ಬಿಗ್​ಬಾಸ್ ವಿನ್ನರ್​ಗೆ ಇದೆಂಥ ಫಜೀತಿ! ಗೆಲ್ಲುತ್ತಿದ್ದಂತೆಯೇ ಕೇಸ್​ ದಾಖಲು- ತಲೆ ಮರೆಸಿಕೊಂಡ್ರಾ ಪಲ್ಲವಿ ಪ್ರಶಾಂತ್​?

Published : Dec 20, 2023, 08:52 PM IST
ಬಿಗ್​ಬಾಸ್ ವಿನ್ನರ್​ಗೆ ಇದೆಂಥ ಫಜೀತಿ! ಗೆಲ್ಲುತ್ತಿದ್ದಂತೆಯೇ ಕೇಸ್​ ದಾಖಲು- ತಲೆ ಮರೆಸಿಕೊಂಡ್ರಾ ಪಲ್ಲವಿ ಪ್ರಶಾಂತ್​?

ಸಾರಾಂಶ

ತೆಲಗು ಬಿಗ್​ಬಾಸ್​ ವಿನ್ನರ್​ ವಿರುದ್ಧ ಪೊಲೀಸ್​ ಕೇಸ್​ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿರುವ ನಡುವೆಯೇ ವಿಡಿಯೋ ಮೂಲಕ ಪಲ್ಲವಿ ಪ್ರಶಾಂತ್​ ಹೇಳಿದ್ದೇನು?   

ಬಿಗ್​ಬಾಸ್​ನಲ್ಲಿ ಗಲಾಟೆ, ಕಿತ್ತಾಟ, ಕಿರುಚಾಟ, ಒಂದಿಷ್ಟು ಪ್ರೇಮ ಪ್ರಕರಣ, ಮತ್ತೊಂದಿಷ್ಟು ಅಶ್ಲೀಲತೆ ಎಲ್ಲವೂ ಕಾಮನ್. ಭಾಷೆ ಯಾವುದೇ ಆಗಿದ್ದರೂ ಇವೆಲ್ಲಾ ಸಾಮಾನ್ಯವೇ. ಆದರೆ, ತೆಲಗು ಬಿಗ್​ಬಾಸ್​ ಮಾತ್ರ ವಿನ್ನರ್​ ಘೋಷಣೆ ಆದ್ಮೇಲೂ ಸಕತ್​ ಸದ್ದು ಮಾಡುತ್ತಿದೆ. ಬಿಗ್​ಬಾಸ್​ ವಿನ್ನರ್​ ಘೋಷಣೆಯಾಗುತ್ತಿದ್ದಂತೆಯೇ ಉಂಟಾದ ವಿವಾದದಿಂದ ವಿಜೇತನನ್ನೇ ಪೊಲೀಸರು ಹುಡುಕುವಂತಾಗಿದೆ! ರೈತಾಪಿ ಕುಟುಂಬದ ಪಲ್ಲವಿ ಪ್ರಶಾಂತ್​ ಅವರು ತೆಲಗು ಬಿಗ್​ಬಾಸ್​ ಸೀಸನ್​ 7 ಗೆದ್ದು ಬಿಗ್​ಬಾಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದರು. ರೈತರ ಪುತ್ರನೊಬ್ಬ ಬಿಗ್​ಬಾಸ್​ ವಿನ್ನರ್​ ಆಗಿರುವುದು ಇದೇ ಮೊದಲು ಎಂದು ಖ್ಯಾತಿ ಗಳಿಸಿದರು. ಆದರೆ ಇದರ ಬೆನ್ನಲ್ಲೇ ಫಜೀತಿಯೂ ಅವರನ್ನು ಹಿಂಬಾಲಿಸಿತು.

