ಇವಳು ನನ್ನ ಪಾರ್ಟನರ್​... ನಾವಿಬ್ರೂ... ಎನ್ನುತ್ತಲೇ ಸ್ನೇಹಿತೆಯ ಜೊತೆಗಿನ ಗುಟ್ಟು ಬಿಚ್ಚಿಟ್ಟು ಶಾಕ್​ ಕೊಟ್ಟ ನಿವೇದಿತಾ!

Published : Feb 25, 2025, 09:09 PM ISTUpdated : Feb 26, 2025, 08:31 AM IST
ಇವಳು ನನ್ನ ಪಾರ್ಟನರ್​...  ನಾವಿಬ್ರೂ... ಎನ್ನುತ್ತಲೇ ಸ್ನೇಹಿತೆಯ ಜೊತೆಗಿನ ಗುಟ್ಟು ಬಿಚ್ಚಿಟ್ಟು ಶಾಕ್​ ಕೊಟ್ಟ ನಿವೇದಿತಾ!

ಸಾರಾಂಶ

ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರು ಸ್ನೇಹಿತೆ ವಾಣಿ ಜಿ.ಎಸ್ ಜೊತೆ ರೀಲ್ಸ್ ಮಾಡುತ್ತಿದ್ದಾರೆ. ಇತ್ತೀಚಿನ ರೀಲ್ಸ್‌ಗಳಿಂದಾಗಿ ಟ್ರೋಲ್ ಆಗುತ್ತಿದ್ದಾರೆ. ವಿಚ್ಛೇದನಕ್ಕೆ ನಿವೇದಿತಾ ಅವರೇ ಕಾರಣವೆಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಲವ್ ಸಾಂಗ್ ರೀಲ್ಸ್‌ನಲ್ಲಿ ಕಮೆಂಟ್ ಸೆಕ್ಷನ್ ಆಫ್ ಮಾಡಿರುವುದಕ್ಕೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ನಿವೇದಿತಾ ಟೀಕೆಗಳಿಗೆ ತಲೆ ಕೆಡಿಸಿಕೊಂಡಿಲ್ಲ.

ಅವಳು ಫ್ರಿಜ್ಜು, ನಾನು ಒಳಗಿನ ಸ್ಕ್ಯಾಕ್​... ನಾವಿಬ್ರೂ ಬಾರ್​ ಡಾನ್ಸರ್ಸ್​ ಎನ್ನುತ್ತಲೇ ಬಿಗ್​ಬಾಸ್​ ಖ್ಯಾತಿಯ, ಚಂದನ್​ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಮತ್ತು ಆಕೆಯ ಸ್ನೇಹಿತೆ ವಾಣಿ ಜಿ.ಎಸ್​. ಹೊಸ ರೀಲ್ಸ್​ ಮಾಡಿ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ತಮಗೆ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ನಿವೇದಿತಾ, ನಿಮಗೆ ಹೀಗೆಲ್ಲಾ ಮಾಡಲು ನಾಚಿಕೆ ಆಗಲ್ವಾ ಎನ್ನುವ ಪ್ರಶ್ನೆ ಓದುತ್ತಲೇ ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ, ನಾಚಿಕೆ ಯಾಕೆ? ಎಂದು ಪ್ರಶ್ನಿಸುವ ಮೂಲಕ ನಾಚಿಕೆ ಆಗುವಂಥದ್ದು ಏನು ಮಾಡ್​ತಿದ್ದೇವೆ ಎಂದು ಕೇಳಿದ್ದಾರೆ. ಆಗ ಸ್ನೇಹಿತೆ ವಾಣಿ, ಅವಳು ಫ್ರಿಜ್ಜು... ನಾನು... ಎನ್ನುತ್ತಲೇ ಇಬ್ಬರೂ ಕೂಲ್​ ಕೂಲ್​ ಎಂದಿದ್ದಾರೆ. ನನಗೆ ನಿಮ್ಮಂಥ ಪಾರ್ಟನರ್​ ಬೇಕು ಎಂಬ ಪ್ರಶ್ನೆಗೆ ಇಲ್ಲಪ್ಪಾ, ನಾವಿಬ್ಬರೂ ಆಲ್​ರೆಡಿ ಬೆಸ್ಟ್​ ಪಾರ್ಟನರ್​ ಆಗಿದ್ದೇವೆ ಎಂದು ಸ್ನೇಹಿತೆಯನ್ನು ಅಪ್ಪಿಕೊಂಡಿದ್ದಾರೆ! ಈ ಇಬ್ಬರ ಸ್ನೇಹಕ್ಕೆ ಯಾರ ಕಣ್ಣೂ ಬೀಳೋದು ಬೇಡಪ್ಪಾ ಎಂದು ಕೆಲವರು ಹೇಳಿದರೆ, ಇವರಿಬ್ಬರು ಕೆಲವು ದಿನಗಳಿಂದ ಮಾಡುತ್ತಿರುವ ರೀಲ್ಸ್​ ನೋಡಿ ನೆಗೆಟಿವ್​ ಕಮೆಂಟ್​ಗಳ ಸುರಿಮಳೆಯೂ  ಆಗುತ್ತಿದೆ. 

