ಬಿಗ್ಬಾಸ್ ಸಂಗೀತಾ ಶೃಂಗೇರಿ ಅವರು ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸುವ ಮೂಲಕ ಹಲವು ವಿಷಯಗಳನ್ನು ಹೇಳಿದ್ದಾರೆ. ಯಾರವರು?
ಚಾರ್ಲಿ ಬೆಡಗಿ, ಸಂಗೀತಾ ಶೃಂಗೇರಿ ಇದೀಗ ಕನ್ನಡಿಗರೆಲ್ಲಾ ಪರಿಚಯವಾದವರು. ಬಿಗ್ಬಾಸ್ ಸೀಸನ್ 10ನಲ್ಲಿ ಸ್ಟ್ರಾಂಗೆಸ್ಟ್ ಸ್ಪರ್ಧಿ ಎನಿಸಿಕೊಂಡು ಗ್ರ್ಯಾಂಡ್ ಫಿನಾಲೆಯವರೆಗೂ ತಲುಪಿದವರು. ಇವರು 2ನೇ ರನ್ನರ್ ಅಪ್ ಆದರೂ ವಿಶೇಷವೆಂದರೆ, ಈ ಸೀಸನ್‌ನಲ್ಲಿ ಫೈನಲಿಸ್ಟ್ ಎನಿಸಿಕೊಂಡ ಏಕೈಕ ಮಹಿಳಾ ಸ್ಪರ್ಧಿ ಇವರೇ. ಬಿಗ್ ಬಾಸ್ ಮನೆಯಲ್ಲಿ ಕೆಲವರಿಗೆ ಅವರ ಜೊತೆ ಕಿರಿಕ್ ಬೇಡ, ಇವರ ಜೊತೆಗೆ ಜಾಸ್ತಿ ಜನ ಇದ್ದಾರೆ, ನಾಮಿನೇಟ್ ಮಾಡಿಬಿಡ್ತಾರೆ ಹೀಗೆ ಒಂದಷ್ಟು ಸಹಜವಾದ ಭಯಗಳಿದ್ದವು. ಇದೆಲ್ಲಾ ಸ್ಟ್ರಾಟೆಜಿ. ಆದರೆ ನಾನು ಯಾವುದೇ ಸ್ಟ್ರಾಟೆಜಿ ಮಾಡದೇ ನೇರವಾಗಿ ಆಡಿದ್ದಕ್ಕೆ ಇವನ್ನೆಲ್ಲ ನಾನು ಎದುರಿಸಬೇಕಾಯ್ತು ಎಂದು ಸಂಗೀತಾ ಹೇಳುವ ಮೂಲಕವೇ ಫಿನಾಲೆಯವರೆಗೂ ತಲುಪಿದವರು. ಬಿಗ್ ಬಾಸ್ ಆರಂಭವಾದ ದಿನದಲ್ಲಿ ಸಂಗೀತಾ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಕೋಟಿ ಕೊಟ್ಟರೂ ಬಿಗ್ ಬಾಸ್ ಗೆ ಹೋಗುವುದಿಲ್ಲ ಎಂದಿದ್ದರು. ಈಗ ಅದೇ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿ 2ನೇ ರನರ್ ಅಪ್ ಆಗಿ ಮಿಂಚಿದ್ದಾರೆ.
ಅಷ್ಟಕ್ಕೂ ಸಂಗೀತಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಪೋರ್ಟ್ ತುಂಬಾ ಇತ್ತು. ಇವರೇ ಗೆಲ್ಲುತ್ತಾರೆ, ಗೆಲ್ಲಬೇಕು ಎನ್ನುವ ದೊಡ್ಡ ವರ್ಗವೇ ಇತ್ತು. ಇವರ ಪರವಾಗಿ ಸಾಕಷ್ಟು ವೋಟಿಂಗ್ ಕೂಡ ನಡೆದಿದ್ದವು. ಬಿಗ್ಬಾಸ್ ಸ್ಪರ್ಧಿಗಳು ಬಿಗ್ಬಾಸ್ ಮನೆಯೊಳಕ್ಕೆ ಹೋಗುವಾಗ ಮೊಬೈಲ್ ಫೋನ್ ಬಳಸುವಂತಿಲ್ಲವಾದ್ದರಿಂದ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡಲು ಹಾಗೂ ತಮ್ಮ ಪರವಾಗಿ ವೋಟಿಂಗ್ ಕೇಳಲು ಯಾರ ಬಳಿಯಾದರೂ ಹೇಳಿರುತ್ತಾರೆ. ಅದೇ ರೀತಿ ಸಂಗೀತಾ ಶೃಂಗೇರಿಯವರ ಬಿಗ್ಬಾಸ್ ಮನೆಯ ಸಂಪೂರ್ಣ ಜರ್ನಿಯ ಜವಾಬ್ದಾರಿ ಹೊತ್ತವರು ಅವರ ಅತ್ತಿಗೆ.
