10 ಗಂಟೆಗೆ 16 ಲಕ್ಷ ಹಣ.. ಇದು ಕಾವ್ಯಾ ಗೌಡನಿಂದ ಮಾತ್ರ ಸಾಧ್ಯ ಎಂದ ನೆಟ್ಟಿಗರು!

Published : Jan 27, 2026, 02:56 PM IST
Kavya gowda Bhavya gowda

ಸಾರಾಂಶ

ಕಿರುತೆರೆ ನಟಿ ಕಾವ್ಯಾ ಗೌಡ ಅವರ ಸಂಸಾರದ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ಸೋಮಶೇಖರ್‌ ಮೇಲೆ ಹಲ್ಲೆ ಹಾಗೂ ತಮಗೆ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ. ಇದರ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಕಾವ್ಯಾ ಅವರ ದುಬಾರಿ ಜೀವನದ ಹಳೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಬೆಂಗಳೂರು (ಜ.27): ಕಿರುತೆರೆ ನಟಿ ಕಾವ್ಯಾ ಗೌಡ ಸಂಸಾರ ಬೀದಿಗೆ ಬಿದ್ದಿದೆ. ಕಾವ್ಯ ಗೌಡ ಪತಿ ಸೋಮಶೇಖರ್‌ ಹಾಗೂ ನಂದೀಶ್‌ ಅವರ ನಡುವಿನ ಸಂಸಾರದ ಕಲಹ ಪೊಲೀಸ್‌ ಠಾಣೆ ಮಟ್ಟಿಲೇರಿದೆ. ನಂದೀಶ್‌ ಅವರ ಪತ್ನಿ ಪ್ರೇಮ ಹಾಗೂ ಅವರ ಕುಟುಂಬಸ್ಥರು ಕಾವ್ಯಾ ಗೌಡ ಅವರ ಮೇಲೆ ಹಲ್ಲೆ ಮಾಡಿದ್ದು ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾವ್ಯಾ ಗೌಡ ಅವರ ಪತಿ ಸೋಮಶೇಖರ್‌ ಅವರಿಗೆ ಪ್ರೇಮ ಅವರ ತಂದೆ ರವಿ ಕುಮಾರ್‌ ಚಾಕು ಇರಿದಿದ್ದಾರೆ ಎನ್ನಲಾಗಿದ್ದು, ಇನ್ನು ಕಾವ್ಯಾ ಗೌಡ ಅವರಿಗೆ 100 ಜನರ ಎದುರು ರೇ*ಪ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರ ನಡುವೆ ಕಾವ್ಯಾ ಗೌಡ ಅವರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಅವರ ಜ್ಯುವೆಲ್ಲರಿ ಡಿಸೈನಿಂಗ್‌ ಬ್ಯುಸಿನೆಸ್‌ ಹಾಗೂ ಮ್ಯಾನಿಫೆಸ್ಟೇಷನ್‌ ಕ್ಲಾಸ್‌ ಬಗ್ಗೆ ರೆಡ್ಡಿಟ್‌ನಲ್ಲಿ ವರ್ಷಗಳಿಂದಲೂ ಭಾರೀ ಕಾಮೆಂಟ್‌ಗಳಿಗೆ ಕಾರಣವಾಗಿದೆ.

ಸಾಮಾನ್ಯ ಕುಟುಂಬದಿಂದ ಕಾವ್ಯಾ ಗೌಡ ಅವರು ಕೋಟ್ಯಧಿಪತಿ ಕುಟುಂಬದ ಸೋಮಶೇಖರ್‌ ಅವರನ್ನು ಮದುವೆಯಾದ ಬಳಿಕ ಇಂಥ ಚರ್ಚೆಗಳು ನಡೆದಿದ್ದವು. ಆದರೆ, ಕುಟುಂಬದಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯ ಇದೆ ಎನ್ನುವ ವಿಚಾರ ರೆಡ್ಡಿಟ್‌ನಲ್ಲಿ ವರ್ಷಗಳ ಹಿಂದೆಯೇ ಚರ್ಚೆಯಾಗಿತ್ತು.

