ಬೇರೆ ಕಡೆಗಳಲ್ಲಿ ಹಾಗೆ ಆಗಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು, ನನಗೆ ಇಷ್ಟವಿಲ್ಲದ ಪೋಸ್‌ಗಳು ಕ್ಯಾಮರಾದಲ್ಲಿ ಸೆರೆಯಾಗಿ ಅವು ಇಂಟರ್ನೆಟ್ ಮೂಲಕ ಜಗತ್ತಿನ ತುಂಬಾ ಓಡಾಡತೊಡಗಿರುತ್ತಿದ್ದವು. ಅಲ್ಲಿ ಕ್ಯಾಮರಾಮನ್‌ಗಳು ನಡೆದುಕೊಂಡ ರೀತಿ ನನಗೆ ನಿಜಕ್ಕೂ ಗ್ರೇಟ್ ಅನ್ನಿಸಿದೆ. ಇದನ್ನು ನಾನು ಹಲವು ಕಡೆ ಕ್ಯಾಮರಾ ಮುಂದೆ ಹೇಳಲೇಬೇಕಾಗಿದೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಿಕ್ ಜೋನ್ಸ್ ಮದುವೆ ಮಾಡಿಕೊಂಡ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ, ಹೆಚ್ಚಾಗಿ ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳಲ್ಲೇ ನಟಿಸುತ್ತಿದ್ದಾರೆ. ಜತೆಗೆ, ಸಾಕಷ್ಟು ರಿಯಾಲಿಟಿ ಶೋಗಳು, ರೆಡ್ ಕಾರ್ಪೆಟ್‌ಗಳಲ್ಲಿ ಕೂಡ ನಟಿ ಪ್ರಿಯಾಂಕಾ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಆ ಬಗ್ಗೆ ಅಪ್ಡೇಟ್ ಕೊಡುತ್ತಿರುತ್ತಾರೆ. ಇಲ್ಲಿ ಅಂತಹುದೇ ಒಂದು ಪ್ರಸಂಗವನ್ನು ನಟಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ.
ಒಮ್ಮೆ ಪ್ರಿಯಾಂಕಾ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಬೇಕಾದ ಫಂಕ್ಷನ್ ಅದು. ಅಲ್ಲಿ ಹೋಗುತ್ತಿರುವಾಗ ಅವರನ್ನು ಫೋಕಸ್ ಮಾಡಿ ಕ್ಯಾಮರಾಗಳು ಫಾಲೋ ಮಾಡುತ್ತಿದ್ದರು. ಆದರೆ, ಯಾಕೋ ಏನೋ ಪ್ರಿಯಾಂಕಾ ಎಡವಿ ಬಿದ್ದುಬಿಟ್ಟರಂತೆ. ತಕ್ಷಣ ಶಾಕ್ ಆಗಿ, ಏನು ಮಾಡಬೇಕು ಎಂದು ತೋಚದೇ ಪ್ರಿಯಾಂಕಾ ಅಲ್ಲೇ ಕುಳಿತುಬಿಟ್ಟರಂತೆ. ಯಾಕೆಂದರೆ, ಕ್ಯಾಮರಾಗಳು ತಮ್ಮ ಮೇಲೆ ಫೋಕಸ್ ಆಗಿವೆ. ಬಿದ್ದಾಗ ಡ್ರೆಸ್ ಎಲ್ಲೆಲ್ಲೋ ಜಾರಿ ಏನೇನೋ ಆಗಿಬಿಡುತ್ತವೆ. ಆಗ ಕ್ಲಿಕ್ಕಿಸಿದ ಕೆಲವು ಫೋಟೋಗಳು ಏನೇನೋ ತೋರಿಸಿಬಿಡುತ್ತವೆ. ಅವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ಹಲವರು ತಮಾಷೆ ತೆಗೆದುಕೊಳ್ಳುತ್ತಾರೆ.
