ಜೋರಾಯ್ತು ಶಮಿತಾ ಶೆಟ್ಟಿ-ಅಕ್ಷರಾ ಜಗಳ: ನೀನು ಅಮ್ಮನ ವಯಸ್ಸಿನವಳು, ಸೊಕ್ಕಿನ ಹುಡುಗಿ ಎಂದ ನಟಿ!

Suvarna News   | Asianet News
Published : Aug 19, 2021, 12:51 PM IST
ಜೋರಾಯ್ತು ಶಮಿತಾ ಶೆಟ್ಟಿ-ಅಕ್ಷರಾ ಜಗಳ: ನೀನು ಅಮ್ಮನ ವಯಸ್ಸಿನವಳು, ಸೊಕ್ಕಿನ ಹುಡುಗಿ ಎಂದ ನಟಿ!

ಸಾರಾಂಶ

ಬಿಗ್ ಬಾಸ್‌ ಮನೆಯಲ್ಲಿ ಕಷ್ಟದ ಸಮಯ ಎದುರಿಸುತ್ತಿದ್ದಾರೆ ಶಮಿತಾ ಶೆಟ್ಟಿ. ಚಿತ್ರರಂಗದಲ್ಲಿ ಹೆಸರು ಮಾಡುವ ಉದ್ದೇಶ, ಆದರೆ ಇಲ್ಲಿ ಹೆಸರು ಹಾಳಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ. 

ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ OTT ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ, ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಶೋ ಆರಂಭವಾಗಿ 10 ದಿನಗಳು ಕಳೆದಿವೆ. ಆಗಲೇ ಶಮಿತಾ ಅನೇಕರ ಜೊತೆ ಜಗಳವಾಡಿದ್ದಾರೆ. ಶಮಿತಾ ಬಗ್ಗೆ ಜನರಿಗಿರುವ ಅಭಿಪ್ರಾಯ ಬದಲಾಗುತ್ತಿದೆ. 

ಓಟಿಟಿ ಬಿಗ್ ಬಾಸ್‌ ಶೋನಲ್ಲಿ ಒಟ್ಟು 12 ಮಂದಿ ಇದ್ದಾರೆ. ಈಗಾಗಲೆ ಒಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಈ ನಡುವೆ ಶಮಿತಾ ಹಾಗೂ ಅಕ್ಷರಾ ಸಿಂಗ್ ಉಪ್ಪಿನ ಡಬ್ಬದ ವಿಚಾರಕ್ಕೆ ಜಗಳವಾಡಿದ್ದಾರೆ. ರಿಲೀಸ್ ಆಗಿರುವ ಪ್ರೋಮೋದ ಪ್ರಕಾರ ಇಲ್ಲಿ ಯಾರ ತಪ್ಪು ಎಂದು ಹೇಳಲಾಗುವುದಿಲ್ಲ ಆದರೆ ಮಾತಿನ ಚಕಾಮಕಿ ನಡೆದಿದೆ. ಉಪ್ಪಿನ ಡಬ್ಬ ಎಲ್ಲಿದೆ ಎಂದು ಅಕ್ಷರಾ, ಶಮಿತಾಗೆ ಕೇಳುತ್ತಾರೆ. ಮೆಲು ಧ್ವನಿಯಲ್ಲಿ 'ಇರಿಟೇಟಿಂಗ್' ಎಂದು ಶಮಿತಾ ಉತ್ತರಿಸುತ್ತಾಳೆ. 'ಉಪ್ಪಿನ ಡಬ್ಬ ಎಲ್ಲಿದೆ ಎಂದು ಕೇಳಿದರೆ ಅದಕ್ಕೆ ಇಷ್ಟೊಂದು ಉರಿದುಕೊಳ್ಳುವುದು ಯಾಕೆ? ನಿನಗೆ ಒಳ್ಳೆಯ ಇಂಗ್ಲೀಷ್ ಬರುತ್ತೆ ಅಂದ್ರೆ ಅದನ್ನು ನಿನ್ನ ಬಳಿ ಇಟ್ಕೋ, ನನ್ನ ಮೇಲೆ ಪ್ರಯೋಗ ಮಾಡಲು ಬರಬೇಡ,' ಎಂದು ಅಕ್ಷರಾ ಸಿಟ್ಟು ಮಾಡಿಕೊಳ್ಳುತ್ತಾರೆ. 'ಬೆಳಗ್ಗೆಯಿಂದ ಅದು ಎಲ್ಲಿದೆ ಇದು ಎಲ್ಲಿದೆ ಎಂದು ನನ್ನನ್ನು ಕೇಳುತ್ತಿದ್ದೀಯಾ ಅಲ್ವಾ, ನಾನೇನು ನಿನ್ನ ಕೆಲಸದವಳಾ? ನೀನು ಸೋಮಾರಿ. ನಿನಗೆ ಬೇಕಾದ ವಸ್ತುಗಳನ್ನು ನೀನೇ ಹುಡುಕಿಕೋ ನನ್ನನ್ನು ಕೇಳಬೇಡ,' ಎಂದು ಶಮಿತಾ ಉತ್ತರಿಸುತ್ತಾರೆ. 'ನಾನು ಯಾವಗಲಾದರೂ ಆಕೆ ಏನಾದರೂ ಹೇಳಲು ಹೋದರೆ ಆಕೆ ನನ್ನ ಮೇಲೆ ಜಗಳವನ್ನೇ ಮಾಡುತ್ತಾಳೆ. ನನ್ನ ಅಮ್ಮನ ವಯಸ್ಸಾಗಿದೆ ಅವಳಿಗೆ, ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬುದು ಸ್ವಲ್ಪವೂ ಗೊತ್ತಿಲ್ಲ. ಸ್ವಲ್ಪವೂ ಬುದ್ಧಿ ಇಲ್ಲ. ಬಹಳ ಕೆಟ್ಟ ನಡವಳಿಕೆ ಇರುವ ಹೆಣ್ಣು ಈಕೆ,' ಎಂದು ಅಕ್ಷರಾ ಸಿಂಗ್ ರೇಗಾಡುತ್ತಾಳೆ. 

