
ಬೆಂಗಳೂರು: ಬಿಗ್ ಬಾಸ್ ಮನೆಗೆ ಹೋಗುವವರು ಲಕ್ಷ ಲಕ್ಷ ರೂಪಾಯಿ ಶಾಪಿಂಗ್ ಮಾಡ್ತಾರೆ ಅನ್ನೋದು ಗೊತ್ತಿರೋ ವಿಷ್ಯನೆ. ಈ ಸೀಸನ್ ನಲ್ಲಿ ಕೂಡ ಅನೇಕ ಸ್ಪರ್ಧಿಗಳು ಲಕ್ಷ ಲಕ್ಷದ ಶಾಪಿಂಗ್ ಮಾಡಿದ್ರು. ಬೇಕಾದ್ದನ್ನ ತಗೋಂಡು ಮನೆಯೊಳಗೆ ಹೋಗಿದ್ರು. ಆದ್ರೆ ಈ ಸೀಸನ್ ವಿನ್ನರ್ ಗಿಲ್ಲಿ ಎಷ್ಟು ಖರ್ಚು ಮಾಡಿದ್ದ ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಪಕ್ಕಾ? ಹಾಗಾದ್ರೆ ಏನಿದು ಗಿಲ್ಲಿಯ ಕಥೆ. ನೋಡೋಣ ಬನ್ನಿ.
ಎಸ್ ದೊಡ್ಡವ್ವ ದೊಡ್ಡವ ದ್ವಾಸೆ ಕೊಡು ಅಂತ ಹೇಳ್ತಾ ಬಿಗ್ ಬಾಸ್ ವಿನ್ನರ್ ಆದವನು ಗಿಲ್ಲಿ ನಟ. ಸದ್ಯ ಗಿಲ್ಲಿ ಸೆಲೆಬ್ರೇಶನ್ ಮಾಡ್ ನಲ್ಲಿದ್ದಾನೆ. ಸನ್ಮಾನ ಬಹುಮಾನ ಅಂತ ಓಡಾಡ್ತಾ ಇದ್ದಾನೆ.
ಬಿಗ್ ಬಾಸ್ ಗೆದ್ದ ಗಿಲ್ಲಿಗೇ 60 ಲಕ್ಷ ನಗದು ಬಹುಮಾನ ಜೊತೆಗೆ ಒಂದು ಕಾರು ಸಿಕ್ಕಿದೆ. ಅಷ್ಟೇ ಅಲ್ಲ ಸದ್ಯ ಗಿಲ್ಲಿ ಸಾಕಷ್ಟು ಸಿನಿಮಾ, ಜಾಹೀರಾತು ಅಪರ್ಸ್ ಬರ್ತಾ ಇವೆ. ಹಲವು ಇವೆಂಟ್ ಗಳಿಗೆ ಆಹ್ವಾನ ಬರ್ತಾ ಇದೆ. ಹೇಗೆ ನೋಡಿದ್ರೂ ಗಿಲ್ಲಿ ಈಗ ಕರೋಡ್ ಪತಿನೇ ಆಗಿದ್ದಾನೆ.
ಹೌದು ಬಿಗ್ ಬಾಸ್ ಮನೆ ಒಡೆಯನಾಗಿರೋ ಗಿಲ್ಲಿ ಈಗ ಕರೋಡ್ ಪತಿ. ಈ ಕರೋಡ್ ಪತಿ ಆಗೋಕೆ ಬಿಗ್‌ಬಾಸ್ ಮನೆಗೆ ಹೋಗುವವರು ಕಾಸ್ಟ್ಯೂಮ್, ಮೇಕಪ್ ಅಂತ ಲಕ್ಷಾಂತರ ಖರ್ಚು ಮಾಡ್ತಾರೆ. ಈ ಸೀಸನ್ ನಲ್ಲಿ ಭಾಗಿ ಆದವರು ಕೂಡ ಲಕ್ಷ ಲಕ್ಷ ಶಾಪಿಂಗ್ ಮಾಡಿ ಬೇಕಾದದ್ದನ್ನ ತೆಗೆದುಕೊಂಡು ಒಂಟಿ ಮನೆಗೆ ಬಂದಿದ್ರು.
