
ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಒಂದೇ ವಾರಕ್ಕೆ ಹೊರ ಬಂದರೂ ಅತಿ ಹೆಚ್ಚು ಜನಪ್ರಿಯತೆ ಪಡೆದರು. ಇನ್‌ಸ್ಟಾಗ್ರಾಂನಲ್ಲಿ influencer ಆಗಿ ಯುಟ್ಯೂಬ್‌ನಲ್ಲಿ ಬ್ಲಾಗ್ ಮಾಡಿ ಅಪಾರ ಸಂಖ್ಯೆಯಲ್ಲಿ ಜನರ ಗಮನ ಸೆಳೆದಿದ್ದಾರೆ. ಇದ್ದಕ್ಕಿದ್ದಂತೆ ಧನುಶ್ರೀ ಫಾಲೋವರ್ಸ್ ಸಬ್ಸ್ಕ್ರೈಬ್ ಹೆಚ್ಚಾದರು ಎಂದು ನೆಗೆಟಿವ್ ಕಾಮೆಂಟ್ ಹರಿದಾದುತ್ತಿದೆ. ಹೀಗಾಗಿ ವಿಡಿಯೋ ಮೂಲಕ ಈ ಸುಂದರಿ ಸ್ಪಷ್ಟನೆ ನೀಡಿದ್ದಾರೆ.
'ಫೇಕ್ ಸಬ್ಸ್ಕ್ರೈಬರ್‌ಗಳನ್ನು ಹಣ ಕೊಟ್ಟು ಪಡೆದಿರುವುದಾಗಿ ಅನೇಕರು ಕಾಮೆಂಟ್ ಮಾಡಿದ್ದೀರಿ ನನಗೆ ನಿಜಕ್ಕೂ ಬೇಸರ ಆಯ್ತು ಹೀಗಾಗಿ ಮಾತನಾಡಬೇಕು ಎಂದು ವಿಡಿಯೋ ಮಾಡಿದೆ. ಒಂದು ತಿಂಗಳಲ್ಲಿನಲ್ಲಿ ನನಗೆ ತುಂಬಾ ಫಾಲೋವರ್ಸ್ ಬಂದಿದ್ದಾರೆ ಇದರಿಂದ ಎಲ್ಲರಿಗೂ ಅನುಮಾನ ಹುಟ್ಟಿದೆ. ನನ್ನ ಒಂದು ರೀಲ್ಸ್ 168 ಮಿಲಿಯನ್ ಅಂದ್ರೆ ಕೋಟಿಯಲ್ಲಿ ಜನರು ನೋಡಿದ್ದಾರೆ ಹಾಗೂ 1.4 ಮಿಲಿಯನ್ ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ಶಾರ್ಟ್ಸ್‌ಗೆ 2.2 ಮಿಲಿಯನ್ ವೀಕ್ಷಣೆ ದಾಟಿದೆ ಹೀಗಾಗಿ ಜನರು ಬಂದಿರಬಹುದು. ಸಬ್ಸ್ಕ್ರೈಬರ್‌ಗಳು ಯಾಕಿಲ್ಲ ಅಂದ್ರೆ ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಆರಂಭಿಸಿರುವುದು ಕಡಿಮೆ ಜನರಿದ್ದಾರೆ ಹಾಗೂ ಯಾರೊಟ್ಟಿಗೂ ಸೇರಿಕೊಂಡಿಲ್ಲ. ನನ್ನಂತೆ ಅನೇಕರಿಗೆ ಇದ್ದಕ್ಕಿದ್ದಂತೆ ಫಾಲೋವರ್ಸ್ ಬರಬಹುದು ಹೀಗೆ ಎಲ್ಲರಿಗೂ ಆಗುತ್ತದೆ ಆದರೆ ನನ್ನ ಪೋಸ್ಟ್‌ಗೆ ಕಾಮೆಂಟ್ ಮಾಡಿರುವುದು ಬೇಸರವಾಗಿದೆ' ಎಂದು ಧನುಶ್ರೀ ಮಾತನಾಡಿದ್ದಾರೆ.
ಕೂದಲು ಬಣ್ಣ ಬದಲಾಯಿಸಿಕೊಂಡ ಬಿಗ್ ಬಾಸ್ ಧನು ಶ್ರೀ; ಕಪ್ಪಿಂದ ಕೆಂಚಾಯ್ತು ಈಗ ಪರ್ಪಲ್, ಹಿಗ್ಗಾಮುಗ್ಗಾ ಟ್ರೋಲ್!
