ಕತ್ತು ಹಿಸುಕಿ ನನ್ನನ್ನು ಜಾಡಿಸಿ ಒದ್ದಿದ್ದಾನೆ ಈ ಎಕ್ಸ್‌ ಬಾಯ್‌ಫ್ರೆಂಡ್: Bigg Boss ಸಾನ್ಯ ಅಯ್ಯರ್‌

By Vaishnavi Chandrashekar  |  First Published Aug 8, 2022, 12:31 PM IST

ಜೀವನದಲ್ಲಿ ಮರೆಯಲಾಗ ಒಂದು ಘಟನೆ ಬಗ್ಗೆ ಸಾನ್ಯ ಅಯ್ಯರ್ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ....


ಪುಟ್ಟಗೌರಿ ಮದುವೆ ಸೀರಿಯಲ್ ಮತ್ತು ಡ್ಯಾನ್ಸಿಂಗ್ ಚಾಂಪಿಯನ್‌ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿರುವ ಸಾನ್ಯ ಅಯ್ಯರ್‌ ಬಿಗ್ ಬಾಸ್ ಓಟಿಟಿ ಸೀಸನ್‌ 1ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ದಿನ ಪ್ರತಿಯೊಬ್ಬ ಸ್ಪರ್ಧಿನೂ ತಮ್ಮ ಜೀವನದಲ್ಲಿ ಮರೆಯಲಾಗ ಒಂದೆರಡು ಘಟನೆಗಳನ್ನು ಹಂಚಿಕೊಂಡು ನಾನು ಯಾರೆಂದು ಜನರಿಗೆ ಪರಿಚಯ ಮಾಡಬೇಕು. ಆಗ ಸಾನ್ಯ ಅಯ್ಯರ್‌ ಬಾಯ್‌ಫ್ರೆಂಡ್‌ಯಿಂದ ಅನುಭವಿಸಿದ ಹಿಂಸೆಯನ್ನು ರಿವೀಲ್ ಮಾಡುತ್ತಾರೆ.

ಸಾನ್ಯ ಮಾತು:

Tap to resize

Latest Videos

'ಅಮ್ಮ ಚಿಕ್ಕಮ್ಮ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮದೊಂದು ಸ್ಟೋರಿ ಹೇಳಬೇಕು. ನನ್ನ ಜೀವನದ ಕೆಟ್ಟ ಅನುಭವ ಅಥವಾ ಮೋಸ ಹೇಳಬೇಕು ಅಂದ್ರೆ. ನನ್ನ ಚಿಕ್ಕಮ್ಮ ನಿಂದನಾತ್ಮಕ ಮದುವೆಯಲ್ಲಿದ್ದರು ಅವರು ಹೇಗೆ ಅಂದ್ರೆ ನನ್ನ ಕಣ್ಣು ಮುಂದೆನೇ ನನ್ನ ಚಿಕ್ಕಮ್ಮನಿಗೆ ಹೊಡೆಯುವರು. ಲಟ್ಟಣಿಗೆಯಿಂದ ಹೊಡೆದಿದ್ದಾರೆ ಗೋಡೆಗೆ ನೂಕಿ ಹಿಂಸೆ ಕೊಟ್ಟಿದ್ದಾರೆ. ದಿನ ಹೊಡೆಯುವುದನ್ನು ನೋಡಿ ನೋಡಿ ಸಂಸಾರದಲ್ಲಿ ಇದೆಲ್ಲಾ ನಾರ್ಮಲ್ ಅನಿಸಿತ್ತು. ನಾನೊಂದು ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಅದು verbally abusive physically abusive ಆಗಿತ್ತು.' ಎಂದು ಸಾನ್ಯ ಮಾತನಾಡಿದ್ದಾರೆ.

