ಟಾಸ್ಕ್ ಆರಂಭವಾಗುವ ಮೊದಲೇ ಸ್ಪರ್ಧಿಗಳು ಜಗಳ ಶುರುವಾಗಿದೆ. ಬಿಗ್ ಬಾಸ್ ನಲ್ಲಿ ಅತೀ ಹೆಚ್ಚು ಕಿತ್ತಾಟ, ಜಗಳ ಪ್ರಾರಂಭವಾಗುವುದು ಊಟದ ವಿಚಾರಕ್ಕೆ, ಅಡುಗೆ ಮನೆ ವಿಚಾರಕ್ಕೆ. ಈ ವಿಚಾರವಾಗಿ ಸದಾ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಈ ಬಾರಿಯೂ ಈಗಾಗಲೇ ಜಗಳ ಆರಂಭವಾಗಿದೆ. ಸೋನು ಗೌಡ ತನಗೆ ಮೊಟ್ಟೆ ಕೊಟ್ಟಿಲ್ಲ ಎಂದು ಆರ್ಯವರ್ಧನ್ ಬಳಿ ಗರಂ ಆಗಿದ್ದಾರೆ. ಗುರೂಜಿಗೆ ಕ್ಲಾಸ್ ತೆಗೆದುಕೊಂಡಿದ್ದ ಸೋನು ಗೌಡ, ನನ್ನ ಜೊತೆ ಚೆನ್ನಾಗಿದ್ದು ರಾತ್ರಿಯೆಲ್ಲ ಬೇರೆಯವರ ಮಾತಿಗೆ ತಲೆಕುಣಿಸುತ್ತೀರೋ ಹಾಗೆ ಈಗ ನಾನು ಹೇಳಿದಾಗಲೂ ತಲೆಕುಣಿಸಬೇಕು ಎಂದು ಹೇಳಿದರು.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಅದ್ದೂರಿಯಾಗಿ ಆರಂಭವಾಗಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್ ಓಪನಿಂಗ್ ಆಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಒಟಿಟಿಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ಸ್ಪರ್ಧಿಗಳು ತಮ್ಮ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ತನ್ನದೆ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ. ಮೊದಲನೇ ವಾರ ಬಿಗ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದಾರೆ, ಜೊತೆಗೆ ತಮ್ಮ ನೋವಿನ ಕಥೆಗಳನ್ನು ಶೇರ್ ಮಾಡುತ್ತಿದ್ದಾರೆ. ಈ ನಡುವೆ ಸ್ಪರ್ಧಿಗಳ ನಡುವೆ ಜಗಳ ಪ್ರಾರಂಭವಾಗಿದೆ.
ಟಾಸ್ಕ್ ಆರಂಭವಾಗುವ ಮೊದಲೇ ಸ್ಪರ್ಧಿಗಳು ಜಗಳ ಶುರುವಾಗಿದೆ. ಬಿಗ್ ಬಾಸ್ ನಲ್ಲಿ ಅತೀ ಹೆಚ್ಚು ಕಿತ್ತಾಟ, ಜಗಳ ಪ್ರಾರಂಭವಾಗುವುದು ಊಟದ ವಿಚಾರಕ್ಕೆ, ಅಡುಗೆ ಮನೆ ವಿಚಾರಕ್ಕೆ. ಈ ವಿಚಾರವಾಗಿ ಸದಾ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಈ ಬಾರಿಯೂ ಈಗಾಗಲೇ ಜಗಳ ಆರಂಭವಾಗಿದೆ. ಸೋನು ಗೌಡ ತನಗೆ ಮೊಟ್ಟೆ ಕೊಟ್ಟಿಲ್ಲ ಎಂದು ಆರ್ಯವರ್ಧನ್ ಬಳಿ ಗರಂ ಆಗಿದ್ದಾರೆ. ಗುರೂಜಿಗೆ ಕ್ಲಾಸ್ ತೆಗೆದುಕೊಂಡಿದ್ದ ಸೋನು ಗೌಡ, ನನ್ನ ಜೊತೆ ಚೆನ್ನಾಗಿದ್ದು ರಾತ್ರಿಯೆಲ್ಲ ಬೇರೆಯವರ ಮಾತಿಗೆ ತಲೆಕುಣಿಸುತ್ತೀರೋ ಹಾಗೆ ಈಗ ನಾನು ಹೇಳಿದಾಗಲೂ ತಲೆಕುಣಿಸಬೇಕು. ಮೊದಲ ದಿನವೇ ಎಷ್ಟು ಮೊಟ್ಟೆ ತಿಂದಿದ್ದಾರೆ ಎಂದು ತರಾಟೆ ತೆಗೆದುಕೊಂಡಿದ್ದರು. ಚೈತ್ರಾ ಸ್ಪಷ್ಟನೆ ನೀಡುತ್ತಿದ್ದರೂ ಸಹ ಸೋನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ರಾತ್ರಿ ಒಂದು ಮೊಟ್ಟೆ ಕೊಟ್ಟಿದ್ರೆ ಏನಾಗುತ್ತಿತ್ತು. ಒಬ್ಬೊಬ್ಬರಿಗೊಂದು ರೀತಿನಾ, ನಾವು ಬಂದಾಗಿಂದನೂ ನೋಡ್ತಾ ಇದ್ದೀವಿ, ನೀಮಗೆ ಅರ್ಥ ಆಗದೇ ಇರಬಹುದು ಆದರೆ ಬಿಗ್ ಬಾಸ್ ಗೆ ಅರ್ಥ ಆಗುತ್ತದೆ ಎಂದು ಸೋನು ಹೇಳಿದರು.
Bigg Boss Ott: 2ನೇ ಹೆಂಡತಿ ಪರವಾಗಿ 1ನೇ ಹೆಂಡತಿಗೆ ಬಹಿರಂಗ ಕ್ಷಮೆ ಕೇಳಿದ ನಟ ಅರ್ಜುನ್!
ಮೊದಲ ವಾರವೇ ಅದೂ ಟಾಸ್ಕ್ ಪ್ರಾರಂಭವಾಗುವ ಮೊದಲೇ ಬಿಗ್ ಮನೆಯಲ್ಲಿ ಜಗಳ ಪ್ರಾರಂಭವಾಗಿದೆ. ಆಗಾಗ ಸ್ಪರ್ಧಿಗಳು ಕಿತ್ತಾಡುತ್ತಿದ್ದಾರೆ. ನಿಧಾನವಾಗಿ ಬಿಗ್ ಹೌಸ್ ಕಾವೇರುತ್ತಿದೆ. ಇನ್ನು ಏನೆಲ್ಲ ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಾರೋ ಕಾದುನೋಡಬೇಕು.
ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಮಾಡಲಾಗಿದೆ. ಮೊದಲ ದಿನ ಬಿಗ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಅದ ಸ್ಪರ್ಧಿಗಳಲ್ಲಿ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್, ಜಶ್ವಂತ್, ಕಿರಣ್ ಮತ್ತು ಅಕ್ಷತಾ ಮೊದಲ ದಿನ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿ ಇವರಲ್ಲಿ ಯಾರು ಬಿಗ್ ಬಾಸ್ ಒಟಿಟಿಯಿಂದ ಹೊರಹೋಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೆ; ಪ್ರೇಮ ಪುರಾಣ ಬಿಚ್ಚಿಟ್ಟ ಜಯಶ್ರೀ ಆರಾಧ್ಯ
ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್ ಇದ್ದಾರೆ.