ಡ್ರೋನ್ ಪ್ರತಾಪ್ ಅಭಿಮಾನಿಗಳಿಗೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ವಿನ್ನರ್ ಒಳ್ಳೆ ಹುಡುಗ ಪ್ರಥಮ್!

Published : Jan 27, 2024, 07:03 PM IST
ಡ್ರೋನ್ ಪ್ರತಾಪ್ ಅಭಿಮಾನಿಗಳಿಗೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ವಿನ್ನರ್ ಒಳ್ಳೆ ಹುಡುಗ ಪ್ರಥಮ್!

ಸಾರಾಂಶ

ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಗಳಾದ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಅವರ ಅಭಿಮಾನಿಗಳಿಗೆ ಮಾಜಿ ವಿನ್ನರ್ ಪ್ರಥಮ್ ಅವರು ಬಾಯಿಗೆ ಬಂದಂತೆ ಬೈದಿದ್ದಾರೆ.

ಬೆಂಗಳೂರು (ಜ.27): ಬಿಗ್‌ಬಾಸ್‌ ಸೀಸನ್ 10ರ ಎಲ್ಲ ಕಂಟೆಸ್ಟಂಟ್‌ಗಳ ಮೇಲೆ ತೀರಾ ಕೋಪ ಬಂದಿದೆ. ನಮ್ಮ ಸೀಸನ್‌ನಲ್ಲಿ ಜನರು ನಮ್ಮ ಯೋಗ್ಯತೆಯನ್ನು ಆಧರಿಸಿ ನಮಗೆ ಓಟ್ ಮಾಡುತ್ತಿದ್ದರು. ಈ ಸೀಸನ್‌ನಲ್ಲಿ ಕಂಟೆಸ್ಟಂಟ್‌ಗಳು ಹಾಗೂ ಅಭಿಮಾನಿಗಳು ಫೇಕ್‌ ಪ್ರಮೋಷನ್‌ ಮಾಡುತ್ತಿದ್ದಾರೆ. ಅದರಲ್ಲಿಯೂ ಡ್ರೋನ್ ಪ್ರತಾಪ್ ಅವರ ಅಭಿಮಾನಿಗಳಿಗೆ ಬೋ....ಳು ಎಂದು ಬೈದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಸೀಸನ್‌ನಲ್ಲಿ ಜನರು ಎಲ್ಲ ಸ್ಪರ್ಧೆಗಳು ನಡೆದುಕೊಳ್ಳುತ್ತಿದ್ದ ಯೋಗ್ಯತೆಯನ್ನು ಅನುಸರಿಸಿ ಓಟ್‌ಗಳನ್ನು ಮಾಡುತ್ತಿದ್ದರು. ಆದರೆ, ಸೀಸನ್ 10ರ ಮೇಲೆ ತುಂಬಾ ಅಂದರೆ ತುಂಬಾ.. ಕೋಪ ಬಂದಿದೆ. ಬಿಗ್‌ಬಾಸ್‌ ಮೇಲಲ್ಲ. ಬಿಗ್‌ಬಾಸ್‌ ಮನೆಯಲ್ಲಿರುವ ಕಂಟೆಸ್ಟೆಂಟ್‌ಗಳು ಹಾಗೂ ಅದನ್ನು ಫೇಕ್‌ ಪ್ರಮೋಷನ್ ಮಾಡುವ ಅಭಿಮಾನಿಗಳ ಮೇಲೆ ಕೋಪ ಬಂದಿದೆ. ಈಗ ಕನ್ನಡಿಗರಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳುತ್ತೇನೆ. ಲೀಲಾವತಿ ಅವರು ಸಾಧಕಿ ಹೌದೋ ಅಲ್ಲವೋ ಹೇಳಿ ಕನ್ನಡಿಗರೇ ಎಂದು ಪ್ರಶ್ನೆ ಮಾಡಿದ್ದಾರೆ.

ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ, ಕೇಸ್ ಹಾಕ್ತೀನಿ: ಯುಟ್ಯೂಬರ್‌ ವಿರುದ್ಧ ತಿರುಗಿ ಬಿದ್ದ ತನಿಷಾ

ಲೀಲಾವತಿ ಅವರು ಸಾಧಕಿ ಹೌದು ಎಂದು ಒಪ್ಪಿಕೊಂಡು ಅವರು ಸತ್ತಾಗ ಸಾಮಾಜಿಕ ಜಾಲತಾಣದಲ್ಲಿ ನಾನು ಒಂದು ಪೋಸ್ಟ್‌ ಹಂಚಿಕೊಂಡಿದ್ದೆನು. ಅದ್ಭುತ ನಟಿಗೆ ಭಾವಪೂರ್ಣ ವಿದಾಯ. ನನ್ನ ಕೆರಿಯರ್‌ನಲ್ಲಿ ಯಾರದೋ ಸಿನಿಮಾದಲ್ಲಿ ನಿಮ್ಮ ಹತ್ತಿರ ಸೇರಿದ್ದೆ ಎಂದು ಪೋಸ್ಟ್‌ ಹಾಕಿದ್ದರೆ, ಈ ಬೋ.... ಮಕ್ಕಳು ಏನು ಕಮೆಂಟ್‌ ಮಾಡಿದ್ದಾರೆ ಗೊತ್ತಾ.? ಅವರು ಲೀಲಾವತಿಗೆ ಸಂತಾಪ ಅಂತ ಹಾಕಬೇಕು. ಆದರೆ, ಅದನ್ನು ಬಿಟ್ಟು 'ಗುರೂ ನೀನು ಇದನ್ನೆಲ್ಲ ಪಕ್ಕಕಿಡು ಗುರು.. ಡ್ರೋನ್‌ ಪ್ರತಾಪ್‌ ಮುಗ್ದ ಗುರು, ಬಡವರ ಮಗ ಗೆಲ್ಲಬೇಕು ಎಂದು ಕಮೆಂಟ್‌ ಮಾಡಿದ್ದಾರೆ. 