'ನನ್ನ ಬಾಯ್‌ಫ್ರೆಂಡ್‌ ಕಾಲಲ್ಲಿ ಒದ್ದಿದ್ದಾನೆ ಕಪ್ಪಾಳಕ್ಕೆ ಹೊಡೆದಿದ್ದಾನೆ ಕತ್ತು ಹಿಸುಕಿದ್ದಾನೆ. ನಾನು ಅವನಿಗೋಸ್ಕರ ಕೆಲಸ ಬಿಡುವುದಕ್ಕೆ ಸಿದ್ಧಳಾಗಿದ್ದೆ ಸಂಬಂಧ ಉಳಿಸಿಕೊಳ್ಳುವುದಕ್ಕೆ ನಾನು ಏನ್ ಬೇಕಿದ್ದರೂ ಮಾಡಲು ರೆಡಿಯಾಗಿದ್ದೆ. ನನ್ನ ಚಿಕ್ಕಮ್ಮ ಗಂಡ ಅಥವಾ ನನ್ನ ಬಾಯ್‌ಫ್ರೆಂಡ್‌ ನೋಡಿದರೆ ವಾವ ಈ ಸಂಬಂಧ ಎಷ್ಟು ಚೆನ್ನಾಗಿದೆ ಅನಿಸುತ್ತದೆ ಆದರೆ ಆ ರೀತಿ ಇದು ಇರಲಿಲ್ಲ. ಹುಡುಗೀಯರಿಗೆ ಮೆಚ್ಯೂರಿಟಿ ಬೇಗ ಬರುತ್ತೆ ಹುಡುಗರಿಗೆ ಲೇಟ್ ಆಗಿ ಬರುತ್ತೆ. ಒಂದು ದಿನ ನಾನು ಈ ಹಾಡು ಕೇಳಿ ನನ್ನ ಎಕ್ಸ್‌ ನೆನಪು ಬಂತ ಅಂತ ಹೇಳಿದೆ. ಪಿಜಾ ಎಲ್ಲಾ ಬಿಸಾಕಿದ ಅಲ್ಲೊಂದು ಬಾಟಲ್‌ ಇತ್ತು ಅನ್ನು ಪುಡಿ ಮಾಡಿದ ಹಾಸಿಗೆ ಮೇಲೆ ಮಲಗಿಕೊಂಡ ನಾನು ನೆಲದ ಮೇಲೆ ಅವನ ಕಾಲಿನ ಬಳಿ ಕುಳಿತುಕೊಂಡಿದ್ದೆ ನನ್ನ ತಪ್ಪು ಇಲ್ಲದಿದ್ದರೂ ನಾನು ಕ್ಷಮೆ ಕೇಳಿರುವೆ ಕೋಪದಲ್ಲಿ ಜಾಡಿಸಿ ಒದ್ದ.  ಇದೆಲ್ಲಾ ನಾನು ಹೇಳಿಕೊಳ್ಳುವುದಕ್ಕೆ ಹೋಗಿಲ್ಲ. ಇಡೀ ಮನೆ ನಾನೇ ಕ್ಲೀನ್ ಮಾಡಿದೆ. ಕೊನೆಯಲ್ಲಿ ಹೇಗೆ ಅನಿಸಿತ್ತು ಅಂದ್ರೆ ಈ ಸಂಬಂಧದಲ್ಲಿ ನಾನು ಯಾರು ಅನಿಸಿತ್ತು' ಎಂದು ಸಾನ್ಯ ಹೇಳಿದ್ದಾರೆ. 

ನನ್ನ ತಾಯಿ ಡಬಲ್‌ ಡಿವೋರ್ಸಿ, ತಂದೆನೇ ನನ್ನ ಬೆಡ್‌ರೂಮ್‌ ವಿಡಿಯೋ ಲೀಕ್‌ ಮಾಡಿದ್ರು: ಸಾನಿಯ ಅಯ್ಯರ್

'ನನಗೆ ಇರುವ ದೊಡ್ಡ insecurity ಏನೆಂದರೆ ನನ್ನ ಜೀವನದಲ್ಲಿ ನಮಗೆ ಸರಿಯಾಗಿರುವ ಗಂಡಸರು ಸಿಗುವುದಿಲ್ಲ ಅನಿಸುತ್ತದೆ. ಈಗಲ್ಲೂ ನನ್ನ ಜೊತೆ ಒಬ್ಬರು ಜೀವನ ಮಾಡುತ್ತಾರೆ ಅನ್ನೋ ನಂಬಿಕೆ ಇಲ್ಲ. ಏಕೆಂದರೆ ನನ್ನ ಜೀವನದಲ್ಲಿ ನನ್ನ ಕುಟುಂಬದಲ್ಲಿ ನಾವು ಹೆಣ್ಣು ಮಕ್ಕಳು ಮಾತ್ರ ಇರುವುದು ಒಬ್ಬರಿಗೂ ಗಂಡ ಅಥವಾ ಪಾರ್ಟನರ್‌ ಜೊತೆ ಸಂಬಂಧ ಚೆನ್ನಾಗಿಲ್ಲ. ಈ ಸಮಯದಲ್ಲಿ ನಾನು ರೇಖಿ ಹೀಲಿಂಗ್ ಪಡೆದುಕೊಂಡೆ, ಅದೊಂದೆ ನನ್ನನ್ನು ಸೇವ್ ಮಾಡಿರುವುದು. ನನ್ನ ತಾಯಿನೇ ನನಗೆ ಏನೂ ಹೇಳುವುದಿಲ್ಲ ಅಂದ್ಮೇಲೆ ನಾನು ಯಾಕೆ ಯಾವನಿಂದಲೋ ಮಾತು ಕೇಳಬೇಕು ಜಗಳ ಮಾಡಬೇಕು?' ಎಂದಿದ್ದಾರೆ ಸಾನ್ಯ.

click me!