ಬಿಗ್ಬಾಸ್ನಲ್ಲಿ ಅವಕಾಶಕ್ಕಾಗಿ ಕಾದು ಕುಳಿತಿದ್ದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮನಿಷಾ ರಾಣಿ ತಾವು ಅನುಭವಿಸಿದ ಕಾಸ್ಟಿಂಗ್ ಕೌಚ್ ಕುರಿತು ಹೇಳಿದ್ದೇನು?
ಬಿಗ್ಬಾಸ್ ಮೂಲಕ ಭಾರಿ ಖ್ಯಾತಿ ಪಡೆದಿರುವ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮನಿಷಾ ರಾಣಿ, ಬಿಗ್ ಬಾಸ್ನಿಂದಾಗಲೇ ತಾವು ಅನುಭವಿಸಿದ ಕರಾಳ ದಿನಗಳನ್ನು ಇದೀಗ ರಿವೀಲ್ ಮಾಡಿದ್ದಾರೆ. ಹಿಂದಿಯ ಬಿಗ್ ಬಾಸ್ ಓಟಿಟಿ 2 ಸೀಸನ್ ಮೂಲಕ ಮನೆಮಾತಾಗಿರುವ ಮನಿಷಾ ಅವರು, ಝಲಕ್ ದಿಖ್ಲಾ ಜಾ 11ರ ವಿಜೇತರು ಕೂಡ. ಇದಾಗಲೇ ಹಲವಾರು ವಿಷಯಗಳಿಂದ ಮನೆಮಾತಾಗಿರುವ ಇವರು, ಇದೀಗ ಸಂದರ್ಶನವೊಂದನ್ನು ನೀಡಿದ್ದು ಸಂಚಲನ ಮೂಡಿಸುವ ಹೇಳಿಕೆಗಳನ್ನು ನೀಡಿದ್ದಾರೆ.
ಅಷ್ಟಕ್ಕೂ ಇವರು ಬಿಗ್ಬಾಸ್ ಮನೆಗೆ ಹೋಗುವುದಕ್ಕಾಗಿ ತಾವು ಅನುಭವಿಸಿದ ಹಿಂಸೆಯ ಕುರಿತು ಮಾತನಾಡಿದ್ದಾರೆ. ನನ್ನ ಇದುವರೆಗಿನ ಪಯಣ ಅಷ್ಟೇನೂ ಸುಲಭವಲ್ಲ. ಬಿಗ್ ಬಾಸ್ ಪ್ರವೇಶಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಬಿಗ್ ಬಾಸ್ ನೆಪದಲ್ಲಿ ವ್ಯಕ್ತಿಯೊಬ್ಬ ನನ್ನನ್ನು ದಾರಿತಪ್ಪಿಸಲು ಪ್ರಯತ್ನಿಸಿ ಮಧ್ಯರಾತ್ರಿ ಮೂರು ಗಂಟೆಗೆ ಮನೆಗೆ ಕರೆದ ಎಂದು ಮನಿಷಾ ಹೇಳಿದ್ದಾರೆ.
ತಾಯಿಯಿಂದ ಕಿಡ್ನಿ ದಾನ, ಬೇರೆಯವರಿಗೆ ಕೊಟ್ಟರು ದೃಷ್ಟಿದಾನ: ಇದು ರಾಣಾ ದುಗ್ಗುಬಾಟಿ ಸೀಕ್ರೇಟ್!
ಅಂದಹಾಗೆ ಬಿಗ್ಬಾಸ್ನಲ್ಲಿ ಭಾಗವಹಿಸಲು ಬಹಳ ಉತ್ಸುಕರಾಗಿದ್ದರು ಮನಿಷಾ. ಈ ಸಂದರ್ಭದಲ್ಲಿ ಪರಿಚಯ ಆದ ವ್ಯಕ್ತಿಯೊಬ್ಬ ತಾನು ಬಿಗ್ಬಾಸ್ ಕಡೆಯವ ಎಂದು ಹೇಳಿ ನಡುರಾತ್ರಿ ಕರೆದಿದ್ದ ಎನ್ನುವುದ ನಟಿಯ ಮಾತು. 'ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಬಗ್ಗೆ ಅಪಾರವಾದ ಭರವಸೆ ನೀಡಿದ್ದ ಆತ. ನಾನು 4-5 ದಿನಗಳ ಕಾಲ ಬಿಹಾರದಲ್ಲಿರುವ ನಮ್ಮ ಮನೆಗೆ ಹೋಗಿದ್ದಾಗ, ಆ ವ್ಯಕ್ತಿ ನನಗೆ ಕರೆ ಮಾಡಿದ್ದ. ನೀನು ಬಿಗ್ಬಾಸ್ಗಾಗಿ ಅಲ್ಲಿ ಇಲ್ಲಿ ಓಡಾಟ ಮಾಡಬೇಡ. ಸುಮ್ಮನೇ ಮನೆಗೆ ಹೋಗು. ನಾನು ಮುಂಬೈಗೆ ಸ್ಪೆಷಲ್ ಟಿಕೆಟ್ ಬುಕ್ ಮಾಡಿಕೊಡುತ್ತೇನೆ. ನಾನು ಹೇಳಿದಲ್ಲಿಗೆ ಬಾ. ನಿನಗೆ ಬಿಗ್ಬಾಸ್ನಲ್ಲಿ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದ. ಆ ಮಾತನ್ನು ನಾನು ನಂಬಿದ್ದೆ ಎಂದಿದ್ದಾರೆ ಮನಿಷಾ.
