ಆಪ್ತ ಗೆಳೆಯನ ಜೊತೆ ಬಿಗ್ ಬಜೆಟ್‌ ಸಿನಿಮಾ ಒಪ್ಪಿಕೊಂಡ ಬಿಗ್ ಬಾಸ್ ಮಂಜು ಪಾವಗಡ!

Suvarna News   | Asianet News
Published : Sep 21, 2021, 03:40 PM IST
ಆಪ್ತ ಗೆಳೆಯನ ಜೊತೆ ಬಿಗ್ ಬಜೆಟ್‌ ಸಿನಿಮಾ ಒಪ್ಪಿಕೊಂಡ ಬಿಗ್ ಬಾಸ್ ಮಂಜು ಪಾವಗಡ!

ಸಾರಾಂಶ

ಕುಚಿಕು ಗೆಳೆಯ ರಾಜೀವ್‌ ಜೊತೆ 'ಉಸಿರೇ ಉಸಿರೇ' ತಂಡ ಸೇರಿದ ಬಿಗ್ ಬಾಸ್ ಮಂಜು ಪಾವಗಡ.   

ಕಲರ್ಸ್‌ ಸೂಪರ್ ಮಜಾ ಭಾರತ ಕಾಮಿಡಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕಲಾವಿದ ಮಂಜು ಪಾವಗಡ ಕಲರ್ಸ ಕನ್ನಡ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗುವ ಮೂಲಕ ಇಡೀ ಕರ್ನಾಟಕದ ಜನತೆ ಪ್ರೀತಿ ಪಡೆದುಕೊಂಡಿದ್ದಾರೆ. ಲ್ಯಾಗ್ ಮಂಜು ಕಾಮಿಡಿಗೆ ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಫಿದಾ ಆಗಿದ್ದಾರೆ. 

ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

ಬಿಗ್ ಬಾಸ್‌ ನಂತರ ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಮಂಜು ತಮ್ಮ ಮೊದಲ ಸಿನಿಮಾ ಪ್ರಾಜೆಕ್ಟ್‌ ಅನೌನ್ಸ್ ಮಾಡಿದ್ದಾರೆ. ಬಿಗ್ ಬಾಸ್‌ನಲ್ಲಿ ಮಂಜು ಪ್ರತಿ ಸ್ಪರ್ಧಿ ಆಗಿದ್ದ ರಾಜೀವ್ ಕೆಲವು ದಿನಗಳ ಹಿಂದೆ 'ಉಸಿರೇ ಉಸಿರೇ' ಚಿತ್ರದ ಮುಹೂರ್ತ ಮಾಡಿದ್ದಾರೆ. ಮೊದಲ ಬಾರಿ ರಾಜೀವ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.

ಇದೀಗ 'ಉಸಿರೇ ಉಸಿರೇ' ತಂಡದ ಜೊತೆ ಮಂಜು ಪಾವಗಡ ಕೈ ಜೋಡಿಸಿದ್ದಾರೆ. 'ನನ್ನ ಆಪ್ತ ಸ್ನೇಹಿತ ರಾಜೀವ್‌ ಜೊತೆ ಕೆಲಸ ಮಾಡುವುದಕ್ಕೆ ನಾನು ಕಾಯುತ್ತಿರುವೆ. ನಮ್ಮ ಸ್ನೇಹ ಇನ್ನೂ ಹೆಚ್ಚು ಗಟ್ಟಿಯಾಗಿರುವ ಕಾರಣ ಆನ್‌ ಸ್ಕ್ರೀನ್‌ ಸೂಪರ್ ಆಗಿ ಕಾಣಿಸಲಿದೆ. ಇದೊಂದು ಕಾಲೇಜ್‌ ಸ್ಟೋರಿ ಆಗಿದ್ದು ಕ್ಲೈಮ್ಯಾಕ್ಸ್‌ನಲ್ಲಿ ನನ್ನ ಪಾತ್ರಕ್ಕೆ ದೊಡ್ಡ ಟ್ವಿಸ್ಟ್‌ ಇರಲಿದೆ,' ಎಂದು ಮಂಜು ಪಾತ್ರದ ಬಗ್ಗೆ ಮಾತನಾಡಿದ್ದಾರೆ. 

'ನಾನು ತುಂಬಾ ಸಿನಿಮಾ ಕಥೆಗಳನ್ನು ಕೇಳುತ್ತಿರುವೆ. ಹಾಸ್ಯ ಪಾತ್ರಕ್ಕೆ ಮಾತ್ರ ಸೀಮಿತನಾಗಬಾರದು ಅಂದುಕೊಂಡಿರುವೆ. ಬೇರೆ ಬೇರೆ ರೀತಿಯ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ವರ್ಷಗಳ ಕಾಲ ಉಳಿಯಬೇಕು ಎಂದುಕೊಂಡಿರುವೆ. ನನಗೆ ಹೊಸ ಜೀವ ಕೊಟ್ಟ ಕಿರುತೆರೆಗೆ ಮತ್ತೆ ಕಮ್‌ ಬ್ಯಾಕ್ ಮಾಡುವೆ. ಪಕ್ಕಾ ಈ ಪಾತ್ರ ಹೊಸ ಹೆಸರು ತಂದುಕೊಡಲಿದೆ' ಎಂದು ಮಂಜು ಹೇಳಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್