ರಿಲೇಶನ್‌ಶಿಪ್ ನಲ್ಲಿದ್ದು ಬ್ರೇಕಪ್ ಆಗಿರೋ ಧರ್ಮ-ಅನುಷಾ! ಬಿಗ್‌ಬಾಸ್‌ ಮನೆಯಲ್ಲಿ ವಿಷ್ಯ ತಿಳಿದು ಐಶ್ವರ್ಯಾ ಬೇಸರ

By Gowthami K  |  First Published Oct 13, 2024, 1:13 AM IST

ಬಿಗ್‌ಬಾಸ್‌ ಕನ್ನಡ 11ರಲ್ಲಿ ಧರ್ಮ ಮತ್ತು ಅನುಷಾ ನಡುವಿನ ಹಿಂದಿನ ಸಂಬಂಧದ ಬಗ್ಗೆ ಐಶ್ವರ್ಯಾ ಸಿಂಧೋಗಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಮನೆಯ ಸದಸ್ಯರ ನಡುವೆ ಚರ್ಚೆ ನಡೆದಿದ್ದು, ಐಶ್ವರ್ಯಾ ಭಾವುಕರಾಗಿದ್ದಾರೆ.


ಬಿಗ್‌ಬಾಸ್‌ ಕನ್ನಡ 11ಕ್ಕೆ ಕಾಲಿಡುವ ಮುಂಚೆ ಮನೆಯೊಳಗೆ ಕ್ಲೂಸ್‌ ಫ್ರೆಂಡ್ ಎಂದು ಹೇಳಿಕೊಂಡು ಬಂದಿರುವ ನಟಿ ಅನುಷಾ ರೈ ಮತ್ತು ನಟ ಧರ್ಮ ಕೀರ್ತಿ ರಾಜ್ ಈ ಮೊದಲು ಪ್ರೀತಿಯಲ್ಲಿದ್ದು, ಬಳಿಕ ಬ್ರೇಕಪ್‌ ಆಗಿತ್ತಾ? ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವೂ ಇದೆ. ಐಶ್ವರ್ಯಾ ಸಿಂಧೋಗಿ ಇದರಿಂದ ಬೇಸರ ಮಾಡಿಕೊಂಡಿದ್ದಾರೆ.

ಬಿಗ್‌ಬಾಸ್‌ ಕನ್ನಡ 11ರ ಎರಡನೇ ವಾರದ ಪಂಚಾಯಿತಿ ವಾರದ ಕಥೆ ಕಿಚ್ಚನ ಜೊತೆಗೂ ಮುನ್ನ ಉಗ್ರಂ ಮಂಜು ಟ್ರುತ್ ಅಥವಾ ಡೇರ್ ಆಟವಾಡಿಸಿದ್ದರು. ಮಂಜು ಸೇರಿ ಗೌತಮಿ, ಮೋಕ್ಷಿತಾ, ಮಾನಸ, ಧರ್ಮ, ಅನುಷಾ, ಐಶ್ವರ್ಯಾ, ಶಿಶರ್ ನೆಲದ ಮೇಲೆ ಕುಳಿತಿದ್ದರು. ಈ ವೇಳೆ ಮಂಜು ಅವರು ಅನುಷಾ ಬಳಿ ಇತ್ತೀಚೆಗೆ ನಿನಗೆ ಒಬ್ಬರ ಮೇಲೆ ಲವ್ ಆಗಿತ್ತಲ್ಲ ಆಚೆ, ಅದನ್ನು ಹೇಳು. ಅದು ಹೇಗಾಯ್ತು? ಹೇಗೆ ಬ್ರೇಕ್‌ ಅಪ್ ಆಯ್ತು, ಈಗಲೂ ಇದೆಯಾ? ಎಂದು ಪ್ರಶ್ನಿಸಿದರು. ಇದಕ್ಕೆ ಅನುಷಾ ರೀಸೆಂಟ್‌ ಅಲ್ಲ, ಬ್ರೇಕಪ್‌ ಆಗಿ 3-4 ವರ್ಷಗಳಾಯ್ತು ಎಂದು ಧರ್ಮ-ಅನುಷಾ ಒಬ್ಬರನ್ನೊಬ್ಬರು  ಮುಖ  ನೋಡಿಕೊಂಡರು.

