ಬಿಗ್ಬಾಸ್ ಮನೆಯೊಳಕ್ಕೆ ಶುರುವಾದ ಪ್ರೇಮ, ಮದುವೆಯವರೆಗೆ ಹೋಗಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ನಟಿ ಪ್ರಿಯಾಂಕಾ ಭಿಕ್ಷುಕಿಯಾಗಿ ರಸ್ತೆ ಮೇಲೆ ಕಾಣಿಸಿಕೊಂಡಿದ್ದಾರೆ. ಏನಿದು ವಿಷಯ? ಇಲ್ಲಿದೆ ಡಿಟೇಲ್ಸ್...
ಕಿರುತೆರೆ ನಟಿ ಪ್ರಿಯಾಂಕಾ ಚಹರ್ ಚೌಧರಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಇದಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿರುವ ನಟಿ, ಇನ್ನೂ ಹೆಚ್ಚು ಫೇಮಸ್ ಆಗಿದ್ದು, ಹಿಂದಿಯ ಬಿಗ್ ಬಾಸ್ 16ಗೆ ಹೋದ ಸಂದರ್ಭದಲ್ಲಿ. ಇಲ್ಲಿ ಪ್ರಿಯಾಂಕಾ ಚಾಹರ್ ಚೌಧರಿ ಮತ್ತು ಅಂಕಿತಾ ಗುಪ್ತಾ ನಡುವೆ ಶುರುವಾಗಿದ್ದ ಪ್ರೇಮ ಸಕತ್ ಸೌಂಡ್ ಮಾಡಿತ್ತು. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೂ ಪ್ರಿಯಾಂಕಾ ಮತ್ತು ಅಂಕಿತ್ ಗುಪ್ತಾ ಸಂಬಂಧದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಪ್ರಿಯಾಂಕಾ ಅಥವಾ ಅಂಕಿತ್ ಈ ಬಗ್ಗೆ ಇದುವರೆಗೆ ಮೌನವಾಗಿಯೇ ಇದ್ದಾರೆ. ಆದರೆ ಈಚೆಗೆ ಪ್ರಿಯಾಂಕಾ ಅವರು, ಸಂದರ್ಶನವೊಂದರಲ್ಲಿ ಅಂಕಿತ್ ಗುಪ್ತಾ ಅವರೊಂದಿಗಿನ ಸಂಬಂಧ ಬಗ್ಗೆ ಮಾತನಾಡಿದ್ದರು. ನಮ್ಮ ನಡುವೆ ಎಲ್ಲವೂ ಅದ್ಭುತವಾಗಿದೆ. ಎಲ್ಲವೂ ಚೆನ್ನಾಗಿದೆ. ನಾವು ಒಬ್ಬರನ್ನೊಬ್ಬರು ತುಂಬಾ ಪ್ರೇರೇಪಿಸುತ್ತೇವೆ, ಒಬ್ಬರನ್ನೊಬ್ಬರು ಬೆಂಬಲಿಸುತ್ತೇವೆ. ನಮ್ಮಿಬ್ಬರ ನಡುವೆ ಸ್ನೇಹ ಚೆನ್ನಾಗಿದೆ ಎಂದಿದ್ದರು.
ಅಂಕಿತ್ ಗುಪ್ತಾ ಅವರೊಂದಿಗಿನ ವಿವಾಹದ ಕುರಿತು ಕೇಳಿದ್ದ ಪ್ರಶ್ನೆಗೆ ನಟಿ, ನಾವಿಬ್ಬರೂ ತುಂಬಾ ಒಳ್ಳೆಯ ಸಂಬಂಧ ಹೊಂದಿದ್ದೇವೆ. ಮದುವೆಯ ಬಗ್ಗೆ ಯೋಚಿಸುವುದೇ ಇಲ್ಲ. ಏಕೆಂದರೆ ಈಗ ನಾವಿಬ್ಬರೂ ನಮ್ಮ ವೃತ್ತಿಯತ್ತ ಗಮನ ಹರಿಸುವ ಸಮಯ. ಹಾಗಾಗಿ ನಮಗೆ ಏನು ಮಾತನಾಡಬೇಕೆಂದು ಸಹ ತಿಳಿದಿಲ್ಲ. ನಾವು ಸ್ನೇಹಿತರು ಅಷ್ಟೇ ಎಂದಿದ್ದರು. ಆದರೆ ಇವರಿಬ್ಬರೂ ಶೀಘ್ರದಲ್ಲಿಯೇ ಮದುವೆಯಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಇದರ ನಡುವೆಯೇ ಶಾಕಿಂಗ್ ಎಂಬಂತೆ ನಟಿ ಪ್ರಿಯಾಂಕಾ ಅವರು ರಸ್ತೆಯ ಬದಿಯಲ್ಲಿ ಭಿಕ್ಷುಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಂತೂ ನಿಜ.
