ಬಿಗ್ ಬಾಸ್ ರಿಯಾಲಿಟಿ ಶೋಗೆ ಮತ್ತೊಂದು ಸಂಕಷ್ಟ, ಈ ಬಾರಿ ನಡೆಯೋದೆ ಡೌಟ್

ಜನಪ್ರಿಯ ಬಿಗ್ ಬಾಗ್ ಶೋಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 2025ರ ಶೋ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಮೊದಲು ಹಿಂದಿಯಲ್ಲೇ ಆರಂಭಗೊಂಡ ಬಿಗ್ ಬಾಸ್ ಇದೀಗ ಹಿಂದಿಯಿಂದಲೇ ಅಂತ್ಯಗೊಳ್ಳುತ್ತಾ.
 

Bigg boss might move to other channel Endemol set to exit from Telecast tv contract

ಮುಂಬೈ(ಏ.14) ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ರಿಯಾಲಿಟಿ ಶೋ ದೇಶಾದ್ಯಂತ ಜನಪ್ರಿಯವಾಗಿದೆ. ಕಳೆದ ಹಿಂದಿ ಬಿಗ್ ಬಾಸ್ ಶೋ ಹಲವು ಅಡೆ ತಡೆ ಎದುರಿಸಿತ್ತು. ಸಲ್ಮಾನ್ ಖಾನ್‌ಗೆ ಬೆದರಿಕೆ ಕಾರಣದಿಂದ ಭಾರಿ ಭದ್ರತಾ ವ್ಯವಸ್ಥೆಯಲ್ಲಿ ಶೂಟ್ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ 2025ರ ಹಿಂದಿ ಬಿಗ್ ಬಾಸ್ ಶೋ ನಡೆಯೋದೇ ಅನುಮಾನವಾಗಿದೆ. ಬಿಗ್ ಬಾಸ್ 2025ರ ಶೋ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಬಿಗ್ ಬಾಸ್ ಪ್ರೊಡಕ್ಷನ್ ಬನಿಜಯ್ ಏಷ್ಯಾ(ಎಂಡೋಮಲ್ ಶೈನ್) ಖಾಸಗಿ ವಾಹಿನಿಯ ಒಪ್ಪಂದದಿಂದ ಹೊರನಡೆದಿದೆ ಎಂದು ವರದಿಯಾಗಿದೆ.

ಒಪ್ಪಂದ ರದ್ದು
ಹಿಂದಿ, ಕನ್ನಡ ಸೇರಿದಂತೆ ಇತರ ಭಾಷೆಗಳ ಬಿಗ್ ಬಾಸ್ ಶೋ ನಿರ್ಮಾಣದ ಸಂಪೂರ್ಣ ಜವಾಬ್ಜಾರಿ ಎಂಡೆಮೋಲ್ ಸಂಸ್ಥೆ ನಿರ್ವಹಿಸುತ್ತಿದೆ. ಎಂಡೆಮೋಲ್ ಸಂಸ್ಥೆ ನಿರ್ಮಾಣ ಮಾಡುವ ಬಿಗ್ ಬಾಸ್ ರಿಯಾಲಿಟಿ ಶೋ ವನ್ನು ಪ್ರಸಾರ ಮಾಡಲು ಖಾಸಗಿ ವಾಹಿನಿಯಾದ ಕಲರ್ಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೀಗ ಎಂಡೆಮೋಲ್ ಈ ಒಪ್ಪಂದಿಂದ ಹಿಂದೆ ಸರಿದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ಹಿಂದಿ ಬಿಗ್ ಬಾಸ್ ಶೋ ರದ್ದಾಗುವ ಸಾಧ್ಯತೆ ಹೆಚ್ಚಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Latest Videos

ಬ್ರೇಕಪ್ ಆದ್ಮೇಲೆ ಹಾಟ್ ಆಗ್ಬಿಟ್ರಾ ವರ್ಷ ಕಾವೇರಿ; ಫೋಟೋ ವೈರಲ್!

ಬೇರೆ ವಾಹನಿಯಲ್ಲಿ ಪ್ರಸಾರವಾಗುತ್ತಾ ಬಿಗ್ ಬಾಸ್?
ಕಲರ್ಸ್ ಜೊತೆ ಒಪ್ಪಂದ ರದ್ದು ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಹೀಗಾದರೆ ಬೇರೆ ವಾಹನಿಯಲ್ಲಿ ಎಂಡೆಮೋಲ್ ಸಂಸ್ಥೆ ಒಪ್ಪಂದ ಮಾಡಿಕೊಂಡು ಬಿಗ್ ಬಾಸ್ ಪ್ರಸಾರ ಮಾಡುವ ಸಾಧ್ಯತೆ ಇದೆ. ಸದ್ಯ ಯಾವುದೂ ಅಧಿಕೃತಗೊಂಡಿಲ್ಲ. ಶೀಘ್ರದಲ್ಲೇ ಈ ಕುರಿತ ಅಧಿಕೃತ ಪ್ರಕಟಣೆಗಳು ಹೊರಬೀಳುವ ಸಾಧ್ಯತೆ ಇದೆ.

ಕನ್ನಡ ಬಿಗ್ ಬಾಸ್ ಕತೆ ಏನು?
ಕನ್ನಡ ಬಿಗ್ ಬಾಸ್ ಶೋ ಈ ಬಾರಿ ತೀವ್ರ ಸಂಕಷ್ಟ ಎದುರಿಸಲಿದೆ. ಇದುವರೆಗೆ ಕನ್ನಡ ಬಿಗ್ ಬಾಸ್ ಶೋ ಟಿಆರ್‌ಪಿ ಸಮಸ್ಯೆ ಎದುರಿಸಿಲ್ಲ. ಆದರೆ ಮುಂದಿನ ಬಿಗ್ ಬಾಸ್ ಶೋ ಆರಂಭಕ್ಕೂ ಮೊದಲೇ ಸಂಕಷ್ಟಗಳು ಎದುರಾಗುತ್ತಿದೆ. ಈಗಾಗಲೇ ನಿರೂಪಕ ಕಿಚ್ಚ ಸುದೀಪ್ ಶೋನಿಂದ ಹಿಂದೆ ಸರಿದಿದ್ದಾರೆ. ಇದು ಅತೀ ದೊಡ್ಡ ಹೊಡೆತವಾಗಿದೆ. ಕಿಚ್ಚ ಸುದೀಪ್ ಸ್ಥಾನದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಾಗದ ಪರಿಸ್ಥಿತಿ ವೀಕ್ಷಕರಿಗಿದೆ. ಇನ್ನು ಬೇರೊಬ್ಬರನ್ನು ತಂದರೂ ಅದೇ ಟಿಆರ್‌ಪಿ ಕಾಪಾಡಿಕೊಳ್ಳುವ ಸವಾಲು ಎದುರಾಗಲಿದೆ. ಇದರ ಜೊತೆಗೆ ಕನ್ನಡದಲ್ಲೂ ವಾಹನಿ ಬದಲಾದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

41ರ ಬಿಗ್‌ಬಾಸ್‌ ಸ್ಪರ್ಧಿ ಮತ್ತೆ ತಾಯಿಯಾಗಲಿದ್ದಾರೆ! ಸಂತಸದಲ್ಲಿ ನಟಿ
 

vuukle one pixel image
click me!