'ಆಕೆ ನನ್ನ ಫ್ಯಾಮಿಲಿ ಫ್ರೆಂಡ್‌. ಮದುವೆಗೂ ಮುಂಚೆ ಅವರು ಬಹಳ ಸಾಮಾನ್ಯ ಕುಟುಂಬ. ಅವರ ತಂದೆ ಬನ್ನೇರುಘಟ್ಟ ರಸ್ತೆಯಲ್ಲಿ ಚಿಕ್ಕ ಕೋಳಿ ಅಂಗಡಿ ಇರಿಸಿಕೊಂಡಿದ್ದರು. ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್‌ ಅವರ ಸ್ನೇಹಿತೆ ಈಕೆ. ಆಕೆ ಆಯೋಜಿಸಿದ್ದ ಪಾರ್ಟಿಯಲ್ಲಿಯೇ ಮೊದಲಿಗೆ ಸೋಮಶೇಖರ್‌ ಅವರನ್ನು ಕಂಡಿದ್ದರು. ಸೋಮಶೇಖರ್‌ ಅವರ ಮಾವ ಕ್ಲಾಸ್‌-1 ಗುತ್ತಿಗೆದಾರ. ಮದುವೆ ಆದ ಬಳಿಕ ನಟನೆ ಬಿಡಬೇಕು ಎಂದು ಅವರ ಕುಟುಂಬವೇ ಹೇಳಿತ್ತು. ಅದಾದ ಬಳಿಕ ಆಕೆ ಜ್ಯುವೆಲ್ಲರಿ ಡಿಸೈನಿಂಗ್‌ & ಬೋಟಿಕ್‌ ಆರಂಭಿಸಿದ್ದರು. ಇದರಿಂದಲೇ ಈಕೆ ಸಾಕಷ್ಟು ಹಣ ಮಾಡುತ್ತಾರೆ. ಇತ್ತೀಚೆಗೆ ವೈಟ್‌ಫೀಲ್ಡ್‌ ಸಮೀಪ ಅವರು 4 ಎಕರೆ ಜಮೀನು ಖರೀದಿಸಿದ್ದಾರೆ' ಎಂದು ಇಂದಿರಾ ಎನ್ನುವವರು 9 ತಿಂಗಳ ಹಿಂದೆ ಪೋಸ್ಟ್‌ ಮಾಡಿದ್ದಾರೆ.

ಕಾವ್ಯಾ ಗೌಡ ಕುರಿತ ಚರ್ಚೆಯ ಸೋಶಿಯಲ್‌ ಮೀಡಿಯಾ ಲಿಂಕ್‌

ಇದಕ್ಕೆ ರಿಪ್ಲೈ ಮಾಡಿರುವ ಇನ್ನೊಬ್ಬರು. ಈ ಕಾಮೆಂಟ್‌ ಸತ್ಯ. ಆಕೆ ಶೂನ್ಯದಿಂದ ಬಂದಾಕೆ. ಶ್ರೀಮಂತ ವ್ಯಕ್ತಿಯನ್ನು ಬಲೆಗೆ ಬೀಳಿಸಿ. ವಿಚ್ಛೇದನ ಕೊಡಿಸಿ ಮದುವೆಯಾದರು. ಆಕೆಯ ಅತ್ತೆ-ಮಾವ ಆಕೆಯನ್ನು ಎಂದಿಗೂ ಸ್ವೀಕರಿಸಲಿಲ್ಲ. ಆಕೆಯ ಸೋದರಿ ಸಾಮಾನ್ಯ ಟೆಕ್ಕಿ ವ್ಯಕ್ತಿ ಮದುವೆಯಾಗಿದ್ದು, ಕಾವ್ಯಾಳ ಸಯಾದಿಂದ ಬೋಟಿಕ್‌ ವ್ಯವಹಾರಕ್ಕೆ ಇಳಿದಿದ್ದರು. ಆಭರಣ ವಿನ್ಯಾಸದಲ್ಲಿ ಆಕೆಗೆ ಪರಿಣಿತಿ ಇದೆಯೇ ಎನ್ನುವುದರ ಬಗ್ಗೆಯೂ ನನಗೆ ಅನುಮಾನವಿದೆ ಎಂದು ಬರೆದಿದ್ದಾರೆ.

