ಸತೀಶ್‌ ಮೂತ್ರ ವಿಸರ್ಜನೆ ಮಾಡುವ ವಿಡಿಯೋಕ್ಕೆ ಕಿಚ್ಚ ಸುದೀಪ್‌ ಹಾಡು ಬಳಕೆ; ದೂರು ದಾಖಲಿಸಿದ ರಜತ್!

Published : Feb 28, 2026, 04:00 PM IST
satish cadaboms

ಸಾರಾಂಶ

Satish Cadaboms: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗವಹಿಸಿದ್ದ ಸತೀಶ್‌ ಕ್ಯಾಡಬಮ್ಸ್‌ ವಿರುದ್ಧ ರಜತ್‌ ಕಿಶನ್‌ ಅವರು ದೂರು ದಾಖಲಿಸಿದ್ದಾರೆ. ಸತೀಶ್‌ ಅವರು ಅಸಭ್ಯ ವಿಡಿಯೋ ಮಾಡಿದ್ದು, ಕಿಚ್ಚ ಸುದೀಪ್‌ ಹಾಡನ್ನು ಕೂಡ ಬಳಸಿಕೊಂಡಿದ್ದಾರೆ.

ಮನಸ್ಸಿಗೆ ಬಂದಹಾಗೆ ಮಾತನಾಡುತ್ತ, ಮಾತೆತ್ತಿದರೆ ನಾನು ಲಕ್ಷ ರೂಪಾಯಿ ಶರ್ಟ್‌ ಹಾಕ್ತೀನಿ, ಗ್ಲಾಸ್‌ ಹಾಕ್ತೀನಿ ಎನ್ನುವ ಡಾಗ್‌ ಸತೀಶ್‌ ಅವರು ಎಣ್ಣೆ ಏಟಿನಲ್ಲಿ ಏನೇನೋ ಮಾತನಾಡಿದೆ ಎಂದು ಹೇಳಿದ್ದುಂಟು. ಈಗ ಸತೀಶ್‌ ಕ್ಯಾಡಬಮ್ಸ್‌ ಅವರ ವಿಡಿಯೋಗೆ ರಜತ್‌, ವಿನಯ್‌ ಗೌಡ ಅವರು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ರು!

ಮಗ ಫೇಲ್‌ ಆದರೂ ಪಾರ್ಟಿ ಮಾಡ್ತಾರೆ, ಗಿಲ್ಲಿ ನಟ ಗೆದ್ದರೆ ನನ್ನದೇ ತಿಥಿ ಪಾರ್ಟಿ ಕೊಡ್ತೀನಿ ಎಂದು ಹೇಳುತ್ತಿದ್ದ ಸತೀಶ್‌ ಅವರು ಈಗ ಟಾಯ್ಲೆಟ್‌ನಲ್ಲಿ ಮೂತ್ರವಿಸರ್ಜನೆ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಕಿಚ್ಚ ಸುದೀಪ್‌ ಅವರ ದಾದಾ ಯಾರ್‌ ಗೊತ್ತಾ? ಎನ್ನುವ ಹಾಡು ಹಾಕಿದ್ದರು. ಇದು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಬೇಸರ ತಂದಿದೆ. ಹೀಗಾಗಿ ರಜತ್‌ ಅವರು ಬನಶಂಕರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನು ರಜತ್‌ ವಿರುದ್ಧ ಕೂಡ ಸತೀಶ್‌ ಮಾತನಾಡಿದ್ದಾರಂತೆ.

ಬಿಗ್‌ ಬಾಸ್‌ ಸ್ಪರ್ಧಿಗಳ ಆಕ್ರೋಶ

ನಟ ವಿನಯ್‌ ಗೌಡ ಅವರು, ನಿನ್ನ ಜನ್ನರು ನಾಯಿ ತರ ಹೊಡಿತಾರೆ ಆ ವಿಡಿಯೋ ನಾನ್ ಹಾಕ್ತಿನಿ ಎಂದು ಈ ವಿಡಿಯೋಕ್ಕೆ ಕಾಮೆಂಟ್‌ ಮಾಡಿದ್ದಾರೆ.

