ಮುದ್ದುಮಣಿಗಳು; ಸೃಷ್ಟಿ ಪಾತ್ರಕ್ಕೆ ಎಂಟ್ರಿ ಕೊಟ್ಟ 'ಗಟ್ಟಿಮೇಳ' ನಟಿ

By Shruiti G Krishna  |  First Published Sep 13, 2022, 11:14 AM IST

ಸಮೀಕ್ಷಾ ಜಾಗಕ್ಕೆ ನಟಿ ಸೋನಿ ಮುಲೆವಾ ಎಂಟ್ರಿ ಕೊಟ್ಟಿದ್ದಾರೆ. ಹೌದು ಗಟ್ಟಿಮೇಳೆ ಧಾರಾವಾಹಿಯಲ್ಲಿ ನಟಿಸಿದ್ದ ಸೋನಿ ಇದೀಗ ಮುದ್ದುಮಣಿಗಳು ಧಾರಾವಾಹಿ ತಂಡ ಸೇರಿದ್ದಾರೆ. 


ಧಾರಾವಾಹಿಗಳಲ್ಲಿ ನಟ, ನಟಿಯರು ಬದಲಾಗುವುದು ಸಹಜ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದುಮಣಿಗಳು' ಧಾರಾವಾಹಿಯಯಲ್ಲು ದೊಡ್ಡ ಬದಲಾವಣೆಯಾಗಲಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಸೀರಿಯಲ್‌ಗಳಲ್ಲಿ ಮುದ್ದುಮಣಿಗಳು ಕೂಡ ಒಂದು. ಅಂದಹಾಗೆ ಈ ಧಾರಾವಾಹಿ ಮುದ್ದುಲಕ್ಷ್ಮಿ ಧಾರಾವಾಹಿಯ ಮುಂದುವರೆದ ಭಾಗವಾಗಿದೆ. ಮುದ್ದು ಲಕ್ಷ್ಮಿ ಧಾರಾವಾಹಿಯ ಪುಟ್ಟ ಮಕ್ಕಳು ದೊಡ್ಡವರಾದ ಬಳಿಕ ಪ್ರಸಾರವಾಗುತ್ತಿರುವ ಧಾರಾವಾಹಿ ಮುದ್ದು ಮಣಿಗಳು. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟಿ ಸಮೀಕ್ಷಾ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸಮೀಕ್ಷಾ ಜಾಗಕ್ಕೆ ಯಾರು ಬರ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. 

ಧಾರಾವಾಹಿಯಲ್ಲಿ ಸಮೀಕ್ಷಾ, ಸೃಷ್ಟಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದರು. ಸೃಷ್ಟಿಯಾಗಿ ಸಮೀಕ್ಷಾ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಸಮೀಕ್ಷಾ ಧಾರಾವಾಹಿಯಿಂದ ಹೊರಹೋಗುತ್ತಿರುವು ಪ್ರೇಕ್ಷಕರಿಗೆ ಬೇಸರದ ವಿಚಾರ ಆದರೂ ಸಮೀಕ್ಷಾ ಜಾಗಕ್ಕೆ ಯಾರು ಬರ್ತಾರೆ ಎನ್ನುವ ಕುತೂಹಲವಿತ್ತು. ಇದೀಗ ಈ ಕುತೂಹಲಕ್ಕೂ ತೆರೆಬಿದ್ದಿದೆ. ಸಮೀಕ್ಷಾ ಜಾಗಕ್ಕೆ ನಟಿ ಸೋನಿ ಮುಲೆವಾ ಎಂಟ್ರಿ ಕೊಟ್ಟಿದ್ದಾರೆ. ಹೌದು ಗಟ್ಟಿಮೇಳೆ ಧಾರಾವಾಹಿಯಲ್ಲಿ ನಟಿಸಿದ್ದ ಸೋನಿ ಇದೀಗ ಮುದ್ದುಮಣಿಗಳು ಧಾರಾವಾಹಿ ತಂಡ ಸೇರಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಸೋನಿ, ಅಹಲ್ಯ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಗಟ್ಟಿಮೇಳದಲ್ಲಿ ತನ್ನ ಪಾತ್ರ ಮುಗಿಸಿದ ಬಳಿಕ ಮತ್ತೆ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಪ್ರಮುಖ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

ಸಿರಿ ಕನ್ನಡ ವಾಹಿನಿಯಲ್ಲಿ ಬರಲಿದೆ Matte Mayamruga

Tap to resize

Latest Videos

ಇನ್ನು ಸದ್ಯ ಸೃಷ್ಟಿ ಪಾತ್ರಮಾಡುತ್ತಿರುವ ನಟಿ ಸಮೀಕ್ಷಾ ದಿಢೀರ್ ಧಾರಾವಾಹಿ ತೊರೆಯುತ್ತಿರುವ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಹೋಗುತ್ತಿದ್ದಾರೆ ಎನ್ನಲಾಗಿದೆ. ಮೀನಾಕ್ಷಿ ಮದುವೆ, ಸುಬ್ಬಲಕ್ಷ್ಮಿ ಸಂಸಾರ, ಮೂರು ಗಂಟು ಧಾರಾವಾಹಿಗಳಲ್ಲಿ ನಟಿಸಿದ್ದ ಸಮೀಕ್ಷಾ ಬಳಿಕ ಸಿನಿಮಾಗಳಲ್ಲಿಯೂ ಮಿಂಚಿದ್ದರು. ಗ್ಯಾಪ್‌ನ ಬಳಿಕ ಸಮೀಕ್ಷಾ ಮತ್ತೆ ಕಿರುತೆರೆಗೆ ವಾಪಾಸ್ ಆಗಿದ್ದರು. ಇದೀಗ ಮತ್ತೆ ಧಾರಾವಾಹಿ ತೊರೆದಿದ್ದಾರೆ. 



