ಬಿಗ್ ಬಾಸ್ ಮನೆಯಲ್ಲಿ 50 ದಿನ ಪೂರೈಸಿದವರ ತಾಕತ್ತು ಪ್ರಶ್ನಿಸಿದ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್ ಕಿಶನ್!

By Sathish Kumar KH  |  First Published Nov 18, 2024, 2:08 PM IST

ಬಿಗ್ ಬಾಸ್ ಸೀಸನ್ 11ಕ್ಕೆ 3ನೇ ವೈಲ್ಡ್‌ ಕಾರ್ಡ್ ಎಂಟ್ರಿಯಾಗಿ ರಜತ್ ಕಿಶನ್ ಬಂದಿದ್ದಾರೆ. 50 ದಿನ ಕಳೆದಿರುವ ಸ್ಪರ್ಧಿಗಳ ತಾಕತ್ತು ಪ್ರಶ್ನಿಸಿದ ಅವರು, ಹೊರಗಿನ ಜನರ ಅಭಿಪ್ರಾಯ ಕೇಳುವ ತಾಕತ್ತು ಇದ್ದರೆ ನನ್ನನ್ನು ಕೇಳಿ ಎಂದು ಸವಾಲು ಹಾಕಿದ್ದಾರೆ.


ಬೆಂಗಳೂರು (ನ.18): ಬಿಗ್ ಬಾಸ್ ಸೀಸನ್ 11ರ ರಿಯಾಲಿಟಿ ಶೋಗೆ 3ನೃ ವೈಲ್ಡ್‌ ಕಾರ್ಡ್ ಎಂಟ್ರಿಯಾಗಿ ಬಂದಿರುವ ರಜತ್ ಕಿಶನ್ ಅವರು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ 50 ದಿನ ಕಳೆದಿರುವ ಎಲ್ಲ ಸ್ಪರ್ಧಿಗಳ ತಾಕತ್ತು ಪ್ರಶ್ನೆ ಮಾಡಿದ್ದಾರೆ. ನಿಮ್ಮಲ್ಲಿ ಯಾರಿಗಾರದರೂ ಹೊರಗಿನ ಜನರ ಅಭಿಪ್ರಾಯಗಳನ್ನು ಕೇಳುವ ತಾಕತ್ತು ಇದ್ದರೆ ನನ್ನನ್ನು ಕೇಳಿ, ನಾಣು ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸಕ್ಕೆ ಮುಂದಾಗಿದ್ದಾರೆ.

ಹೌದು, ಬಿಗ್ ಬಾಸ್ ಮನೆಗೆ ಈಗಾಗಲೇ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗಾಯಕ ಹನುಮಂತ, 2ನೇ ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ಹಾಗೂ 3ನೇ ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಕಿಶನ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂವರ ಪೈಕಿ ಎಲ್ಲರೂ ಟಫ್ ಕಂಟೆಸ್ಟೆಂಟ್‌ಗಳಾಗಿದ್ದಾರೆ. ಎಲ್ಲರೂ ವಿಭಿನ್ನ ಗುಣಗಳನ್ನು ಹೊಂದಿದ್ದು, ನಾವೇ ಕಪ್ ಗೆಲ್ಲುತ್ತೇವೆ ಎಂಬ ದೃಢ ನಂಬಿಕೆಯಲ್ಲಿ ಮನೆಗೆ ಬಂದಿದ್ದಾರೆ. ಆದರೆ, ಮೂವರಲ್ಲಿ 50 ದಿನಗಳು ಪೂರೈಸಿದ ನಂತರ ಬಿಗ್‌ ಬಾಸ್ ಮನೆಗೆ ಕಾಲಿಟ್ಟಿರುವ ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಮಾತ್ರ ಕಪ್ ಗೆಲ್ಲುವ ಬಗ್ಗೆ ಭಾರೀ ನೀರೀಕ್ಷೆಯಲ್ಲಿದ್ದಾರೆ. ಇದಕ್ಕೆ ತಕ್ಕಂತೆ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡು ಬಂದಿದ್ದು, ಆರಂಭದ ದಿನವೇ ಗೇಮ್ ಪ್ಲ್ಯಾನ್ ಮಾಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಬಿಗ್ ಬಾಸ್ ನಿಯಮ ಉಲ್ಲಂಘಿಸಿದ ಚೈತ್ರಾ; ಕಿಚ್ಚನ ಘರ್ಜನೆಗೆ ಹೆದರಿ ಮನೆಗೋಗ್ತೀನಿ ಬಿಟ್ಬಿಡಿ ಎಂದು ಕಣ್ಣೀರು!