ಲೀಲಾವತಿ ಅವರ ಸಾವಿನ ನೋವನ್ನು ನಾನು ಅನುಭವಿಸಬೇಕು. ಆಯಮ್ಮ ಅಪ್ರತಿಮ ಸಾಧಕಿಯಾಗಿದ್ದಾರೆ. ಅವರು ಸಾಯುವ ಮುನ್ನ ನಮ್ಮ ಕನ್ನಡಿಗರಿಗಂತಲೇ ಒಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಬದುಕಿದರೆ ಹಂಗೆ ಬದುಕಬೇಕು. ಅವರ ಸಾಧನೆಯ ಒಂದು ಸಣ್ಣ ಕಾಲಿನ ಧೂಳಿಗೂ ನಾವು ಸಮವಾಗಿಲ್ಲ. ಆದರೆ, ಕಂಟೆಸ್ಟೆಂಟ್ ಅಭಿಮಾನಿಗಳು ಬಂದು ಈ ರೇಂಜಿಗೆ ಪ್ರಮೋಷನ್ ಮಾಡುವುದು ಒಳ್ಳೆಯದೇ ಎಂದು ಒಳ್ಳೆಯ ಹುಡುಗ ಪ್ರಥಮ್ ಅವರು ಕಿಡಿಕಾರಿದ್ದಾರೆ. 

ಮತ್ತೊಂದು ಕಡೆಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಗ್ಗೆ ಪೋಸ್ಟ್ ಹಂಚಿಕೊಂಡರೂ ಇಲ್ಲಿಗೂ ನಂದೆಲ್ಲಿ ಇಡಲಿ ಎಂದು ಬರುವ ಫೇಕ್‌ ಪ್ರಮೋಷನ್ ಅವರು ಅದನ್ನು ಪಕ್ಕಕ್ಕೆ ಇಡು ಗುರು 'ಒಂದು ಹೆಣ್ಣು ಗೆಲ್ಲಬೇಕು ಗುರು ಎಂದು ಹೇಳ್ತಾರೆ. ನಮ್ಮ ಪೋಸ್ಟ್‌ಗಳ ಮೇಲೆ ಇವರು ಬೇರೊಬ್ಬರ ಬಗ್ಗೆ ಫೇಕ್‌ ಪ್ರಮೋಷನ್ ಮಾಡುವುದಕ್ಕೆ ಯಾರು ಪರ್ಮಿಷನ್‌ ಕೊಟ್ಟಿದ್ದಾರೆ. ಎಲ್ಲವೂ ಇದೇ ಆದರೆ ನಾವು ಬದುಕೋದು ಹೇಗೆ ಹೇಳಿ. ಬಿಗ್‌ಬಾಸ್‌ ಮನೆಯಲ್ಲಿರುವವರು ಏನು ಕಾರ್ಗಿಲ್‌ ಯುದ್ಧ ಗೆಲ್ಲೋದಕ್ಕೆ ಹೋಗ್ತಾರಾ? ನಾವು ಅದನ್ನೇ ಆಡಿ ಬಂದಿದ್ದೀವಿ. ಇಂತಹ ಫೇಕ್‌ ಪ್ರಮೋಷನ್ ಎಲ್ಲ ಮಾಡೋದಕ್ಕೆ ಹೋಗಿಲ್ಲ.  ಇಂತಹ ಫೇಕ್‌ ಪ್ರಮೋಷನ್‌ ಮಾಡುವವರಿಗೆ ನಾನು ನೇರವಾಗಿ ಎಚ್ಚರಿಕೆ ಕೊಡ್ತಿದ್ದೇನೆ ಅದನ್ನು ನಿಲ್ಲಿಸಿ ಎಂದು ಪ್ರಥಮ್‌ ಹೇಳಿದ್ದಾರೆ.

ಸೋನು ಗೌಡ ನೋಡ್ತಿದ್ರೆ ಸನ್ನಿ ಲಿಯೋನ್‌ ನೋಡ್ದಂಗೆ ಆಗುತ್ತೆ; ನೆಟ್ಟಿಗರಿಂದ ಮೆಚ್ಚುಗೆ

ಮತ್ತೊಬ್ಬ ಹಿರಿಯ ನಟಿ ಹೇಮಾ ಚೌಧರಿ ಅವರು ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು ಅಂತ ಪೋಸ್ಟ್‌ ಹಂಚಿಕೊಂಡರೆ, ಇವನು ಮುಗ್ದ, ಬಡವರ ಮಗ ಗೆಲ್ಲಬೇಕು ಎಂದು ಕಮೆಂಟ್ ಮಾಡುತ್ತಾರೆ. ಎಂತೆಂಥವರೋ ಸಾಯುತ್ತಾರೆ, ಇಂತಹ ಫೇಕ್‌ ಪ್ರಮೋಷನ್‌ನವರಿಗೆ ಸಾವು ಬರ್ತಿಲ್ಲ. ಯೋ.. ಅದೊಂದು ಆಟ ಕಣಯ್ಯ. ಗೆಲ್ಲಿಸುವ ಭರದಲ್ಲಿ ಇಂತಹ ಫೇಕ್‌ ಪ್ರಮೋಷನ್ ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?