BBK 11: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಚೈತಾ ಕುಂದಾಪುರ ಬಿಗ್‌ ಬಾಸ್‌ ಮನೆಗೆ ಎಂಟ್ರಿ!

By Santosh NaikFirst Published Sep 28, 2024, 10:00 PM IST
Highlights

ಕಲರ್ಸ್ ಕನ್ನಡದ ಬಿಗ್ ಬಾಸ್ ಮನೆಗೆ ಈ ಬಾರಿ ಎಂಟ್ರಿ ನೀಡುತ್ತಿರುವುದು ವಿವಾದಿತ ಭಾಷಣಗಾರ್ತಿ ಚೈತ್ರಾ ಕುಂದಾಪುರ. ಚುನಾವಣಾ ಟಿಕೆಟ್ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಚೈತ್ರಾ, ಬಿಗ್ ಬಾಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಬೆಂಗಳೂರು (ಸೆ.28): ಕಳೆದ ಆವೃತ್ತಿಯ ಬಿಗ್‌ ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ಗೆ ಅವಕಾಶ ನೀಡಿ, ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಕಲರ್ಸ್‌ ಕನ್ನಡ ಈ ಬಾರಿಯೂ ಕೂಡ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬರಿಗೆ ಬಿಗ್‌ ಬಾಸ್‌ ಟಿಕೆಟ್‌ ನೀಡಿದೆ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬೈಂದೂರಿನ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಭರವಸೆ ನೀಡಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ ಫೈರ್‌ ಬ್ರ್ಯಾಂಡ್‌ ಭಾಷಣಗಾರ್ತಿ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಗೆ ಹೋಗುವುದು ಖಚಿತವಾಗಿದೆ. ಈ ಬಗ್ಗೆ ಕಲರ್ಸ್‌ ಕನ್ನಡ ರಾಜ ರಾಣಿ ಗ್ರ್ಯಾಂಡ್‌ ಫಿನಾಲೆ ಶೋನಲ್ಲಿ ಮಾಹಿತಿ ನೀಡಿದೆ. ಬಿಗ್‌ ಬಾಸ್‌ನ ಮೂರನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಗೆ ಎಂಟ್ರಿ ನೀಡುತ್ತಿದ್ದಾರೆ, ಅವರು ಸ್ವರ್ಗಕ್ಕೆ ಹೋಗುತ್ತಾರೋ? ನರಕಕ್ಕೆ ಹೋಗುತ್ತಾರೋ? ಅನ್ನೋದನ್ನ ಬಿಗ್‌ ಬಾಸ್‌ನ ಅಭಿಮಾನಿಗಳು ನಿರ್ಧಾರ ಮಾಡಲಿದ್ದಾರೆ.  ಇದರ ಜಿಯೋ ಆಪ್‌ನಲ್ಲಿ ವೋಟಿಂಗ್‌ ಲೈನ್‌ ಓಪನ್‌ ಆಗಿದ್ದು, ಅಭಿಮಾನಿಗಳು ವೋಟ್‌ ಮಾಡುವ ಮೂಲಕ ಸ್ಪರ್ಧಿಗಳು ಯಾವ ಲೋಕಕ್ಕೆ ಹೋಗಬೇಕು ಅನ್ನೋದನ್ನ ನಿರ್ಧರಿಸಲಿದ್ದಾರೆ.

ಚೈತ್ರಾ ಕುಂದಾಪುರ ಉಡುಪಿ ಜಿಲ್ಲೆಯ ಕುಂದಾಪುರದವರು. ತಮ್ಮ ಭಾಷಣಗಳಿಂದಲೇ ಅವರು ಒಂದು ಸಮಯದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದರು. ಆದರೆ, ಅವರು ಸಂಪಾದಿಸಿದ್ದ ಖ್ಯಾತಿಯೆಲ್ಲವೂ 2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಬೈಂದೂರು ವಿಧಾನಸಭೆಯ ಟಿಕೆಟ್‌ ಕೊಡಿಸೋದಾಗಿ ವಂಚಿಸಿದ ಪ್ರಕರಣದೊಂದಿಗೆ ಮಣ್ಣು ಪಾಲಾಗಿತ್ತು.ಕುಂದಾಪುರದ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಸಮಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದರು ಎನ್ನುವ ಮಾಹಿತಿಗಳೂ ಇವೆ.

ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ ಪ್ರಖ್ಯಾತಿ ಗಳಿಸಿದ ಈಕೆ, ಉಡುಪಿಯ ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು. ಕಾಲೇಜು ದಿನಗಳಲ್ಲಿ ಎಬಿವಿಪಿ ಸಂಪರ್ಕ ಹೊಂದಿದ್ದ ಚೈತ್ರಾ ಕುಂದಾಪುರ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಉಪಸಂಪಾದಕಿಯಾಗಿಯೂ ಕೆಲಸ ಮಾಡಿದ್ದರು. ಪ್ರತ್ರಕರ್ತೆ, ನಿರೂಪಕಿಯಾಗಿ ಕೆಲಸ ಮಾಡಿದ್ದ ಚೈತ್ರಾ, ಉಡುಪಿಯ ಅಜ್ಜರ ಕಾಡಿನ ಕಕಾಲೇಜಿನಲ್ಲಿ ಉಪನ್ಯಾಸಕಿಯೀ ಆಗಿದ್ದರು. ಈಕೆ ಯುವ ಮಾಧ್ಯಮ ರತ್ನ ಪ್ರಶಸ್ತಿಯೀ ದೊರೆತಿದೆ. ಲೇಖಕಿಯೂ ಆಗಿರುವ ಈಕೆ, ಪ್ರೇಮ ಪಾಶ ಎನ್ನುವ ಕೃತಿಯನ್ನೂ ಬರೆದಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡುವುದಾಗಿ ಚೈತ್ರಾ ಹಾಗೂ ಆಕೆಯ ಸಂಗಡಿಗರು ಉದ್ಯಮಿ ಹಾಗೂ ಸಮಾಜಸೇವಕ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ 7 ಕೋಟಿ ರೂಪಾಯಿ ಪಂಗನಾಮ ಹಾಕಿದ್ದರು.  ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಗೋವಿಂದ ಬಾಬು ದೂರು ನೀಡಿದ್ದರು. ಈ ದೂರಿನ ತನಿಖೆಯನ್ನ ಬೆಂಗಳೂರಿನ ಸಿಸಿಬಿ ಪೊಲೀಸರು ನಡೆಸ್ತಿದ್ರು. ತಮ್ಮ ಮೇಲೆ ದೂರು ದಾಖಲಾದ ದಿನದಿಂದಲೇ ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದರು. ಸೆಪ್ಟೆಂಬರ್‌ ವೇಳೆ ಬಂಧನಕ್ಕೆ ಒಳಗಾಗಿದ್ದ ಚೈತ್ರಾ ಕುಂದಾಪುರ 2023ರ ಡಿಸೆಂಬರ್‌ ವೇಳೆ ಬಿಡುಗಡೆಯಾಗಿದ್ದರು.

ದರ್ಶನ್ ಜೈಲಿಗೆ, ಕಿಲ್ಲಿಂಗ್ ಸ್ಟಾರ್ ಬಗ್ಗೆ ಅಪ್ಡೇಟ್ ನೀಡ್ತಿದ್ದ ಲಾಯರ್ ‌ಬಿಗ್ ಬಾಸ್‌ಗೆ?

Latest Videos

ಈಗಾಗಲೇ ಬಿಗ್‌ ಬಾಸ್‌ನ ಮೊದಲ ಸ್ಪರ್ಧಿಯಾಗಿ ಸತ್ಯ ಸೀರಿಯಲ್‌ನ ಗೌತಮಿ ಜಾಧವ್‌, 2ನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌ ಆಯ್ಕೆಯಾಗಿದ್ದಾರೆ. ಅವರು ಯಾವ ಲೋಕಕ್ಕೆ ಹೋಗಬೇಕು ಅನ್ನೋದರ ಬಗ್ಗೆಯೂ ವೋಟಿಂಗ್‌ ನಡೆದಿದ್ದು, ಕೇವಲ 15 ನಿಮಿಷಗಳ ಕಾಲ ಮಾತ್ರವೇ ವೋಟಿಂಗ್‌ ಲೈನ್‌ ತೆರೆದಿರಲಿದೆ.

ಕಿಪಿ ಕೀರ್ತಿ ಬಂದ್ರೆನೇ ಬಿಗ್ ಬಾಸ್ ನೋಡೋದು; ವೈಲ್ಡ್‌ ಕಾರ್ಡ್‌ ಎಂಟ್ರಿ ಫಿಕ್ಸ್?

click me!