ಅಷ್ಟಕ್ಕೂ, ಗಾಯಕ ಚಂದನ್​ ಶೆಟ್ಟಿ ಅವರಿಂದ ಡಿವೋರ್ಸ್​ ಪಡೆದ ಮೇಲೆ  ನಿವೇದಿತಾ  ಮತ್ತಷ್ಟು ಹಾಟ್​ ಆಗಿ ಕಾಣಿಸಿಕೊಂಡು ಸೋಷಿಯಲ್​  ಮೀಡಿಯಾದಲ್ಲಿ ರೀಲ್ಸ್​ ಶೇರ್​  ಮಾಡಿಕೊಳ್ಳುತ್ತಿದ್ದಾರೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್​ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ!

ಬಿಂದಾಸ್​ ನಿವೇದಿತಾಗೆ ಇದೇನಾಯ್ತು? ಗೆಳತಿ ಜತೆ ಲವ್​ಸಾಂಗ್​ ಮಾಡಿ ಕಮೆಂಟ್​ ಸೆಕ್ಷನ್ನೇ ಆಫ್​ ಮಾಡಿಬಿಟ್ರಲ್ಲಾ?

ಕೆಲ ದಿನಗಳಿಂದ ಇದೇ ವಾಣಿಯ ಜೊತೆ ಸಕತ್​ ರೀಲ್ಸ್​ ಮಾಡುತ್ತಿದ್ದಾರೆ.  ಇಬ್ಬರು ಸೇರಿ ಲವ್​ಸಾಂಗ್​ಗೆ ರೀಲ್ಸ್ ಮಾಡೋದೇ ಹೆಚ್ಚು.  ಈ ಹಿಂದೆ ಒಂದು ರೀಲ್ಸ್​ ಮಾಡಿ ಅದಕ್ಕೆ ನಿವೇದಿತಾ  ಐ ಲವ್​ ಯು ಎಂದು ಶೀರ್ಷಿಕೆ ಕೊಟ್ಟಿದ್ದಕ್ಕೆ ಸಕತ್​ ಟ್ರೋಲ್​ ಆಗಿತ್ತು.   ಈ ಹೊಸ ಗೆಳತಿ ಯಾರು ಎಂಬ ಬಗ್ಗೆ ಅಭಿಮಾನಿಗಳು ತಡಕಾಡುತ್ತಿದ್ದಾರೆ.  ವಾಣಿ ಅವರು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದಾಗಲೇ ಹಲವಾರು ರೀಲ್ಸ್​ ಮಾಡಿ ಶೇರ್​ ಮಾಡಿದ್ದಾರೆ. ಅಷ್ಟಕ್ಕೂ,  ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. 

ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಇದೀಗ ದಿಢೀರ್​ ಎಂದು ಅದೂ ಸ್ನೇಹಿತೆಯ ಜೊತೆಗಿನ ರೀಲ್ಸ್​ನಲ್ಲಿ ಕಮೆಂಟ್ಸ್​ ಸೆಕ್ಷನ್​ ಆಫ್​ ಮಾಡಿರೋದು ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ. 

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!