'ಕನ್ನಡ ಭಾಷೆ ಗೊತ್ತಿಲ್ಲದವರು ನನ್ನ ವಿಡಿಯೋ ಶಾರ್ಟ್ ನೋಡುತ್ತಾರೆ ಆದರೆ ಭಾಷೆ ಅರ್ಥ ಆಗಲ್ಲ ಅಂತ ವ್ಲಾಗ್ ನೋಡದೆ ಇರಬಹುದು. ನಾನು ಶ್ರಮ ಹಾಕುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದೀರಾ... ಶ್ರಮ ಹಾಕದೇ ಯಾವ ಕೆಲಸವೂ ಆಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇರುವ ಕಾರಣ ನಮ್ಮ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಓಪನ್ ಆಗಿ ತೋರಿಸಿಕೊಳ್ಳಬೇಕಾಗುತ್ತದೆ ಹೀಗಾಗಿ ಮಾನಸಿಕವಾಗಿ ನಮಗೂ ತೊಂದರೆ ಆಗುತ್ತೆ. ಈ ಬೇಸರದಲ್ಲಿ ಕೆಲವೊಮ್ಮೆ ವಿಡಿಯೋ ಕೂಡ ಮಾಡಲಾಗದು ಒಂದು ವಿಡಿಯೋ ಓಡಿಲ್ಲ ಅಂದ್ರೆ ಬೇಸರ ಆಗುತ್ತೆ. ಪ್ಲಾನ್ ಪ್ರಕಾರ ವಿಡಿಯೋ ಅಪ್ಲೋಡ್ ಆಗಿಲ್ಲ ಅಂದ್ರೆ ನಿಜ ಬೇಸರ ಆಗುತ್ತೆ ಕೆಲವೊಮ್ಮೆ ನಾನು ಕಣ್ಣೀರಿಟ್ಟಿರುವೆ..' ಎಂದು ಧನುಶ್ರೀ ಹೇಳಿದ್ದಾರೆ.
ಮೇಕಪ್ ಒಂದೇ ಜೀವನವಲ್ಲ; ಬಣ್ಣ ತಾರತಮ್ಯ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡ ಟಿಕ್‌ಟಾಕ್ ಧನುಶ್ರೀ!
'ಇಷ್ಟು ಜನ ಸಬ್ಸ್ಕ್ರೈಬರ್‌ಗಳು ಬಂದಿದ್ದಾರೆ ನಿಮ್ಮ ಸಿಲ್ವರ್ ಪ್ಲೇ ಬಟನ್ ಎಲ್ಲಿದೆ ಎಂದು ಅನೇಕು ಕಾಮೆಂಟ್ ಮಾಡಿದ್ದರು. ಆದರೆ ನಿಜ ಹೇಳಬೇಕು ಅಂದ್ರೆ ನನ್ನ ಟೀಂ ಈ ಕೆಲಸಗಳನ್ನು ಮ್ಯಾನೇಜ್ ಮಾಡುವುದು ನಾನು ಅವರು ಅಪ್ಲೈ ಮಾಡಿಲ್ಲ ಎಂದು ತಿಳಿಯಿತ್ತು..ಈಗ ಅದಕ್ಕೆ ಅಪ್ಲೈ ಮಾಡಿದ್ದಾರೆ ಕೇವಲ 2 ವಾರಗಳಲ್ಲಿ ನನ್ನ ಸಿಲ್ವರ್ ಪ್ಲೇ ಬಟನ್ ಸಿಗುತ್ತದೆ. ಓಪನಿಂಗ್ ವಿಡಿಯೋ ಮಾಡಿ ತೋರಿಸುವೆ... ಫೇಕ್ ಸಬ್ಸ್ಕ್ರೈಬ್ ಇದ್ರೆ ಬ್ಲೂ ಟಿಕ್ ಬರುತ್ತಿರಲಿಲ್ಲ. ದಯವಿಟ್ಟು ಎಲ್ಲಾ ರೀತಿ ಯೋಚನೆ ಮಾಡಿ ಕಾಮೆಂಟ್ ಮಾಡಿ. ನನ್ನ ಪ್ರತಿಯೊಂದು ವಿಡಿಯೋವನ್ನು ನಾನೇ ಎಡಿಟ್ ಮಾಡಿ ಅಪ್ಲೋಡ್ ಮಾಡುವುದು ಯಾರ ಸಹಾಯ ಪಡೆದಿಲ್ಲ. ನನ್ನ ಶ್ರಮ ನಿಮಗೆ ಪ್ರತಿ ಸತಿ ತೋರಿಸಬೇಕಿಲ್ಲ ಇದು ನೋಡಿ ಹೀಗೆ ಮಾಡಿದೆ ಹಾಗೆ ಮಾಡಿದೆ ಅಂತ...ಸಮಯ ಕೊಟ್ಟರೆ ಮಾತ್ರ ಕೆಲಸ ಮಾಡಲು ಸಾಧ್ಯ. ದಯವಿಟ್ಟು ಕಾಮೆಂಟ್ ಮಾಡಬೇಡಿ ಬೇಸರವಾಗುತ್ತದೆ ತುಂಬಾ ಯೋಚನೆ ಮಾಡಿ ವಿಡಿಯೋ ಮಾಡಿರುವುದು' ಎಂದಿದ್ದಾರೆ ಧನುಶ್ರೀ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.