ಸಂಗೀತ್‌, ಹಲ್ದಿ ಶಾಸ್ತ್ರದಲ್ಲಿ ಮಿಂದೆದ್ದ ಮಧು-ನಿಖಿಲ್‌, 'ಅಂಬಾನಿ ಮನೆಯವ್ರು ಹಿಂಗ್‌ ಹಿಂಸೆ ಕೊಟ್ಟಿರ್ಲಿಲ್ಲ' ಅನ್ನೋದಾ!

Published : Oct 25, 2024, 10:32 PM IST
ಸಂಗೀತ್‌, ಹಲ್ದಿ ಶಾಸ್ತ್ರದಲ್ಲಿ ಮಿಂದೆದ್ದ ಮಧು-ನಿಖಿಲ್‌, 'ಅಂಬಾನಿ ಮನೆಯವ್ರು ಹಿಂಗ್‌ ಹಿಂಸೆ ಕೊಟ್ಟಿರ್ಲಿಲ್ಲ' ಅನ್ನೋದಾ!

ಸಾರಾಂಶ

ಸೋಶಿಯಲ್‌ ಮೀಡಿಯಾ ಸ್ಟಾರ್‌ಗಳಾದ ಮಧು ಗೌಡ ಹಾಗೂ ನಿಖಿಲ್‌ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಇತ್ತೀಚೆಗೆ ಮಂಡ್ಯದ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಮದುವೆಯ ಪೂರ್ವ ಕಾರ್ಯಕ್ರಮಗಳು ನಡೆದಿವೆ.

ಬೆಂಗಳೂರು (ಅ.25): ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಮದುವೆಯ ಕಾರಣದಿಂದಾಗಿಯೇ ಸುದ್ದಿಯಲ್ಲಿರುವವರು ಮಧು ಗೌಡ ಹಾಗೂ ನಿಖಿಲ್‌. ತಮ್ಮ ಮದುವೆಯನ್ನು ಅದ್ದೂರಿಯಾಗಿ ಇಬ್ಬರೂ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಮಾರ್ಚ್‌ನಲ್ಲಿ ದೊಡ್ಡ ಪ್ರಮಾಣದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ವಿವಾಹವನ್ನೂ ಬಹಳ ಜೋರಾಗಿ ಮಾಡಿಕೊಳ್ತಾ ಇದೆ. ನಿಶ್ಚಿತಾರ್ಥದ ಬಳಿಕ ಇವರು ಮಾಡಿಕೊಂಡು ಹೊಸ ನಮೂನೆಯ ಫೋಟೋಶೂಟ್‌ಗಳು, ವಿಲಾಗ್‌ಗಳನ್ನು ಕಂಡು ಸೋಶಿಯಲ್‌ ಮೀಡಿಯಾ ಮಂದಿ ಸಖತ್‌ ಟ್ರೋಲ್‌ಗೆ ಇಳಿದಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೋಡಿ ಈಗ ಹಸೆಮಣೆ ಏರಲು ಸಜ್ಜಾಗಿದೆ. ಅಕ್ಟೋಬರ್‌ 27 ರಂದು ಇವರು ಮದುವೆ ಸಮಾರಂಭ ನಡೆಯಲಿದೆ. ಆದರೆ, ಇನ್ಸ್‌ಟಾಗ್ರಾಮ್‌ ಯೂಸರ್‌ಗಳಿಗೆ ಮಾತ್ರ ಒಮ್ಮೆ ಇವರ ಮದುವೆ ಮುಗಿದು ಹೋಗಲಿ ಎನ್ನುವಷ್ಟು ಕಾಟ ಕೊಟ್ಟಿದ್ದಾರಂತೆ. ಅದಕ್ಕೆ ಕಾರಣ ಇವರ ಅಪ್‌ಡೇಟ್‌ಗಳು. ಮದುವೆಯ ಕುರಿತಾಗಿ ಇವರು ಯಾವುದೇ ಪೋಸ್ಟ್‌ ಹಂಚಿಕೊಂಡ್ರೂ ಅಂಬಾನಿ ಮನೆಯವ್ರು ಅವರ ಮನೆ ಮದ್ವೆಗೆ ಇಷ್ಟು ಹಿಂಸೆ ಕೊಟ್ಟಿರ್ಲಿಲ್ಲ ಎಂದು ಟ್ರೋಲ್‌ ಮಾಡಿದ್ದಾರೆ.

