
ಬೆಂಗಳೂರು: ಬಿಗ್ ಬಾಸ್ ಗೆದ್ದ ಗಿಲ್ಲಿಗೆ ಸದ್ಯ ಹೋದಲ್ಲಿ ಬಂದಲ್ಲಿ ಜನ ಜೈ ಅಂತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೂರು ದಿನ ರಂಜಿಸಿದ ಗಿಲ್ಲಿ ಕನ್ನಡದಲ್ಲಿ ಹಾಸ್ಯನಟನಾಗಿ ಮಿಂಚಬಲ್ಲನಾ ಅಂತ ಚರ್ಚೆ ನಡೀತಾ ಇದೆ. ಈಗಾಗ್ಲೇ ಗಿಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾನೆ. ಹಲವು ಚಿತ್ರಗಳು ಸಿದ್ದವಾಗಿವೆ. ಬಿಗ್ ಬಾಸ್ ಬಳಿಕ ಅಂತೂ ಗಿಲ್ಲಿ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಿದೆ. ಗಿಲ್ಲಿ ಸ್ಯಾಂಡಲ್ವುಡ್ನ ಹೊಸ ಉಪಾಧ್ಯಕ್ಷ ಆಗೋ ಹಾದಿಯಲ್ಲಿದ್ದಾನೆ.
ಯೆಸ್, ಬಿಗ್ ಬಾಸ್ ವಿಜೇತನಾದ ಗಿಲ್ಲಿ, ಎಲ್ಲರ ಕಣ್ಮಣಿ ಆಗಿದ್ದಾನೆ. ಸದ್ಯ ಹಲವು ಕಾರ್ಯಕ್ರಮಗಳಲ್ಲಿ , ಉತ್ಸವಗಳಲ್ಲಿ ಗಿಲ್ಲಿ ಅತಿಥಿಯಾಗಿ ಪಾಲ್ಗೊಳ್ತಾ ಇದ್ದಾನೆ. ಗಿಲ್ಲಿ ಹೋದಲ್ಲಿ ಬಂದಲೆಲ್ಲಾ ಜನ ಜೈ ಅಂತಿದ್ದಾರೆ. ಗಿಲ್ಲಿ ಜೊತೆ ಸೆಲ್ಫಿಗೆ ಜನ ಮುಗಿಬೀಳ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ತನ್ನ ನಗೆಚಟಾಕಿಗಳಿಂದ ರಂಜಿಸಿದ ಗಿಲ್ಲಿ ಇನ್ಮುಂದೆ ಬಿಗ್ ಸ್ಕ್ರೀನ್ ಮೇಲೆ ಕಾಮಿಡಿಯನ್ ಆಗಿ ಮಿಂಚಲಿ ಅನ್ನೋದು ಅಭಿಮಾನಿಗಳ ಆಸೆ. ಗಿಲ್ಲಿ ಈಗಾಗ್ಲೇ ಗೌರಿ , ದಿ ಡೆವಿಲ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಮಿಡಿ ಟ್ರ್ಯಾಕ್ನಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾನೆ. ಗಿಲ್ಲಿ ನಟಿಸಿರೋ ಅನೇಕ ಚಿತ್ರಗಳು ಬಿಗ್ ಸ್ಕ್ರೀನ್ ಮೇಲೆ ಬರಲಿಕ್ಕೆ ಕೂಡ ಸಜ್ಜಾಗಿವೆ.
ಯೆಸ್, ಸ್ಯಾಂಡಲ್‌ವುಡ್‌ನಲ್ಲಿ ಉಪಾಧ್ಯಕ್ಷ ಅಂತಲೇ ಕರೆಸಿಕೊಳ್ಳೋ ಚಿಕ್ಕಣ್ಣನ ಸ್ಥಾನವನ್ನ ಗಿಲ್ಲಿ ತುಂಬಬಲ್ಲನಾ ಅಂತ ಚರ್ಚೆ ನಡೆದಿದೆ. ಯಾಕಂದ್ರೆ ಇಷ್ಟು ದಿನ ನಾಯಕರ ಪಕ್ಕದಲ್ಲಿ ಉಪಾಧ್ಯಕ್ಷನಂತೆ ನಿಲ್ತಾ ಇದ್ದ ಚಿಕ್ಕಣ್ಣ ಈಗ ತಾನೇ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಉಪಾಧ್ಯಕ್ಷ ಸಿನಿಮಾದಿಂದ ನಾಯಕನಾದ ಚಿಕ್ಕಣ್ಣ , ಸದ್ಯ ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಸಿನಿಮಾಗಳನ್ನ ಮಾಡೋದಕ್ಕೆ ಶುರುಮಾಡಿದ್ದಾರೆ. ಸೋ ಚಿಕ್ಕು ಜಾಗ ತುಂಬೋರು ಯಾರು ಅನ್ನೋ ಪ್ರಶ್ನೆಗೆ ಉತ್ತರದಂತೆ ಕಾಣ್ತಾ ಇದ್ದಾನೆ ಗಿಲ್ಲಿ ನಟ.
