
ಹಾವೇರಿ (ಜ.30): ನಮ್ಮ ಮಗ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದರೂ ಅವನಿಗೆ ಹಳ್ಳಿ ಹುಡುಗಿಯನ್ನೇ ಹುಡುಕಿ ಮದುವಿ ಮಾಡ್ತೀವಿ. ನಮಗೆ ಮಸಾರಿ ಮಣ್ಣಲ್ಲಿ ಕೆಲಸ ಮಾಡುವ ಹುಡುಗಿ ಬೇಕು ಎಂದು ಬಿಗ್ ಬಾಸ್ ಸೀಸನ್ 11ರ ಟ್ರೋಫಿ ವಿಜೇತ ಹನುಮಂತ ಅವರ ತಾಯಿ ಶೀಲವ್ವ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಹನುಮಂತನ ಆಗಮನಕ್ಕಾಗಿ ಕಾದು ಕುಳಿತಿದ್ದ ಅವರ ತಾಯಿ ಶೀಲವ್ವ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಗನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ 11ರಲ್ಲಿ ಹನುಮಂತ ವಿನ್ನರ ಆಗಿದ್ದಾನ. ಇದಕ್ಕ ನಾವು ಕಿಚ್ಚ ಸುದೀಪ್ ಸರ್‌ಗೆ ಧನ್ಯವಾದ ಹೇಳ್ತೀವಿ. ಎಲ್ಲರೂ ಹನುಮಂತನ ಮದುವೆ ಬಗ್ಗೆ ಮಾತಾಡ್ತಾರ. ಆದ್ರ ನಾವು ಹನುಮಂತನಿಗೆ ಹಳ್ಳಿ ಹುಡುಗಿನೇ ಮದುವೆ ಮಾಡ್ತೀವಿ ಎಂದು ಹೇಳಿದರು.
ನಮಗೆ ಮಸಾರಿ ಮಣ್ಣಲ್ಲಿ ಕೆಲಸ ಮಾಡೋ ಹುಡುಗಿ ಬೇಕು. ನಮ್ಮ ಲಂಬಾಣಿ ಸಂಪ್ರದಾಯದಂತೆಯೇ ಮದುವೆ ಮಾಡ್ತೀವಿ. ಸಿಟಿ ಹುಡುಗಿ ನಮ್ಮ ಮನಿಗೆ ಬೇಡವೇ ಬೇಡ. ನಮಗ ಹಳ್ಳಿ ಹುಡುಗೀನೇ ಸೊಸೆಯಾಗಿ ಬರಬೇಕು. ಇನ್ನು ಮಗನ ಗೆಲುವಿಗೆ ಎಲ್ಲರೂ ಓಟು ಹಾಕಿದ ರಾಜ್ಯದ ಜನರಿಗೂ ಧನ್ಯವಾದ ತಿಳಿಸ್ತೇವಿ ಎಂದು ಹನುಮಂತನ ತಾಯಿ ಶೀಲವ್ವ ತಿಳಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಟ್ರೋಫಿ ಆಂಜನೇಯನ ಪಾದಕ್ಕಿಟ್ಟು ಭಕ್ತಿ ಸಮರ್ಪಿಸಿದ ಹಳ್ಳಿ ಹೈದ ಹನುಮಂತ!
ಹನುಮಂತನಿಗೆ ಪ್ರೀತಿಸಿದ ಹುಡುಗಿ ಸಿಗ್ತಾಳಾ?
ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಗಾಯಕ ಹನುಮಂತ ತಾನು ಪ್ರೀತಿ ಮಾಡುವ ಹುಡುಗಿಯ ಬಗ್ಗೆ ಮಾತನಾಡುತ್ತಿದ್ದನು. ಬಿಗ್ ಬಾಸ್ ಶೋ ಮುಗಿಸಿಕೊಂಡು ಹೋಗುತ್ತಿದ್ದಂತೆಯೇ ನಾನು ಮದುವೆ ಮಾಡಿಕೊಳ್ತೀನಿ. ಈಗಾಗಲೇ ನಾನು ಹುಡುಗಿ ನೋಡೀನಿ ಎಂದು ದೋಸ್ತ ಧನರಾಜ್ ಆಚಾರ್ ಮುಂದೆ ಹೇಳಿಕೊಂಡಿದ್ದನು. ಆದರೆ, ಈ ವಿಚಾರವನ್ನು ಅಪ್ಪನ ಎದುರಿಗೆ ಹೇಳಿಕೊಳ್ಳುವ ಧೈರ್ಯ ಇರಲಿಲ್ಲ. ಜೊತೆಗೆ, ಹನುಮಂತನ ಅಪ್ಪ-ಅಮ್ಮ ಬಿಗ್ ಬಾಸ್ ಮನೆಯೊಳಗೆ ಹೋದಾಗ ಧನರಾಜ್ ಮೆತ್ತಗೆ ಹನುಮಂತನ ಅಮ್ಮನಿಗೆ ಆತ ಪ್ರೀತಿಸಿದ ಹುಡುಗಿ ಮದುವೆ ಮಾಡುವಂತೆ ಹೇಳಿದ್ದರು. ಇದಾದ ಬಳಿಕ ಬಿಗ್ ಬಾಸ್ ಫಿನಾಲೆ ದಿನ ಗಾಯಕ ಹನುಮಂತ ಟ್ರೋಫಿ ಗೆದ್ದ ನಂತರ ಸ್ವತಃ ಕಿಚ್ಚ ಸುದೀಪ್ ಅವರೇ ಹನುಮಂತ ಪ್ರೀತಿಸಿದ ಹುಡುಗಿ ಮದುವೆ ಮಾಡ್ತೀರಾ ಎಂದು ಕೇಳಿದ್ದರು. ಆಗ ಹನುಮಂತ ಅವರ ಅಪ್ಪ ಮೇಘಪ್ಪ ಆಯ್ತು ಮಾಡ್ತೀವಿ ರೀ ಸರ್, ನಿಮ್ಮನ್ನೂ ಮದುವೆಗೆ ಕರಿತೀವಿ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.