Tap to resize

Latest Videos

ಬಿಗ್‌ಬಾಸ್‌ ಕನ್ನಡದಲ್ಲಿ ಹಲವು ಬದಲಾವಣೆ, ಇದು ಭಾರತದ ಶೋ ಇತಿಹಾಸದಲ್ಲೇ ಮೊದಲು!

ಇದಕ್ಕೆ ಅಲ್ಲೇ ಇದ್ದ ಐಶ್ವರ್ಯಾ ಸಿಂಧೋಗಿ ಏನು ಕಾಟ್ರವರ್ಸಿ ಆಯ್ತಾ? ನಂಗೊತ್ತಿಲ್ಲ. ಅದಕ್ಕೆ ಕೇಳ್ತಾ ಇದ್ದೀನಿ ಅಂದ್ರು. ಅದಕ್ಕೆ ಗೌತಮಿ ಮತ್ತು ಮಾನಸ ಅವರಿಬ್ಬರೇ (ಅನುಷಾ-ಧರ್ಮ) ಡಿಸ್ಕಸ್ ಮಾಡ್ತಾರೆ ಅಂತ ಹೇಳಿದರು.  ಅನುಷಾ ಇದಕ್ಕೆ ಅದೇ  ಬ್ರೇಕಪ್‌ ಆಗಿ 3-4 ವರ್ಷ ಆಯ್ತು. ಹುಡುಗ ಬೇಡ, ಹೆಸರು ಬೇಡ, ಅಂತೇಳಿ ಇವರೇ ಅಂತ ಧರ್ಮ ಅವರನ್ನು ತೋರಿಸಿದರು. ಇದಕ್ಕೆ ಧರ್ಮ ಏ... ಅದು ಸಿನೆಮಾದಲ್ಲಿ , ಅಫೀಷಿಯಲ್ ಏನೂ ಇಲ್ಲ ಅಂದರು. ಅದಕ್ಕೆ ಅನುಷಾ ಆಯ್ತು ಏನೋ ಒಂದು ಬಿಡಿ ಎಂದರು. ತಕ್ಷಣ ಧರ್ಮ ಬೇಸರದಿಂದ ಅಲ್ಲಿಂದ  ಹೊರಟು ಹೋದರು.ಇದಕ್ಕೆ  ಮಂಜು 3 ವರ್ಷ ಆಯ್ತಾ ಅಂತ ಕೇಳಿದ್ರು. ಇದಕ್ಕೆ ಐಶ್ವರ್ಯಾ ಅವರು, ನೀವಿಬ್ಬರು ಕೋ ಆಕ್ಟರ್ಸ್ ಅಂತ ಗೊತ್ತಿತ್ತು. ನೀವಿಬ್ಬರೂ ಈ ಹಿಂದೆ ರಿಲೇಶನ್‌ ಶಿಪ್‌ ನಲ್ಲಿ ಇದ್ದಿರಿ ಎಂದು ಗೊತ್ತಿರಲಿಲ್ಲ ಎಂದರು. 

ಇದಾದ ನಂತರ ಐಶ್ವರ್ಯಾ ಬೇಸರಿಸಿಕೊಂಡು ಜಗದೀಶ್ ಬಳಿ ಬಂದು ಈ ವಿಚಾರವನ್ನು ಹಂಚಿಕೊಂಡರು. ನಾನು ಧರ್ಮ ಯಾಕಷ್ಟು ಕ್ಲೋಸ್‌ ಆಗಿದ್ದೆವು ಎಂದರೆ ನಮ್ಮಿಬ್ಬರ ವೈಬ್ ಸೆಟ್ಟಾಗುತ್ತಿತ್ತು. ನಮ್ಮ ವೇವ್‌ ಲೆಂತ್ ಒಂದೇ ಇತ್ತು. ಅವರು ತುಂಬಾ ಕೇರಿಂಗ್, ಪ್ರಾಮಾಣಿಕ ಅಂತ ನನಗೆ ಫೀಲ್‌ ಆಯ್ತು ಎಂದು ಐಶ್ವರ್ಯಾ ಹೇಳಿದರು.