ಅಷ್ಟಕ್ಕೂ ಆಗಿದ್ದೇನೆಂದರೆ, ಪಲ್ಲವಿ ಪ್ರಶಾಂತ್​ ವಿನ್ನರ್​ ಆಗುತ್ತಿದ್ದಂತೆಯೇ,  ಅವರ ಬೆಂಬಲಿಗರು ಬಿಗ್​ ಬಾಸ್​ ನಡೆಯುತ್ತಿದ್ದ ಸ್ಟುಡಿಯೋ ಎದುರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಫ್ಯಾನ್ಸ್​ ಪುಂಡಾಟ ಮೆರೆದಿದ್ದರು. ಕಾರು ಬಸ್ಸುಗಳನ್ನು, ಪೀಠೋಪಕರಣಗಳನ್ನು ಜಖಂ ಮಾಡಿದ್ದರು. ಈ ಪ್ರಕರಣದಲ್ಲಿ ಪಲ್ಲವಿ ಪ್ರಕಾಶ್‌ ಅವರನ್ನು  ಆರೋಪಿಯನ್ನಾಗಿ ಮಾಡಲಾಗಿದೆ. ಬಿಗ್‌ಬಾಸ್‌ ಮನೆಯಿಂದ ಹಿಂಬಾಗಿಲ ಮೂಲಕ ಹೋಗುವಂತೆ ಪೊಲೀಸರು ತಿಳಿಸಿದರೂ ತೆರೆದ ವಾಹನದಲ್ಲಿ ತನ್ನ ಹಿಂಬಾಲಕರ ಜತೆ ಹೋಗಿರುವುದರಿಂದ  ಪೊಲೀಸರು ಕೇಸ್​ ದಾಖಲು ಮಾಡಿದ್ದರು.  ಇದಾದ ಬಳಿಕ ಪಲ್ಲವಿ ಪ್ರಕಾಶ್​ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು.  

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಹರಾಜು! ಕಾರ್ತಿಕ್​ಗೆ ಭಾರಿ ಡಿಮಾಂಡ್​- ಕೊನೆಗೂ ಯಾರ ಕೈ ಸೇರಿದ್ರು?

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದರು. ಹೊರಗಡೆ ಜಗಳ ಆಗುತ್ತಿರುವುದರಿಂದ ಹಿಂದಿನ ಬಾಗಿಲಿನಿಂದ ಹೋಗುವಂತೆ ಪೊಲೀಸರು ಮಾತ್ರವಲ್ಲದೆ ಬಿಗ್‌ಬಾಸ್‌ ಆಡಳಿತವೂ ತಿಳಿಸಿತ್ತು. ಆದರೆ, ಈ ಆದೇಶ, ಸೂಚನೆ ಮರೆತ ಪಲ್ಲವಿ ಪ್ರಶಾಂತ್‌ ತೆರೆದ ಜೀಪ್‌ನಲ್ಲಿ ಜಗಳ, ಪುಂಡಾಟ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡಿದ ಆರೋಪವನ್ನು ಈಗ ಪಲ್ಲವಿ ಪ್ರಶಾಂತ್‌ ಎದುರಿಸುತ್ತಿದ್ದಾರೆ.

ಏಕೆಂದರೆ,  ಪೊಲೀಸರು ವಿಚಾರಣೆಗಾಗಿ ಪಲ್ಲವಿ ಪ್ರಶಾಂತ್​ ಅವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ಅವರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಈಗ ಅವರೇ ಒಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನಿನ್ನೆಯಿಂದ ನಾನು ಮನೆಯಲ್ಲೇ ಇದ್ದೆ. ಎಲ್ಲಿಯೂ ತಲೆ ಮರೆಸಿಕೊಂಡಿಲ್ಲ. ಫೋನ್​ ಹಾಳಾಗಿದ್ದರಿಂದ ಸ್ವಿಚ್​ ಆಫ್​ ಆಗಿತ್ತು’ ಎಂದಿದ್ದಾರೆ.  ನಾನು ತಪ್ಪು ಮಾಡಿಲ್ಲ. ನನ್ನ ವಿಡಿಯೋಗಳನ್ನು ತಿರುಚಿ ಸೋಷಿಯಲ್‌ ಮೀಡಿಯಾದಲ್ಲಿ ಹರಡಲಾಗುತ್ತಿದೆ. ಪಲ್ಲವಿ ಪ್ರಶಾಂತ್‌ ರೈತನ ಮಗ, ಆತ ಎಂದಿಗೂ ತಪ್ಪು ಮಾಡುವುದಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

ಬಿಗ್​ಬಾಸ್​ ವಿನಯ್​ ಪರ ಮಾತನಾಡಿ ಟ್ರೋಲ್​ ಆದ ನಟಿ ಅನು ಪೂವಮ್ಮ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?