ಅಬ್ಬಬ್ಬಾ! ಒಂದಲ್ಲ, ಎರಡು ಐಷಾರಾಮಿ ಕಾರು ಖರೀದಿಸಿದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ

By Suvarna News  |  First Published Aug 19, 2021, 12:33 PM IST

ಎರಡು ಐಷಾರಾಮಿ ಕಾರಿನ ಒಡತಿಯಾದ ಅನು ಸಿರಿಮನೆ. ಮೇಡಂ ಇಷ್ಟೊಂದು ಹಣ ಇಷ್ಟು ದಿನ ಎಲ್ಲಿತ್ತು? ಎಂದು ಕಾಲೆಳೆದ ನೆಟ್ಟಿಗರು.  


'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾದ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ, ಇದ್ದಕ್ಕಿದ್ದಂತೆ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿರುವ ವಿಚಾರ ಇಡೀ ಇಂಡಸ್ಟ್ರಿಗೆ ಶಾಕ್ ತಂದಿದೆ.  ಎರಡು ಕಾರುಗಳ ಫೋಟೋವನ್ನು ಸ್ವತಃ ಮೇಘನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ನೀಲಿ ಬಣ್ಣದ ಬಿಎಂಬ್ಲ್ಯೂ ಹಾಗೂ ಕಪ್ಪು ಬಣ್ಣದ ಎಂಜಿ ಹೆಕ್ಟರ್ ಕಾರುಗಳನ್ನು ಖರೀದಿಸಿದ್ದಾರೆ. 'Welcome home' ಎಂದು ಬರೆದುಕೊಳ್ಳುವ ಮೂಲಕ ಎರಡು ಕಾರುಗಳ ಫೋಟೋ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಐಷಾರಾಮಿ ಮನೆ ಗೃಹಪ್ರವೇಶ ಕೂಡ ಮಾಡಿದ್ದಾರೆ. ಅನು ಮನೆ ಹೇಗಿದೆ ಎಂದು ಸಣ್ಣ ಪುಟ್ಟ ಡ್ಯಾನ್ಸ್ ವಿಡಿಯೋಗಳಲ್ಲಿ ನೋಡಬಹುದು. ಮೇಘಾ ಜೊತೆ ಇಬ್ಬರು ಸಹೋದರಿಯರಿದ್ದಾರೆ, ಅವರಲ್ಲಿ ಒಬ್ಬ ತಂಗಿ ಸುಷ್ಮಾರನ್ನು ಒಂದು ಕಾರಿನ ಫೋಟೋಗೆ ಟ್ಯಾಗ್ ಮಾಡಿದ್ದಾರೆ. 

Tap to resize

Latest Videos

'ಜೊತೆ ಜೊತೆಯಲಿ' ಧಾರಾವಾಹಿ ಹೊರತು ಪಡಿಸಿ ಅನು ಚಂದನ್ ಶೆಟ್ಟಿ ಜೊತೆ ಒಂದು ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ ಜೊತೆ 'ಟ್ರಿಬಲ್ ರೈಡಿಂಗ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಬಣ್ಣದ ಲೋಕ ಹೊರತು ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಕಾರಣ ಅನೇಕ ಫೋಟೋಗ್ರಾಫರ್‌ ಹಾಗೂ ಬ್ರ್ಯಾಂಡ್‌ಗಳ ಜೊತೆ ಕೋಲಾಬರೇಷನ್ ಮಾಡಿಕೊಂಡಿದ್ದಾರೆ. ಎರಡನೇ ಲಾಕ್‌ಡೌನ್‌ ಸಮಯದಿಂದ ಮೇಘಾ ಕಿರಿಯ ಸಹೋದರಿ ಸುಷ್ಮಾ ಕೂಡ ರೀಲ್ಸ್‌ ವಿಡಿಯೋಗಳನ್ನು ಮಾಡುತ್ತಾ, ಕೆಲವೊಂದು ಬ್ರ್ಯಾಂಡ್‌ಗಳ ಜೊತೆ ಕೋಲಾಬರೋಟ್ ಮಾಡಿಕೊಂಡಿದ್ದಾರೆ. 

ಸೀರಿಯಲ್ ಮುಗಿಯೋ ತನಕ ನಾನೇ ಅನು ಸಿರಿಮನೆ ಎಂದ ಮೇಘ: ಗೊಂದಲಕ್ಕೆ ತೆರೆ

ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಮತ್ತು ಆರ್ಯವರ್ಧನ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ. ಐಷಾರಾಮಿ ರೆಸಾರ್ಟ್‌ನಲ್ಲಿ ಮಗಳ ಮದುವೆ ನಡೆಯುತ್ತಿದೆ ಎನ್ನುವ ಸಂಭ್ರಮದಲ್ಲಿ ಕಮಲಮ್ಮನ ಇಡೀ ವಠಾರದ ಜನರಿಗಿದ್ದರೆ, ಮಗಳು ಇನ್ನು ಮುಂದೆ ಗಂಡನ ಮನೆಯಲ್ಲಿ ಇರುತ್ತಾಳೆ, ನೋಡಬೇಕು ಅಂದ್ರೆ ಪದೆ ಪದೇ ಅಲ್ಲಿಗೆ ಹೋಗಬೇಕು ಎನ್ನುವ ಸಂಕಟದಲ್ಲಿ ಸುಬ್ರಮಣ್ಯ ಸಿರಿಮನೆಗೆ. ಇಡೀ ಮದುವೆ ಪ್ಲಾನಿಂಗ್ ಜವಾಬ್ದಾರಿಯನ್ನು ಮೀರಾ ವಹಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅನು-ಆರ್ಯ ಒಂದಾಗಲು ಶುಭ ಮುಹೂರ್ತ ಕೂಡಿ ಬಂದಿದೆ.

click me!