ಮೊದಲ ದಿನವೇ ತಾಕತ್ತು ಪ್ರಶ್ನಿಸಿದ ವೈಲ್ಡ್ ಕಾರ್ಡ್ ಎಂಟ್ರಿ ರಜತ್: ಇನ್ನು ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ, ನರಕವನ್ನು ಆಡಿಕೊಂಡು ಬಂದಿರುವ 12 ಕಂಟೆಸ್ಟೆಂಟ್‌ಗಳಿಗೆ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ರಜತ್ ಕಿಶನ್ ಅವರು ಹಳಬರ ಬಗ್ಗೆ ತಾಕತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಿಮ್ಮಲ್ಲಿ ಯಾರಿಗಾರೂ ಆಚೆಕಡೆಯ ವಿಷಯ ಹೇಳಬೇಕಾ.? ತಾಕತ್ತಿದ್ದರೆ ಕೇಳಿ? ನಿಮಗೆ ಬೇಕಾದರೆ ಕೇಳಿರಿ, ನಾನು ಹೇಳೋದಕ್ಕೆ ರೆಡಿ ಇದ್ದೀನಿ ಎಂದು ಹೇಳುತ್ತಾರೆ. ಇದಾದ ನಂತರ ಶಿಶಿರ್, ಐಶ್ವರ್ಯಾ ಸೇರಿದಂತೆ ಹಲವರು ಹೊರಗಿನ ವಿಚಾರ ನೀನೇನು ಹೇಳಬೇಡಪ್ಪಾ, ನಾವೇ ಶೋ ಮುಗಿಸಿಕೊಂಡು ಹೊರಗೆ ಹೋದಾಗ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಮಗುನೂ ಚಿವುಟಿ ತೊಟ್ಲು ತೂಗ್ತಿದ್ದಾರಾ ರಜತ್ ಕಿಶನ್?

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/XqA8D5eZGH

— Colors Kannada (@ColorsKannada)

ಇದಾದ ನಂತರ ಮಾತನ್ನು ಮುಂದುವರೆಸಿ, ನಿಮಗೆಲ್ಲರಿಗೂ ಒಂದು ಮಾತನ್ನು ಹೇಳಬೇಕಿತ್ತು. ಎಲ್ಲರೂ ಚೆನ್ನಾಗಿ ಆಡುತ್ತಿದ್ದೀರಿ, ಸಖತ್ ಆಗಿ ಆಟ ಮೂಡಿಬರುತ್ತಿದೆ. ಈ ಶೋ ತುಂಬಾ ಚೆನ್ನಾಗಿ ಪ್ರಸಾರ ಆಗುತ್ತಿದೆ. ಲಾಸ್ಟ್ ಟೈಮ್‌ಗಿಂತಲೂ ಈ ಬಾರಿಯ ಟಿಆರ್‌ಪಿ ತುಂಬಾ ಚೆನ್ನಾಗಿ ಮೇಲೆ ಬರುತ್ತಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಎಲ್ಲರಿಗೂ ಒಂದು ಗೊಂದಲ ಕಂಡುಬರುತ್ತಿದೆ. ಯಾರಿಗೆ ಹೋಬಹುದು ಬಿಗ್ ಬಾಸ್ -11 ಟೈಟಲ್ ಎಂದು ಗೊಂದಲ ಇರುವ ಕಾರಣಕ್ಕೆ ಜನರು ನನ್ನನ್ನು ಒಳಗೆ ಕಳಿಸಿದ್ದಾರೆ, ನೀನೇ ಹೋಗಿ ಬಿಗ್ ಬಾಸ್ ವಿನ್ನರ್ ಟೈಟಲ್ ತೆಗೆದುಕೊಂಡು ಬರುವುದಕ್ಕೆ ಎಂದು ಹೇಳಿದ್ದಾರೆ. ಈ ಮೂಲಕ ತಾನೊಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ಎಲ್ಲರ ಮುಂದೆ ತೋರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಗೌತಮಿ ಮುಖವಾಡ ನಾನು ಬಯಲು ಮಾಡ್ತೀನಿ; ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಂತೆ ಕಾಯಿ ಹೊಡೆದ ಶೋಭಾ ಶೆಟ್ಟಿ!

click me!