ಶ್ರೀರಸ್ತು ಶುಭಮಸ್ತುಗೆ ಊಹಿಸದ ಟ್ವಿಸ್ಟ್: ತುಳಸಿ ಗರ್ಭಿಣಿಯಾದಾಗ ಛೀಮಾರಿ ಹಾಕಿದೋರೆ ಕೈಮುಗಿತೀದ್ದಾರೆ. ಅಂಥದ್ದೇನಾಯ್ತು ನೋಡಿ...
ಶ್ರೀರಸ್ತು ಶುಭಮಸ್ತು ಸೀರಿಯಲ್ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಅದೇ ಇನ್ನೊಂದೆಡೆ, ಸಮರ್ಥ್, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. ಅದೇ ಇನ್ನೊಂದೆಡೆ, ಅತ್ತೆಯ ಮಾತು ಕೇಳಿ ತಂಗಿ ಪೂರ್ಣಿ ಹಾಗೂ ಅತ್ತೆ ತುಳಸಿ ಕಂಡರೆ ಉರಿಬೀಳುತ್ತಿದ್ದ, ಇಬ್ಬರಿಗೂ ಹಾನಿ ಉಂಟು ಮಾಡಲು ಅತ್ತೆಯ ಜೊತೆ ಸ್ಕೆಚ್ ಹಾಕುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾಳೆ. ಇನ್ನೇನು ಇದೆ ಬಾಕಿ? ಎಲ್ಲವೂ ಬಹುತೇಕ ಮುಗಿದೇ ಹೋಗಿದೆ. ಈಗೇನಿದ್ದರೂ ಶಾರ್ವರಿಯ ಕುತಂತ್ರ ಸಾಕ್ಷಿ ಸಹಿತ ಬಯಲಾಗಿ ಆಕೆ ಜೈಲುಪಾಲು ಆಗಬೇಕಿರುವುದು ಮಾತ್ರ ಉಳಿದಿದೆ. ಇದಾಗಲೇ ಕಾರು ಅಪಘಾತ ಮಾಡಿರುವುದು ಶಾರ್ವರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಾಗಿದೆ.
ಇದೀಗ ನಿಧಿಯ ಮದುವೆಯೂ ನಿರ್ವಿಘ್ನವಾಗಿ ನಡೆದುಹೋಗಿದೆ. ಹಾಗಿದ್ದರೆ ಇನ್ನೇನು ಸೀರಿಯಲ್ ಮುಗಿದೇ ಹೋಗುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ. ಇದರ ನಡುವೆಯೇ ಅನಿರೀಕ್ಷಿತ ತಿರುವೊಂದು ಸೀರಿಯಲ್ಗೆ ಸಿಕ್ಕಿದೆ. ಅದೇನೆಂದರೆ, ಇದೀಗ ತುಳಸಿ ಮತ್ತು ಮಾಧವ್ ತಮ್ಮ ಮಗುವನ್ನು ಪೂರ್ಣಿ ಮತ್ತು ಅವಿನಾಶ್‌ಗೆ ದತ್ತು ನೀಡಿದ್ದಾರೆ. ದತ್ತು ಪ್ರಕ್ರಿಯೆ ಮುಗಿಸಿ ಅದರ ದಾಖಲೆಗಳನ್ನು ನೀಡಿದ್ದಾರೆ. ಮಗುವಿನ ನಾಮಕರಣದ ದಿನವೇ ಅದನ್ನು ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದು, ಇನ್ನು ಮುಂದೆ ಕಾನೂನುಬದ್ಧವಾಗಿ ನೀವೇ ಇದರ ಅಪ್ಪ-ಅಮ್ಮ ಎಂದಿದ್ದಾರೆ. ಇದರಿಂದಾಗಿ ತುಳಸಿಯ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಆತ್ಮಗಳ ಜೊತೆಯೂ ಮಾತಾಡೋ ಏಕೈಕ ನಟಿ 'ನಾನಿನ್ನ ಬಿಡಲಾರೆ' ದುರ್ಗಾ! ಅಳಿಲಿನ ಜೊತೆ ವಿಡಿಯೋ
ಅಷ್ಟಕ್ಕೂ ತುಳಸಿ ಗರ್ಭಿಣಿ ಎನ್ನುವುದು ತಿಳಿದಾಗ, ಸೋಷಿಯಲ್ ಮೀಡಿಯಾದಲ್ಲಿ ಆದ ಹಂಗಾಮ ಅಷ್ಟಿಷ್ಟಲ್ಲ. ಅದು ಎಷ್ಟರಮಟ್ಟಿಗೆ ಟ್ರೋಲ್ ಆಗಿತ್ತು ಎಂದರೆ ವಾಹಿನಿಯವರು ಅದೊಂದು ಟೈಮ್ನಲ್ಲಿ ಕಮೆಂಟ್ ಸೆಕ್ಷನ್ ಆಫ್ ಮಾಡುವಷ್ಟರಮಟ್ಟಿಗೆ ಆಗಿತ್ತು. ಅಷ್ಟೊಂದು ಕೆಟ್ಟ ಕೆಟ್ಟ ಮೆಸೇಜ್ಗಳನ್ನು ಮಾಡುತ್ತಿದ್ದರು. ಇದೊಂದು ಸೀರಿಯಲ್ ಎನ್ನುವುದನ್ನೂ ನೋಡದೇ ತುಳಸಿ ಪಾತ್ರಧಾರಿ ಸುಧಾರಾಣಿ ಅವರಿಗೂ ಕೆಟ್ಟದ್ದಾಗಿ ಹೇಳಿದ್ದು ಉಂಟು. ಇನ್ನು ಈ ಸೀರಿಯಲ್ ನೋಡಲ್ಲ ಎಂದೆಲ್ಲಾ ಟೀಕಿಸಿದ್ದರು. ಆದರೆ, ಇದೀಗ ಅವರೇ ಕೈಯೆತ್ತಿ ತುಳಸಿಗೆ ನಮಸ್ಕಾರ ಮಾಡುತ್ತಿದ್ದಾರೆ. ಇದು ಒಳ್ಳೆಯ ನಡೆ ಎನ್ನುತ್ತಿದ್ದಾರೆ.
ಆದರೆ ಮತ್ತೆ ಕೆಲವರು ಆ ಮಗುವಿಗೆ ತಾಯಿಯ ಹಾಲನ್ನು ನೀಡದೇ ವಂಚಿಸುತ್ತಿರುವುದಾಗಿ ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ. ತುಳಸಿಯ ತ್ಯಾಗವೇನೋ ಸರಿ. ಆದರೆ ಅಮ್ಮನಾದವಳು ಎದುರೇ ಇರುವಾಗ, ಆಕೆಯ ಅಮೃತ ಎದೆಹಾಲನ್ನು ಮಗುವಿಗೆ ನೀಡದೇ ಇರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಇದೀಗ ಅಂತಿಮ ಹಂತ ತಲುಪಿದೆ. ಎಲ್ಲವು ಸುಸೂತ್ರವಾಗಿ ನಡೆದಿದೆ. ಇನ್ನೇನಿದ್ದರೂ ಶಾರ್ವರಿ ಆಟ ಬಯಲಾಗುವುದು ಒಂದೇ ಬಾಕಿ.
ಭೂತಗಳು ಗಾಳಿಯಲ್ಲಿ ಹೇಗೆ ಚಲಿಸತ್ತೆ? 'ನಾ ನಿನ್ನ ಬಿಡಲಾರೆ' ಸೀರಿಯಲ್ ಶೂಟಿಂಗ್ ವಿಡಿಯೋ ನೋಡಿ!