ಹೀಗಾಗಿ ಬಿದ್ದ ತಕ್ಷಣ ಹೆದರಿಕೊಂಡ ಪ್ರಿಯಾಂಕಾ, ತಲೆ ಎತ್ತಿ ಕ್ಯಾಮರಾಮ್ಯಾನ್‌ಗಳ ಕಡೆ ನೋಡಿದರೆ ಅವರೆಲ್ಲರೂ ತಮ್ಮ ಕ್ಯಾಮರಾಗಳನ್ನು ಕೆಳಗಿಟ್ಟು ನಿಂತಿದ್ದರಂತೆ. ಪ್ರಿಯಾಂಕಾ ಅವರನ್ನು ನೋಡುತ್ತಿದ್ದರೆ ಫುಲ್ ಶಾಕ್ ಆಗಿಬಿಟ್ಟರಂತೆ. ಅವರು "ಪರವಾಗಿಲ್ಲ, ನಿಧಾನಕ್ಕೆ ಆರಾಮಾಗಿ ನಿಮಗೆ ಬೇಕಾದಂತೆ ಸ್ವಲ್ಪ ಸಮಯ ತೆಗೆದುಕೊಂಡು ಎದ್ದು ನಿಲ್ಲಿ.. "ಎಂದು ಹೇಳಿ ಸಹಾಯಕ್ಕೆ ಧಾವಿಸಿ ಬಂದರಂತೆ. ಅವರ ಮಾನವೀಯತೆ ನೋಡಿ ಪ್ರಿಯಾಂಕಾಗೆ ಧೈರ್ಯ ಬಂದು ತಕ್ಷಣವೇ ಎದ್ದು ನಿಂತರಂತೆ.
Bigg Boss Kannada: ನಿನ್ನನ್ನು ಪರಿಚಯಿಸಲು ನಿನ್ನಪ್ಪ ಯಾಕೆ ಬಂದಿಲ್ಲ, ನಂಗೊತ್ತು ಆ ಗುಟ್ಟು ಎಂದ ಸುದೀಪ್
ಬಿದ್ದ ಸಮಯದಲ್ಲಿ ತಮ್ಮ ಯಾವುದೇ ಫೋಟೋ ಕ್ಲಿಕ್ ಆಗಿಲ್ಲ ಎಂಬ ಸಂಗತಿ ಪ್ರಿಯಾಂಕಾ ಅವರಿಗೆ ಸಮಾಧಾನ ಕೊಟ್ಟಿತಂತೆ. ಅದೇ ವೇಳೆ "ಅಲ್ಲಿನ ಜನರ ಮಾನವೀಯತೆ ಜತೆ ಬೆರತ ವೃತ್ತಿಪರತೆ ಕಂಡು ನಾನು ಅಚ್ಚರಿಗೆ ಒಳಗಾದೆ, ನನ್ನ 23 ವರ್ಷಗಳ ಕೆರಿಯರ್‌ನಲ್ಲಿ ನಾನು ಹಾಗೆ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುವಾಗ ಅಥವಾ ಕ್ಯಾಮೆರಾ ಮುಂದೆ ಬಿದ್ದಿದ್ದು ಅದೇ ಮೊದಲು " ಎಂದಿದ್ದಾರೆ ನಟಿ ಪ್ರಿಯಾಂಕಾ.
Bigg Boss Kannada ಹೆಸರಲ್ಲೇ ಧನ ಇಟ್ಕೊಂಡಿದೀರಾ, ವಾಟ್ ಅಬೌಟ್ ಧನಲಕ್ಷ್ಮೀ ಸರ್: ಧನಂಜಯ್ ಕಾಲೆಳೆದ ಸುದೀಪ್
ಬೇರೆ ಕಡೆಗಳಲ್ಲಿ ಹಾಗೆ ಆಗಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು, ನನಗೆ ಇಷ್ಟವಿಲ್ಲದ ಪೋಸ್‌ಗಳು ಕ್ಯಾಮರಾದಲ್ಲಿ ಸೆರೆಯಾಗಿ ಅವು ಇಂಟರ್ನೆಟ್ ಮೂಲಕ ಜಗತ್ತಿನ ತುಂಬಾ ಓಡಾಡತೊಡಗಿರುತ್ತಿದ್ದವು. ಅಲ್ಲಿ ಕ್ಯಾಮರಾಮನ್‌ಗಳು ನಡೆದುಕೊಂಡ ರೀತಿ ನನಗೆ ನಿಜಕ್ಕೂ ಗ್ರೇಟ್ ಅನ್ನಿಸಿದೆ. ಇದನ್ನು ನಾನು ಹಲವು ಕಡೆ ಕ್ಯಾಮರಾ ಮುಂದೆ ಹೇಳಲೇಬೇಕಾಗಿದೆ. ಏಕೆಂದರೆ, ಸಾಕಷ್ಟು ಕಡೆ ಇಂತ ಪರಿಸ್ಥಿತಿ ದುರುಪಯೋಗ ಆಗುವುದೇ ಹೆಚ್ಚು. ಈ ಕಾರಣಕ್ಕಾಗಿಯೇ ನಾನು ಈ ಘಟನೆಯನ್ನು ಆಗಾಗ ನೆನಪಿಸಿಕೊಂಡು ಹೇಳುತ್ತಿರುತ್ತೇನೆ" ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.