ಕಾರ್ಡ್ಸ್​ ಮೂಲಕ ಮುಚ್ಚಿಟ್ಟ ಪ್ರೀತಿಯ ಗುಟ್ಟು ರಟ್ಟು​! ಒಬ್ಬರನ್ನೊಬ್ಬರು ಬಿಟ್ಟಿರೋಕೆ ಆಗ್ತಿಲ್ಲ ಎಂದು ಒಪ್ಪಿಕೊಂಡ ಜೋಡಿ

Published : Oct 12, 2024, 09:11 PM IST
ಕಾರ್ಡ್ಸ್​ ಮೂಲಕ ಮುಚ್ಚಿಟ್ಟ ಪ್ರೀತಿಯ ಗುಟ್ಟು ರಟ್ಟು​!  ಒಬ್ಬರನ್ನೊಬ್ಬರು ಬಿಟ್ಟಿರೋಕೆ ಆಗ್ತಿಲ್ಲ ಎಂದು ಒಪ್ಪಿಕೊಂಡ ಜೋಡಿ

ಸಾರಾಂಶ

ಸೀತಾ-ರಾಮರ ರಿಯಲ್​ ಲೈಫ್​ನಲ್ಲೂ ಕುಚ್ ಕುಚ್​ ನಡೆಯುತ್ತಿದೆ ಎಂದು ಅಭಿಮಾನಿಗಳು ಪದೇ  ಪದೇ ಹೇಳ್ತಿರೋ ನಡುವೆಯೇ ಕಾರ್ಡ್​ ಮೂಲಕ ಲವ್​ ಸ್ಟೋರಿ ತೆರೆದಿಟ್ಟಿದ್ದಾರೆ ನಟರು.   

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್‌. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಮೆಂಟ್ಸ್​ ಮಾಡ್ತಾರೆ.  ಕೆಲ ದಿನಗಳ ಹಿಂದೆ ಇವರಿಬ್ಬರೂ ಸೇರಿ ರೀಲ್ಸ್​ ಮಾಡಿದ್ದರು. ಇದನ್ನು ನೋಡಿದವರು, ಇವರಿಬ್ಬರ ಮಧ್ಯೆ ಖಂಡಿತಾ ಕುಚ್ ಕುಚ್​ ನಡೆಯುತ್ತಿದೆ ಎಂದಿದ್ದರು. ಏಕೆಂದ್ರೆ ಇದರಲ್ಲಿ ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ  ವೀಡಿಯೋ ಮಾಡಿದ್ದರು. ಇವರಿಬ್ಬರೂ ಅವಿವಾಹಿತರಾಗಿರುವ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆ ಮಾಡಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಂತರ ರೊಮಾಂಟಿಕ್​ ಸಾಂಗ್​ನ ವಿಡಿಯೋ ನೋಡಿದ ಮೇಲಂತೂ  ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ.  

ಇದೀಗ ಜೀ ಕುಟುಂಬ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗಿಯಾಗಲು ಈ ಜೋಡಿ ಬಂದಿದೆ. ಒಂದಿಷ್ಟು ಕಾರ್ಡ್​ಗಳನ್ನು ಆಯ್ಕೆ  ಮಾಡಿ ಅದರ ಬಗ್ಗೆ ಹೇಳುವಂತೆ ಆ್ಯಂಕರ್​ ಕೇಳಿದಾಗ, ಗಗನ್​ ಅವರು ಸೀತಾರಾಮ  ಸೀರಿಯಲ್​ಗೆ ಅನ್ವ ಮಾಡಿ ಕೆಲವೊಂದು ವಿಷಯ ಹೇಳಿದ್ದಾರೆ. ಅದೇ ರೀತಿ ವೈಷ್ಣವಿ ಅವರೂ ಹೇಳಿದ್ದಾರೆ. ಸಮಯ- ಸಂದರ್ಭ ನೋಡಿ ಲವ್​ ಹುಟ್ಟುತ್ತೆ ಎಂದು ಒಂದು ಕಾರ್ಡ್​ ನೋಡಿ ಹೇಳಿದ್ದಾರೆ. ಇಬ್ರಿಗೂ ಒಬ್ಬರನ್ನೊಬ್ಬರು ಬಿಟ್ಟಿರೋಕೆ ಆಗಲ್ಲ ಎಂದು ವೈಷ್ಣವಿ ಹೇಳಿದಾಗ ಗಗನ್​ ಅವರು ಅಚ್ಚರಿಯಿಂದ ಅವರ ಮುಖ ನೋಡಿದರು. ಅಷ್ಟಕ್ಕೂ ವೈಷ್ಣವಿ ಹೇಳಿದ್ದು ಸೀತಾರಾಮ ಸೀರಿಯಲ್​ ಕಥೆ ಬಗ್ಗೆ. ಆದರೆ ಅಭಿಮಾನಿಗಳಿಗೆ ಯಾಕೋ ಇವರಿಬ್ಬರ ನಡುವೆ ಸಮ್​ಥಿಂಗ್​ ನಡೆಯುತ್ತಿದೆ ಎಂದೇ ಗುಮಾನಿ. ಇದಕ್ಕೆ ಕಾರಣ ಇಬ್ಬರೂ ಸಿಂಗಲ್​. ಅದಕ್ಕಾಗಿಯೇ ರಿಯಲ್​ ಲೈಫ್​ನಲ್ಲೂ ರಾಮ್​  ಜೊತೆ ಹೀಗೆನಾ ಅಂತ ಕೇಳುತ್ತಿದ್ದಾರೆ. ಇನ್ನು ಕೆಲವರು ನೀವಿಬ್ಬರೂ ರಿಯಲ್​ನಲ್ಲಿಯೂ ಸಕತ್​ ಕ್ಲೋಸ್​ ಅನ್ನೋದು ಮೊದ್ಲೇ ಗೊತ್ತಿತ್ತು ಅನ್ನುತ್ತಿದ್ದಾರೆ. 