ಹೌದು ಸ್ಯಾಂಡಲ್‌ವುಡ್‌ನಲ್ಲಿ ಈ ಹಿಂದೆ ಹಾಸ್ಯ ಕಲಾವಿದರಾಗಿದ್ದವರೆಲ್ಲಾ ನಾಯಕನಟರಾಗಿ ಬಡ್ತಿ ಪಡೆದುಕೊಂಡು ಬಿಟ್ಟಿದ್ದಾರೆ. ಕನ್ನಡದ ಬಹುತೇಕ ನಾಯಕರ ಜೊತೆ ನೂರು ಪ್ಲಸ್ ಚಿತ್ರಗಳಲ್ಲಿ ಕಾಮಿಡಿಯನ್ ಪಾತ್ರ ಮಾಡಿದ್ದ ಶರಣ್ ಹೀರೋ ಆದ್ರು. ಇನ್ನೂ ಕಾಮಿಡಿ ಟ್ರ್ಯಾಕ್ ನಲ್ಲಿ ಕಮಾಲ್ ಮಾಡ್ತಾ ಇದ್ದ ಕೋಮಲ್ ಕೂಡ ಹೀರೋ ಆಗೋದ್ರು. ಶರಣ್, ಕೋಮಲ್ ನಾಯಕನಟರಾದ ಮೇಲೆ ಅವರ ಜಾಗ ತುಂಬಿದ್ದೇ ಚಿಕ್ಕಣ್ಣ.
ದರ್ಶನ್, ಸುದೀಪ್, ಶಿವಣ್ಣ, ಯಶ್ ಸೇರಿದಂತೆ ಬಹುತೇಕ ಸ್ಟಾರ್ಸ್ ಜೊತೆ ಕಾಮಿಡಿ ಪಾತ್ರ ಮಾಡಿದ್ದ ಚಿಕ್ಕಣ್ಣ ಕೂಡ ಈಗ ಹೀರೋ ಆಗಿದ್ದಾರೆ. ಚಿಕ್ಕು ಹೀರೋ ಆದ ಮೇಲೆ ಅನೇಕ ಕಾಮಿಡಿ ಕಿಲಾಡಿಗಳು ಈ ಜಾಗ ತುಂಬ್ತಾರೆ ಅನ್ನೋ ನಿರೀಕ್ಷೆ ಇದ್ದವು, ಆದ್ರೆ ಅನೇಕರು ಎರಡೇ ಚಿತ್ರಗಳಲ್ಲಿ ನಟಿಸಿ ಮಾಯವಾದ್ರು. ಈಗ ಬಿಗ್ ಬಾಸ್ ಗೆದ್ದ ಗಿಲ್ಲಿ ಕಡೆಗೆ ಎಲ್ಲರ ದೃಷ್ಟಿ ತಿರುಗಿದೆ. ಗಿಲ್ಲಿಯ ಕಾಮಿಡಿ ಟೈಮಿಂಗ್ ಎಂಥದ್ದು ಅನ್ನೋದು ಈಗಾಗ್ಲೇ ಅನೇಕ ರಿಯಾಲಿಟಿ ಶೋಗಳಲ್ಲಿ, ಸ್ಕಿಟ್ಗಳಲ್ಲಿ ಪ್ರೂವ್ ಆಗಿದೆ.
ಇನ್ನೂ ಗಿಲ್ಲಿ ನಟ ಅಷ್ಟೇ ಅಲ್ಲ ನಿರ್ದೇಶಕ ಕೂಡ. ಗಿಲ್ಲಿ ಈಗಾಗ್ಲೇ ಅನೇಕ ಕಿರುಚಿತ್ರ ಮತ್ತು ವೆಬ್ ಸರಣಿಗಳನ್ನ ಮಾಡಿದ್ದಾನೆ. ನಲ್ಲಿ ಮೂಳೆ, ರಾಂಗ್ ಸೈಡ್ ರಂಗನಾಥ ವಿಡಿಯೋಗಳೆಲ್ಲವನ್ನ ಗಿಲ್ಲಿನೇ ಬರೆದಿದ್ದು, ಈತನೇ ನಿರ್ದೇಶನ ಕೂಡ ಮಾಡಿದ್ದು. ಆದ್ರೆ ಇಲ್ಲೆಲ್ಲಾ ಗಿಲ್ಲಿನೇ ನಟ ಕೂಡ ಆದ್ದರಿಂದ ನಿರ್ದೇಶನಕ್ಕಿಂತ ನಟನೆ ಹೆಚ್ಚು ಸದ್ದು ಮಾಡಿತು. ಗಿಲ್ಲಿಗೆ ರಿಯಾಲಿಟಿ ಶೋಗಳ ಆಫರ್ಸ್ ಬಂತು. ಒಂದೊಂದೇ ರಿಯಾಲಿಟಿ ಶೋಗಳಲ್ಲಿ ಮಿಂಚ್ತಾ ಗಿಲ್ಲಿ ಬಿಗ್ ಬಾಸ್ ತನಕ ಬಂದುಬಿಟ್ಟ.
ಗಿಲ್ಲಿ ಒಳಗೆ ನಟ, ಬರಹಗಾರ ಮತ್ತು ನಿರ್ದೇಶಕ ಕೂಡ ಇರೋದ್ರಿಂದ ಗಿಲ್ಲಿ ಖಂಡಿತ ಹಾಸ್ಯಗಾರನಾಗಿ, ಯಶಸ್ವಿ ನಟ- ತಂತ್ರಜ್ಞ ಆಗಿ ಕೂಡ ಬೆಳೀಬಹುದು. ಗಿಲ್ಲಿ ಪ್ರತಿಭೆ ಕಿರುತೆರೆಗೆ ಸೀಮಿತ ಆಗದಿರಲಿ, ಬಿಗ್ ಸ್ಕ್ರೀನ್ನಲ್ಲಿ ಮಂಡ್ಯ ಹೈದ ಬೆಳೆಯಲಿ ಅಂತಿದ್ದಾರೆ ಗಿಲ್ಲಿ ಫ್ಯಾನ್ಸ್..!
- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.