ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?

Published : Jan 14, 2025, 10:54 AM IST
ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?

ಸಾರಾಂಶ

ಬಿಗ್‌ಬಾಸ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಮದುವೆ ಬಗ್ಗೆ ಚರ್ಚೆ ಹುಟ್ಟುಹಾಕಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದಾಗಲೂ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದ ಅವರು, ಈಗ ಕುಟುಂಬಸ್ಥರು ಮುಹೂರ್ತ ನಿರ್ಧರಿಸುತ್ತಾರೆ ಎಂದಿದ್ದಾರೆ. ಹುಡುಗ ಯಾರೆಂದು ಇನ್ನೂ ಗುಟ್ಟು. ಅಭಿಮಾನಿಗಳು ಮಾತ್ರ ಈ ಬಗ್ಗೆ ಊಹಾಪೋಹಗಳನ್ನು ಹರಿಬಿಟ್ಟಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಫಯರ್ ಬ್ರ್ಯಾಂಡ್‌ ಸ್ಪರ್ಧಿ ಅಂದ್ರೆ ಚೈತ್ರಾ ಕುಂದಾಪುರ. ಈ ಸೀಸನ್ ಬಿಗ್ ಬಾಸ್ ನೋಡಲು ಸಖತ್ ಬೋರ್ ಎನ್ನುತ್ತಿದ್ದವರಿಗೆ ಮನೋರಂಜನೆ, ಜಗಳ ಹಾಗೂ ಉಸ್ತುವಾರಿ ಮಾಡಿ ಸೈ ಅನಿಸಿಕೊಂಡಿದ್ದಾರೆ. ಸಿಂಗಲ್ ಆಗಿ ಎಂಟ್ರಿ ಕೊಟ್ಟ ಚೈತ್ರಾ ಸಿಂಗಲ್ ಆಗಿ ಎಕ್ಸಿಟ್ ಆಗಿದ್ದಾರೆ. ಮನೆಯಲ್ಲಿ ಇದ್ದಷ್ಟು ದಿನ ಕೂಡ ಮದುವೆ ಆಗುವ ಆಲೋಚನೆ ಇದೆ ಹೊರ ಹೋದ ಮೇಲೆ ಮದುವೆ ಆಗುತ್ತೀನಿ ಎನ್ನುತ್ತಿದ್ದರು ಆದರೆ ಯಾರು ಎಂದು ರಿವೀಲ್ ಮಾಡುತ್ತಿರಲಿಲ್ಲ. ಫ್ಯಾಮಿಲಿ ರೌಂಡ್ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಚೈತ್ರಾ ಫ್ಯಾಮಿಲಿ ಎಂಟ್ರಿ ಕೊಟ್ಟಾಗಲೂ ಮದುವೆ ಬಗ್ಗೆ ಇರುವ ಆಲೋಚನೆಯನ್ನು ವ್ಯಕ್ತ ಪಡಿಸಿದ್ದರು. 

'ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದ ಬಗ್ಗೆ ಮನೆಯವರ ನಡುವೆ ಮಾತುಕಥೆ ನಡೆಯಬೇಕಿದೆ. ನಾವೆಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ. ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲ ನಡೆಯಬೇಕೋ ಮೊದಲು ಅದೆಲ್ಲವೂ ನಡೆಯಲಿ ಆ ನಂತರ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಮಾತನಾಡಿದ್ದಾರೆ. ಹುಡುಗ ಯಾರು ಎಂದು ಚೈತ್ರಾ ರಿವೀಲ್ ಮಾಡಿಲ್ಲವಾದರೂ ಅಭಿಮಾನಿಗಳು ಮಾತ್ರ ಅವ್ರು ಇವ್ರು ಎಂದು ಗೆಸ್ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಎಲ್ಲಾ ಬ್ಯಾಚುಲರ್‌ಗಳ ಫೋಟೋದ ಪಕ್ಕ ಚೈತ್ರಾ ಕುಂದಾಪುರ ಫೋಟೋವಿಟ್ಟು ಜೋಡಿ ಹೇಗಿದೆ ಎಂದು ಮ್ಯಾಚ್ ಮಾಡುತ್ತಿದ್ದಾರೆ. 

ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಚೈತ್ರಾ ಕುಂದಾಪುರ ಮಾತುಕೇಳಿ ಕುಟುಂಬಸ್ಥರು ಶಾಕ್

'ಚೈತ್ರಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವುದು ನಮಗೆ ಗೊತ್ತಿರಲಿಲ್ಲ ಈ ವಿಚಾರ ಕೊನೆ ಕ್ಷಣದಲ್ಲಿ ನಮಗೆ ಗೊತ್ತಾಗಿತ್ತು. ಹೀಗಾಗಿ ಬಿಗ್ ಬಾಸ್ ಮನೆಯಿಂದದ ಹೊರ ಬಂದ ಮೇಲೆ ಮದುವೆ ಮಾಡಬೇಕು' ಎಂದು ಚೈತ್ರಾ ತಾಯಿ ಹೇಳಿದ್ದರು. ಪ್ರತಿ ಸಲ ಬಿಗ್ ಬಾಸ್ ಮನೆಯಲ್ಲಿ ಮದುವೆ ವಿಚಾರ ಬಂದಾಗ ಚೈತ್ರಾ ಸಿಕ್ಕಾಪಟ್ಟೆ ಮನಸ್ಸಿನಲ್ಲಿ ಖುಷಿ ಪಡುತ್ತಾರೆ. ಚೈತ್ರಾ ಮುಖದಲ್ಲಿ ನಗು ನೋಡಿ ಹನುಮಂತು ಕೂಡ ಆಗಾಗ ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇನ್ನು ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗುವ ಸ್ಪರ್ಧಿಗಳು ಕೂಡ ಚೈತ್ರಾಕ್ಕ ನಮ್ಮನ್ನು ನಿಮ್ಮ ಮದುವೆಗೆ ಕರೆಯುವುದು ಮರೆಯಬೇಡಿ ಎನ್ನುತ್ತಿದ್ದರು. ಆಗಲೂ ಓಕೆ ನಾನು ಬಂದು ಕರೆಯುತ್ತೀನಿ ಎಂದು ಖುಷಿಯಿಂದ ಹೇಳುತ್ತಿದ್ದರು. ಒಮ್ಮೆ ವ್ಯಕ್ತಿತ್ವದ ಪ್ರಶ್ನೆ ಬಂದಾಗ 'ನನ್ನ ಮದುವೆ ನಿಶ್ಚಯ ಮಾಡಿಕೊಂಡು ಬಂದಿದ್ದೀನಿ ನನ್ನ ಕ್ಯಾರೆಕ್ಟರ್ ವಿಷಯಕ್ಕೆ ಯಾವನಾದರೂ ಬಂದರ...' ಎಂದು ಗರಂ ಆಗಿ ಉತ್ತರಿಸಿದ್ದರು. 

ನಟಿ ಹರಿಪ್ರಿಯಾ ಮಗುವಿನ ಫೋಟೋ ವೈರಲ್? ಅವಳಿ-ಜವಳಿ ಅಂತಿದ್ದವರಿಗೆ ಇಲ್ಲಿದೆ ಕ್ಲಾರಿಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಚಡಾ, ಗಾಂಚಾಲಿ, ನೀನು ಗಂಡಸಾಗಿದ್ರೆ! ಏನ್ರೀ ಇದು ಥರ್ಡ್‌ರೇಟೆಡ್‌ ಭಾಷೆ? Ashwini Gowda-Rajath ಜಗಳ
Landlord Movie: ದುನಿಯಾ ವಿಜಯ್‌, Rachita Ram ಸಿನಿಮಾದಲ್ಲಿ ವಿಗ್‌ ಹಾಕಿ ನಟಿಸಿದ್ದೇಕೆ ರಾಜ್‌ ಬಿ ಶೆಟ್ಟಿ?