ಭಾಗ್ಯಳಿಗೆ ಹೇಳಲಾಗ್ತಿಲ್ಲ, ಲಕ್ಷ್ಮಿಗೆ ಹೇಳಿಕೊಳ್ಳದೇ ಬಿಡಲಾಗ್ತಿಲ್ಲ! ಇಲ್ಲಿ ಬೆಂಕಿ, ಅಲ್ಲಿ ತಂಗಾಳಿ... ಇದೆಂಥ ವೈರುಧ್ಯ?

By Suvarna News  |  First Published Jan 27, 2024, 2:37 PM IST

ಒಂದೆಡೆ ಭಾಗ್ಯಳ ಬಾಳಲ್ಲಿ ಬಿರುಗಾಳಿ,  ಇನ್ನೊಂದೆಡೆ ಲಕ್ಷ್ಮಿಯ ಬಾಳಲ್ಲಿ ತಂಗಾಳಿ... ಇಬ್ಬರು ಮಹಿಳೆಯರ ಬದುಕಿನಲ್ಲಿ ಆಗ್ತಿರೋದೇನು? 
 


 ಆಗಿರಲಿ ಗೆಲ್ಲುವುದು ನಾನೇ ಎಂದ ಭಾಗ್ಯಲಕ್ಷ್ಮಿ ತಾಂಡವ್​, ಕೊನೆಗೂ ಪತ್ನಿ ಭಾಗ್ಯಳ ಎದುರು ಗಾಳಿಪಟ ಸ್ಪರ್ಧೆಯಲ್ಲಿ ಸೋತಿದ್ದಾನೆ.  ನಾನು ಸೋಲುವ ಚಾನ್ಸೇ ಇಲ್ಲ ಎಂದಿದ್ದ ತಾಂಡವ್​.  ಒಂದು ವೇಳೆ ಸೋತರೆ ಏನು ಎಂದು ಅಮ್ಮ ಕುಸುಮಾ ಕೇಳಿದ್ದಾಗ , ಹಾಗೊಂದು ವೇಳೆ ಸೋತರೆ ನೀನು ಆಯ್ಕೆ ಮಾಡಿರುವ ಈ ಸೊಸೆ ಭಾಗ್ಯಳನ್ನೇ ಸರ್ವಶ್ರೇಷ್ಠ ಎಂದು ಒಪ್ಪಿಕೊಂಡು ಕಾಲು ಹಿಡಿದುಕೊಳ್ತೇನೆ ಎಂದಿದ್ದ.  ಅದು ಹಾಗೆಯೇ ಆಗಿದೆ. ಭಾಗ್ಯಳ ಎದುರು ತಾಂಡವ್​ ಸೋತ. ತನ್ನ ಮಾತಿನಂತೆ ಅಮ್ಮನ ಕಾಲನ್ನೇನೋ ಹಿಡಿದುಕೊಂಡ. ನೀನು ಆಯ್ಕೆ ಮಾಡಿದ್ದ ಈ ಭಾಗ್ಯಳೇ ಸರ್ವಶ್ರೇಷ್ಠ ಎಂದೂ ಒಪ್ಪಿಕೊಂಡ. ಇನ್ನೇನು ಎಲ್ಲವೂ ಸರಿಯಾಗಬಹುದು ಎಂದುಕೊಂಡಾಗಲೇ ತಾಂಡವ್​ ನಿನ್ನ ಈ ಸರ್ವಶ್ರೇಷ್ಠ ಸೊಸೆಯ ಜೊತೆ ನೀನು ಬಾಳು. ನನಗೆ ಅವಳು ಬೇಡ ಎಂದು ಅಮ್ಮನಿಗೆ ಬಾಯಿಗೆ ಬಂದ ಹಾಗೆ ಹೇಳಿದ. ಕುಸುಮಾ ಕಣ್ಣೀರಲ್ಲಿ ಕೈತೊಳೆದಳು.

