BBK9: ಮನೆಯ ಮೊದಲ ಕ್ಯಾಪ್ಟನ್ ಆದ ವಿನೋದ್ ಗೊಬ್ರಗಾಲ, ಅತ್ಯುತ್ತಮ ಅರುಣ್-ಕಳಪೆ ರೂಪೇಶ್!

By Gowthami K  |  First Published Sep 30, 2022, 11:32 PM IST

ಬಿಗ್ ಬಾಸ್ ಸೀಸನ್ 9 ಮೊದಲ  ಕ್ಯಾಪ್ಟನ್ ಆಗಿ ವಿನೋದ್ ಗೊಬ್ರಗಾಲ ಅವರು ಆಯ್ಕೆಯಾಗಿದ್ದಾರೆ. ಅರುಣ್ ಸಾಗರ್  ಅತೀ ಹೆಚ್ಚು ಓಟು ಪಡೆದು ಮನೆಯ ಅತ್ಯುತ್ತಮ ಪಡೆದರು.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಮೊದಲ  ಕ್ಯಾಪ್ಟನ್ ಆಗಿ ವಿನೋದ್ ಗೊಬ್ರಗಾಲ ಅವರು ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಆಡಲು  ಪ್ರಶಾಂತ್ ಸಂಬರ್ಗಿ ಮತ್ತು ವಿನೋದ್ ಗೊಬ್ರಗಾಲ ನೇರವಾಗಿ ಆಯ್ಕೆಯಾಗಿದ್ದರು. ದೀಪಿಕಾ ದಾಸ್-ಅಮೂಲ್ಯ  ಹಾಗೂ ಐಶ್ವರ್ಯಾ ಪಿಸೆ-ದಿವ್ಯಾ ಉರುಡುಗ ನಡುವೆ ಟೈ ಆಗಿತ್ತು. ಹೀಗಾಗಿ ಒಂದು ಜೋಡಿ ಮಾತ್ರ ಅವಕಾಶ ನೀಡಿದ ಬಿಗ್ ಬಾಸ್ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಲು ಅವಕಾಶ ನೀಡಿದರು. ಹೀಗಾಗಿ ದೀಪಿಕಾ-ಅಮೂಲ್ಯ ಜೋಡಿ ತಮ್ಮ ಆಟವನ್ನು ದಿವ್ಯಾ-ಪಿಸೆ ಜೋಡಿಗೆ ಬಿಟ್ಟು ಕೊಟ್ಟರು.   ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್ ಗೆ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ, ವಿನೋದ್ ಗೊಬ್ರಗಾಲ, ಐಶ್ವರ್ಯಾ ಪಿಸೆ ಮಧ್ಯೆ ಪೈಪೋಟಿ ಇತ್ತು. ಮೊದಲ ಸುತ್ತಿನಲ್ಲಿ ವಿನೋದ್ ಗೊಬ್ರಗಾಲ ಮತ್ತು ಐಶ್ವರ್ಯಾ ಪಿಸೆ ಆಡಿದರು. ಇದರಲ್ಲಿ ವಿನೋದ್ ಗೊಬ್ರಗಾಲ ಗೆದ್ದು ಮುಂದಿನ ಸುತ್ತಿಗೆ ಆಯ್ಕೆಯಾದರು. ಎರಡನೇ ಸುತ್ತಿನಲ್ಲಿ ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿ ಮಧ್ಯೆ ಆಟ ನಡೆದಿತ್ತು. ಇದರಲ್ಲಿ ದಿವ್ಯಾ ಗೆದ್ದು ಮುಂದಿನ ಸುತ್ತಿಗೆ ಆಯ್ಕೆ ಆದರು.  ಪೈನಲ್ ಸುತ್ತಿನಲ್ಲಿ  ವಿನೋದ್ ಗೊಬ್ರಗಾಲ ಮತ್ತು ದಿವ್ಯಾ ನಡುವೆ ಪೈಪೋಟಿ ನಡೆದು. ಮನೆಯ ನಾಯಕನಾಗಿ ನವೀನರಲ್ಲಿ  ಒಬ್ಬರಾದ ವಿನೋದ್ ಗೊಬ್ರಗಾಲ ಅವರು ಆಯ್ಕೆಯಾಗಿದ್ದಾರೆ.

ಅತ್ಯುತ್ತಮ-ಕಳಪೆ ಆಯ್ಕೆ:
ಮನೆಯ ನಾಯಕನಾಗಿ ಗೊಬ್ರಗಾಲ ಆಯ್ಕೆಯಾದ ಬಳಿಕ, ಮನೆಯಲ್ಲಿರುವ 18 ಜನರಲ್ಲಿ ಯಾರು ಉತ್ತಮರು? ಯಾರು ಕಳಪೆ ಎಂಬ ಬಗ್ಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಉತ್ತಮ ಎಂಬ ಆಯ್ಕೆಯಲ್ಲಿ ಅರುಣ್ ಸಾಗರ್  ಅತೀ ಹೆಚ್ಚು ಓಟು ಪಡೆದು ಅತ್ಯುತ್ತಮ ಪಡೆದರು. ಮನೆಯವರನ್ನು ಲವಲವಿಕೆಯಿಂದ ಇಟ್ಟ ಕಾರಣಕ್ಕೆ ಅರುಣ್ ಅವರನ್ನು ಮನೆಯವರು ಆಯ್ಕೆ ಮಾಡಿದರು. ಕಳಪೆ ಆಯ್ಕೆಯಲ್ಲಿ ಅತೀ ಹೆಚ್ಚು ಓಟು ಗಳಿಸಿದ ರೂಪೇಶ್ ರಾಜಣ್ಣ ಅವರು ಜೈಲಿಗೆ ಹೋದರು.

Tap to resize

Latest Videos

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಗಿಚ್ಚಿಗಿಲಿಗಿಲಿ), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, 15. ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಪಾಲ್ಗೊಂಡಿದ್ದಾರೆ.

Bigg Boss Kannada season 9: ಅರುಣ್ ಸಾಗರ್ ಮೇಲೆ ಸಿಟ್ಟಾದ ಮನೆಮಂದಿ!

ಮೊದಲ ವಾರದ ಎಲಿಮನೇಟಿಗೆ ನಾಮನಿರ್ದೇಶನವಾಗಿದ್ದು, ಯಾರು ಎಲಿಮನೇಟ್ ಆಗುತ್ತಾರೆ ಮೊದಲ ವಾರದಲ್ಲಿ ಎಂಬುದನ್ನು ಕಾದು ನೋಡಬೇಕು. ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಸಾರಿ ಗೆಲ್ಲೋದು ಅವರೇ ಎಂದು ಊಹಿಸುತ್ತಿದ್ದಾರೆ.

click me!