ನೆಟ್ಟಿಗರ ಗಮನ ಸೆಳೆದ ಗೃಹಿಣಿ ಬಿಗ್ ಬಾಸ್‌ ನಿವೇದಿತಾ ಗೌಡ ಪೋಟೋ!

By Suvarna News  |  First Published Jul 23, 2020, 2:06 PM IST

ಅಬ್ಬಾ, ಸದಾ ಕೈಗೆ ನೇಲ್ ಪಾಲೀಶ್, ತುಟಿಗೆ ಲಿಪ್‌ಸ್ಟಿಕ್ ಇಲ್ಲದೇ ಇರೋಕೇ ಆಗೋಲ್ಲ ಎನ್ನುತ್ತಿದ್ದ ಹುಡುಗಿ ನಿವೇದಿತಾ ಗೌಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಆಕೆ ಪಕ್ಕಾ ಹೌಸ್‌ ವೈಫ್‌ ರೀತಿಯಲ್ಲಿ ಕಾಣಿಸಿಕೊಂಡಿರುವುದು. ನೀವೇ ನೋಡಿ ಹೇಗಿದೆ ಫೋಟೋ ಅಂತ...


ಕಿರುತೆರೆ ಬಾರ್ಬಿ ಡಾಲ್‌ ನಿವೇದಿತಾ ಗೌಡ-ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಜೀವನದ ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲೂ ತಮ್ಮ ಸಾಕು ನಾಯಿಗೂ ಇನ್‌ಸ್ಟಾಗ್ರಾಂ ಪೇಜ್‌ ಓಪನ್ ಮಾಡಿದೆ ಈ ಜೋಡಿ.

ನಿವೇದಿತಾ ನ್ಯೂ ಲುಕ್:
ನಿವೇದಿತಾ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ತಮ್ಮ ಮೊದಲ ಭೀಮನ ಅಮಾವಾಸ್ಯೆ ಆಚರಿಸಿದ್ದಾರೆ. ಮನೆಯಲ್ಲಿ ಸರಳವಾಗಿ ಆಚರಿಸಿದ್ದು, ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಹಸಿರು ಬಣ್ಣದ ಸೆಲ್ವಾರ್‌ ಮತ್ತು ನೀಲಿ ಬಣ್ಣದ ಸೀರೆಯಲ್ಲಿ ಗೊಂಬೆ ಕಂಗೊಳ್ಳಿಸುತ್ತಿದ್ದಾರೆ. ಫೋಟೋಗಳಿಗೆ ಯಾವುದೇ ಕ್ಯಾಪ್ಶನ್‌ ಬರೆದಿಲ್ಲ.  ಆದರೆ ಸದಾ ಮಾಡ್ರನ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ, ನಿವೇದಿತಾ ಮಾಂಗಲ್ಯ ಸೂತ್ರ ಧರಿಸಿ ಎಲ್ಲರ ಕಣ್ಸೆಳೆದಿದ್ದಾರೆ. 

Tap to resize

Latest Videos

 

 
 
 
 
 
 
 
 
 
 
 
 
 

PC : @chandanshettyofficial 💙 @commonsensefashions 💙

A post shared by Niveditha Gowda 👑 (@niveditha__gowda) on Jul 22, 2020 at 3:33am PDT

'ಪಕ್ಕಾ ಹೌಸ್‌ವೈಫ್‌ ತರ ಕಾಣಿಸುತ್ತಿದ್ದೀರಾ', 'ಸ್ವಲ್ಪ ಹಣೆ ಬೊಟ್ಟು ಇಟ್ಟರೆ ಲಕ್ಷಣವಾಗಿ ಕಾಣುತ್ತದೆ' ಎಂದು ನೆಟ್ಟಿಗರು ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 

@chandanshettyofficial 💚🖤💚

A post shared by Niveditha Gowda 👑 (@niveditha__gowda) on Jul 20, 2020 at 3:57am PDT

ಫೆಬ್ರವರಿ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನ್- ನಿವೇದಿತಾ ಮಾರ್ಚ್‌ 1ರಂದು  ಹನಿಮೂನ್‌ಗೆಂದು ವಿದೇಶಕ್ಕೆ ಪ್ರಯಾಣಿಸಿದ್ದರು. ಮಹಾಮಾರಿ ಕೊರೋನಾ ವೈರಸ್ ಕಾಟದಿಂದ ಟ್ರಿಪ್ ಅರ್ಧಕ್ಕೇ ಬಿಟ್ಟು ಭಾರತಕ್ಕೆ ಮರಳಿದರು. ವಿದೇಶದಿಂದ ಹಾರಿ ಬಂದ ಕಾರಣ ಅವರು ಕ್ವಾರಂಟೈನ್ ಆಗಬೇಕೆಂಬ ಕೂಗು ಕೇಳಿ ಬಂದಿತ್ತು. ಅಲ್ಲದೇ ಅವರಿಗೆ ವೈರಸ್ ಅಂಟಿದೆ ಎಂಬ ಸುದ್ದಿಯೂ ಹರಿದಾಡಿತ್ತು. ನಿಧಾನಕ್ಕೆ ಎಲ್ಲವಕ್ಕೂ ಸ್ಪಷ್ಟನೆ ನೀಡಿದ್ದರು, ನಿವೇದಿತಾ ತಾಯಿ. ಇದಾದ ನಂತರ ಚಂದನ್‌ ಸಂಯೋಜಿಸಿದ ಕೊರೋನಾ ಸಾಂಗ್‌ಗೆ ಇಬ್ಬರೂ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿತ್ತು.

click me!