ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇದೆ ನನ್ನ ತಟ್ಟೆಯಲ್ಲಿ ನೊಣ ಹುಡುಕಬೇಡಿ; ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ವೈರಲ್

Published : Mar 11, 2023, 11:30 AM ISTUpdated : Mar 11, 2023, 11:40 AM IST
 ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇದೆ ನನ್ನ ತಟ್ಟೆಯಲ್ಲಿ ನೊಣ ಹುಡುಕಬೇಡಿ; ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ವೈರಲ್

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಕೀರ್ತಿ. ಆಕ್ರೋಶಕ್ಕೆ ಕಾರಣವೇನು?

ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ನಟ ಕಿರಿಕ್ ಕೀರ್ತಿ ಕೆಲವು ತಿಂಗಳುಗಳ ಹಿಂದೆ ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎಂದು ಬರೆದುಕೊಂಡಿದ್ದರು. ಈಗ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಜನರು ಬೇಕಾಬಿಟ್ಟಿ ತಮ್ಮ ಜೀವನದ ಬಗ್ಗೆ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಯಾವ ವಿಚಾರದಲ್ಲಿ ಕೀರ್ತಿ ಅವರನ್ನು ಟಾರ್ಗೇಟ್ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ....

ವಿಡಿಯೋದಲ್ಲಿ ಕೀರ್ತಿ ಮಾತು: 

'ಸೋಷಿಯಲ್ ಮೀಡಿಯಾ ಹೀರೋಗಳ ದಯವಿಟ್ಟು ನಮಗೆ ಬದುಕಲು ಬಿಡಿ. ಯಾಕೆ ನಮಗೆ ಟಾರ್ಚರ್‌ ಮಾಡುತ್ತಿರುವುದು? ನಮ್ಮ ಜೀವನದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಮಗೆ ಕ್ಲಾರಿಟಿ ಇಲ್ಲ ಅಂದ್ಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ? ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ಅರಿವು ನಮ್ಮ ಕುಟುಂಬಕ್ಕೆ ಇಲ್ಲ. ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇರುತ್ತದೆ . ನಿಮಗೆ ಬೇಕಾದ ರೀತಿಯಲ್ಲಿ ಕಲ್ಪಿಸಿಕೊಂಡು ಹೀಗಂತೆ ಅವನು ಹಾಗಂತೆ ಇವಳು ಈ ರೀತಿ ಮಾಡಿದ್ದಾರೆ ಅಂತೀರಾ ಅಲ್ವಾ ಯಾರು ಬಂದು ನಿಮ್ಮ ಬಳಿ ಕಥೆ ಹೇಳಿದ್ದಾರೆ. ನಮ್ಮ ಮನೆಯ ಮತ್ತೊಂದು ರೂಮಿನಲ್ಲಿ ನೀವು ವಾಸವಿದ್ರಾ? ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ? ಯಾರೋ ಒಂದಿಷ್ಟು ಊಹಾ ಪೋಹಗಳನ್ನು ಹರಿಡಿದಾಗ ಕ್ಲಾರಿಟಿ ಕೊಡಬೇಕು ಅದಕ್ಕೆ ಕ್ಲಾರಿಟಿ ಕೊಟ್ಟಿರುವೆ' ಎಂದು ಕೀರ್ತಿ ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಡೆತ್ ನೋಟ್ ಬರೆದಿಟ್ಟು ಜಗತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದೆ; ಕಿರಿಕ್ ಕೀರ್ತಿ ಶಾಕಿಂಗ್ ಪೋಸ್ಟ್ ವೈರಲ್