ಇಲ್ಲಿಯವರೆಗೆ ಸುಮ್ಮನಿದ್ದ ಕುಸುಮಾ, ಇದೀಗ ಗಂಡನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ನೀವು ಮಾತನಾಡಿದ್ದು ಆಯ್ತು, ಇನ್ನು ಏನಿದ್ದರೂ ನನ್ನ ಮಾತು ಎಂದು ಗಂಡನಿಗೆ ಸವಾಲು ಹಾಕಿದ್ದಾಳೆ. ನಾನು ಹೇಳುವ ಮಾತು ಕೇಳಿಸಿಕೊಳ್ಳಲು ತಯಾರಿದ್ದೀರಾ ಎಂದಿದ್ದಾಳೆ. ಸೊಸೆಯಲ್ಲಿ ಆಗಿರುವ ಈ ಬದಲಾವಣೆ ಕಂಡು ಅತ್ತೆ ಕುಸುಮಾಗೆ ಖುಷಿಯೂ ಆಗಿದೆ, ಜೊತೆಗೆ ಆಶ್ಚರ್ಯವೂ ಆಗಿದೆ. ಶಾಕ್​ನಲ್ಲಿ ತಾಂಡವ್​ ಇದ್ದಾನೆ. ನಾರಿ ಮುನಿದರೆ ಮಾರಿ ಎನ್ನುವಂತೆ ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡು, ಏನೇ ತಪ್ಪು ಮಾಡಿದರೂ ಗಂಡನೇ ಸರ್ವಸ್ವ ಎಂದಿದ್ದ ಭಾಗ್ಯ ಏನು ಹೇಳುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ. ಇದರ ಪ್ರೊಮೋ ಬಿಡುಗಡೆಯಾಗಿದೆ.

Tap to resize

Latest Videos

ಬ್ಲೌಸ್​ ಇಲ್ಲದ ಸೀರೆಗಳ ತೊಟ್ಟು ಜಾಹ್ನವಿ ವಿಡಿಯೋ ಶೂಟ್​: ಹಾಟ್​ನೆಸ್​ಗೆ ಫ್ಯಾನ್ಸ್ ಫಿದಾ!

ಇದರ ಬೆನ್ನಲ್ಲೇ ಸಂಸಾರದ ನೊಗವನ್ನು ಹೊರುವ ಜವಾಬ್ದಾರಿಯನ್ನು ಭಾಗ್ಯ ಹೊತ್ತಿದ್ದಾಳೆ. ಬ್ಯಾಗ್​ ಹಾಕಿಕೊಂಡು ಹೋಗಿರೋ ಇನ್ನೊಂದು ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದು ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆಯಾದರೆ, ಅದೇ ಇನ್ನೊಂದೆಡೆ ಲಕ್ಷ್ಮಿ ಬಾರಮ್ಮ. ಇದರಲ್ಲಿ ಲಕ್ಷ್ಮಿ ಮತ್ತು ಪತಿಯ ನಡುವೆ ಪ್ರೀತಿ ಚಿಗುರುತ್ತಿದೆ. ಇದನ್ನು ಭಾಗ್ಯಳಿಗೆ ಹೇಳಿಕೊಳ್ಳುವ ತವಕ ಲಕ್ಷ್ಮಿಗೆ. ಅತ್ತ ಭಾಗ್ಯ ನನ್ನ ಜೀವನದಲ್ಲಿ ನಡೆಯುತ್ತಿರುವುದನ್ನು ಯಾರಿಗೂ ಹೇಳಲು ಆಗ್ತಿಲ್ಲ ಎನ್ನುತ್ತಿರುವಾಗಲೇ ಇತ್ತ ಲಕ್ಷ್ಮಿ ನನಗೆ ಹೇಳಿಕೊಳ್ಳದೇ ಇರಲು ಆಗ್ತಿಲ್ಲ ಎಂದಿದ್ದಾಳೆ. 

ಹಾಗಿದ್ದರೆ ಈ ಇಬ್ಬರ ನಡುವೆ ಏನಾಗುತ್ತದೆ? ಭಾಗ್ಯ ಸಂಸಾರದ ನೊಗವನ್ನು ಹೊರುತ್ತಾಳೆಯೆ? ಈ ಹಿಂದೆ ಹೊಲಿಗೆ ಮಾಡಿ ಸಂಪಾದನೆ ಮಾಡುತ್ತೇನೆ ಎಂದಿದ್ದಾಗ ಅದಕ್ಕೆ ಕುಸುಮಾ ಒಪ್ಪಿರಲಿಲ್ಲ. ನಾನೇ ಸಂಸಾರ ನೋಡಿಕೊಳ್ಳುತ್ತೇನೆ ಎಂದಿದ್ದಳು. ಈಗ ಏನಾಗುತ್ತದೆ? ಇನ್ನೊಂದೆಡೆ ಲಕ್ಷ್ಮಿಯ ಬಾಳಲ್ಲಿ ನಿಜವೂ ಪ್ರೀತಿ ಚಿಗುರಿದೆಯಾ ಎನ್ನುವುದನ್ನು ನೋಡಬೇಕಿದೆ. 

50 ಲಕ್ಷ ಕ್ಯಾಷ್​, ಐಷಾರಾಮಿ ಕಾರು- ಸ್ಕೂಟರ್​​ ಪಡೆವವರಾರು? ಬಿಗ್​ಬಾಸ್​ ಫಿನಾಲೆ ಭರ್ಜರಿ ಝಲಕ್ ಇಲ್ಲಿದೆ...


click me!