ಮಂಗಳೂರಿಗೆ ನಟ ಸಂಜಯ್ ದತ್, ಕ್ರಿಕೆಟಿಗ ಶಿವಂ ದುಬೆ ಆಗಮನ, ಕಟೀಲು ಕ್ಷೇತ್ರಕ್ಕೆ ಭೇಟಿ

ಅದಕ್ಕೆ ಜಗದೀಶ್, ಪಾಸ್ಟ್ ಲೈಫ್ ನಮಗೆ ಬೇಕಾಗಿಲ್ಲ ಎಂದರು. ಅದಕ್ಕೆ ಐಶ್ವರ್ಯಾ ಕೂಡ ಹೌದು ಬೇಕಾಗಿಲ್ಲ ಆದರೆ, ಅಂಬ್ರೆಲ್ಲಾ ತೆದುಕೊಂಡು ಹೋಗಿದ್ದು, ನನಗೆ ಬೇಜಾರು ಆಗಿ ಏನಾದ್ರು ಮಾಡ್ಕೊಳ್ಳಿ ಅಂತ ಒಳಗಡೆ ಹೋಗಿಬಿಟ್ಟೆ, ನನಗೆ ಹೆಂಗೆ ಅನ್ನಿಸಲ್ಲ ಸರ್‌, ನಾನು ಹುಳಿ ಹಿಂಡುತ್ತಿದ್ದೇನೆ ಅವರಿಬ್ಬರ ಮಧ್ಯ ಅಂದುಕೊಂಡಿದ್ದಾಳೆ, ನಂಗೆ ಅದು ತುಂಬಾ ಬೇಜಾರು ಆಯ್ತು. ಬೇಡ ನಂಗ್ಯಾಕೆ ಬೇಕು. ನಾನು ಇನ್ನು ಮೇಲೆ ಕಣ್ಣೆತ್ತಿನೂ ನೋಡಲ್ಲ. ಫೀಲಿಂಗ್ ವೆರಿ ಬ್ಯಾಡ್.

ಇನ್ನು ಈ ವಿಚಾರವನ್ನು ಜಗದೀಶ್ ಹೋಗಿ ಧನ್‌ರಾಜ್ ಬಳಿ ಡಿಸ್ಕಸ್ ಮಾಡಿದ್ರು, ಅನುಷಾ ಬಾಯಿಂದ ಸತ್ಯ ಬರಿಸೋಕೆ ಮಂಜಣ್ಣ ಅಲ್ಲಿ ಗೇಮ್ ಆಡಿಸಿದ್ರು, ಅನುಷಾ ಅವರೇ ನೀವು ಯಾರನ್ನಾದ್ರು ಲವ್‌ ಮಾಡಿದ್ರಿ ಮುಂಚೆ? ಈಗಲೂ ಅವನ್ನು ಬಿಟ್ಟಿದ್ದೀರಾ? ಬಿಟ್ಟಿದ್ರೆ ಇವತ್ತೂ ಲವ್ ಮಾಡ್ತಿದ್ದೀರಾ? ಎಷ್ಟು ಲವ್‌ ಮಾಡ್ತಿದ್ದೀರಾ? ಬಿಟ್ಟಿರೋಕೆ ಆಗುತ್ತಾ ಅಂತ ಕೇಳಿದ್ದಾರೆ. ಅದಕ್ಕೆ ಅನುಷಾ ನಾನು ಧರ್ಮನ್ನ ಲವ್ ಮಾಡ್ತಿದ್ದೆ 7 ವರ್ಷದಿಂದ ಅಂತ ಹೇಳಿ ಬಿಟ್ಟೋಳೆ.

ಅದಕ್ಕೆ ಧನ್‌ರಾಜ್ ನಿಜಾನಾ? ಅಂತ ಕೇಳಿದ್ದಕ್ಕೆ ಜಗದೀಶ್ ಪ್ರತಿಕ್ರಯಿಸಿ ಹೋಗಿ ಎಲ್ಲರಲ್ಲೂ ಕೇಳು ನಿನ್ನನ್ನು ಬಿಟ್ಟು ಎಲ್ಲರಿಗೂ ವಿಚಾರ ಗೊತ್ತು. ಅದಾಗಿ ಈಗ ಕ್ರಶ್‌ ಇದೆಯಾ ಅಂತ ಮಂಜು ಕೇಳಿದಾಗ ಎಸ್‌  ಇದೆ  ಎಂದಿದ್ದಾಳೆ ಎಷ್ಟರ ಮಟ್ಟಿಗೆ ಕ್ರಶ್ ಎಂದಿದ್ದಕ್ಕೆ ಐಶ್ವರ್ಯಾ ಮತ್ತು ಧರ್ಮ ಆವತ್ತು ಕೊಡೆ ಹಿಡಿದುಕೊಂಡಾಗ ನೋಡಲಾಗಲಿಲ್ಲ. ತುಂಬಾ ಸಿಟ್ಟುಬಂದು ಹೊರಟು ಹೋದೆ ಎಂದಿದ್ದಾಳೆ. 

