Bigg Boss OTT ಸೋಷಿಯಲ್ ಮೀಡಿಯಾ ಹುಡುಗಿ ಈಗ ಬಿಗ್‌ಬಾಸ್ ಮನೆಯ ಬೆಡಗಿ

By Ramesh BFirst Published Aug 6, 2022, 9:23 PM IST
Highlights

ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗುವ ಜನಪ್ರಿಯ ಬಿಗ್‌ಬಾಸ್ ರಿಯಾಲಿಟಿ ಶೋಗೆ ಭರ್ಜರಿ ಚಾಲನೆ ಸಿಕ್ಕಿದೆ.  ಇಂದು (ಆ. 6) ಸಂಜೆ 7 ಗಂಟೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಹಾಗಾದ್ರೆ ದೊಡ್ಮನೆಗೆ ಯಾರೆಲ್ಲ ಪ್ರವೇಶ ಮಾಡಿದ್ದಾರೆ ಎನ್ನುವುದನ್ನು ನೋಡಿ..

ನಟ ಕಿಚ್ಚ ಸದೀಪ್ ನಡೆಸಿಕೊಂಡುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಇಂದಿನಿಂದ (ಆ,06) ಒಟಿಟಿ Bigg Boss OTT)ಪ್ರಸಾರವಾಗುತ್ತಿದ್ದು, ಈ ರಿಯಾಲಿಟಿ ಶೋಗೆ ಒಬ್ಬರಿಂದೊಬ್ಬರು ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿ ಮೊದಲಿಗೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಮೊದಲ ಸ್ಪರ್ಧಿಯಾಗಿ  ಆರ್ಯವರ್ಧನ್​ ಗುರೂಜಿ ಬಲಗಾಲು ಇಟ್ಟು ದೊಡ್ಮನೆ ಪ್ರವೇಶ ಮಾಡಿದ್ದಾರೆ. ಎರಡನೇ ಕಂಟೆಸ್ಟೆಂಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದ ಮಾಡಿದ ಸೋನು ಶ್ರೀನಿವಾಸ್ ಗೌಡ ಎಂಟ್ರಿಕೊಟ್ಟರು.

Bigg Boss OTT; ಬಿಗ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

ಇನ್ನು ರೂಪೇಶ್ ಶೆಟ್ಟಿ ಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ರೆ, ಸ್ಪೂರ್ತಿ ಗೌಡ ನಾಲ್ಕನೇ ಕಂಟೆಸ್ಟೆಂಟ್ ಆಗಿ ಬಿಗ್​ ಬಾಸ್ ಮನೆ ಸೇರಿದ್ದಾರೆ. ಇದೀಗ ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಸಾನ್ಯಾ ಅಯ್ಯರ್  ಐದನೇ ಸ್ಪರ್ಧಿಯಾಗಿ ದೊಡ್ಮನೆ ಮನೆಗೆ ಕಾಲಿಟ್ಟಿದ್ದಾರೆ. 

ಕಂಟೆಸ್ಟೆಂಟ್ ನಂಬರ್ 6:   ಕಾಮಿಡಿ ಕಿಲಾಡಿಗಳು' ಶೋನಲ್ಲಿ ಭಾಗವಹಿಸಿ ತಮ್ಮ ಮಿಮಿಕ್ರಿ ಮೂಲಕ ಪ್ರೇಕ್ಷಕರನ್ನ ನಕ್ಕುನಲಿಸಿದ್ದ ಲೋಕೇಶ್  6ನೇ ಕಂಟೆಸ್ಟೆಂಟ್ ಆಗಿ ದೊಡ್ಮನೆಗೆ ಕಾಲಿಟ್ಟಿದ್ದು,  ಪ್ರೇಕ್ಷಕರು ನಗೋದೊಂದೇ ಬಾಕಿ.

ಕಂಟೆಸ್ಟೆಂಟ್ ನಂಬರ್ 7:  ಬಿಗ್ ಬಾಸ್ ಓಟಿಟಿ ಶೋನಲ್ಲಿ ಮಾಡೆಲ್, ಡ್ಯಾನ್ಸರ್,  ರಾಜಸ್ಥಾನದ ಹುಡುಗಿ ಕಿರಣ್ ಯೋಗೇಶ್ವರ್ ಅವರು ಸ್ಪರ್ಧಿಯಾಮನೆಯೊಳಗೆ ಕಾಲಿಟ್ಟಿದ್ದಾರೆ.