ಈ ಜೋಡಿಯ ಹಲ್ದಿ ಹಾಗೂ ಸಂಗೀತ್‌ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರವೇರಿದೆ. ಕುಟುಂಬದ ಕೆಲವೇ ಆಪ್ತರು ಹಾಗೂ ತಮಗೆ ಗೊತ್ತಿರುವ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮಾತ್ರವೇ ಇದರಲ್ಲಿ ಕಂಡಿದ್ದಾರೆ. ಇನ್ನು ಹಲ್ದಿ ಕಾರ್ಯಕ್ರಮ ಸಖತ್‌ ಅದ್ದೂರಿಯಾಗಿ ನಡೆದಿದ್ದರೆ, ಸಂಗೀತ್‌ ಕಾರ್ಯಕ್ರಮದಲ್ಲಿ ಮಧು ಗೌಡ ಮೇಕಪ್‌ ಸಖತ್‌ ಟ್ರೋಲ್‌ ಆಗುತ್ತಿದೆ.

ಸೋಶಿಯಲ್‌ ಮೀಡಿಯಾದಿಂದಲೇ ಜನಪ್ರಿಯತೆ ಪಡೆದ ಇವರ ಜೀವನದ ಬಗ್ಗೆ ಸಹಜವಾದ ಕುತೂಹಲ ಇರತ್ತದೆ. ಅದನ್ನು ಈ ಜೋಡಿ ವಿಲಾಗ್‌ ಮೂಲಕ ಹಂಚಿಕೊಳ್ಳುತ್ತಿತ್ತು. ಇತ್ತೀಚೆಗೆ ಹೊಸ ಕಾರ್‌ಖರೀದಿ ಮಾಡಿದ್ದ ಜೋಡಿ, ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ಹೊಸ ಸೈಟ್‌ಅನ್ನೂ ಖರೀದಿ ಮಾಡಿದೆ. ಬರೀ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್‌ ಮಾಡಿಕೊಂಡು ಇಷ್ಟೆಲ್ಲಾ ಹಣ ಸಂಪಾದನೆ ಮಾಡಬಹುದಾ ಎನ್ನುವ ಪ್ರಶ್ನೆಗಳು ಆಗ ಎದ್ದಿದ್ದವು. ಇದಕ್ಕೆ ಮಧು ಗೌಡ ಉತ್ತರವನ್ನೂ ನೀಡಿದ್ದರು.

