
ಹಿಂದಿ ಕಿರುತೆರೆ ವಾಹಿನಿಯ ಜನಪ್ರಿಯ ಸಂಗೀತ ಕಾರ್ಯಕ್ರಮ ಸೀಸನ್ 12ರ ವಿನ್ನರ್ ಪವನ್ ದೀಪ್ ರಾಜನ್. ಮೂಲತಃ ಉತ್ತರಾಖಾಂಡ್‌ನವರಾಗಿರುವ ಪವನ್ ದೀಪ್ ತಮ್ಮ ಧ್ವನಿಯಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ವಿನ್ನರ್ ಟ್ರೋಫಿ ಜೊತೆಗೆ 25 ಲಕ್ಷ ರೂ. ಪಡೆದುಕೊಂಡಿದ್ದಾರೆ.
ಪವನ್ ದೀಪ್ ಜೊತೆ ಅರುಣಿತಾ ಕಂಜಿಲಾಲ್, ಎಂ.ಡಿ ಧನಿಶ್, ನಿಹಾಲ್ ಟುರೊ, ಶಣ್ಮುಖ ಪ್ರಿಯಾ, ಸೈಲ್ ಕಾಂಬ್ಳೆ ಅವರು ಫಿನಾಲೆ ವೇದಿಕೆ ಏರಿದ್ದರು. ಎರಡನೇ ಸ್ಥಾನ ಅರುಣಿತಾ ಹಾಗೂ ಮೂರನೇ ಸ್ಥಾನ ಸೈಲ್ ಕಾಂಬ್ಳೆ ಇದ್ದು 5 ಲಕ್ಷ ರೂ. ಪಡೆದುಕೊಂಡರು. ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಧನಿಶ್ ಹಾಗೂ ನಿಹಾಲ್ ಇದ್ದು ಇಬ್ಬರೂ 3 ಲಕ್ಷ ರೂ. ಪಡೆದುಕೊಂಡರು.
ಸ್ವಾತಂತ್ರ್ಯ ದಿನಾಚರಣೆ ದಿನದಂದು ಮಧ್ಯಾಹ್ನ 12 ಗಂಟೆಗೆ ಆರಂಭವಾದ ಕಾರ್ಯಕ್ರಮ ಮಧ್ಯರಾತ್ರಿವರೆಗೂ ನಡೆಯಿತು. ವಾಹಿನಿಯ ಅಫೀಷಿಯಲ್ ಟ್ಟಿಟರ್ ಖಾತೆಗಳಿಂದ ವಿಜೇತರಿಗೆ ಶುಭಾಶಯಗಳನ್ನು ತಿಳಿಸಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆರಂಭವಾದ ಕಾರ್ಯಕ್ರಮ ಕೊರೋನಾ ಕಾಟದಿಂದ ಶುರುವಾಗಿ, ಮಧ್ಯೆ ನಿಂತು, ಮತ್ತೆ ಶುರುವಾಗಿ 9 ತಿಂಗಳ ಕಾಲ ನಡೆಯಿತು. ಫಿನಾಲೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಿಯಾರ ಹಾಗೂ ನಟ ಸಿದ್ಧಾರ್ಥ್ ಮಲೋತ್ರಾ ಭಾಗಿಯಾಗಿದ್ದರು.
'ಇಂಡಿಯನ್ ಐಡಲ್‌ನಲ್ಲಿ ಭಾಗವಹಿಸಿದ್ದ ಕನಸು ನನಸಾದಂಥ ಅನುಭವ. ಫಿನಾಲೆವರೆಗೂ ಬಂದಿದ್ದು ಇನ್ನೂ ಅದ್ಭುತ ಅನುಭವ. ಶೋನ ವಿಜೇತ ನಾನಾಗಿದ್ದೇನೆ ಎಂಬುದನ್ನು ಇನ್ನೂ ನನಗೆ ನಂಬಲಾಗುತ್ತಿಲ್ಲ. ನನಗಿದು ದೊಡ್ಡ ಗೌರವ. ನನಗೆ ಮತ ಹಾಕಿ, ಗೆಲ್ಲುವಂತೆ ಮಾಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು. ವಿಶೇಷವಾಗಿ ಇಂಡಿಯನ್ ಐಡಲ್‌ನ ಎಲ್ಲ ಸಂಗೀತಗಾರರಿಗೆ, ನಮ್ಮ ಕೋಚ್‌ಗಳಿಗೆ ಈ ಟ್ರೋಫಿ ಸೇರಿದ್ದು,' ಎಂದು ಪ್ರಶಸ್ತಿ ಗೆದ್ದ ಪವನ್‌ದೀಪ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.