'ನನ್ನ ಪತಿ ಜೊತೆ ಬಿಗ್‌ಬಾಸ್‌ ಸ್ಪರ್ಧಿಯ ಅಕ್ರಮ ಸಂಬಂಧ..' ಸೆನ್ಸೇಷನಲ್‌ ವಿಡಿಯೋ ರಿಲೀಸ್‌ ಮಾಡಿದ ಹೀರೋ ಪತ್ನಿ!

Published : Sep 22, 2025, 01:22 PM IST
Rithu Chowdhary Affair Video Goes Viral

ಸಾರಾಂಶ

bigg boss rithu chowdhary affair ಬಿಗ್ ಬಾಸ್ ತೆಲುಗು ಸ್ಪರ್ಧಿ ರಿತು ಚೌಧರಿ ಅವರ  ವೀಡಿಯೊಗಳು ವೈರಲ್ ಆಗಿವೆ. ನಟ ಧರ್ಮ ಮಹೇಶ್ ಅವರ ಪತ್ನಿ ಗೌತಮಿ, ರಿತು ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಈ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. 

ಬೆಂಗಳೂರು (ಸೆ.22): ಜನಪ್ರಿಯ ನಟಿ ಮತ್ತು ಬಿಗ್ ಬಾಸ್ ತೆಲುಗು ಸೀಸನ್ 9 ರ ಸ್ಪರ್ಧಿ ರಿತು ಚೌಧರಿ ಅವರ ಕೆಲವು ಖಾಸಗಿ ವೀಡಿಯೊಗಳು ಈಗ ವೈರಲ್ ಆಗುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಅವರು ಟಾಲಿವುಡ್‌ನ ವಿವಾದಾತ್ಮಕ ಹೀರೋನ ಫ್ಲ್ಯಾಟ್‌ಗೆ ಹೋಗಿ ಅಲ್ಲಿ ಪಾರ್ಟಿ ಮಾಡಿ, ಡ್ರಗ್ಸ್‌ ತಿಂದು ಹೊರಗೆ ಬರುತ್ತಿರುವುದನ್ನು ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಇನ್ನೂ ಶಾಕಿಂಗ್‌ ವಿಚಾರ ಏನೆಂದರೆ, ಈ ವಿಡಿಯೋವನ್ನು ಹೀರೋನ ಪತ್ನಿಯೇ ಸೋಶಿಯಲ್‌ ಮೀಡಿಯಾದಲ್ಲಿ ರಿಲೀಸ್‌ ಮಾಡಿದ್ದಾರೆ.

ಜಬರ್ದಸ್ತ್ ಮೂಲಕ ಪ್ರಖ್ಯಾತಿ ಪಡೆದಿದ್ದ ಬಿಗ್ ಬಾಸ್ ತೆಲುಗು ಸೀಸನ್ 9 ರ ಸ್ಪರ್ಧಿ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರಿಗೆ ಸಂಬಂಧಿಸಿದ ಕೆಲವು ಖಾಸಗಿ ವೀಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜನಪ್ರಿಯ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಗೌತಮಿ ಈ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ತನ್ನ ಪತಿ ಟಾಲಿವುಡ್ ಹೀರೋ ಧರ್ಮಮಹೇಶ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಪೊಲೀಸರನ್ನು ಈಕೆ ಸಂಪರ್ಕಿಸಿದ್ದರು ಎನ್ನಲಾಗಿದೆ.