ಅಲ್ಲ ಗುರು ನಿಂಗೆ ಗೊತ್ತಿಲ್ಲಾ ಅಂದ್ರೆ, ದಡ್ಡನಾ ಹುಚ್ಚನಾ ಗೊತ್ತಾಗುತ್ತಿಲ್ಲ ನಂಗೆ. ಇಂತಹ ಇಂಪಾರ್ಟೆಂಟ್ ಟಾಪಿಕ್ ಬಿಟ್ಟು ಹೋಗಿದ್ಯಾ ಮತ್ತೆ. ಐಶು ಇಲ್ಲಿಗೆ ಬಂದ ಮೇಲೆ ಧರ್ಮಾನ ಲವ್ ಮಾಡ್ತಾಳೆ ಅನ್ನೋ ಮಾತು. ಆ ವೈಬ್‌ ಗೆ ಇವತ್ತು ಡ್ಯಾಮೇಜ್ ಆಗಿದೆ ಎಂದು ಧನ್‌ರಾಜ್ ಗೆ ಜಗದೀಶ್ ಸವಿವರಣೆ ನೀಡಿದ್ದಾರೆ.

ಧನ್‌ರಾಜ್: ಅವರಿಗೆ (ಐಶು) ಅದಿಕ್ಕಾ ಬೇಜಾರು?
ಜಗದೀಶ್: ಹೌದು, ಅವರಿಬ್ಬರೂ ಹೇಳಿಲ್ಲವಲ್ಲ ಅಂತ ಬೇಜಾರು. ಇಬ್ಬರೂ ಲವ್ ಮಾಡಿ ಎರಡು ವರ್ಷ ಚೆನ್ನಾಗಿದ್ದು, ನನಗೆ ಒಂದು ಮಾತು ಹೇಳಿಲ್ಲ ಅಂತ ಬೇಜಾರು. ಇಬ್ಬರೂ ನನ್ನನ್ನು ಗೂಬೆ ಮಾಡಿದ್ರಲ್ಲಾ ಅಂತ ಮಗು (ಐಶು) ಬೇಜಾರು ಮಾಡಿಕೊಂಡಿದೆ.
ಧನ್‌ರಾಜ್: ಧರ್ಮ ಏನೂ ಹೇಳಿಲ್ವಾ?
ಜಗದೀಶ್: ಧರ್ಮ ಅದಕ್ಕೆ ಮುಚ್ಚಿಕೊಂಡು ಮಲಗಿದ್ದಾನೆ. 

ಇಷ್ಟು ಎಪಿಸೋಡ್ ನಲ್ಲಿ ನಡೆದಿದೆ. ನಿಜವಾಗಲೂ ಧರ್ಮ-ಅನುಷಾ ಮಧ್ಯೆ ಲವ್ ಇತ್ತಾ? ಬ್ರೇಕ್ ಅಪ್‌ ಆಯ್ತಾ? ಈಗಲೂ ಇದೆಯಾ? ಇದ್ಯಾವುದಕ್ಕೂ ಉತ್ತರವಿಲ್ಲ. ಆದ್ರೆ ಐಶ್ವರ್ಯಾ ಮಾತ್ರ ಇಬ್ಬರ ಮೇಲೂ ಸಿಟ್ಟಾಗಿರುವುದಂತೂ ನಿಜ. ಯಾಕೆಂದರೆ ಧರ್ಮ-ಅನುಷಾ ಜೊತೆಯಾಗಿ ಮೂರು ಸಿನೆಮಾ ನಾಡಿದ್ದು, ಆತ್ಮೀಯ ಸ್ನೇಹಿತರು ಅಂತ ಬಿಗ್ಬಾಸ್‌ ವೇದಿಕೆಯಲ್ಲಿ ಮನೆಯೊಳಗೆ ಬರೋ ಮುಂಚೆ ಹೇಳಿಕೊಂಡಿದ್ದರು. ಇಬ್ಬರನ್ನು ಜೊತೆಗೆ ಮನೆಯೊಳಗೆ ಕಳುಹಿಸಿಕೊಡಲಾಗಿತ್ತು.

click me!