ಹೆಣ್ಣುಮಕ್ಕಳು ಮಾತ್ರ ಅಲ್ಲ, ಕರಿಬಸಪ್ಪ , ಡಾಗ್ ಸತೀಶ್ ಅಂಥವರು ಕೂಡ ಲಕ್ಷ ಲಕ್ಷ ದ ಬಟ್ಟೆ ಬರೆ ಶಾಪಿಂಗ್ ಮಾಡಿದ್ರಂತೆ. ಆದ್ರೆ ಇವರ್ಯಾರೂ ಗೆಲ್ಲಲೇ ಇಲ್ಲ. ಜಸ್ಟ್ ಬನಿಯನ್ ತೊಟ್ಟುಕೊಂಡೆ ಗಿಲ್ಲಿ ಶೋ ಗೆದ್ದುಬಿಟ್ಟ.
ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ. ಇದು ನಿಜ ಕೂಡ. ಬಿಗ್ ಬಾಸ್ ಬರುವ ಮುನ್ನ ಗಿಲ್ಲಿ ಬಟ್ಟೆ ಬರೆಗೆ ಖರ್ಚು ಮಾಡಿದ್ದು ಬರಿ ಹತ್ತು ಸಾವಿರ ಅಂತೆ. ಬಿಗ್‌ಬಾಸ್ ಮನೆಯಲ್ಲಿ ಮೂರು ವರೆ ತಿಂಗಳು ಇದ್ದ ಗಿಲ್ಲಿ ಬರೀ 10 ಸಾವಿರದಲ್ಲಿ ಒಂಟಿ ಮನೆ ಜೀವನ ಮಾಡಿ ಬಂದಿದ್ದಾನೆ. ಬರುವಾಗ ಸುಮ್ಮನೇ ಬಂದಿಲ್ಲ. ಬರೀ 10 ಸಾವಿರ ಬಂಡವಾಳವನ್ನ 60 ಲಕ್ಷ ಹಣ ಮತ್ತು ಒಂದು ಕಾರನ್ನ ಖರೀದಿ ಮಾಡಿಕೊಂಡು ಬಂದಿದ್ದಾನೆ.
ಕಳೆದ ವರ್ಷ ಬಿಗ್‌ಬಾಸ್ ಸೀಸನ್11 ಗೆದ್ದಿದ್ದು, ಉತ್ತರ ಕರ್ನಾಟಕದ ಪ್ರತಿಭೆ ಹನುಮಂತು. ಈ ಕುರಿಗಾಹಿ ಹನುಮಂತ ಕೂಡ ಬರಿ 4 ಜೊತೆ ಪಂಚೆ ಶರ್ಟ್ ತೆಗೆದುಕೊಂಡು ಬಿಗ್ಬಾಸ್ಶೋಗೆ ಹೋಗಿದ್ದ. ಕೊನೆಗೆ ಎಲ್ಲರಿಗಿಂತ ಚನ್ನಾಗೆ ಆಡಿ ಶೋ ಗೆದ್ದಿದ್ದ.
ಈ ಹನುಮಂತು ಈಗ ತನ್ನೂರಲ್ಲೇ ಮತ್ತದೇ ಕುರಿ ಫಾರ್ಮಿಂಗ್ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾನೆ. ಈಗ ಗಿಲ್ಲಿ ನಟ ಕೂಡ ಹನುಮಂತುನಂತೇ 10 ಸಾವಿರ ಖರ್ಚು ಮಾಡಿ ಬಿಗ್ಬಾಸ್ಗೆ ಹೋಗಿ 60 ಲಕ್ಷ ಗೆದ್ದು ಬೀಗಿದ್ದಾನೆ.
ಗಿಲ್ಲಿ ಯಾವಾಗಲೂ ಬನಿಯನ್ ಧರಿಸಿಕೊಡೆ ಇರೋದನ್ನ ನೋಡಿ ಅಶ್ವಿನಿ ಸೇರಿದಂತೆ ಅನೇಕರು ಗಿಲ್ಲಿ ಬಡವನಂತೆ ಬಿಂಬಿಸಿಕೊಳ್ತಾ ಇದ್ದಾನೆ ಅಂತ ಆರೋಪ ಮಾಡಿದ್ರು. ಆದ್ರೆ ವೀಕ್ಷಕರು ವೇಷ ನೋಡಲಿಲ್ಲ. ಆತನ ಆಟ ನೋಡಿ ವೋಟು ಹಾಕಿ ಗೆಲ್ಲಿಸಿದ್ರು. ಹೀಗಾಗಿ ಹತ್ತು ಸಾವಿರ ಖರ್ಚು ಮಾಡಿ ಕೋಟಿ ಒಡೆಯ ಆದ ಜಗತ್ ಕಿಲಾಡಿ ಗಿಲ್ಲಿ ಅಂತ ಎಲ್ಲರೂ ಕೊಂಡಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.