ಬ್ರದರ್‌ ನಾನು, ಇದುವರೆಗೂ ಯಾರಿಗೂ ಈ ಥರ ಕಾಮೆಂಟ್‌ ಮಾಡಿಲ್ಲ. ನಾನು ಸೌಮ್ಯ ಜೀವಿ. ನೀವು ಬಹಳ ತಪ್ಪು ಮಾಡ್ತಿದ್ದೀರಿ. ಸುದೀಪ್‌ ಸರ್‌ ಫ್ಯಾನ್ಸ್‌ ಬನ್ನಿ ಇಲ್ಲಿ, ಹಾಕ್ಕೊಂಡು ಗುಮ್ಮಿ, ತುಂಬ ಓವರ್‌ ಆಗಿ ಮಾಡಬಾರದು ಎಂದು ಬಿಗ್‌ ಬಾಸ್‌ ಧನರಾಜ್‌ ಅವರು ಕಾಮೆಂಟ್‌ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಅಭಿಮಾನಿಗಳು ಏನು ಹೇಳಿದ್ರು?

ಸತೀಶ್ ಅವರ ಫ್ಯಾನ್ ಪೇಜ್ ಅಭಿಮಾನಿಗಳೇ, ಇದು ನೀವು ಪೋಸ್ಟ್ ಹಾಕಿದ್ದು ದಯವಿಟ್ಟು ಡಿಲೀಟ್ ಮಾಡಿ. ಬಾಸ್ ಸಾಂಗ್ ಮಾಡಿದ್ದು ಸರಿಯಲ್ಲ. ಹಾಡನ್ನು ಡಿಲೀಟ್ ಮಾಡಿ ಪೋಸಸ್ಟ್‌ನ ಹಾಕ್ಕೊಳ್ಳಿ, ಬೇಡ ಅನ್ನೋದಿಲ್ಲ. ಹಾಡು ಬಳಸಿಕೊಂಡಿರುವ ರೀತಿ ಸರಿ ಇಲ್ಲ ಹೊಟ್ಟೆಗೆ ಅನ್ನ'ನೇ ಉಣ್ಣುತ್ತೀರಲ್ವಾ? ಬೇರೆ ಏನು ತಿನ್ನೋದಿಲ್ಲ ಅಲ್ವಾ? ಸಾಂಗ್ ರಿಮೂವ್ ಮಾಡಿ ಪೋಸ್ಟ್ ಹಾಕ್ಕೊಳ್ಳಿ. ಸತೀಶ್ ಅವರೇ ನೀವು ಇದನ್ನ ಗಮನಿಸಿ ಡಿಲಿಟ್ ಮಾಡಿಸಿ, ಇಲ್ದಿದ್ರೆ ಬಾಸ್ ಅಭಿಮಾನಿಗಳು ಯಾರು ಸುಮ್ನೆ ಬಿಡೋದಿಲ್ಲ.

ನಮ್ ಬಾಸ್ ಬಗ್ಗೆ ಯಾರು ಏನೇ ಮಾತಾಡಿದರೂ ಏನೇ ಟ್ರೊಲ್ ಮಾಡಿದರು ಅವರ ರೇಂಜ್ ಏನು ಕಡಿಮೆಯಾಗುವುದಿಲ್ಲ. ಹೊಟ್ಟೆಗೆ ಅನ್ನ ಊಟ ಮಾಡೋರು ಈ ರೀತಿ ಮಾಡೋದಿಲ್ಲ ಹೊಟ್ಟೆಗೆ ಹೇಳ್ ತಿನ್ನೋರು ಮಾಡು ಕೆಲಸ ಇದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa Serial: ಏಕಕಾಲಕ್ಕೆ 'ಲಕ್ಷ್ಮೀ ನಿವಾಸ'ದ ಮೂರು ಪಾತ್ರಗಳು ಅಂತ್ಯ; ಹೀಗ್ಯಾಕೆ ಮಾಡಿದ್ರು?
Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?