
ಬಿಗ್‌ಬಾಸ್ ಓಟಿಟಿ ಇನ್ನೂ ಶುರುವಾಗಿದ್ದಷ್ಟೇ. ಆಗಲೇ ಪ್ರವಾಹದ ಹಾಗೆ ಸಂಬಂಧದ ವಿಚಾರಗಳು ಹರಿದುಬಂದಿವೆ. ಒಬ್ಬರಿಗೆ ಮೂರ್ನಾಲ್ಕು ಜನರ ಜೊತೆಗೆ ಲವ್ವಾದ್ರೆ, ಮತ್ತೊಬ್ರಿಗೆ ಎರಡೆರಡು ಹೆಂಡ್ತಿ, ಇನ್ನೊಬ್ರದ್ದು ಡಿವೋರ್ಸ್, ಮಗದೊಬ್ರದ್ದು ಬ್ರೇಕಪ್ಪು. ಬಿಗ್‌ಬಾಸ್‌ನಲ್ಲಿ ಪರ್ಸನಲ್ ವಿಚಾರಗಳು ಹರಿದು ಬರೋದು ಸಹಜ. ಆದರೆ ಸದ್ಯಕ್ಕೀಗ ನಡೀತಿರೋದನ್ನು ನೋಡಿದ್ರೆ ಒಬ್ಬರ ಬದುಕಿನಲ್ಲಿ ಹೀಗೆಲ್ಲ ಆಗಬಹುದಾ ಅನ್ನೋ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತಿದ್ದೆ. ಇದರ ನಡುವೆ ಬಿಗ್‌ಬಾಸ್ ಮನೆಯಲ್ಲಿ ಲವ್‌ಸ್ಟೋರಿಯೊಂದು ಶುರುವಾಗೋದ್ರಲ್ಲಿದೆ. ಬಿಗ್‌ಬಾಸ್ ಓಟಿಟಿಯಲ್ಲಿ ಶುರುವಿಗೇ ಸ್ಪರ್ಧಿಗಳಿಂದ ಸಖತ್ ಪೈಪೋಟಿ ನಡೆಯುತ್ತಿದೆ. ಪ್ರತಿಯೊಬ್ಬ ಸ್ಪರ್ಧಿಯಲ್ಲೂ ಇಲ್ಲಿ ಚೆನ್ನಾಗಿ ಗಮನ ಸೆಳೆದು ನೂರು ದಿನಗಳ ಕಾಲ ನಡೆಯುವ ಟಿವಿ, ಓಟಿಟಿಗಳೆರಡರಲ್ಲೂ ನಡೆಯುವ ಬಿಗ್‌ಬಾಸ್‌ನಲ್ಲಿ ಭಾಗವಹಿಸಬೇಕು ಅನ್ನೋ ಮನಸ್ಥಿತಿ ಇದ್ದ ಹಾಗಿದೆ. ಅದಕ್ಕೇ ತಮ್ಮ ಪರ್ಸನಲ್ ಲೈಫನ್ನು ಓಪನ್ ಆಗಿಯೇ ಜನರ ಮುಂದೆ ಕಾಂಪಿಟೀಶನ್‌ಗೆ ಬಿದ್ದ ಹಾಗೆ ತೆರೆದಿಟ್ಟಿದ್ದಾರೆ. ಇದನ್ನೆಲ್ಲ ನೋಡ್ತಿರೋ ಕಾಮನ್ ಮ್ಯಾನ್‌ಗೆ ಸಂಬಂಧಗಳಲ್ಲಿ ಈ ಮಟ್ಟಿನ ಸಂಘರ್ಷವೂ ಇರಬಹುದಾ? ಇವರಿಗೆ ಸಮಾಜದ, ಮನೆಯವರ ಬಗ್ಗೆ ಎಲ್ಲ ಕಿಂಚಿತ್ ಯೋಚನೆಯೂ ಇಲ್ವಾ ಅನ್ನೋ ಪ್ರಶ್ನೆ ಬರ್ತಿದೆ.
