ಮೋಕ್ಷಿತಾ ನಂಗಿಷ್ಟ ಎಂದ ತ್ರಿವಿಕ್ರಮ್; ಇಬ್ಬರ ತಲೆಗೆ ಹೊಡೆದು ನಾಮಿನೇಟ್ ಮಾಡಿದ ಉಗ್ರಂ ಮಂಜು!

By Sathish Kumar KH  |  First Published Nov 18, 2024, 4:23 PM IST

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡುವಿನ ಆತ್ಮೀಯತೆಗೆ ಉಗ್ರಂ ಮಂಜು ಬ್ರೇಕ್ ಹಾಕಿದ್ದಾರೆ. 8ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಇಬ್ಬರ ತಲೆಗೆ ಹೊಡೆದು ನಾಮಿನೇಟ್ ಮಾಡಿದ್ದಾರೆ.


ಬೆಂಗಳೂರು (ನ.18): ಬಿಗ್ ಬಾಸ್ ಮನೆಯಲ್ಲಿ ನಟಿ ಭವ್ಯಾ ಗೌಡ ಜೊತೆಗೆ ಎಷ್ಟೇ ಆತ್ಮೀಯವಾಗಿದ್ದರೂ, ನನಗೆ ನಟಿ ಮೋಕ್ಷಿತಾ ಪೈ ಅವರೊಂದಿಗೆ ಜೋಡಿ ಆಗಿರುವುದೇ ಇಷ್ಟವೆಂದು ನಟ ತ್ರಿವಿಕ್ರಮ್ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ನಟ ಉಗ್ರಂ ಮಂಜು ಅವರು ಮೋಕ್ಷಿತಾ ಮತ್ತು ತ್ರಿವಿಕ್ರಮ್ ಇಬ್ಬರನ್ನೂ ದೂರವಿಡಲು ಮುಂದಾಗಿದ್ದಾರೆ. ಹೀಗಾಗಿ, ಇಬ್ಬರ ತಲೆಗೆ ಹೊಡೆದು, ನಾಮಿನೇಟ್ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಇದೀಗ 50 ದಿನಗಳು ಪೂರ್ಣಗೊಂಡಿವೆ. ಈವರೆಗೆ 6 ಕಂಟೆಸ್ಟೆಂಟ್‌ಗಳು ಮನೆಯಿಂದ ಹೊರಗೆ ಹೋಗಿದ್ದು, ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇದೀಗ ರಿಯಾಲಿಟಿ ಶೋ ಸ್ಪರ್ಧೆ ರೋಚಕತೆ ಪಡೆದುಕೊಂಡಿದೆ. ಪ್ರತಿ ವಾರವೂ ಸವಾಲಿನ ವಾರಗಳಾಗಿದ್ದು, ಸ್ವಲ್ಪ ಯಾಮಾರಿದರೂ ಆ ವಾರ ಮನೆಯಿಂದ ಹೊರಗೆ ಹೋಗುವುದು ಖಚಿತ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲ ಕಂಟೆಸ್ಟೆಂಟ್‌ಗಳು ಒಬ್ಬರಿಗೊಬ್ಬರು ಜೊತೆಗಿರದೇ ಆಗಿಂದಾಗ್ಗೆ ಎಲ್ಲವನ್ನೂ ಬದಲಿಸುತ್ತಾ ಆಟವಾಡುತ್ತಿದ್ದಾರೆ. ಇದು ಸ್ಪರ್ಧಿಗಳಿಗೆ ಮನೆಯಲ್ಲಿರಲು ಬೇಕಾಗುವ ಒಂದು ಚಾಕಚಕ್ಯತೆ ಆಗಿದೆ.

Tap to resize

Latest Videos

undefined

ಬಿಗ್ ಬಾಸ್ ಮನೆಯಲ್ಲಿ 8ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲಿ ಇದೀಗ ಮನೆಯಲ್ಲಿರುವ 14 ಸ್ಪರ್ಧಿಗಳ ಪೈಕಿ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಇಬ್ಬರು ಸ್ಪರ್ಧಿಗಳನ್ನು ಹಾಗೂ ಕ್ಯಾಪ್ಟನ್ ಭವ್ಯಾ ಗೌಡ ಅವರನ್ನು ಬಿಟ್ಟು ಉಳಿದಂತೆ 11 ಜನರು ನಾಮಿನೇಷನ್ ಪ್ರಕ್ರಿಯೆಯಲ್ಲಿದ್ದಾರೆ. ಇದೀಗ ನಾಮಿನೇಟ್ ಮಾಡುವುದಕ್ಕೆ ಬಿಗ್ ಬಾಸ್ ಎಲ್ಲ 11 ಸ್ಪರ್ಧಿಗಳ ಮೂರ್ತಿಗಳನ್ನು ಇಟ್ಟು ಅದಕ್ಕೆ ಮಡಿಕೆಗಳನ್ನು ಹೊದಿಸಿ ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡಿದ ಇಬ್ಬರು ಅಭ್ಯರ್ಥಿಗಳ ತಲೆಯನ್ನು ಹೊಡೆದು ಹಾಕಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ, ಉಗ್ರಂ ಮಂಜು ಅವರು ತ್ರಿವಿಕ್ರಮ್ ಮತ್ತು ಮೋಕ್ಷಿತಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ 50 ದಿನ ಪೂರೈಸಿದವರ ತಾಕತ್ತು ಪ್ರಶ್ನಿಸಿದ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್ ಕಿಶನ್!