ಮ್ಯಾನಿಫೆಸ್ಟೇಷನ್‌ ಕ್ಲಾಸ್‌ ಅನ್ನೋದೇ ಸ್ಕ್ಯಾಮ್‌!

ಆಕೆ ಮ್ಯಾನಿಫೆಸ್ಟೇಷನ್‌ ಕ್ಲಾಸ್‌ಗಳ ಬಗ್ಗೆಯೂ ನೆಟ್ಟಿಗರುಅಸಮಾಧಾನ ವ್ಯಕ್ತಪಡಿಸಿದ್ದಾರೆ. 1 ಗಂಟೆಯ ಕ್ಲಾಸ್‌ಗೆ ಈಕೆ 5 ಸಾವಿರ ರೂಪಾಯಿ ಚಾರ್್‌ ಮಾಡುತ್ತಾರೆ. ಇದನ್ನು ಮೊದಲು 4 ಸಾವಿರ ರೂಪಾಯಿಯ ಸೆಷನ್‌ ಆಗಿ ಕಾವ್ಯಾ ಆರಂಭಿಸಿದ್ದರು. ಈಗ ಅದನ್ನ 5 ಸಾವಿರಕ್ಕೆ ಏರಿಸಿದ್ದಾರೆ. ಕಷ್ಟಪಟ್ಟು ಒದ್ದಾಡಿ ಸೈಕಾಲಜಿ ಡಿಗ್ರಿ ಪಡೆದವರು, ಕಾವ್ಯಾ ಜೀವನದ ಬಗ್ಗೆ ಹೇಳುವ ಪಾಠಗಳನ್ನು ಕೇಳುತ್ತಾರೆ. ಇದಕ್ಕಿಂತ ಫನ್ನಿ ಏನೆಂದರೆ, ಅವರು ಇದಕ್ಕಾಗಿ ಹಣ ಪಾವತಿ ಮಾಡುತ್ತಾರೆ. ಆಕೆಯ ಡಿಸೈನರ್‌ ಬ್ಯಾಗ್‌, ಲಕ್ಶುರಿ ಟ್ರಿಪ್‌, ಮೇಕಪ್‌, ಬಟ್ಟೆಗಳು ಜನರನ್ನು ಸೆಳೆಯಲು ಮಾತ್ರ. ಆಕೆಯ ಮ್ಯಾನಿಫೆಸ್ಟೇಷನ್‌ ಕ್ಲಾಸ್‌ಗೆ ಹೋಗಿರುವ ಸ್ನೇಹಿತ ನನಗೆ ಪರಿಚಯ. ಆಕೆಯ ಬ್ಯಾಚ್‌ನಲ್ಲಿ 326 ಮಂದಿ ಇದ್ದಾರೆ. 10 ಗಂಟೆಯ ಬುಲ್‌ಶಿಟ್‌ನಿಂದ ಆಕೆ 16.5 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ. ಆಕೆಯ ಸೆಷನ್‌ಗಳನ್ನು ನೀವು ಕೇಳಬೇಕು. ಅದರಲ್ಲಿ ವ್ಯಕ್ತಿಗಳು ಕೇಳೋ ಪ್ರಶ್ನೆಗಳು ಹಾಗೂ ಆಕೆಯ ಹೇಳುವ ಉತ್ತರಗಳು ಅಷ್ಟು ದಯನೀಯವಾಗಿರುತ್ತದೆ ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

100 ಕೋಟಿ ಮನೆ ವಿವಾದ: ನಟಿ Kavya Gowda ಅಸಭ್ಯ ಪದ ಬಳಸಿದ್ರು, ಸೋಮಶೇಖರ್‌ ಅನುಚಿತವಾಗಿ ನಡ್ಕೊಂಡ್ರು: ಪ್ರೇಮಾ
ಎಲ್ಲೇ ಹೋದ್ರೂ ನಂದೇ ಖರ್ಚು, ನಾನು ನನ್ನ ಗಂಡ, ಮಾವನಿಂದ ಹಣ ಪಡೆದಿಲ್ಲ: Actress Kavya Gowda Reaction