ಕಂಟೆಸ್ಟೆಂಟ್ ನಂಬರ್ 8:    ‘ಜೋಶ್​’. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡು ಮುಂದೆ‘ಅಲೆಮಾರಿ’, ‘ಕೋಟಿಗೊಂದ್​ ಲವ್​ ಸ್ಟೋರಿ’ ಮೊದಲಾದ ಚಿತ್ರಗಳು ಹರಿಸಿಬಂದವು. ಇದೀಗ  ಜೋಶ್‌ ಹುಡುಗ, ಹೆಸರು ರಾಕೇಶ್‌ ಅಡಿಗ ಬಿಗ್‌ಬಾಸ್‌ಗೆ ಎಂಟನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

ಕಂಟೆಸ್ಟೆಂಟ್ ನಂಬರ್ 9:  ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಬೆಡಗಿ ಅಕ್ಷತಾ ಕುಕ್ಕಿ 9ನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನಿಯೊಳಗೆ ಬಂದಾಳ್ ನೋಡ್ರೀ.

ಕಂಟೆಸ್ಟೆಂಟ್ ನಂಬರ್ 10: ಕೌಟುಂಬಿಕ ಕಾರಣಕ್ಕಾಗಿ ಸುದ್ದಿ ಆಗಿದ್ದ ನಟಿ ಚೈತ್ರಾ ಹಳ್ಳಿಕೇರಿ, ವೆಲ್ ಡನ್ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದವರು. ಆನಂತರ ಗೌಡ್ರು,  ಖುಷಿ, ಶಿಷ್ಯ, ಗುನ್ನ, ಪಾರ್ಥ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಇದೀಗ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ.

ಕಂಟೆಸ್ಟೆಂಟ್ ನಂಬರ್ 11: ರಾಮಾಚಾರಿ ನಂತಃ ಸೀರಿಯಲ್‌ನಲ್ಲಿ ಸಾಕಷ್ಟು ಫೇಮಸ್ ಅಗಿರುವ ಉದಯ್ ಅಲಿಯಾಸ್‌ ವಿವೇಕ್‌  ಹನ್ನೊಂದನೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. 

ಕಂಟೆಸ್ಟೆಂಟ್ ನಂಬರ್ 12: ಉಪೇಂದ್ರರ ಸಿನಿಮಾದಲ್ಲಿ 'ಮಾರಿಮುತ್ತು' ಪಾತ್ರ ಮಾಡುವ ಮೂಲಕ ಸಿನಿಮಾ ರಂಗಕ್ಕೆ ಪರಿಚಯ ಆದವರು ಸರೋಜಮ್ಮ.  ಇವರ ಮೊಮ್ಮಗಳೇ ಈ ಜಯಶ್ರೀ ಆರಾಧ್ಯ. 12 ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

ಕಂಟೆಸ್ಟೆಂಟ್ ನಂಬರ್ 13: ಧಾರಾವಾಹಿಗಳಲ್ಲಿ ಮಿಂಚಿದ ನಟ ಅರ್ಜುನ್ ರಮೇಶ್ ಬಿಗ್ ಬಾಸ್ ಕನ್ನಡ ಓಟಿಟಿ ಶೋಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 

ಕಂಟೆಸ್ಟೆಂಟ್ ನಂಬರ್ 14: ಚಿನಕುರಳಿ ಪಟಾಕಿ  ನಂದು 14ನೇ ಕಂಟೆಸ್ಟೆಂಟ್ ಆಗಿ ಬಿಗ್‌ ಬಾಸ್  ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ.

ಕಂಟೆಸ್ಟೆಂಟ್ ನಂಬರ್ 15 ಎಂಟಿವಿ ರೋಡೀಸ್ 18 ವಿಜೇತರಾದ ಜಶ್ವಂತ್ ಬೋಪಣ್ಣ ಬಿಗ್ ಬಾಸ್ ಒಟಿಟಿ ಮನೆ ಪ್ರವೇಶಿಸಿದ್ದಾರೆ.

ಕಂಟೆಸ್ಟೆಂಟ್ ನಂಬರ್ 16: ಪತ್ರಿಕಾ ವೃತ್ತಿಯೊಂದಿಗೆ ಕರ್ನಾಟಕದಲ್ಲಿ ಸಂಚರಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಸೋಮಣ್ಣ ಮಾಚಿಮಡ ದೊಡ್ಮನೆಯ ಕೊನೆಯ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

ಬಿಗ್‌ಬಾಸ್ ಒಟಿಟಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಪ್ರವೇಶವಾಗಿದ್ದು, ಇನ್ನೇನು ಇದ್ದರೂ ಈಗ ಅವರ ಆಟ ಶುರುವಾಗಲಿದೆ.

ದೊಡ್ಮನೆಗೆ ಕಾಲಿಟ್ಟ ಟಿಕ್ ಟಾಕ್ ಸ್ಟಾರ್
ಯೆಸ್‌.....ಟಿಕ್ ಟಾಕ್ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.  ಟಿಕ್ ಟಾಕ್, ರೀಲ್ಸ್‌ ಮೂಲಕ ಮೂಲಕವೇ ಅಸಂಖ್ಯಾತ ಫಾಲೋವರ್ಸ್ ಹೊಂದಿದ್ದಾರೆ. ಈ ಹಿನ್ನೆಲೆಯೆಲ್ಲಿ  ಸೋನು ಗೌಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿವೆ.
 

click me!