ಬಿಗ್ ಬಾಸ್ ಮನೆಯ ಕಠಿಣ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ನಟ ತ್ರಿವಿಕ್ರಮ್ ಕಳೆದ ವಾರ ಜೋಡಿ ಟಾಸ್ಕ್‌ನಲ್ಲಿ ನನಗೆ ಭವ್ಯಾ ಗೌಡಗಿಂತ ಮೋಕ್ಷಿತಾ ಪೈ ಜೋಡಿ ಆಗಬೇಕಿತ್ತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದರ ನಂತರ ಕಿಚ್ಚನ ಪಂಚಾಯಿತಿ ವೇಳೆಯೂ ನನಗೆ ಭವ್ಯಾಗಿಂತ ಮೋಕ್ಷಿತಾ ಏನಾದರೂ ಏನಾದರೂ ಟ್ರಂಪ್ ಕಾರ್ಡ್‌ ಬಳಸಲು ಒಪ್ಪಿಕೊಂಡಿದ್ದರೆ ನಾನು ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಮೋಕ್ಷಿತಾ ಜೋಡಿ ಆಗಿದ್ದರೆ ನಂಗಿಷ್ಟ ಆಗುತ್ತಿತ್ತು ಎಂದು ಹೇಳಿಕೊಂಡಿದ್ದರು. ಆದರೆ, ಇದಕ್ಕೆ ಮೋಕ್ಷಿತಾ ಮಾತ್ರ ನನಗೆ ತ್ರಿವಿಕ್ರಮ್ ಕಂಡರೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದರು.

ನಾಮಿನೇಷನ್​ನಲ್ಲಿ ಒಡೆಯಿತಾ ಸದಸ್ಯರ ಒಗ್ಗಟ್ಟು?

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/3ybBjtKFWE

— Colors Kannada (@ColorsKannada)

ಇದೀಗ ಎಂಟನೇ ವಾರದ ನಾಮಿನೇಷನ್ ವೇಳೆ ತಾನು ಅಣ್ಣ, ಅಣ್ಣಾ.. ಎಂದು ಯಾವಾಗಲೂ ಜೊತೆಗಿರುತ್ತಿದ್ದ ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರ ಜೊತೆಗೆ, ತ್ರಿವಿಕ್ರಮ್ ಕೂಡ ಮಂಜು ಅವರನ್ನು ತೆಗಳಿದ್ದಾರೆ. ಇದರಿಂದ ಕೋಪಗೊಂಡ ಉಗ್ರಂ ಮಂಜು ಅವರು, ಒಂದು ಕಡೆ ಮೋಕ್ಷಿತಾ ಪೈ ಹಾಗೂ ಮತ್ತೊಂದೆಡೆ ತ್ರಿವಿಕ್ರಮ್ ಅವರನ್ನು ಇಬ್ಬರನ್ನೂ ನಾಮಿನೇಟ್ ಮಾಡಿದ್ದಾರೆ. ಎಲ್ಲವನೂ ಅಷ್ಟೇನೇ ತಮ್ಮ ಕೆಲಸ ಮುಗಿಯುವವರೆಗೆ ಮಾತ್ರ ಜೊತೆಗಿರುತ್ತಾರೆ. ನೀನು ವಾಯ್ಸ್ ಜೋರು ಮಾತನಾಡಿದರೆ, ನನಗೂ ಬರುತ್ತದೆ ಎಂದು ತ್ರಿವಿಕ್ರಮ್ ಕೂಡ ಉಗ್ರಂ ಮಂಜು ವಿರುದ್ಧ ಜೋರು ಧ್ವನಿಯಲ್ಲಿಯೇ ಮಾತನಾಡಿ, ಪರಸ್ಪರ ನಾಮಿನೇಟ್ ಮಾಡಿದ್ದಾರೆ.

ಇದನ್ನೂ ಓದಿ: ಗೌತಮಿ ಮುಖವಾಡ ನಾನು ಬಯಲು ಮಾಡ್ತೀನಿ; ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಂತೆ ಕಾಯಿ ಹೊಡೆದ ಶೋಭಾ ಶೆಟ್ಟಿ!

click me!