ಟಿಕ್‌ಟಾಕ್‌ ಬಂದ ಸಮಯದಲ್ಲಿ ನಿಖಿಲ್‌ ಗೌಡ, ಮಧು ಗೌಡ, ನಿಶಾ ವಿಡಿಯೋಗಳು ಹಲವು ವರ್ಷಗಳಿಂದ ಟ್ರೆಂಡಿಂಗ್‌ನಲ್ಲಿದ್ದವು. ನಿಖಿಲ್‌-ನಿಶಾ ಅಣ್ಣ ತಂಗಿ ಎನ್ನುವುದು  ಎಲ್ಲರಿಗೂ ಗೊತ್ತಿತ್ತು. ಆದರೆ, ಇವರ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಮಧು ಗೌಡ ಬಗ್ಗೆ ಹೆಚ್ಚಿನ ಕುತೂಹಲಗಳಿದ್ದವು.ಇದೆಲ್ಲದರ ನಡುವೆ, ಮಾರ್ಚ್​ 11ರಂದು ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಗುರು ಹಿರಿಯರ ಸಮ್ಮುಖದಲ್ಲಿ​ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ಟ್ರೋಲ್‌ಗೆ ಆಹಾರವಾದ ಮದುವೆ: ಸಂಗೀತ್‌ ಕಾರ್ಯಕ್ರಮದಲ್ಲಿ ಮಧು ಗೌಡ ಅವರ ಮೇಕಪ್‌ ಓವರ್‌ ಎಂದು ಹೆಚ್ಚಿನವರು ಹೇಳಿದ್ದರೆ, ಐ ಲೆನ್ಸ್‌ ಎಲ್ಲಾ ಹಾಕಿಕೊಳ್ಳುವ ಶೋಕೆ ಯಾಕೆ ಬೇಕಿತ್ತು ಅಂತಾ ಪ್ರಶ್ನೆ ಮಾಡಿದ್ದಾರೆ. 'ಈ ಅಂಕಲ್ ಆಂಟಿನ ನನ್ನ ಕೈಲಿ ನೋಡೋಕೆ ಆಗ್ತಿಲ್ಲವೇ.' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಕ್ಯೂಟ್‌ ಕಪಲ್‌ ಎಂದಿದ್ದರೆ, ಮತ್ತೂ ಕೆಲವರು ಈಗಲಾದರೂ ಸೋಶಿಯಲ್‌ ಮೀಡಿಯಾ ಗೀಳಿನಿಂದ ಹೊರಬಂದು ಚೆನ್ನಾಗಿ ಸಂಸಾರ ಮಾಡಿ ಎಂದು ಸ್ಪೆಷಲ್‌ ಹಾರೈಕೆ ನೀಡಿದ್ದಾರೆ.

'ಅಂಬಾನಿ ಮಕ್ಳು ಹಿಂಗ್‌ ಅವತಾರ ಮಾಡಿರ್ಲಿಲ್ಲ..' ಮಧುಗೌಡ ಫೋಟೋ ಹಂಚಿಕೊಂಡ್ರೆ ನೆಟ್ಟಿಗರಿಗ್ಯಾಕೆ ಉರಿ!

ಫಿಲ್ಮ್‌ ನಟಿ ಆಗಿದ್ರೂ ಇಷ್ಟೆಲ್ಲಾ ಬಿಲ್ಡಪ್‌ ಮದುವೆಗೆ ಸಿಗ್ತಾ ಇರ್ಲಿಲ್ಲ ಎಂದು ಕಾಲೆಳೆದಿದ್ದರೆ, ಇದು ಈ ದೇಶದ ಮೊದಲ ಮದುವೆ. ಲೈವ್ ಜೀ ಕನ್ನಡದಲ್ಲಿ ಈ ಶನಿವಾರ ಭಾನುವಾರ ಎಂದು ಟ್ರೋಲ್‌ ಕಾಮೆಂಟ್‌ ಮಾಡಿದ್ದಾರೆ. 'ಇಲ್ಲೂ ಕೂಡ ಪ್ರಮೋಷನ ನಡಿತಿದೆ...ಪೋಟೋಗ್ರಾಫಿ..ಡಿಸೈನ್..ಹೋಟೆಲ್ ದು...ಎಲ್ಲರೂ ಕೂಡಾ ಪ್ರಮೋಷನ‌ಗಾಗಿ ಇವರಿಗೆ ಪ್ರೀ ಆಗಿ ಮಾಡ್ತಾರೆ..ಅದನ್ನಾ ಜನರು ಮಂಗನಾಗಿ ನೋಡ್ತಾರೆ‌.' ಎಂದು ಮತ್ತೊಬ್ಬರು ಬರೆದಿದ್ದಾರೆ.

ಮದುವೆಗೂ ಮುನ್ನ ಮಧುಗೌಡಹೊಸ ಫೋಟೋಶೂಟ್‌, ಅಪಶಕುನ ನುಡಿದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?