ಎಲ್ಲೋ ಗೋಜಪ್ಪಾ ಸಾಕಪ್ಪಾ ಎಂದ ಇಶಾನಿ: ಶಿವಣ್ಣ ಕ್ಷಮಿಸಿಬಿಡಿ ಎನ್ನುತ್ತಲೇ ಮತ್ತೊಮ್ಮೆ ಹಾಡಿದ್ರು ಕೇಳಿ...
ಇದೀಗ ಫೇಸ್ಬುಕ್ನಲ್ಲಿ ಸಂಗೀತಾ ಅವರು ತಮ್ಮ ಅತ್ತಿಗೆಯನ್ನು ಪರಿಚಯಮಾಡಿಸಿದ್ದಾರೆ. ತಾಯಿಯಾಗಿ, ಅಕ್ಕನಾಗಿ ಪ್ರೀತಿ ತೋರುವ ಅತ್ತಿಗೆ ಇವರು ಎನ್ನುತ್ತಲೇ ತಾವು ಬಿಗ್ಬಾಸ್ ಮನೆಯಲ್ಲಿದ್ದಾಗ ಅತ್ತಿಗೆ ಸುಚಿ ಹೇಗೆಲ್ಲಾ ಸಹಾಯ ಮಾಡಿದರು ಎನ್ನುವುದನ್ನು ಹೇಳಿದ್ದಾರೆ. ನಾನು ಗೆದ್ದಾಗ ಇವರ ಕಣ್ಣಲ್ಲಿ ಆನಂದಬಾಷ್ಪ ಇತ್ತು. ನನ್ನ ಮೋಸ್ಟ್ ಫೆವರೆಟ್ ಅತ್ತಿಗೆ ಇವರು. ಇಂಥ ಅತ್ತಿಗೆಯನ್ನು ಪಡೆದಿರುವ ತಾವು ಧನ್ಯ ಎಂದು ಹೇಳಿದ್ದಾರೆ. ಅತ್ತಿಗೆ ಮತ್ತು ನಾದಿನಿಯ ಈ ಅಪರೂಪದ ಪ್ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ. ಹಾರ್ಟ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿದೆ. ನಿಮ್ಮ ಪ್ರೀತಿ ಹೀಗೆಯೇ ಇರಲಿ ಎಂದು ಹಾರೈಸುತ್ತಿದ್ದಾರೆ.
ಅಂದಹಾಗೆ ಸಂಗೀತಾ ಶೃಂಗೇರಿ ಇಂಡಸ್ಟ್ರಿಗೆ ಕಾಲಿಡೋ ಮೊದಲು ಬೇರೆ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದರು. ಇಂಡಸ್ಟ್ರಿಗೆ ಬಂದ್ಮೇಲೆ ಸಂಗೀತಾ ಅಂತಲೇ ಹೆಸರು ಬದಲಿಸಲಾಗಿದೆ. ಮೂಲಕ ಊರು ಶೃಂಗೇರಿ ಆಗಿದ್ದರಿಂದಲೇ ಸಂಗೀತಾ ಜೊತೆಗೆ ಶೃಂಗೇರಿ ಅನ್ನುವುದು ಬಂದಿದೆ. ಆದರೆ ಹುಟ್ಟು ಹೆಸರು ಶ್ರೀದೇವಿ. ಬಿಗ್ಬಾಸ್ ಮನೆಯಲ್ಲಿ ಗುರೂಜಿ ಇವರ ಭವಿಷ್ಯದ ಬಗ್ಗೆ ಮಾತನಾಡಿದ್ದರು. 110 ದಳಗಳು ಸಂಗೀತಾಗೆ ಸಿಕ್ಕಿತ್ತು. ಆ ಮೂಲಕ ಗುರೂಜಿ ಭವಿಷ್ಯ ನುಡಿದಿದ್ದರು. ಚಂದ್ರ ಅಂದ್ರೆ ಮನಸ್ಸು. ಮನಸ್ಸಿನಲ್ಲಿ ತುಂಬಾ ಹಿಂಸೆ. ಇವತ್ತು ಅಂತ ಅಲ್ಲ. ಮೊದಲಿನಿಂದಾನೂ ಹಾಗೆ. ತುಂಬಾ ನಂಬಿದ್ರಿ. ಆದರೆ ಆ ನಂಬಿಕೆಯಿಂದ ದ್ರೋಹವಾಗಿದೆ ಎಂದಿದ್ದಾಗ ಸಂಗೀತಾ ಹೌದು ಎಂದಿದ್ದರು. ಈಗ ತಮ್ಮ ಜರ್ನಿಗೆ ಅತ್ತಿಗೆ ತುಂಬಾ ಸಪೋರ್ಟ್ ಮಾಡಿರುವುದಾಗಿ ಹೇಳಿದ್ದಾರೆ.
'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್: ಕಾರ್ತಿಕ್ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