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಓಟಿಟಿಯಲ್ಲಿ ಈ ಬಾರಿ ಹದಿನಾರು ಸ್ಪರ್ಧಿಗಳು ಜಿದ್ದಿಗೆ ಬಿದ್ದ ಹಾಗೆ ಆಟ ಆಡ್ತಿದ್ದಾರೆ. ತಮ್ಮ ಪರ್ಸನಲ್ ಲೈಫನ್ನು ಕಲರ್‌ಫುಲ್ಲಾಗಿ ತೆರೆದಿಟ್ಟಷ್ಟು ಈ ಸ್ಪರ್ಧೆಯಲ್ಲಿ ಗೆಲ್ಲೋ ಚಾನ್ಸ್ ಜಾಸ್ತಿ, ಜೊತೆಗೆ ನಾಮಿನೇಶನ್ ತೂಗುಗತ್ತಿಯಿಂದಲೂ ಪಾರಾಗಬೇಕು ಅನ್ನೋದಿರುತ್ತೆ, ಹೀಗಾಗಿ ಸಮಾಜದ ಜನರೆಲ್ಲ ಛೀ ಅನ್ನೋ ಲೆವೆಲ್‌ಗೆ ತಮ್ಮ ಬದುಕನ್ನು ಓಪನ್ ಅಪ್ ಮಾಡಿಕೊಂಡಿದ್ದಾರೆ. ಮನರಂಜನಾಕ್ಷೇತ್ರ (Entertainment) ಮತ್ತು ರಾಜಕೀಯಗಳೆರಡರಲ್ಲೂ (Politcs) ಗುರುತಿಸಿಕೊಂಡಿರುವ ಅರ್ಜುನ್ ರಮೇಶ್ ಎರಡೆರಡು ಮದುವೆ (Marriage) ಆಗಿರೋ ಸಂಗತಿ ಬಹಿರಂಗಪಡಿಸಿದ್ದಾರೆ.
8 ಸ್ಪರ್ಧಿಗಳ ಮೇಲೆ ಎಲಿಮಿನೇಷನ್ ತೂಗುಗತ್ತಿ...ಸೋನು ಗೌಡ ಹೊರ ಹೋಗ್ಲಿ ಅಂತಿದ್ದಾರೆ ಒತ್ತಿ...ಒತ್ತಿ
ಸ್ಪರ್ಧಿಗಳ ಜೀವನವನ್ನು ಪರಿಚಯಿಸೋದಕ್ಕೆ ಬಿಗ್ ಬಾಸ್ ನಾನು ಯಾರು ಅನ್ನೋ ಟಾಸ್ಕ್ ನೀಡಿತ್ತು. ಇದರಲ್ಲಿ ಅರ್ಜುನ್ ತನ್ನ ಫ್ಲರ್ಟಿಂಗ್(Flirting) ಸ್ವಭಾವ, ಎರಡೆರಡು ಮದುವೆ, ರಿಲೇಶನ್‌ಶಿಪ್‌ಗಳ (Relationships) ಬಗ್ಗೆ ಹೇಳಿದ್ದಾರೆ. ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ ವಿವಾಹಿತನ ಜೊತೆಗೆ ರಿಲೇಶನ್‌ಶಿಪ್ (Relationship) ಇಟ್ಕೊಂಡಿರೋ ವಿಚಾರದ ಮೂಲಕ ಗಮನ ಸೆಳೆದರು. ಸಾನ್ಯಾ ಐಯ್ಯರ್ ತನ್ನ ತಂದೆ ಬಾಯ್ ಫ್ರೆಂಡ್ ಜೊತೆಗಿನ ವೀಡಿಯೋ ಮಾಡಿ ಮಗಳ ಬಗ್ಗೆ ಗಾಸಿಪ್ ಹಬ್ಬಿಸಿದ್ದರ ಬಗ್ಗೆ ಹೇಳಿದ್ರು. ಅದೇ ಥರ ಇನ್ನೂ ಇಪ್ಪತ್ತೆರಡರ ಈ ಹುಡುಗಿ ತನ್ನ ಲವ್ ಬ್ರೇಕಪ್ಪುಗಳ ಬಗ್ಗೆ ಮಾತಾಡಿದ್ದೂ ಗಮನ ಸೆಳೆಯಿತು. ನ್ಯೂಸ್ ಆಂಕರ್ ಸೋಮಣ್ಣ ಮಾಚಿಮಾಡ ತನ್ನ ಡಿವೋರ್ಸ್(Divorce) ಕಥೆ ಹೇಳಿ ತಾನಿನ್ನೂ ಮಾಜಿ ಪತ್ನಿಯನ್ನು ಬಿಟ್ಟಿರಲಾರದ ಸ್ಥಿತಿಯಲ್ಲಿರೋದರ ಬಗ್ಗೆ ಹೇಳಿಕೊಂಡರು. ಸೋನುಗೌಡ ವೀಡಿಯೋ ವಿಚಾರವಂತೂ ವಾಕರಿಕೆ ಬರುವಷ್ಟು ರೇಜಿಗೆ ತರಿಸಿದೆ.