ಮದ್ವೆ- ಮಕ್ಕಳು ಬಗ್ಗೆ ನಟಿ ವೈಷ್ಣವಿ ಬೋಲ್ಡ್​ ಮಾತು: ನಾಚಿ ನೀರಾದ ರಾಮ್​ ಪಾತ್ರಧಾರಿ ಗಗನ್!

ಕೆಲ ದಿನಗಳ ಹಿಂದೆ,  ಹೊಸ ವಿಡಿಯೋ ಶೇರ್​ ಮಾಡಿದ್ದರು ವೈಷ್ಣವಿ. ಇದರಲ್ಲಿ ರ್ಯಾಪಿಡ್​ ರೌಂಡ್​ ಎಂದು ಇಬ್ಬರೂ ರೀಲ್ಸ್​ ಮಾಡಿದ್ದರು. ನಿಮ್ಮ ಈಗಿನ ಇಷ್ಟದ ಹಾಡು ಯಾವುದು? ಒಂದೆರಡು ಲೈನ್​ ಹೇಳಿ ಎಂದಾಗ, ವೈಷ್ಣವಿ ಮಚಾಲೋ ಮಚಾಲೋ ಹೆಂಗೌಳೆ ನಿಮ್​ ಡವ್​ ಎಂದಿದ್ದರು. ಇಷ್ಟದ ಜಂಕ್​ ಫುಡ್​ ಪಾನೀಪುರಿ ಎಂದಿದ್ದರು. ನಟಿಯಾಗದೇ ಇದ್ದರೆ ಡಾನ್ಸರ್​ ಆಗುತ್ತಿದ್ದೆ ಎಂದಿದ್ದರು. ಎಲ್ಲಿಯಾದರೂ ಹೋಗಬೇಕು ಎನ್ನುವುದಾದರೆ ಎಲ್ಲಿಗೆ ಹೋಗುವಿರಿ ಕೇಳಿದ ಪ್ರಶ್ನೆಗೆ ಮಂತ್ರಾಲಯ ಎಂದಿದ್ದರು. 

 ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್​ ನನ್ನ ಜೊತೆ ಎಂದಿದ್ದರು. ವೈಷ್ಣವಿ ಖಂಡಿತಾ ಇಲ್ಲ, ನಾನು ಓಡಿ ಹೋಗ್ತೀನಿ ಎಂದಿದ್ದರು. ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಿದ್ದರೆ ಏನಂತ ಇಟ್ಟುಕೊಳ್ತೀರಾ ಕೇಳಿದಾಗ, ಕೂಡಲೇ ಗಗನ್​ ಅವ್ರು ವನಜಾಕ್ಷಿ ಎಂದಿದ್ದರು.  ಆಗ ವೈಷ್ಣವಿ, ಇಲ್ಲ ವೈಷ್ಣೋದೇವಿಯಿಂದ ಈ ಹೆಸರು ಬಂದಿದ್ದು, ಹೆಸರು ಬದಲಾಯಿಸಿಕೊಳ್ಳಲ್ಲ ಎಂದಿದ್ದರು. ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್​ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್​ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂದಿದ್ದರು. ಒಟ್ಟಿನಲ್ಲಿ ಇವರಿಬ್ಬರನ್ನೂ  ರಿಯಲ್​ ಲೈಫ್​ನಲ್ಲಿಯೂ ಒಂದು ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಅಭಿಮಾನಿಗಳು. 


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