BB7: ಅಮ್ಮ ತೀರಿ ಹೋದಾಗಲೂ ಕೊನೆಗೂ ಮುಖ ನೋಡಲಾಗದ ನತದೃಷ್ಟ ಇವರು!

By Web DeskFirst Published Oct 25, 2019, 3:29 PM IST
Highlights

ಸಿಟ್ಟಿನ ಕೈಗೆ ಬುದ್ದಿ ಕೊಡಬಾರದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ | ಅಮ್ಮನನ್ನು ನೆನದು ಕಣ್ಣೀರಿಟ್ಟ ರಾಜು ತಾಳಿಕೋಟೆ | ಕೊನೆಗೂ ತಾಯಿ ಮುಖ ನೋಡಲಾಗದ ನತದೃಷ್ಟ ಇವರು 

ಈ ಬಾರಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಪ್ರತಿಯೊಬ್ಬರ ಹಿಂದೆಯೂ ಒಂದೊಂದು ನೋವಿನ ಕಥೆಯಿದೆ. ಎಲ್ಲರೂ ಅವರವರ ನೋವನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದನ್ನು ನೋಡಬಹುದು. ರವಿ ಬೆಳಗೆರೆ ತಾಯಿಯನ್ನು ನೆನೆಸಿಕೊಂಡು ಕಣ್ಣೀರಿಟ್ಟಿದ್ದು ಮನ ಕಲಕುವಂತಿತ್ತು. ಅದೇ ರೀತಿ ಎಲ್ಲರೂ ಅಪ್ಪ- ಅಮ್ಮನನ್ನು ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 

BB7: ಮಾನವೀಯತೆ ಮರೆತ ಸ್ಪರ್ಧಿಗಳು; ಮನೆಯಲ್ಲೂ ವಿಲನ್ ಆಗ್ಬಿಟ್ರು ಸಿತಾರಾ!

ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ತಮ್ಮ ಹಿಂದಿರುವ ನೋವಿನ ಕಥೆಯನ್ನು ಹೇಳಿದ್ದಾರೆ. 'ನಮ್ಮ ಅಕ್ಕನಿಗೆ ಒಂದು ವಾಚ್ ತಂದಿದ್ದರು. ನೋಡ್ತಾ ಇದ್ದೆ. ನೀನು ಅದನ್ನು ಕೆಡಿಸುತ್ತೀಯ. ಕೊಡಿಲ್ಲಿ ಅಂತ ಕಸಿದುಕೊಳ್ಳಲು ಬಂದ್ಲು. ಕೋಪದಿಂದ ಗೋಡೆಗೆ ಎಸೆದೆ. ವಾಚ್ ಒಡೆದು ಹೋಯಿತು. ನಮ್ಮಮ್ಮನಿಗೆ ಕೋಪ ಬಂದು ಹೊಡೆಯಲು ಬಂದ್ರು. ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. ನನ್ನ ಕೈ ಹಿಡಿದುಕೊಳ್ಳುವಷ್ಟು ಧೈರ್ಯ ಬಂತಾ ನಿಂಗೆ? ಈ ಮನೆಯಲ್ಲಿ ನೀನಿರಬೇಡ. ನಾ ಸತ್ರು ಬರಬೇಡ. ಹೊರಟು ಹೋಗು ಎನ್ನುತ್ತಾರೆ. ನೀ ಸತ್ತರೆ ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಯಾರ್ ಸತ್ರೂ ಬರೋದಿಲ್ಲ. ಅಂತ ಹೇಳಿ ಮನೆಯಿಂದ ಹೊರಗೆ ಬಂದೆ' ಎನ್ನುತ್ತಾರೆ. 

ರಾಜು ತಾಳಿಕೋಟೆ 'ಕೈ ಚೇಷ್ಟೆಗೆ 'ಬುಸುಗುಟ್ಟಿದ 'ನಾಗಿಣಿ'

ಹೀಗೆ ಕಾಲ ಚಕ್ರ ಉರುಳುತ್ತಾ ಹೋಯಿತು. ಒಂದು ರಾಜು ತಾಳಿಕೋಟೆ  ಜಾತ್ರೆಗೆ ನಾಟಕಕ್ಕೆಂದು ಹೋಗಿರುತ್ತಾರೆ. ಅಂದು ಅಮ್ಮ ತೀರಿಕೊಂಡಿರುತ್ತಾರೆ. ಮನೆಯಿಂದ ನಾಟಕದ ಕಂಪನಿಗೆ ಟೆಲಿಗ್ರಾಂ ಕಳುಹಿಸಿರುತ್ತಾರೆ. ಆದರೆ ನಾಟಕ ಇದ್ದಿದ್ದಕ್ಕೆ ಅವರು ಮುಗಿಯುವವರೆಗೂ ಹೇಳುವುದಿಲ್ಲ. ನಾಟಕ ಮುಗಿಯುತ್ತದೆ. ಆಗ ರಾಜು ತಾಳಿಕೋಟೆಗೆ ವಿಚಾರ ತಿಳಿಸುತ್ತಾರೆ. ಅಷ್ಟೊತ್ತಿಗೆ ಸಂಜೆಯಾಗಿರುತ್ತದೆ. ರೈಲು, ಬಸ್ ಏನೂ ಇರಲಿಲ್ಲ. ಅಷ್ಟೊತ್ತಿಗಾಗಲೇ ಎಲ್ಲಾ ಕೆಲಸ ಮುಗಿದು ಹೋಗಿತ್ತು. ಕೊನೆಗೂ ಅಮ್ಮನ ಮುಖ ನೋಡಲು ಸಿಗುವುದೇ ಇಲ್ಲ.  ಸಿಗದೇ ಇರುವುದು ವಿಧಿಯಾಟ! 

ಅಮ್ಮನ ಮೇಲಿನ ಸಿಟ್ಟಿನಲ್ಲಿ ಹೇಳಿದ ಮಾತು ಅವರಿಗೆ ಮುಳುವಾಯಿತು. ತಾಯಿ ಕೊಟ್ಟ ಮಾತನ್ನು ಉಳಿಸಿಕೊಂಡು ಬಿಟ್ಟಳು.  ಕೊನೆಗೂ ಅಮ್ಮನ ಮುಖ ನೋಡಲಾಗದ ನತದೃಷ್ಟನಾಗಿ ಬಿಟ್ಟ ಮಗ. ಇಂತಹ ಘಟನೆ ಎಲ್ಲರಿಗೂ ಒಂದು ಸಂದೇಶ ನೀಡುವಂತಿದೆ. 

ಬದುಕಿದ್ದಾಗ ಅಪ್ಪ- ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಿಟ್ಟು, ಕೋಪ ಎಲ್ಲಾ ಆ ಕ್ಷಣಕ್ಕೆ ಮಾತ್ರ. ಅದನ್ನೇ ಸಾಧಿಸುವುದು ಸರಿಯಲ್ಲ. 

click me!