ಕತ್ತು ಹಿಸುಕಿ ನನ್ನನ್ನು ಜಾಡಿಸಿ ಒದ್ದಿದ್ದಾನೆ ಈ ಎಕ್ಸ್ ಬಾಯ್‌ಫ್ರೆಂಡ್: Bigg Boss ಸಾನ್ಯ ಅಯ್ಯರ್
ಜನ ಈ ಬಿಗ್‌ಬಾಸ್‌ಗೆ ಸರಿಯಾಗಿ ಕ್ಲಾಸ್ ತಗೊಳ್ತಿದ್ದಾರೆ. ಇದೊಂಥರ 'ಹುಚ್ಚರ ಸಂತೆ' ಅಂತ ಒಬ್ಬ ವೀಕ್ಷಕರು ಸೋಷಿಯಲ್ ಮೀಡಿಯಾ(Sccial media)ದಲ್ಲಿ ಕಮೆಂಟ್ ಮಾಡಿದರೆ, ಮತ್ತೊಬ್ರು 'ಬಿಗ್‌ಬಾಸ್(Bigboss)ನಲ್ಲಿ ಒಳ್ಳೆಯವರಿಗೆ ಅವಕಾಶ ಕಡಿಮೆ ಅನ್ಸುತ್ತೆ. ಒಬ್ಬ ಹೆಂಡತಿ ಒಬ್ಬ ಗಂಡ ಇರುವಂಥವರೇ ಇಲ್ವಾ ಬಿಗ್ ಬಾಸ್‌ನಲ್ಲಿ?' ಅಂತ ಕೇಳಿದ್ದಾರೆ. 'ಇಂಥಾ ಮನೆಹಾಳು ಜನರನ್ನಿಟ್ಟು ಬಿಗ್‌ಬಾಸ್ ಶೋ ಮಾಡ್ತೀರಲ್ವಾ, ಸಮಾಜಕ್ಕೆ ಇವರಿಂದ ಏನು ಸಂದೇಶ ರವಾನೆಯಾಗುತ್ತೆ?' ಅಂತ ಮಗದೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. 'ಒಬ್ಬೊಬ್ಬರದು ಒಂದೊಂದು ದಂತಕಥೆ, ಕೇಳಿ ಕಿವಿ ಪಾವನವಾಯ್ತು' ಎಂದು ವೀಕ್ಷಕರೊಬ್ಬರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ. 'ಮೂರೂ ಬಿಟ್ಟೋರು, ಬಿಗ್‌ಬಾಸ್‌ಗೆ ದೊಡ್ಡೋರು', 'ಒಬ್ಬೊಬ್ಬರೂ ಒಂದೊಂದು ಮುತ್ತುಗಳು' ಅನ್ನೋ ವ್ಯಂಗ್ಯದ ಚಾಟಿಯನ್ನೂ ವೀಕ್ಷಕರು ಬೀಸಿದ್ದಾರೆ.
ಒಟ್ಟಾರೆ 'ಬಿಗ್‌ಬಾಸ್ ಓಟಿಟಿ ಸೀಸನ್ 1' ಬೇರೆ ಕಾರಣಕ್ಕೆ ಸುದ್ದಿಯಲ್ಲಿದೆ. ಟಿಆರ್‌ಪಿ ಹೆಚ್ಚಾಗ್ಬೇಕು ಅಂತ ಈ ಲೆವೆಲ್‌ಗೂ ಇಳಿಯೋದಾ ಅಂತ ಜನ ತರಾಟೆಗೆ ತೆಗೆದುಕೊಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.