ಕೊನೆಗೆ ಸಂದೇಹ ಬಂದು ಮನಿಷಾ ಆ ವ್ಯಕ್ತಿ ಮನೆಗೆ ಹೋಗಲು ನಿರಾಕರಿಸಿದ ನಂತರ, ಆಕೆಯನ್ನು ಆತ ಅಸಭ್ಯವಾಗಿ ಮಾತಾಡಿ ರೇಗಾಡಿದ್ದಾನೆ. ಇದರಿಂದ ಮನಿಶಾ ರಾಣಿ ನೊಂದಿದ್ದರಂತೆ. ನಂತರ ಆ ವ್ಯಕ್ತಿ ನಂಬರ್ ಅನ್ನು ಮನಿಶಾ ಬ್ಲಾಕ್ ಮಾಡಿದ್ದರಂತೆ. ಆಮೇಲೆ ಈ ವ್ಯಕ್ತಿಯಿಂದ ಯಾವುದೇ ಕೆಲಸವಾಗುವುದಿಲ್ಲ ಎಂದು ಅರಿತುಕೊಂಡೆ. ಯಾರು ಯಾರಿಗೂ ಸಹಾಯ ಮಾಡುವುದಿಲ್ಲ. ನಮ್ಮ ಪ್ರತಿಭೆಯೇ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ತಿಳಿದುಕೊಂಡೆ. ಆತ ಬಿಗ್ಬಾಸ್ನಲ್ಲಿ ಅವಕಾಶ ಕೊಡುತ್ತಾನೆ ಎಂದು ನನ್ನ ಕೆಲವು ಡ್ಯಾನ್ಸ್ ವಿಡಿಯೋಗಳನ್ನೂ ಕಳುಹಿಸಿಬಿಟ್ಟಿದ್ದೆ. ಆಮೇಲೆ ಗೊತ್ತಾಯ್ತು ತಪ್ಪಾಯಿತು ಎಂದು ಎಂದಿದ್ದಾರೆ. ನಂತರ ಆತ ತಮಗೆ ಬೆದರಿಕ ಹಾಕಿದ ಎಂದು ಅವರು ಹೇಳಿದ್ದಾರೆ.
ನೀನು ನನ್ನ ಮನೆಗೆ ಬರಲು ನಿರಾಕರಿಸುತ್ತೀಯಾ? ನಾನು ಈ ಉದ್ಯಮದಲ್ಲಿ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಆಗ ನಾನು ಅವರ ನಂಬರ್ ಬ್ಲಾಕ್ ಮಾಡಿದೆ ಎಂದು ಮನೀಶಾ ತನ್ನ ಅಳಲು ತೋಡಿಕೊಂಡಿದ್ದಾರೆ. ನಾನು ಅಪರಿಚಿತರ ಸಲಹೆಯನ್ನು ನಂಬಿಡೆ ಮತ್ತು ಈ ಬಗ್ಗೆ ನಾನು ನನ್ನ ಕುಟುಂಬಕ್ಕೆ ಏನನ್ನೂ ಹೇಳಲಿಲ್ಲ ಎಂಬುದಕ್ಕೆ ವಿಷಾಧಿಸುತ್ತೇನೆ ಎಂದು ಮನಿಶಾ ಹೇಳಿದ್ದಾರೆ. ನಾನು ತುಂಬಾ ಮುಗ್ಧೆ ಮತ್ತು ಎಲ್ಲರ ಮಾತುಗಳಿಂದ ಪ್ರಭಾವಿತಳಾಗುತ್ತೇನೆ ಎಂದಿದ್ದಾರೆ ಮನಿಷಾ.
ಕೆಲ್ಸ ಕೇಳ್ಕೊಂಡು ಹೋದ ಭಾಗ್ಯಂಗೆ ನಿರಾಸೆ: ಡೈರೆಕ್ಟರ್ಗೂ ಮೊದಲೇ ನೆಟ್ಟಿಗರೇ ನೀಡ್ತಿದ್ದಾರೆ ಭರ್ಜರಿ ಸಲಹೆ!