ಬಿಗ್​ಬಾಸ್​ ನೀತು ಲವ್​ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...

By Suchethana D  |  First Published Jun 2, 2024, 11:50 AM IST

ಬಿಗ್​ಬಾಸ್​ ಖ್ಯಾತಿಯ ನೀತು ವನಜಾಕ್ಷಿ ತಮ್ಮ ಲವ್​ ಲೈಫ್​ ಹಾಗೂ ಮದುವೆಯ ವಿಚಾರವಾಗಿ ಮನದಾಳದ ಮಾತು ಹಂಚಿಕೊಂಡಿದ್ದಾರೆ. ನಟಿ ಹೇಳಿದ್ದೇನು?
 


ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರೋ ನೀತು ವನಜಾಕ್ಷಿ ಎಂದರೆ ಕೆಲ ತಿಂಗಳ ಹಿಂದೆ ಬಹುಶಃ ಹೆಚ್ಚಿವನರಿಗೆ ಯಾರೆಂದು ತಿಳಿದಿರಲಿಲ್ಲ. ಆದರೆ ಬಿಗ್​ಬಾಸ್​ 10ನೇ ಸೀಸನ್​ನಲ್ಲಿ ಇವರು ಸಕತ್​ ಫೇಮಸ್​ ಆದವರು.  7ನೇ ವಾರ ನೀತು ವನಜಾಕ್ಷಿ ಅವರು ಎಲಿಮಿನೇಟ್ ಆದರು. ಮಂಗಳಮುಖಿಯಾಗಿದ್ದ ನೀತು ಅವರ ಜೀವನ ಚರಿತ್ರೆ, ಇವರು ಜೀವನದಲ್ಲಿ ಅನುಭವಿಸಿರುವ ನೋವು, ಅವಮಾನ ಅಷ್ಟಿಷ್ಟಲ್ಲ. ಆದರೆ ಎಲ್ಲವನ್ನೂ ಹಿಮ್ಮೆಟ್ಟಿ, ಎಲ್ಲವೂ ಇದ್ದು ಕೊರಗುವವರಿಗೆ ಜೀವನಾನುಭವವನ್ನು ತೋರಿಸಿಕೊಟ್ಟವರು ನೀತು.    ಗದಗದವರಾದ ನೀತು ಹುಟ್ಟಿದ್ದು ಮಂಜುನಾಥನಾಗಿ.  ಏಳನೇ ತರಗತಿವರೆಗೆ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳಾಗತೊಡಗಿದಾಗ ಹೇಳಿಕೊಳ್ಳಲಾಗದ ಸಂಕಟ. ಹೆಣ್ಣಿಗೆ ಆಗುವ ಸಹಜ ಕಾಮನೆಗಳು ಮನದಲ್ಲಿ ಪುಟಿದೇಳತೊಡಗಿದಾಗ ಯಾರ ಬಳಿ ಹೇಳಿಕೊಳ್ಳುವುದು? ಬಾಲಕನೊಬ್ಬನಿಗೆ ಬಾಲಕಿಯಂತೆ ಆಸೆಯಾಗತೊಡಗಿದಾಗ ಹೇಳಿಕೊಳ್ಳುವುದು ಅಷ್ಟು ಸಹಜವೆ? ಇಂಥ ಮಂಜುನಾಥ್​ ಅವರು ನೀತು ವನಜಾಕ್ಷಿಯಾಗಿ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ. 
 
ನಂತರ ಅಕ್ಕನ ಬಳಿ ಎಲ್ಲಾವನ್ನ ಹೇಳಿಕೊಂಡ ಇವರು, ಅಕ್ಕನ ಬೆಂಬಲದಿಂದ ನೀತು ವನಜಾಕ್ಷಿಯಾಗಿ ಬದಲಗಿದ್ದು, ಇದೀಗ ಯಾವುದೇ ಹಿಂಜರಿಕೆ ಇಲ್ಲದೇ ಬಿಚ್ಚುಮನಸ್ಸಿನಿಂದ ತಮ್ಮ ಜೀವನದ ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ನೀತು ವನಜಾಕ್ಷಿ ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. 2019ರ ಮಿಸ್ ಇಂಟರ್‌ನ್ಯಾಷನಲ್‌ ಟ್ರಾನ್ಸ್‌ಜೆಂಡರ್ ಕ್ವೀನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಮಾಡೆಲಿಂಗ್‌ನಲ್ಲೂ ಸಕ್ರಿಯವಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಿಂದ ನಟನೆಗೂ ಎಂಟ್ರಿಕೊಟ್ಟಿರುವ ನೀತು, ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಯು & ಐ ಸಿನಿಮಾ ಸೇರಿದಂತೆ  ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಅಭಿನಯಿಸಿದ್ದಾರೆ.

ಬಿಗ್​ಬಾಸ್​ ನಮ್ರತಾ ಜೊತೆ ವಿನ್ನರ್​ ಕಾರ್ತಿಕ್ ರೊಮ್ಯಾನ್ಸ್​​: ಸ್ನೇಹಿತ್​ ಎಲ್ಲಿದ್ಯಪ್ಪಾ ಅಂತಿದ್ದಾರೆ ಫ್ಯಾನ್ಸ್​!

