ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು? ಮನೆ ಮಂದಿ ಯಾವ ರೀತಿ ಬಟ್ಟೆ ಹಾಕೋಬೇಕು ಅನ್ನೋದು ಬಿಗ್ ಬಾಸ್ ಆಯ್ಕೆ ಮಾಡ್ತಾರಾ?
ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಫಿನಾಲೆ ವಾರಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಿಡ್ ವೀಕ್ ನಾಮಿನೇಷನ್‌ನಿಂದ ಪಾರಾಗಲು ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಆದರೆ ರಿಯಾಲಿಟಿ ಶೋ ರಜತ್‌ಗೆ ಹೊಸದಲ್ಲ. ಈಗಾಗಲೆ ಒಂದೆರಡು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ವಿನ್ನರ್-ರನ್ನರ್ ಮೆಡಲ್ ಗೆದ್ದಿದ್ದಾರೆ. ಅಲ್ಲದೆ 50ನೇ ದಿನಕ್ಕೆ ಎಂಟ್ರಿ ಕೊಟ್ಟರೂ ರಜತ್ ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಈ ಕಾರಣಕ್ಕೆ ಫಿನಾಲೆ ಮುಟ್ಟರೂ ಮುಟ್ಟಬಹುದು. ಸದ್ಯ ರಜತ್ ಪತ್ನಿ ಶಾಪಿಂಗ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಹೌದು! ಸುಜೀತ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋದಲ್ಲಿ ರಜತ್ ಕಿಶನ್ ಪತ್ನಿ ಅಕ್ಷಿತಾ ಶಾಪಿಂಗ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ರಜತ್‌ಗೆ ಡಿಫರೆಂಟ್ ಲುಕ್ ಆಂಡ್ ಹೈಲೈಟಿಂಗ್ ಲುಕ್ ಕೊಡುವ ಔಟ್‌ಫಿಟ್ಸ್‌ಗಳು ಬೇಕಿದೆ. ಅಕ್ಷಿತಾ ಸೆಲೆಕ್ಟ್ ಮಾಡುತ್ತಿರುವುದನ್ನು ರಜತ್ ಚೆನ್ನಾಗಿಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದಾರೆ. ಹೀಗಾಗಿ ಪತಿ ಸ್ನೇಹಿತನ ಸಹಾಯ ಪಡೆದು ಶಾಪಿಂಗ್ ಮಾಡಿದ್ದಾರೆ. ಶಾಪಿಂಗ್ ಮಾಡುವ ವೇಳೆ ಇದುವರೆಗೂ ಯಾರಿಗೂ ಗೊತ್ತಿರದ ಬಿಗ್ ಬಾಸ್ ರೂಲ್ಸ್‌ಗಳನ್ನು ರಿವೀಲ್ ಮಾಡಿದ್ದಾರೆ.
ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ
ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಯಾವುದೇ ಕಾರಣಕ್ಕೆ ಚಿಟ್ಟೆ, ಪ್ರಾಣಿ ಪಕ್ಷಿಗಳು ಇರುವೆ ಬಟ್ಟೆ ಧರಿಸುವಂತಿಲ್ಲ. ಇನ್ನೂ ಕಾರ್ಟೂನ್ ಕ್ಯಾರೆಕ್ಟರ್‌ಗಳು ಸೂಪರ್ ಆಗಿ ಕಾಣುತ್ತೆ ಅಂತ ಕುಟುಂಬಸ್ಥರು ಕೊಟ್ಟು ಕಳುಹಿಸಿದರೆ ರಿಜೆಕ್ಟ್ ಮಾಡ್ತಾರೆ ಬಿಗ್ ಬಾಸ್ ತಂಡ. ಅಷ್ಟೇ ಯಾಕೆ ಯಾವುದೇ ಧರ್ಮದ ಸಂಕೇತ ಹೊಂದಿರುವ ಉಡುಪುಗಳನ್ನು ಕಳುಹಿಸುವಂತಿಲ್ಲ. ಅಕ್ಷಿತಾ ಮಾತುಗಳನ್ನು ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ. ಇಷ್ಟು ದಿನ ತೀರ ಗೆರೆ ಗೆರೆ ಪಟ್ಟಿ ಪಟ್ಟಿ ಇರುವ ಉಡುಪುಗಳನ್ನು ಧರಿಸಬಾರದು ಅಂತ ವೀಕ್ಷಕರಿಗೆ ಗೊತ್ತಿತ್ತು ಆದರೆ ಇದು ನಿಜಕ್ಕೂ ಶಾಕಿಂಗ್. ಹೀಗಾಗಿ ಒಂದಿಷ್ಟು ಬ್ರ್ಯಾಂಡ್ ಬಟ್ಟೆಗಳನ್ನು ಅಕ್ಷಿತಾ ಶಾಪಿಂಗ್ ಮಾಡಿ ಬಿಗ್ ಬಾಸ್ ತಂಡಕ್ಕೆ ತಲುಪಿಸಿದ್ದಾರೆ.
ಹೊಟ್ಟೆಯಲ್ಲಿದ್ದ ಮಗು ಎದೆಬಡಿತ ನಿಂತೋಗಿತ್ತು; ಮಗಳನ್ನು ಕಳೆದುಕೊಂಡು ಮಗನನ್ನು ಪಡೆದ ಘಟನೆ ನೆನೆದು ಅಮೃತಾ ಕಣ್ಣೀರು