ಶೋ ಆರಂಭವಾದ ವಾರದಲ್ಲೇ ಶಮಿತಾ ಕಣ್ಣಿರಿಟ್ಟಿದ್ದಾರೆ. ಭಾವ ಜೈಲಿನಲ್ಲಿದ್ದಾರೆ, ಅಕ್ಕ ನೊಂದಿದ್ದಾರೆ ಈ ನಡುವೆ ಗಟ್ಟಿ ಮನಸ್ಸು ಮಾಡಿಕೊಂಡು ಸ್ಪರ್ಧಿಸಲು ಬಂದಿರುವೆ. ಅದರೆ ಜನರು ನನ್ನ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಕರಣ್ ಎದುರು ಭಾವುಕರಾಗಿದ್ದಾರೆ.

ಮಾಡಿದ್ದು ಒಂದೆರಡು ಸಿನಿಮಾ ಆದರೂ ಶಮಿತಾ ಶೆಟ್ಟಿ ಆಸ್ತಿ ಇಷ್ಟೊಂದು ಹೇಗೆ?

 ಶಮಿತಾ ಚಿತ್ರರಂಗಕ್ಕೆ ಪ್ರವೇಶಿಸುವ ಸಮಯದಲ್ಲಿ ಆಕೆಯನ್ನು ಪ್ರತಿ ಹಂತದಲ್ಲೂ ಅಕ್ಕ ಶಿಲ್ಪಾ ಜೊತೆ ಹೋಲಿಕೆ ಮಾಡಿ  ನೋಡುತ್ತಿದ್ದರು. ಹೀಗಾಗಿ ತನ್ನನ್ನು ಪ್ರತ್ಯೇಕವಾಗಿ ಯಾರೂ ಗುರುತಿಸಲಿಲ್ಲ, ಎಂದು ಬೇಸರ ಮಾಡಿಕೊಂಡರು. 'ಈ ಬಿಗ್ ಬಾಸ್ ಶೋ ಮೂಲಕ ಜನರು ನಿನ್ನನ್ನು ಇನ್ನೂ ಹೆಚ್ಚು ಅರಿತುಕೊಳ್ಳುತ್ತಾರೆ,' ಎಂದು ಕರಣ್ ಭರವಸೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಮರಿಡುಮ್ಮ ಅಂದ್ರೆ ಸುಮ್ನೇನಾ? ಅಪ್ಪನ ಬಾಯಿಂದ್ಲೇ ಸತ್ಯ ಹೇಗೆ ಹೊರತರಿಸಿದ ನೋಡಿ!
Pregnancy in Serials : ಮದ್ವೆಗೂ ಮುನ್ನವೇ ಗರ್ಭಿಣಿಯಾದ ಕನ್ನಡ ಸೀರಿಯಲ್​ ನಾಯಕಿಯರು ಇವ್ರು! ಛೇ ಯಾಕೆ ಹೀಗೆ?