ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಬೆನ್ನಲ್ಲಿಯೇ ನಟ ಪ್ರಥಮ್ ಅವರು 'ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಲಿರುತ್ತದೆ' ಎಂದು ಚಂದನ್‌ಗೆ ಬುದ್ಧಿಪಾಠ ಹೇಳಿದ್ದಾರೆ.
ಮಂಡ್ಯ (ಜೂ.08): ಬಿಗ್‌ಬಾಸ್ ಖ್ಯಾತಿಯ ಸ್ಟಾರ್‌ಗಳಾದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ರೀಲ್ಸ್ ರಾಣಿ ನಿವೇದಿತಾ ಗೌಡ ಡಿವೋರ್ಸ್ ಬೆನ್ನಲ್ಲಿಯೇ ಒಳ್ಳೆ ಹುಡುಗ ಪ್ರಥಮ್ ಬುದ್ಧಿಪಾಠ ಹೇಳಿದ್ದಾರೆ. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಲಿರುತ್ತದೆ. ಇವರಿಬ್ಬರೂ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ರಿತಿಕ್ ರೋಷನ್, ದೀಪಿಕಾ ಪಡುಕೋಣೆ ಆಗೋದಕ್ಕಾಗಲ್ಲ ಇಬ್ಬರೂ ಒಂದಾಗಬೇಕು. ಇವರನ್ನು ಒಂದುಗೂಡಿಸಲು ನಟ ಧ್ರುವ ಸರ್ಜಾ ಮಧ್ಯಸ್ಥಿಕೆವಹಿಸಬೇಕು ಎಂದು ನಟ ಒಳ್ಳೆಹುಡುಗ ಖ್ಯಾತಿಯ ಪ್ರಥಮ್ ಬುದ್ಧಿಪಾಠ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಪ್ರಥಮ್ ಅವರು, ನಿವೇದಿತಾಗೌಡ ಹಾಗೂ ಚಂದನ್‌ಶೆಟ್ಟಿ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ರಿತಿಕ್ ರೋಷನ್, ದೀಪಿಕಾ ಪಡುಕೋಣೆ ಥರ ಬೆಳೆಯಲು ಸಾಧ್ಯವಾಗುತ್ತದೆಯೇ.? ಇವರಿಗೆ ಒಂದು ಶೋ ಮುಖ್ಯಾನ ಜೀವನ ಮುಖ್ಯಾನ.? ಜೀವನವೇ ಮುಖ್ಯ, ಇಬ್ಬರೂ ಚೆನ್ನಾಗಿ ಬದುಕಬೇಕು. ಇವರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವಾಗ ಪರಸ್ಪರ ಕೆರಿಯರ್ ಬಗ್ಗೆ ಯೋಚಿಸದೆ ಇಬ್ಬರು ಮದುವೆ ಆದ್ರಾ? ಎಲ್ಲವನ್ನು ಯೋಚಿಸಿಯೆ ಅವರು ಮದುವೆ ಆಗಿದ್ದಾರೆ. ಬದುಕು ಸುಂದರವಾಗಿದ್ದು, ಇಬ್ಬರು ಚೆನ್ನಾಗಿ ಬದುಕುಬೇಕು ಎಂದು ಹೇಳಿದರು.
ಡಿವೋರ್ಸ್ ಬಳಿಕವೂ ನಿವೇದಿತಾ-ಚಂದನ್ ಒಟ್ಟಿಗೇ ಇದ್ದಾರಾ? ಇನ್ಸ್ಟಾಗ್ರಾಮ್ ನೋಡಿ ಗುಸುಗುಸು ಶುರು!
ಸಿನಿಮಾ ಇಂಟಸ್ಟ್ರಿಯಲ್ಲಿ ನಟ ಧ್ರುವ ಸರ್ಜಾ ಅವರ ಮಾತನ್ನ ಚಂದನ್ ಕೇಳ್ತಾರೆ. ಹೀಗಾಗಿ, ನಿವೇದಿತಾ ಹಾಗೂ ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌ಗೆ ಒಳ್ಳೆದಾಗಲಿ ಎಂದು ಧ್ರುವ ಪೊಗರು ಸಿನೆಮಾದಲ್ಲಿ ಚಾನ್ಸ್ ಕೊಟ್ಟರು. ಪ್ರೀತಿ ಇದ್ದರೆ ಚಂದನ್ ಧ್ರುವ ಮಾತನ್ನ ಕೇಳ್ತಾರೆ. ಮಿಲನ ಸಿನೆಮಾದಲ್ಲಿಯೂ ವಿಚ್ಚೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಮುಂದೆ ಬೇರಾವುದು ದೊಡ್ಡದಲ್ಲ. ಬೇಕಾದರೆ ಮಿಲನ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳಿಸುತ್ತೇನೆ. ಅದನ್ನ ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂದು ತಿಳಿಸಿದರು.
ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರೋಪೋಸ್ ಮಾಡಿದ್ದು ನನಗೆ ಎಫೆಕ್ಟ್ ಆಗಿತ್ತು. ಆ ಘಟನೆಯಿಂದ ಯುವ ದಸರಾ ವೇದಿಕೆಯಲ್ಲಿ ನನ್ನ ಸಿನೆಮಾ ಪ್ರೋಮೋಷನ್‌ಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ಚಂದನ್ ಮೇಲೆ ಕೆಲದಿನ ಕೋಪ ಮಾಡಿಕೊಂಡಿದ್ದೆ. ಪರಸ್ಪರ ಮಾತನಾಡಿದಾಗ ನಾವಿಬ್ಬರು ಒಳ್ಳೆ ಸ್ನೇಹಿತರಾದೆವು. ಚಂದನ್‌ಗೆ ಕೇಳುವ ವಿವೇಚನೆ ಇದೆ. ಚಂದನ್ ಹಾಗೂ ನಿವೇದಿತಾ ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರು ಕಷ್ಟದಲ್ಲಿ ಬರಲ್ಲ. ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್. ಅವರಿಬ್ಬರನ್ನ ಒಂದು ಮಾಡುವಂತೆ ಜನರು ನನಗೆ ಮೆಸೆಜ್ ಮಾಡ್ತಿದ್ದಾರೆ. ನನ್ನ ಮಾತು ಕೇಳ್ತಾರ ಅವರು? ಎಲ್ಲರಿಗೂ ಒಳ್ಳೆಯದಾಗಲಿ. ನೆಪೊಟಿಸಮ್ ಇಂಡಸ್ಟ್ರಿಯಲ್ಲಿ ಬಹಳ ಕಷ್ಟಪಟ್ಟು ಸಿನೆಮಾ ಮಾಡ್ತಿದ್ದೀನಿ. ಕನ್ನಡಕ್ಕೆ ಸಿಕ್ಕಿರುವ ಅಪರೂಪದ ವಜ್ರ ನಾನು ನನ್ನನ್ನು ಕಾಪಾಡಿಕೊಳ್ಳಿ ಎಂದು ಹೇಳಿಕೊಂಡಿದ್ದಾರೆ.
ಮಗ ಹೇಳಿದ ಒಂದು ಮಾತಿನಿಂದ ನಾನು ನೆಮ್ಮದಿಯಿಂದ ಇರುವೆ; ಡಿವೋರ್ಸ್ ಬಗ್ಗೆ ಮೌನ ಮುರಿದ ಕಿರಿಕ್ ಕೀರ್ತಿ
ಜೀವನದಲ್ಲಿ ಅರೇಂಜ್ ಮ್ಯಾರೇಜ್ ಆದರೆ ಕಂಟ್ರೋಲ್ ಇರುತ್ತದೆ. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಲಿರುತ್ತದೆ. ಈ ಹಿಂದೆ ಯಾವ ವಿಚ್ಚೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ವಾ? 350 ಕಿ.ಮೀ. ದೂರದಲ್ಲಿ ಕಾರ್ಯಕ್ರಮ ಇದ್ದರೂ ಮದುವೆ ದಿನ ನಮ್ಮ ಮನೆಗೆ ಬಂದು ವಿಶ್ ಮಾಡಿದ್ದರು. ಮದುವೆ, ತಾಳಿ ಬಗ್ಗೆ ಚಂದನ್‌ಗೆ ಗೌರವ ಇದೆ. ಯಾರೋ ಕೋತಿ ಮುಂಡೇವು ಮಧ್ಯದಲ್ಲಿ ತೊಂದರೆ ಮಾಡಿದ್ದಾರೆ ಅಷ್ಟೇ. ಸುಂದರವಾಗಿರುವವರ ಜೀವನ ಹಾಳಾದರೆ ಖುಷಿ ಪಡುವವರು ಸಾಕಷ್ಟು ಜನ ಇದ್ದಾರೆ. ನಾನು ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ಅಭಿಪ್ರಾಯ ತಿಳಿಸಿದರು.