆ, ಹೋಗಿ ಬರ್ತೇನೆ ಎಂದಿದ್ದಾಳೆ. ಸೊಸೆಯನ್ನು ಮಗ ಕರೆದಿದ್ದಾನೆ ಎಂದು ಕುಸುಮಳಿಗೆ ಖುಷಿಯೋ ಖುಷಿ. ಆದರೆ ಭಾಗ್ಯ ಅಲ್ಲಿಗೆ ಹೋಗಿದ್ದಾಳೆ. ಅವಳ ಮ್ಯಾನೇಜರ್‍‌ಗೆ ಇವನೇ ನನ್ನ ಗಂಡ ಎನ್ನುವ ವಿಷಯ ತಿಳಿಸಿದ್ದಾಳೆ. ಪತ್ನಿ ಬಂದು ಕರೆದರೆ ನೀವು ಬಿಡುವುದಾಗಿ ಹೇಳಿದ್ದೀರಲ್ಲ, ಈಗ ಬಿಟ್ಟುಬಿಡಿ ಎಂದು ತಾಂಡವ್‌ನ ಕೈಯನ್ನು ದರದರ ಹಿಡಿದು ಎಳೆದುಕೊಂಡು ಹೋಗಿದ್ದಾಳೆ ಭಾಗ್ಯ. ಹೇಗೋ ಡ್ರೈವಿಂಗ್‌ ಕಲಿತಿದ್ದಾಳೆಲ್ಲ. ಡ್ರೈವ್‌ ಮಾಡಿಕೊಂಡು ಆದದ್ದು ಆಗಲಿ ಎಂದು ವೇಗವಾಗಿ ಕಾರನ್ನು ಚಲಾಯಿಸಿದ್ದಾಳೆ. ತಾಂಡವ್‌ ಎಷ್ಟೇ ಕೂಗಿಕೊಂಡರೂ ಅವನ ಮಾತನ್ನು ಕೇಳಲಿಲ್ಲ ಭಾಗ್ಯ. 

ಸ್ಪೀಡ್‌ನಲ್ಲಿ ಎರ್‍ರಾಬಿರ್‍ರಿ ಕಾರನ್ನು ಚಲಾಯಿಸಿದ ಭಾಗ್ಯಳ ಎದುರು ಒಂದು ಲಾರಿ ಬಂದಿದೆ. ತಾಂಡವ್‌ ಜೋರಾಗಿ ಕೂಗಿಕೊಂಡರೂ ಭಾಗ್ಯ ಕ್ಯಾರೇ ಮಾಡಲಿಲ್ಲ. ನೇರವಾಗಿ ಅದಕ್ಕೆ ಗುದ್ದಿಸಿದ್ದಾಳೆ. ಗಂಡನನ್ನು ಯಮಲೋಕಕ್ಕೆ ಕರೆದುಕೊಂಡು ಹೋಗುವ ಪ್ಲ್ಯಾನ್‌ ಮಾಡೇ ಬಂದಂತಿದೆ ಭಾಗ್ಯ! ತನ್ನ ಜೀವ ಹೋದರೂ ಪರವಾಗಿಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದಂತಿದ್ದಾಳೆ ಆಕೆ. ಕಾರು ಅಪಘಾತವಾಗಿದೆ. ಮುಂದೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅಪಘಾತದಲ್ಲಿ ಕೈ-ಕಾಲನ್ನು ತಾಂಡವ್‌ ಕಳೆದುಕೊಂಡರೆ ಶ್ರೇಷ್ಠಾ ಆತನಿಂದ ದೂರವಾಗ್ತಾಳೆ. ಆಗ ಅವನಿಗೆ ಸತ್ಯದ ಅರಿವು ಆಗುವಂತೆ ಮಾಡಿ. ಗಂಡನಿಗೆ ಕೊನೆಯ ತನಕ ಆಗುವವಳು ಪತ್ನಿಯೇ ಎನ್ನುವ ಸತ್ಯ ಅವನಿಗೆ ತಿಳಿಯುವಂತೆ ಮಾಡಿ ಎನ್ನುತ್ತಿದ್ದಾರೆ ವೀಕ್ಷಕರು. 
 

ನನ್ನ ರಿಯಲ್‌ ಹೆಂಡ್ತಿಯಾಗಿದ್ರೆ ನನ್ನ ಕಿಡ್ನಿ ಮಾರಿ ಐಫೋನ್‌ ತಗೊಂಡ್‌ ಬರುತ್ತಿದ್ದಳು ಅಷ್ಟೇ ಎಂದ ಭಾಗ್ಯಲಕ್ಷ್ಮಿ ತಾಂಡವ್‌!

 

click me!