ಆದರೆ, ಆ ಸಮಯದಲ್ಲಿ ಗೌತಮಿ ಆ ಯುವತಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಈಗ ಅವರು ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋದಲ್ಲಿ ಇರುವುದು ಬಿಗ್‌ಬಾಸ್‌ 9ನ ಮತತೊಬ್ಬ ಸ್ಪರ್ಧಿ ರಿತು ಚೌಧರಿ ಎಂದು ಗೊತ್ತಾದ ಬಳಿಕ ಅಭಿಮಾನಿಗಳು ಶಾಕ್‌ಗೆ ಒಳಗಾಗಿದೆ. ರಿತು ತನ್ನ ಪತಿ ಧರ್ಮ ಮಹೇಶ್‌ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಸೂಚಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಗೌತಮಿ ಬಿಡುಗಡೆ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಗೌತಮಿ

ಧರ್ಮ ಮಹೇಶ್ ಅವರನ್ನು ಪ್ರೀತಿಸಿ ಮದುವೆಯಾದ ಗೌತಮಿ 2023 ರಲ್ಲಿ ಗರ್ಭಿಣಿಯಾದರು. ಆದರೆ, ಅದೇ ಸಮಯದಲ್ಲಿ ತನ್ನ ಪತಿಗೆ ರಿತು ಚೌಧರಿ ಜೊತೆ ಸಂಬಂಧವಿತ್ತು ಎಂದು ಗೌತಮಿ ಆರೋಪಿಸಿದ್ದಾರೆ. ರಿತು ಕಾರಣದಿಂದಾಗಿ ಧರ್ಮ ಮಹೇಶ್‌ ತನ್ನೊಂದಿಗೆ ಜಗಳವಾಡಿದ್ದಕ್ಕೆ ಕೆಲವು ಪುರಾವೆಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ರಿತು ಬಗ್ಗೆ ಕೇಳಿದ ಕಾರಣ ಅವನು ತನ್ನಿಂದ ದೂರವಾಗುತ್ತಿದ್ದಾನೆ ಎಂದು ಅವಳು ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ನೋಡಬಹುದಾಗಿದೆ.

ಅಕ್ರಮ ಸಂಬಂಧದ ಬಗ್ಗೆ ಆಂಧ್ರದಲ್ಲಿ ಭಾರೀ ಚರ್ಚೆ!

ಇದಾದ ನಂತರ, ಗೌತಮಿ ಅವರು ರಿತು ಮತ್ತು ಧರ್ಮ ಮಹೇಶ್ ಒಟ್ಟಿಗೆ ಫ್ಲಾಟ್‌ಗೆ ಹೋಗುವ ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ. ಇದರು ನಡುವೆ ಇಬ್ಬರ ನಡುವೆ ನಿಜವಾಗಿಯೂ ಅಕ್ರಮ ಸಂಬಂಧವಿದೆಯೇ? ಅಥವಾ ಡ್ರಗ್ಸ್‌ ತೆಗೆದುಕೊಳ್ಳಲು ಮಾತ್ರವೇ ಭೇಟಿಯಾಗಿದ್ದರೆ ಎನ್ನುವ ಚರ್ಚೆಗಳು ಆಂಧ್ರಪ್ರದೇಶದಾದ್ಯಂತ ಆರಂಭವಾಗಿದೆ.

 

ಯಾರಿವರು ಧರ್ಮ ಮಹೇಶ್‌?

ಧರ್ಮ ಮಹೇಶ್ ವಿಷಯಕ್ಕೆ ಬಂದರೆ, ಸಿಂಧುರಾಮ್ ಮತ್ತು ಡ್ರಿಂಕರ್ ಸಾಯಿ ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಅವರು ಮನ್ನಣೆ ಗಳಿಸಿದರು. ಅದೇ ಸಮಯದಲ್ಲಿ, ಅವರು ಗೌತಮಿಯನ್ನು ಪ್ರೀತಿಸಿ 2019 ರಲ್ಲಿ ವಿವಾಹವಾದರು. ಅವರಿಗೆ 2023 ರಲ್ಲಿ ಗಂಡು ಮಗು ಜನಿಸಿತು. ಆದರೆ, ಕೆಲವು ದಿನಗಳ ಹಿಂದೆ, ಗೌತಮಿ ಧರ್ಮ ಮಹೇಶ್ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದರು. ಈಗ, ಅವರು ಸೆನ್ಸೇಷನಲ್‌ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!