'ಮುದ್ದುಮಣಿಗಳು' ಧಾರಾವಾಹಿಯಿಂದ ಹೊರನಡೆದ ನಟಿ ಸಮೀಕ್ಷಾ: ಸೃಷ್ಟಿ ಪಾತ್ರಕ್ಕೆ ಯಾರ್ ಬರ್ತಾರೆ?

ಮುದ್ದುಮಣಿಗಳು ಧಾರಾವಾಹಿ ಬಗ್ಗೆ

ಈ ಧಾರಾವಾಹಿಯ ಬಗ್ಗೆ ಹೇಳುವುದಾದರೆ ಸೃಷ್ಟಿ ಮತ್ತು ದೃಷ್ಟಿ ಪುಟ್ಟ ಸಹೋದರಿಯರು ಆಕ್ಸಿಡೆಂಟ್ ಸಮಯದಲ್ಲಿ ತಂದೆ-ತಾಯಿನ್ನು ಕಳೆದುಕೊಳ್ತಾರೆ. ಅದೇ ಸಮಯದಲ್ಲಿ ಇಬ್ಬರು ಬೇರೆ ಬೇರೆಯಾದರು. ಇಬ್ಬರು ಪ್ರತ್ಯೇಕವಾಗಿ ಬೆಳೆಯುತ್ತಾರೆ. ಸೃಷ್ಟಿ ತನ್ನ ಮನೆಯಲ್ಲಿ ಬೆಳೆದರೆ ದೃಷ್ಟಿ ಹಳ್ಳಿಯ ಒಂದು ಬಡ ಕುಟುಂಬದಲ್ಲಿ ಬೆಳೆಯುತ್ತಾಳೆ. ದೃಷ್ಟಿಗೆ ತನ್ನ ಹಳೆಯ ನೆನಪನ್ನು ಕಳೆದುಕೊಳ್ತಾರೆ. ಆದರೆ ಸೃಷ್ಟಿ ಶ್ರೀಮಂತ ಕುಟುಂಬದಲ್ಲಿ ಬೆಳೆದು ವೈದ್ಯೆಯಾಗುತ್ತಾಳೆ. ಸೃಷ್ಟಿಗೆ ತನ್ನ ಸಹೋದರಿ ಬದುಕಿದ್ದಾಳೆ ಎನ್ನುವ ನಂಬಿಕೆ, ಆದರೆ ಆಕೆಯ ಅಮ್ಮಳಿಗೆ ಬದುಕ್ಕಿಲ್ಲ ಎಂದು ನಂಬಿದ್ದರು. ಕೊನೆಗೂ ಇಬ್ಬರು ಭೇಟಿಯಾಗುತ್ತಾರೆ. ಸೃಷ್ಟಿ ಮತ್ತು ದೃಷ್ಟಿ ಕುಟುಂಬ ತೀರ ಆಪ್ತರಾದರು. ಸೃಷ್ಟಿ ಸಹೋದರಿಯೇ ದೃಷ್ಟಿ ಎನ್ನುವ ಸತ್ಯ ಸಾಕು ತಂದೆಗೆ ಸತ್ಯ ಗೊತ್ತಾಗುತ್ತದೆ. ಅದರೆ ಅದನ್ನು ಮುಚ್ಚಿಟ್ಟು ಇಬ್ಬರ ಜೊತೆಯೂ ಉತ್ತಮ ಬಾಂಧವ್ಯದಿಂದ ಇರುತ್ತಾನೆ. ಸದ್ಯ ಇಬ್ಬರು ಒಂದೇ ಮನೆಗೆ ಸೊಸೆಯರಾಗಿ ಎಂಟ್ರಿ ಕೊಟ್ಟಿದ್ದಾರೆ. ಸೃಷ್ಟಿ ತಂಗಿಯೆ ದೃಷ್ಟಿ ಎನ್ನುವ ಸತ್ಯ ಹೊರಬಿದ್ದಿದೆ. ಜೊತೆಗೆ ದೃಷ್ಟಿ ವಿಲನ್ ಆಗಿ ಬದಲಾಗಿದ್ದಾಳೆ. ಮುಂದೆ ಯಾವೆಲ್ಲ ತಿರುವು ಪಡೆದು ಧಾರಾವಾಹಿ ಮುನ್ನುಗ್ಗಲಿದೆ ಎಂದು ಕುತೂಹಲದಿಂದ ಕಾಯುತ್ತಿರುವಗಾಲೆ ಸೃಷ್ಟಿ ಪಾತ್ರ ಹದಲಾಗಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಹೊಸ ಸೃಷ್ಟಿಯಾಗಿ ಸೋನಿ ಪ್ರೇಕ್ಷಕರ ಹೃದಯ ಗೆಲ್ತಾರಾ ಕಾದುನೋಡಬೇಕಿದೆ.     

 

click me!