Bigg Boss OTT; ಮೊದಲ ದಿನವೇ ಕಣ್ಣೀರಧಾರೆ, ಕಷ್ಟದ ದಿನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು

Published : Aug 07, 2022, 05:04 PM ISTUpdated : Aug 07, 2022, 05:17 PM IST
Bigg Boss OTT; ಮೊದಲ ದಿನವೇ ಕಣ್ಣೀರಧಾರೆ, ಕಷ್ಟದ ದಿನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು

ಸಾರಾಂಶ

ಗ್ ಬಾಸ್ ನೀಡಿದ 'ನಾನು ಯಾರು' ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ನೋವಿನ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಆ ವೇಳೆ ಗಳಗಳನೆ ಅತ್ತಿದ್ದಾರೆ.  

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಒಟಿಟಿ ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಆಗಸ್ಟ್​ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್​ ಓಪನಿಂಗ್ ಮಾಡಲಾಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​  ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಒಟಿಟಿಗೆ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ಅಂದಹಾಗೆ ಸದ್ಯ ಬಿಗ್ ಬಾಸ್ ಒಟಿಟಿಯ ಪ್ರೋಮೋ ರಿಲೀಸ್ ಆಗಿದ್ದು ಸ್ಪರ್ಧಿಗಳು ಗಳಗಳನೆ ಕಣ್ಣೀರಿಟ್ಟಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧಿಗಳ ಎಮೋಷನಲ್ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  

ಅಂದಹಾಗೆ ಮೊದಲ ವಾರ ಸ್ಪರ್ಧಿಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ತುಂಬಾ ಮುಖ್ಯ. ಸಹ ಸ್ಪರ್ಧಿಗಳನ್ನು ಅರ್ಥ ಮಾಡಿಕೊಂಡು ಬಿಗ್ ಮನೆಯಲ್ಲಿ ಇರುವುದು ಕಷ್ಟಸಾಧ್ಯ. ಹಾಗಾಗಿ ಸಾಧ್ಯವಾದಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ. ಮೊದಲ ದಿನವೇ ಸ್ಪರ್ಧಿಗಳು ಭಾವನಾತ್ಮಕವಾಗಿ ಸೆಳೆಯಲು ಯತ್ನಸಿದ್ದಾರೆ. ಬಿಗ್ ಬಾಸ್ ನೀಡಿದ 'ನಾನು ಯಾರು' ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ನೋವಿನ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಆ ವೇಳೆ ಗಳಗಳನೆ ಅತ್ತಿದ್ದಾರೆ.  

ಯೋಗ್ಯತೆ ಇಲ್ದೆರೋರೆಲ್ಲಾ ಬಿಗ್ ಬಾಸ್‌ನಲ್ಲಿ; ಸೋನು ಶ್ರೀನಿವಾಸ್ ವಿರುದ್ಧ ಮುಗಿಬಿದ್ದ ನೆಟ್ಟಿಗರು

ಸ್ಫೂರ್ತಿ ಗೌಡ ಅಮ್ಮನ ಸಾವಿನ ಬಗ್ಗೆ ಹೇಳಿ ಅತ್ತಿದ್ದಾರೆ. ತನ್ನಿಂದನೇ ಅಮ್ಮ ಸತ್ತರು ಎನ್ನುವ ಕಳಂಕ ಅಂಟಿದೆ ಎಂದು ಸ್ಫೂರ್ತಿ ಗೌಡ ಕಣ್ಣೀರಾಕಿದ್ದಾರೆ. ನಟಿ ಚೈತ್ರಾ ಹಳ್ಳಿಕೇರಿ ತನ್ನ ಗಂಡನ ಮನೆಯವರೇ ಮೋಸ ಮಾಡಿದರು ಎಂದು ಗಳಗಳನೇ ಅತ್ತಿದ್ದಾರೆ. ಇನ್ನು ಪತ್ರಕರ್ತ ಸೋಮಣ್ಣ ಮಾಚಿಮಾಡ ಪತ್ನಿಯಿಂದ ದೂರ ಆದ ಬಗ್ಗೆ ನೆನೆದು ಕಣ್ಣೀರಾಗಿದರೆ ಸಾನ್ಯಾ ಅಯ್ಯರ್ ಕೂಡ ತನ್ನ ಕೊರಗನ್ನು ಬಹಿರಂಗ ಪಡಿಸುವ ಮೂಲಕ ಭಾವುಕರಾಗಿದ್ದಾರೆ. ಸ್ಪರ್ಧಿಗಳು ಕಣ್ಣೀರಾಕುತ್ತಿರುವ ವಿಡಿಯೋ ವೈರಲ್ ಆಗಿದೆ.


Bigg Boss OTT; ವಾಸುಕಿ ಜೊತೆ ಬಿಗ್ ಮನೆಗೆ ಕಿಚ್ಚನ ಎಂಟ್ರಿ, ದೇವರಬಳಿ ಕೇಳಿಕೊಂಡಿದ್ದೇನು ಸುದೀಪ್?

 

ಇನ್ನು ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಆರಂಭವಾಗಿದೆ. ಮೊದಲ ದಿನ ಬಿಗ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಅದ ಸ್ಪರ್ಧಿಗಳಲ್ಲಿ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್, ಜಶ್ವಂತ್,  ಕಿರಣ್ ಮತ್ತು ಅಕ್ಷತಾ ಮೊದಲ ದಿನ ಬಿಗ್ ಬಾಸ್ ಮನೆಯಿಂದ ನಾಮಿನೇಟ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?