ಹೆತ್ತಮ್ಮನನ್ನು ತಬ್ಬಿಕೊಳ್ಳಲು ಬಿಡದ ಬಿಗ್ ಬಾಸ್; ಕಾರ್ತಿಕ್‌ ಬಂದಾಗ 'ಪಾಸ್' ಹೇಳಿ ಮಲತಾಯಿ ಆದ್ರಾ?

By Shriram Bhat  |  First Published Dec 27, 2023, 12:31 PM IST

ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಶ್ಚಲರಾಗಿದ್ದಾರೆ. ಆಗ ಮನೆಯೊಳಗೆ ಬಂದ ಕಾರ್ತಿಕ್ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀಡು’ ಎಂದಷ್ಟೇ ಹೇಳಿದ್ದಾರೆ.


ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್‌ಬಾಸ್‌ ಮನೆಮಂದಿಯ ಬಂಧುಗಳಿಗೆ ಅವಕಾಶ ನೀಡುತ್ತಿದ್ದಾರೆ. ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊ, ಅಂಥದ್ದೇ ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. 

ಎಲ್ಲರೂ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ, ‘ನನ್ನ ಮುದ್ದು ತಾರೆ; ನಗುತಲಿ ಬಾರೆ’ ಎಂಬ ಹಾಡು ಮನೆಯೊಳಗೆ ಮೊಳಗಿದೆ. ಈ ಧ್ವನಿಯನ್ನು ಗುರ್ತು ಹಿಡಿದ ಕಾರ್ತಿಕ್‌, ಖುಷಿಯಿಂದ ಜಿಗಿಯುತ್ತ, ‘ಅಮ್ಮಾ…’ ಎಂದು ಓಡಿಹೋಗಿ ಷರ್ಟ್‌ ತೊಟ್ಟುಕೊಂಡು ಬಂದಿದ್ದಾರೆ. ಅಮ್ಮನೊಡನೆ ಒಡನಾಡಲು ಕಾಯುತ್ತಿದ್ದ ಕಾರ್ತಿಕ್‌ಗೆ ಬಿಗ್‌ಬಾಸ್‌ ಶಾಕ್ ನೀಡಿದ್ದಾರೆ. ಕಾರ್ತಿಕ್ ಮನೆಯೊಳಗೆ ಪ್ರವೇಶಿಸುತ್ತಿದ್ದ ಹಾಗೆಯೇ ಬಿಗ್‌ಬಾಸ್‌ ಎಲ್ಲರಿಗೂ ಪಾಸ್ ಹೇಳಿದ್ದಾರೆ. 

Tap to resize

Latest Videos

ಹಾಗಾಗಿ ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಶ್ಚಲರಾಗಿದ್ದಾರೆ. ಆಗ ಮನೆಯೊಳಗೆ ಬಂದ ಕಾರ್ತಿಕ್ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀಡು’ ಎಂದಷ್ಟೇ ಹೇಳಿದ್ದಾರೆ. ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ತಿಕ್ ಅಸಹಾಯಕತೆ ಹೃದಯಕರಗಿಸುವಂತಿದೆ. ಅಷ್ಟರಲ್ಲಿ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಎಲ್ಲರೂ ನಿಶ್ಚಲ ಸ್ಥಿತಿಯಲ್ಲಿದ್ದಾಗಲೇ, ಕಾರ್ತಿಕ್ ಅಮ್ಮ, ತೆರೆದ ಬಾಗಿಲಿನಿಂದ ಹೊರಗೆ ಹೋಗಿದ್ದಾರೆ. ಬಾಗಿಲು ಹಾಕಿಕೊಂಡಿದೆ. 

ಜೈಲಿನಲ್ಲಿ ಕೊಲೆಯಾದ್ರೆ ಸಲ್ಮಾನ್ ಖಾನ್ ಕಾರಣವೆಂದ ಕೆಆರ್‌ಕೆ; ದೇಶದ್ರೋಹಿ ನಟನಷ್ಟೇ ಅಲ್ಲ, ನೀನು ಅದೇ..!

‘ಅಮ್ಮಾ ವಾಪಸ್ ಬಾರಮ್ಮಾ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ಕಾರ್ತಿಕ್, ಅವರಿಗೆ ಅಮ್ಮನ ಜೊತೆ ಮಾತಾಡಲು ಅವಕಾಶ ಸಿಗುತ್ತದೆಯಾ? ಅವರು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ? ಎಲ್ಲವನ್ನೂ ತಿಳಿದುಕೊಳ್ಳಲು ಬಿಗ್‌ಬಾಸ್ ವೀಕ್ಷಿಸಿ. ದಿನಕಳೆದಂತೆ ಬಿಗ್ ಬಾಸ್ ಮನೆ ಕುತೂಹಲದ ಕೇಂದ್ರವಾಗಿದೆ. ಎಲ್ಲರೂ ಆಡುತ್ತಿರುವುದು ಎಲ್ಲಲು ಎಂಬುದು ನಿಜವಾದರೂ ಫೈನಲ್‌ನಲ್ಲಿ ಯಾರು ಗೆಲ್ಲಬಹುದು ಎಂಬುದು ತೀವ್ರ ಕುತೂಹಲ ಕೆರಳಿಸಿರುವ ಅಂಶ. 

ಮುಂಬೈ 'ಗ್ಯಾರೇಜ್‌'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್‌, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

ಸಲಾರ್ ಸಿನಿಮಾದಲ್ಲಿ 'ಅದೊಂದು' ಮಿಸ್ ಆಗ್ಬಿಟ್ಟಿದೆ; 'ಶೌರ್ಯಂಗ ಪರ್ವಂ'ನಲ್ಲಿ ಇರುತ್ತಾ?!

click me!