'ನಾನು ಚೆನ್ನಾಗಿರುವೆ ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೀವಿ. ನಾನು ಏನಾದರೂ ಬಂದು ಅವಳು ಹೀಗೆ ಮಾಡಿದ್ದಾಳೆ ಅಥವಾ ಅವಳು ಬಂದು ನಾನು ಹೀಗೆ ಮಾಡಿರುವೆ ಎಂದು ಏನಾದರೂ ಹೇಳಿದ್ದಾರಾ? 10 ವರ್ಷ ಸಂಸಾರ ಮಾಡಿದವರಿಗೆ ಬದುಕು ಹೇಗೆ ನಿಭಾಯಿಸಬೇಕು ಅನ್ನೋ ಅರಿವು ನಮಗಿದೆ. ನನ್ನ ಹೊಟ್ಟೆ ಉರಿಸುವುದು ಯಾಕೆ ನಿಮ್ಮ ಕಾಮೆಂಟ್ ಪೋಸ್ಟ್‌ನ ನನ್ನ ಕುಟುಂಬದವರು ನೋಡಿ ಕಣ್ಣೀರು ಹಾಕುವುದು, ಅವಳ ಮನೆಯವರು ನೋಡಿ ಅವರು ಕಣ್ಣೀರು ಹಾಕುವುದು ..ಇದರಿಂದ ನಿಮಗೆ ಏನು ಸಿಗುತ್ತದೆ? ನಿಮಗೂ ತಂದೆ ತಾಯಿ ಮಕ್ಕಳು ತಂಗಿ ಅಣ್ಣ ಇರ್ತಾರೆ ಅಲ್ವಾ? ಹಾಗೆ ನಾವು ಕೂಡ ಒಬ್ಬರು ಅಂದುಕೊಳ್ಳಿ. ನಮ್ಮ ಪೋಸ್ಟ್‌ ನಮ್ಮ ಸ್ಟೋರಿಗಳ ಆಧಾರದ ಮೇಲೆ ನೀವೇ ಕಥೆ ಸೃಷ್ಠಿ ಮಾಡಿಕೊಂಡು ನೀವೇ ಏನೋ ನಿರ್ಧಾರ ಮಾಡಿಕೊಂಡಿದ್ದೀರಿ. ಏನಾದರೂ ಆದಾಗ ನಾವೇ ಬಂದು ಕ್ಲಾರಿಟಿ ಕೊಡುತ್ತೀವಿ. ಸೈದ್ಧಾಂತಿಕ  ವಿಚಾರಗಳಲ್ಲಿ ನನ್ನನ್ನು ವಿರೋಧಿಸಲು ಆಗದೇ ಇದ್ದಾಗ ಬಿಟ್ಟು ಬಿಡಿ ಅದನ್ನು ಬಿಟ್ಟು ವೈಯಕ್ತಿ ವಿಚಾರದಲ್ಲಿ ಯಾಕೆ ಎಳೆದು ತರುತ್ತೀರಿ? ನಿಮ್ಮ ಪ್ರೋಫೈಲ್‌ನಲ್ಲಿ ನಿಮ್ಮ ಫೋಟೋ ಹಾಕಿಕೊಳ್ಳುವ ಯೋಗ್ಯತೆ ಇರುವುದಿಲ್ಲ ಅಲ್ಲಿ ನನ್ನ ಫೋಟೋ ಹಾಕಿ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ' ಎಂದು ಕೀರ್ತಿ ಹೇಳಿದ್ದಾರೆ.

ಮಡದಿಗೆ ನೆಟ್ಟಿಗರ ಚುಚ್ಚು ಮಾತು, ಕುಟುಂಬದಲ್ಲಿ ಅಸಮಾಧಾನ: ನೋವು ತೋಡಿಕೊಂಡ ಕಿರಿಕ್ ಕೀರ್ತಿ

'ನನಗೆ 7 ವರ್ಷ ಮಗ 60-70 ವರ್ಷದ ಅಮ್ಮ ಅಪ್ಪ ಇದ್ದಾರೆ ಹೊಟ್ಟೆ ಉರಿಯುತ್ತದೆ. ನಿಮ್ಮ ತಾಯಿ ಅಥವಾ ಹೆಂಡತಿ ಹೋಗೋ ಇನ್ನು ಮನೆಗೆ ರೇಷನ್ ತಂದಿಲ್ಲ ನಾಚಿಕೆ ಮಾನ ಮರ್ಯಾದೆ ಇಲ್ಲ ಅಂತ ಮನೆಯಿಂದ ಹೊರ ದಬ್ಬಿರುತ್ತಾರೆ ಆ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಅಗುವುದಿಲ್ಲ ಅಂತ ನನ್ನ ವಿಚಾರಗಳನ್ನು ಹಾಕುತ್ತೀರಾ  ಅಂದ್ರೆ ಮನುಷ್ಯರಾ ನೀವು? ನಿಮ್ಮ ತಟ್ಟೆಯಲ್ಲಿ ಹೆಗಣ ಬಿದ್ದಿದ್ದೆ ನನ್ನ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದೀರಾ? ನನ್ನ ಸಂಕಟ ನಮಗೆ ಗೊತ್ತು ಏನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ ಹೇಗೆ ಸರಿ ಮಾಡಬೇಕು ಹೇಗೆ ಅನುಸರಿಸಿಕೊಳ್ಳಬೇಕು ಅನ್ನೋ ಅರಿವು ನಮಗಿದೆ. ಮತ್ತೊಬ್ಬರ ಬದುಕು ನಾಶ ಮಾಡಲು ಯಾಕೆ ಸೋಷಿಯಲ್ ಮೀಡಿಯಾವನ್ನು ಬಳಸುತ್ತೀರಾ?' ಎಂದಿದ್ದಾರೆ ಕೀರ್ತಿ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?