ಲೇಡಿ ಡಾನ್ ಯಶಸ್ವಿನಿ ಜೊತೆ ರಕ್ಷಕ್‌ ಬುಲೆಟ್‌; ಸಿನಿಮಾ ನೋಡ್ತಿಲ್ಲ ಅಂತ ವ್ಲಾಗ್‌ ಶುರು ಮಾಡಿದ ನಟ!

By Vaishnavi Chandrashekar  |  First Published Aug 28, 2024, 4:24 PM IST

ಯೂಟ್ಯೂಬ್ ಲೋಕಕ್ಕೆ ಕಾಲಿಟ್ಟ ರಕ್ಷಕ್ ಬುಲೆಟ್. ಮೊದಲ ವಿಡಿಯೋದಲ್ಲೇ ಭದ್ರಾವತಿ ತೋರಿಸಿದ ನಟ.....


ತರುಣ್ ಸುಧೀರ್ ನಿರ್ದೇಶನ ಮಾಡಿರುವ ಗುರು ಶಿಷ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬುಲೆಟ್‌ ಪ್ರಕಾಶ್ ಪುತ್ರ ರಕ್ಷಕ್. ಮೊದಲ ಚಿತ್ರದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಂತರ ರಕ್ಷಕ್‌ ಬುಲೆಟ್‌ ಕೈಗೆ ಬಿಗ್ ಬಾಸ್ ಸೀಸನ್ 10ರ ಆಫರ್‌ ಬಂದಿತ್ತು. ಅಸಮರ್ಥರಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ರಕ್ಷಕ್‌ ಸಮರ್ಥನಾಗಿ ಆಟಗಳನ್ನು ಗೆದ್ದು 100 ದಿನಕ್ಕೆ ಹತ್ತಿರವಿದ್ದಾಗ ಎಲಿಮಿನೇಟ್ ಆಗಿ ಹೊರ ಬಂದರು. ಅದಾದ ಮೇಲೆ ರಕ್ಷಕ್ ಬುಲೆಟ್‌ ಸೇನಾ ಸಮಿತ್ತಿ ಎಂದು ಅಭಿಮಾನಿಗಳು ಸಂಘ ಕಟ್ಟುತ್ತಾರೆ. 

ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರದ ಲುಕ್‌ನ ರಕ್ಷಕ್ ತಮ್ಮ ಹುಟ್ಟುಹಬ್ಬದ ದಿನ ರಿವೀಲ್ ಮಾಡಿದ್ದಾರೆ. ಶೀಘ್ರದಲ್ಲಿ ಟೈಟಲ್ ಅನೌನ್ಸ್‌ ಮಾಡಲಿದ್ದಾರೆ. ನೇಮ್ ಆಂಡ್ ಫೇಮ್ ಹೊಂದಿರುವ ರಕ್ಷಕ್ ತಮ್ಮ ಸ್ನೇಹಿತರು, ಕುಟುಂಬಸ್ಥರು ಮತ್ತು ಅಭಿಮಾನಿಗಳು ಒತ್ತಾಯಕ್ಕೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಯಾರಿಗೂ ಅವಮಾನ, ನೋವು ಅಥವಾ ಕಷ್ಟ ಕೊಡುವುದಿಲ್ಲ ಇದು ಕೇವಲ ತಮಾಷೆಗೆ ಎಂದು ಮೊದಲ ವಿಡಿಯೋದಲ್ಲಿ ರಕ್ಷಕ್ ಹೇಳಿದ್ದಾರೆ. ಇನ್ನು ರಕ್ಷಕ್ ತಮ್ಮ ಅಕೌಂಟ್‌ನಲ್ಲಿ ಏನ್ ಏನು ತೋರಿಸುತ್ತಾರೆ ಅನ್ನೋದು ಜನರ ಕ್ಯೂರಿಯಾಸಿಟಿ. 

Tap to resize

Latest Videos

ಕನ್ನಡ ಪರ್ಫೆಕ್ಟ್‌, ಇಂಗ್ಲಿಷ್ ಓಕೆ, ಹಿಂದಿ......; ಸೋನು ಗೌಡ ಹವಾ ಎಬ್ಬಿಸಿದ ವಿಡಿಯೋ ವೈರಲ್!

ಮೊದಲ ವಿಡಿಯೋದಲ್ಲಿ ಭದ್ರಾವತಿ ಊರಿಗೆ ಪ್ರಯಾಣ ಮಾಡಿದ್ದಾರೆ. ಮಹಿಳಾ ಲೇಡಿ ಡಾನ್ ಹಿಸ್ಟರಿ ಶೀಟರ್ ಕ್ರಿಯೇಟ್ ಮಾಡಿರುವ ಯಶಸ್ವಿನಿ ಮಹೇಶ್‌ ಉರ್ಫ್‌ ಮುನಿಯಮ್ಮ ಎಂಬುವವರ ಜೊತೆ ರಕ್ಷಕ್ ಭದ್ರಾವತಿ ಕಡೆ ಪ್ರಯಾಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಶಸ್ವಿನಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಕ್ಕಪಕ್ಕ 10-15 ಮಂದಿ ಹುಡುಗರ ಜೊತೆ ಓಡಾಡುತ್ತಾರೆ. ಇವರ ಜೊತೆ ರಕ್ಷಕ್ ಸುತ್ತಾಡುತ್ತಿರುವುದನ್ನು ನೋಡಿ ಎಲ್ಲರಿಗೂ ಶಾಕ್ ಆಗಿದೆ. ನಿಮಗೆ ಯಶಸ್ವಿನಿ ಅಕ್ಕ ಹೇಗೆ ಪರಿಚಯ? ಎಲ್ಲರೂ ಒಟ್ಟಿಗೆ ಎಲ್ಲಿ ಹೋಗಿದ್ದೀರಾ? ಭದ್ರಾವತಿಯಲ್ಲಿ ಏನು ಕೆಲಸ ಎಂದು ಫಾಲೋವರ್ಸ್ ಪ್ರಶ್ನೆ ಮಾಡಿದ್ದಾರೆ. 

ರಜಿನಿಕಾಂತ್‌ ಜೊತೆ ನಟಿಸಲು ಚೆನ್ನೈಗೆ ಹಾರಿದ ರಚಿತಾ ರಾಮ್; ಎಲ್ಲ ಬಿಟ್ಟು ತಮಿಳಿಗೆ ಹೋಗಿದ್ದಕ್ಕೆ ಕನ್ನಡಿಗರಿಗೆ ಬೇಸರ

ಈ ದಿನಗಳಲ್ಲಿ ಜನರು ಸಿನಿಮಾ ನೋಡುವುದು ತುಂಬಾ ಕಡಿಮೆ ಆಗಿದೆ ಆದರೆ ಫೋನ್‌ಗೆ ಅಡಿಕ್ಟ್ ಆಗಿದ್ದಾರೆ. ಜನರಿಗೆ ಹತ್ತಿರವಾಗಲು ನಾನು ಯೂಟ್ಯೂಬ್ ವ್ಲಾಗ್‌ ಶುರು ಮಾಡಿದ್ದೀನಿ ಎಂದು ರಕ್ಷಕ್ ಹೇಳುತ್ತಾರೆ. 

click me!