ತಿನ್ನೋದು ಕನ್ನಡ ಅನ್ನ, ಇಷ್ಟಪಡೋದು ಇಂಗ್ಲಿಷ್​ ಹಾಡಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್​

By Suvarna NewsFirst Published Dec 10, 2023, 1:17 PM IST
Highlights

ನಿವೇದಿತಾ ಗೌಡ ಬಗೆಬಗೆ ಡ್ರೆಸ್​ ಧರಿಸಿ, ಇಂಗ್ಲಿಷ್​ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿ ಕೆಲವು ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ.
 

ಇತ್ತೀಚಿಗೆ ಹೆಚ್ಚಿನ  ಹುಡುಗಿಯರು ಫ್ಯಾಷನ್​ ಹೆಸರಿನಲ್ಲಿ ಹೆಚ್ಚಾಗಿ ಷಾರ್ಟ್ಸ್​, ಮಿನಿ ಸ್ಕರ್ಟ್​ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲಿಯೂ ಸಿನಿಮಾ ತಾರೆಯರನ್ನು ನೋಡಿ ಧಾರಾಳ ದೇಹ ಪ್ರದರ್ಶನ ಮಾಡುವುದು ಎಂದರೂ ಹಲವರಿಗೆ ಇನ್ನಿಲ್ಲದ ಖುಷಿ. ಈ ರೀತಿಯ ಬಟ್ಟೆ ಧರಿಸಿದರೆ ತಾವೂ ಸೆಲೆಬ್ರಿಟಿ ಎನಿಸುತ್ತದೆಯೋ ಏನೋ, ಒಟ್ಟಿನಲ್ಲಿ ಬಟ್ಟೆಯ ವಿಷಯದಲ್ಲಿ ಹಲವು ಹುಡುಗಿಯರು ಎಲ್ಲಾ ಮಿತಿಗಳನ್ನೂ ಮೀರುತ್ತಿದ್ದಾರೆ. ಇದು ಸಾಮಾನ್ಯ ಜನರ ಮಾತಾದರೆ ಇನ್ನು ನಟಿಯರ ವಿಷಯ ಹೇಳುವುದೇ ಬೇಡ ಬಿಡಿ. ಕೆಲವರಿಗೆ ಇಂಥ ಬಟ್ಟೆಗಳು ಯಾವುದೇ ರೀತಿಯಲ್ಲಿ ಅಸಹ್ಯ ಎನಿಸದಿದ್ದರೂ, ಕೆಲವರು ಇಂಥ ಬಟ್ಟೆ ಧರಿಸಿದಾಗ ವಾಕರಿಕೆ ಬರುವುದೂ ಉಂಟು. ಆದರೆ ಬಿಗ್​ಬಾಸ್ ಖ್ಯಾತಿಯ ನಟಿ ನಿವೇದಿತಾ ಯಾವುದೇ ರೀತಿಯ ತುಂಡುಡುಗೆ ಹಾಕಿದರೂ ಆಕೆಗೆ ಒಪ್ಪುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಇತ್ತೀಚೆಗೆ ನಿವೇದಿತಾ ಗೌಡ ಹೆಚ್ಚಾಗಿ ಷಾರ್ಟ್ಸ್​ ಧರಿಸಿ ರೀಲ್ಸ್​ ಮಾಡುತ್ತಾರೆ.

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

Latest Videos

ಸ್ವರ್ಗದಷ್ಟೇ ಬಿಗ್​ಬಾಸ್​ ಸುರಕ್ಷಿತ ಎಂದದ್ದು ಇದಕ್ಕೇನಾ? ಸಂಗೀತಾ ಸಹೋದರ ಕಿಡಿ- ಸುದೀಪ್​ಗೆ ಪತ್ರ?

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ನಿವೇದಿತಾ, ಒಂದು ರೀಲ್ಸ್​ ಮಾಡಿದ್ದಾರೆ. ಅದರಲ್ಲಿ ನಿಮ್ಮ ಫೆವರೆಟ್​ ಸಾಂಗ್​ ಯಾವುದು ಕೇಳಿದಾಗ, ನಟಿ, ಫಾಲ್​ ಇನ್​ ಲವ್​ ಎನ್ನುವ ಇಂಗ್ಲಿಷ್​ ಹಾಡನ್ನು ಹೇಳಿದ್ದಾರೆ. ಈ ಹಾಡಿನಲ್ಲಿ ಸಕತ್​ ಕ್ಯೂಟ್​ ಆಗಿ ಕಾಣಿಸುವ ನಿವೇದಿತಾ ಬಗೆಬಗೆ ಪೋಸ್​ ಕೊಟ್ಟಿದ್ದಾರೆ. ಹಲವರು ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈಕೆ ಇಂಗ್ಲಿಷ್​ ಹಾಡನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಗರಂ ಆಗಿದ್ದಾರೆ. ತಿನ್ನುವುದು ಕನ್ನಡದ ಅನ್ನ, ಹಾಡು ಮಾತ್ರ ಇಂಗ್ಲಿಷ್​ ಇಷ್ಟನಾ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಮದ್ವೆಯಾಗಿ ಮೂರು ವರ್ಷವಾಯ್ತು. ಮಗು ಮಾಡ್ಕೋ ಅಂತಿದ್ದರೆ, ಈ ರೀತಿ ಅರೆಬರೆ ಡ್ರೆಸ್​ ಬಿಟ್ಟು ಮುದ್ದುಮುದ್ದಾಗಿ ಭಾರತೀಯ ನಾರಿಯಂತೆ ಇರು ಎಂದು ಸಲಹೆ  ಕೊಡುತ್ತಿದ್ದಾರೆ. 

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಫ್ಯಾನ್ಸ್​ ಗರಂ- ಟಿಆರ್​ಪಿಗಾಗಿ ಪ್ಲೀಸ್​ ಹೀಗೆ ಮಾಡ್ಬೇಡಿ: ಅಭಿಮಾನಿಗಳ ಕಣ್ಣೀರು

click me!