ಸೀತಾರಾಮ ಸೀರಿಯಲ್ ಪ್ರಿಯಾ ಮದ್ವೆಯ ಭರ್ಜರಿ ಫೋಟೋಶೂಟ್ ಹೇಗಿತ್ತು? ವಿಡಿಯೋ ಮಾಹಿತಿ ನೀಡಿದ ನಟಿ
ಕೊಳಕು ಬಟ್ಟೆ ಧರಿಸಿ, ರಸ್ತೆಯ ಮೇಲೆ ಕಾಣಿಸಿಕೊಂಡಿದ್ದರು. ಇವರು ನಟಿಯೇ ಎಂದು ತಿಳಿಯದ ಅಲ್ಲಿಯ ಹೋಟೆಲ್ ಸಿಬ್ಬಂದಿ ಅವರನ್ನು ತಡೆದರು. ಈ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ವೈರಲ್ ಭಯಾನಿ ಹಂಚಿಕೊಂಡಿರುವ ದೃಶ್ಯಾವಳಿಗಳಲ್ಲಿ, ಪ್ರಿಯಾಂಕಾ ಹೋಟೆಲ್‌ನ ಪ್ರವೇಶದ್ವಾರದ ಕಡೆಗೆ ಹೋಗುತ್ತಿರುವುದನ್ನು ನೋಡಬಹುದು, ಆಗ ಸಿಬ್ಬಂದಿ ಮತ್ತು ವ್ಯವಸ್ಥಾಪಕರು ಅವರನ್ನು ತಡೆದು, ಅವರ ಉಪಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಅವರ ಅವತಾರವನ್ನು ನೋಡಿದ ಅಭಿಮಾನಿಗಳು ಆಶ್ಚರ್ಯಚಕಿತರಾದರು, ಇದು ಅನೇಕರನ್ನು ಚಿಂತೆಗೀಡು ಮಾಡಿದೆ. ಕೆಲವರು ಈ ವಿಡಿಯೋವನ್ನು ‘ಪ್ರಚಾರದ ಗಿಮಿಕ್’ ಎಂದೂ ಹೇಳಿದ್ದಾರೆ.
ಆದರೆ ಅಸಲಿಗೆ ಇದು "ದೋಸ್ತ್ ಬನ್ಕೆ " ಹಾಡಿನ ಮ್ಯೂಸಿಕ್ ವಿಡಿಯೋ ಚಿತ್ರೀಕರಣ. ಈ ಕುರಿತು ಖುದ್ದು ನಟಿ ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಮ್ಯೂಸಿಕ್ ವೀಡಿಯೊದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಮತ್ತು "ಬಹ್ತೇ ಹೈ ನಾ ಬಹತೇ ಹೈ ನಾ, ಆನಸೂ ಮೇರೆ ಬಹತೇ ಹೈ ನಾ" ಹಾಡಿನ ಸಾಹಿತ್ಯವನ್ನು ಉಲ್ಲೇಖಿಸಿರುವ ಅವರು, ರಾಹತ್ ಫತೇಹ್ ಅಲಿ ಖಾನ್ ಅವರು ಹಾಡಿದ್ದಾರೆ ಮತ್ತು ಗುರ್ನಾಜರ್ ಮತ್ತು ಕುಶಾಗ್ರಾ ಠಾಕೂರ್ ಅವರು ಸಂಯೋಜಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಕಳೆದುಹೋದ ಪ್ರೀತಿಯನ್ನು ನೆನಪಿಸಿಕೊಂಡು ನಾಯಕಿ ಭಾವನಾತ್ಮಕವಾಗಿ ಹಾಡುವ ಹಾಡು ಇದು. ಅದಕ್ಕಾಗಿಯೇ ಈ ವೇಷ ಎನ್ನುವುದನ್ನು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಬಿಂಕದ ಸಿಂಗಾರಿ... ಡಾ.ರಾಜ್ ಹಾಡಿಗೆ ಸೀತಾ-ರಾಮ ಮಾಡರ್ನ್ ಸ್ಟೆಪ್: ಮನಸೋತ ಅಭಿಮಾನಿಗಳು