
ಬಿಗ್‌ಬಾಸ್ 13 (Bigg Boss 13) 6ನೇ ವಾರ ಮುಗಿದಿದೆ. ಈ ಸಂದರ್ಭದಲ್ಲಿ, ಅಗ್ನಿಪರೀಕ್ಷೆಯಲ್ಲಿ ಗೆದ್ದು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದ ಲಕ್ಷ್ಮೀ ಗೌಡ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಕಡಿಮೆ ವೋಟ್‌ಗಳ ಕಾರಣದಿಂದ ಹೊರಬಿದ್ದಿರುವ ಲಕ್ಷ್ಮೀ, ಸಹಜವಾಗಿ ಒಂದಷ್ಟು ದಿನಗಳವರೆಗೆ ಸೆಲೆಬ್ರಿಟಿಯಾಗಿರುತ್ತಾರೆ, ಬಹು ಬೇಡಿಕೆ ಇರುತ್ತದೆ. ಇದೇ ಕಾರಣಕ್ಕೆ ಇದೀಗ ಅವರು ವಿವಿಧ ಮಾಧ್ಯಮಗಳಲ್ಲಿ ತಮ್ಮ ಬಿಗ್‌ಬಾಸ್ ಪಯಣದ ಕುರಿತು ಮಾತನಾಡುತ್ತಿದ್ದಾರೆ.
ಈ ವೇಳೆ ಅವರು ಶಾಕಿಂಗ್ ಎನ್ನುವಂಥ ವಿಷಯವೊಂದನ್ನು ಹೇಳಿದ್ದಾರೆ. ಅದು ಬಿಗ್ಬಾಸ್ನಲ್ಲಿ ಚುಟುಪುಟು ಎಂದು ಮಾತನಾಡುತ್ತಿರುವ ಕುಮಾರಿ ಕುರಿತು. ಬಿಗ್ಬಾಸ್ನ ಅಗ್ನಿಪರೀಕ್ಷೆಯಲ್ಲಿ ಕುಮಾರಿ ಆಯ್ಕೆಯಾಗುತ್ತಾರೆ ಎನ್ನುವಾಗಲೇ ಅನಾರೋಗ್ಯದ ನಿಮಿತ್ತ ಅವರನ್ನು ಒಳಗೆ ಕಳುಹಿಸಿರಲಿಲ್ಲ. ಆದರೆ ಈ ಬಾರಿಯ ಬಿಗ್‌ಬಾಸ್ ತೀರಾ ಸಪ್ಪೆ ಎನ್ನಿಸುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಒಂದೇ ಸಮನೆ ಜನರು ಆಡಿಕೊಳ್ಳಲು ಶುರು ಮಾಡಿದರು, ಈ ಹಿನ್ನೆಲೆಯಲ್ಲಿ ಕುಮಾರಿ ಒಳಕ್ಕೆ ಹೋದರೆ ರಕ್ಷಿತಾ ಶೆಟ್ಟಿ (Rakshita Shetty) ರೀತಿ ಒಂದಿಷ್ಟು ಎಂಟರ್ಟೈನ್ ಮಾಡಬಹುದು ಎನ್ನುವ ಲೆಕ್ಕಾಚಾರದಿಂದಲೋ ಏನೋ ಅವರನ್ನು ಮನೆಯೊಳಕ್ಕೆ ಕಳುಹಿಸಲಾಗಿದೆ.
ಇದೀಗ ಲಕ್ಷ್ಮೀ ಗೌಡ ಅವರು ಕುಮಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. statenewsind ಎನ್ನುವ ಚಾನೆಲ್ನಲ್ಲಿ ಮಾತನಾಡುವ ವೇಳೆ ಲಕ್ಷ್ಮೀ ಅವರಿಗೆ ಬಿಗ್ಬಾಸ್ನಲ್ಲಿ ಕ್ಲೀನ್ ಇಲ್ಲದೇ ಇರುವವರು ಯಾರು ಎಂದು ಕೇಳಿದಾಗ ಕುಮಾರಿ ಹೆಸರನ್ನು ಹೇಳಿದ್ದಾರೆ. ಅವರು ಸ್ನಾನನೇ ಮಾಡಲ್ಲ. ಅವರು ಸ್ನಾನ ಮಾಡಿದ್ರು ಎಂದರೆ ಆ ದಿನ ಉಳಿದವರು ಸೆಲೆಬ್ರೇಟ್ ಮಾಡ್ತಾರೆ. ನನಗೆ ತುಂಬಾ ಅಸಹ್ಯ ಎನ್ನಿಸಿತು. ನಾನು ಬಿಗ್‌ಬಾಸ್ ಮನೆಯೊಳಕ್ಕೆ ಹೋದಾಗಲೂ ಅಲ್ಲಿ ಸಿಂಕ್ ಎಲ್ಲಾ ತುಂಬಾ ಗಲೀಜು ಇತ್ತು. ನೋಡಿ ಅಸಹ್ಯ ಆಗಿತ್ತು ಎಂದಿದ್ದಾರೆ.
ಇನ್ನು ಲಕ್ಷ್ಮೀ ಗೌಡ ಅವರು, ಬಿಗ್ಬಾಸ್ನಿಂದ ಹೊರಕ್ಕೆ ಬರುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ರಾಜ್ಯದ ಜನತೆಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಮಾಡಿದ್ದಾರೆ. “ನನ್ನ ಬಿಗ್ ಬಾಸ್ ಪಯಣ ಇಲ್ಲಿಗೆ ಮುಗಿದಿರಬಹುದು, ಆದರೆ, ನೀವು ಕೊಟ್ಟ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಗಳು ನನ್ನ ಹೃದಯದಲ್ಲಿ ಸದಾ ಉಳಿಯುತ್ತವೆ. ಕರ್ನಾಟಕದ ಜನತೆ ನನ್ನ ಮೇಲೆ ಇಟ್ಟ ನಂಬಿಕೆ, ನನ್ನನ್ನ ಪ್ರೀತಿಯಿಂದ ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ನನಗೆ ಯಾವಾಗಲೂ ದೊಡ್ಡ ಶಕ್ತಿ. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದೇನೆ. ಆದರೆ, ನಿಮ್ಮ ಮನಸ್ಸಿನಲ್ಲಿ ನಾನು ಸದಾ ಇರಬೇಕೆಂಬುದೇ ನನ್ನ ಆಸೆ. ನನ್ನನ್ನ ಪ್ರೀತಿಸಿದ, ನನಗಾಗಿ ಮತ ಹಾಕಿದ ಮತ್ತು ಕೊನೆಯವರೆಗೂ ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ಕೋಟಿ ಕೋಟಿ ಧನ್ಯವಾದಗಳು. ನಿಮ್ಮ ಪ್ರೀತಿ ನನ್ನ ಗೆಲುವು, ನಿಮ್ಮ ಬೆಂಬಲ ನನ್ನ ಶಕ್ತಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.