Tap to resize

Latest Videos

ಇದೀಗ ಇಷ್ಟೆಲ್ಲಾ ಹೆಸರು ಮಾಡಿರುವ ನಟಿಯೊಬ್ಬರಿಗೆ ಸಹಜವಾಗಿ ಎಲ್ಲರೂ ಕೇಳುವ ಪ್ರಶ್ನೆ ಎಂದರೆ ಮದುವೆಯಾವಾಗ ಎನ್ನುವುದು. ಬಹುತೇಕ ಎಲ್ಲಾ ನಟ-ನಟಿಯರು ಒಂದಲ್ಲೊಂದು ಸಮಯದಲ್ಲಿ ಈ ಪ್ರಶ್ನೆಯನ್ನು ಎದುರಿಸಿಯೇ ಇರುತ್ತಾರೆ. ಆದರೆ ನೀತು ವನಜಾಕ್ಷಿಯವರ ಜೀವನವೇ ಡಿಫರೆಂಟ್​ ಆಗಿರುವ ಕಾರಣ, ಇವರಲ್ಲಿ ಮದುವೆ, ಪ್ರೀತಿ ಎಲ್ಲದ್ದಕ್ಕೂ ಅವಕಾಶ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಇದೀಗ ನೀತು ಅವರು, ಡೀ ಟಾಕ್ಸ್ ಎಂಬ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮದುವೆ, ಪ್ರೀತಿ ಎಲ್ಲವುಗಳ ಕುರಿತು ಮಾತನಾಡಿದ್ದಾರೆ. 

ನೀತು ಅವರು ಹೇಳಿರುವಂತೆ, ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಸಹಜವಾಗಿ ಹುಡುಗರನ್ನು ಕಂಡಾಗ ಅಟ್ರಾಕ್ಷನ್​ ಆಗುವಂತೆ ನನಗೂ ಆಗುತ್ತಿತ್ತು. ಆದರೆ ಅದನ್ನು ಹೊರಗೆ ಹೇಳಿಕೊಳ್ಳುವಂತಿರಲಿಲ್ಲವಲ್ಲ. ಅದಕ್ಕೇ ಸುಮ್ಮನಾಗಿಬಿಡುತ್ತಿದ್ದೆ. ಕೆಲವರ ಮೇಲೆ ಆಸೆಯಾದರೂ ಪ್ರಪೋಸ್​  ಮಾಡಲು ಭಯವಾಗುತ್ತಿತ್ತು. ಆದರೆ ಈಗ ನಾನು ಲಿಂಗ ಬದಲಿಸಿಕೊಂಡು ಬ್ಯೂಟಿಫುಲ್​ ಆದ ಮೇಲೆ, ಜೊತೆಗೆ ಇಷ್ಟು ಫೇಮಸ್​ ಆದ ಮೇಲೆ ತುಂಬಾ ಮಂದಿ ಪ್ರಪೋಸ್ ಮಾಡುತ್ತಾರೆ, ಮದುವೆಯಾಗುತ್ತೇನೆ ಎನ್ನುತ್ತಾರೆ, ನಿಮ್ಮನ್ನು ಪ್ರೀತಿಸುತ್ತೇನೆ ಅಂತಾರೆ. ಸದ್ಯ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ ನೀತು.

'ನನ್ನ ವ್ಯಕ್ತಿ   ಹೀಗೆಯೇ ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೇನೆ. ಆತ ಯಾವುದನ್ನೂ ಜಡ್ಜ್​ ಮಾಡಬಾರದು.  ವ್ಯಕ್ತಿ ಇಷ್ಟಪಟ್ಟು ನಮ್ಮ ಜೊತೆ ಇರ್ತೇವೆ ಎಂದಾಗ ಮಾತ್ರ ಅದು ಒಳ್ಳೆಯ ರಿಲೇಷನ್​ಷಿಪ್​ ಆಗಿರುತ್ತವೆ. ನಮ್ಮ ಜೀವನವೂ ಹ್ಯಾಪ್ಪಿ ಆಗಿರುತ್ತದೆ' ಎಂದಿರುವ ನೀತು, ಸದ್ಯದ ಮಟ್ಟಿಗೆ ಆ ಯೋಚನೆ ನನ್ನ ತಲೆಯಲ್ಲಿ ಬಂದಿಲ್ಲ ಎಂದು ನಕ್ಕಿದ್ದಾರೆ. ಸದ್ಯದ ಮಟ್ಟಿಗೆ ಹೇಳುವುದಾದರೆ ನನ್ನನ್ನು ನಾನು ತುಂಬಾ ಲವ್​ ಮಾಡುತ್ತಿದ್ದೇನೆ ಅಷ್ಟೇ. ಸ್ವಾಮಿ  ವಿವೇಕಾನಂದ ಅವರು ಹೇಳಿದಂತೆ ಮೊದಲು ನಾವು ನಮ್ಮ ದೇಹವನ್ನು ಪ್ರೀತಿಸಬೇಕು ಅನ್ನೋದೇ ನನ್ನ ಮಾತು ಕೂಡ. ನನ್ನ ದೇಹವನ್ನು ನಾನು ಪ್ರೀತಿಸುತ್ತೇನೆ' ಎಂದಿದ್ದಾರೆ. ಇದೇ ವೇಳೆ ತಮ್ಮ ಖ್ಯಾತಿ ನೋಡಿ ಯಾರಾದರೂ ಹತ್ತಿರ ಬರುವ ಯೋಚನೆ ಮಾಡಿದರೆ ಅಂಥವರನ್ನು ಸುಲಭವಾಗಿ ಗುರುತಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ನಾನು ಯಾರಿಗೂ ಇದುವರೆಗೆ ಕೆಡುಕು ಬಯಸಿಲ್ಲ ಎಂದಿರುವ ನೀತು ಅವರು, ಕರ್ಮ, ಧ್ಯಾನದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.
 

ಶ್ರೀರಸ್ತು ಶುಭಮಸ್ತು ಪೂರ್ಣಿ, ಅಮೃತಧಾರೆ ಜೀವಾ ಹನಿಮೂನ್​ ಹೇಗಿತ್ತು? ಫುಲ್​ ಡಿಟೇಲ್ಸ್​ ಹಂಚಿಕೊಂಡ ದಂಪತಿ
 

click me!