ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ 9 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂಬಂಧ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ.
ಬೆಂಗಳೂರು (ಸೆ.7): ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ 9 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂಬಂಧ ಪ್ರೋಮ್ ಬಿಡುಗಡೆಯಾಗಿದೆ. ಜೊತೆಗೆ ಈಗ ನಡೆಯುತ್ತಿರುವ ಒಟಿಟಿ ಶೋ ಮುಂದಿನ ವಾರ ಮುಗಿಯುತ್ತಿದ್ದು, ಯಾರೆಲ್ಲ ಒಟಿಟಿಯಿಂದ ಟಿವಿ ಶೋಗೆ ಹೋಗಲಿದ್ದಾರೆ ಎಂಬ ಕುತೂಹಲ ಕೂಡ ಹೆಚ್ಚಿದೆ. ಬಿಗ್ ಬಾಸ್ ಶೋ 8 ಸೀಸನ್‌ಗಳನ್ನು ಯಶಸ್ವಿಯಾಗಿ ಮುಕ್ತಾಯವಾದ ಬಳಿಕ ಬಿಗ್ ಬಾಸ್ 9 ನೇ ಸೀಸನ್ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ವೂಟ್ ಆ್ಯಪ್ ನಲ್ಲಿ ಕನ್ನಡದ ಮೊದಲ ಒಟಿಟಿ ಶೋವನ್ನು ಆರಂಭ ಮಾಡಲಾಗಿತ್ತು. ಆಗಸ್ಟ್ 6ರಿಂದ ಬಿಗ್ ಬಾಸ್ ಒಟಿಟಿ ಆರಂಭವಾಗಿದ್ದು, 6 ವಾರಗಳ ಕಾಲ ಈ ಸ್ಪರ್ಧೆ ನಡೆಯಲಿದೆ. ಬಳಿಕ ಬಿಗ್ ಬಾಸ್ 9 ನೇ ಸೀಸನ್ ಆರಂಭವಾಗಲಿದೆ. ಸದ್ಯ ಒಟಿಟಿ ಶೋ ನಡೆಯುತ್ತಿದ್ದು 24/7 ಲೈವ್ ಅನ್ನು ವೀಕ್ಷಕರು ನೋಡುತ್ತಿದ್ದಾರೆ. ಡಿಜಿಟಲ್ ಎಂಟರ್‌ಟೇನ್ಮೆಂಟ್ ಕ್ಷೇತ್ರದಲ್ಲಿ ಬಿಗ್‍ಬಾಸ್ ಒಟಿಟಿ ಹಿಂದಿ ಒಂದು ಗೇಮ್ ಚೇಂಜರ್ ಎಂಬುದನ್ನು ಸಾಬೀತು ಮಾಡಿತ್ತು. ಹೀಗಾಗಿ ಇದರ ಪ್ರಯೋಗ ಮೊದಲ ಬಾರಿಗೆ ಕನ್ನಡದಲ್ಲಿ ನಡೆದಿದೆ.
ಈ ವಾರ 5ನೇ ವಾರದ ಒಟಿಟಿ ಶೋ ನಡೆಯುತ್ತಿದ್ದು, ಇವರಲ್ಲಿ ಸೋನು , ಸೋಮಣ್ಣ ಮಾಚಿಮಾಡ, ನಂದಿನಿ, ಆರ್ಯವರ್ಧನ್, ಜಸ್ವಂತ್ ಬೋಪಣ್ಣ ಹಾಗೂ ಜಯಶ್ರೀ ಬೋಪಣ್ಣ ಡೇಂಜರ್ ಝೋನ್‌ನಲ್ಲಿದ್ದು, ಯಾರು ಈ ವಾರ ಮನೆಯಿಂದ ಹೊರಹೋಗುತ್ತಾರೆ ಕಾದುನೋಡಬೇಕಿದೆ. ಮುಂದಿನ ವಾರ 6ನೇ ವಾರಕ್ಕೆ ಒಟಿಟಿ ಶೋ ಮುಕ್ತಾಯವಾಗಲಿದ್ದು, ಒಟಿಟಿಯಿಂದ ಟಿವಿ ಶೋ ಗೆ ಹೋಗೋರು ಯಾರು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಿದೆ.
Sonu Gowda Troll ಸುದೀಪ್ ಮಾತಿಗೆ ಅಗೌರವ; ಎಲಿಮಿನೇಟ್ ಮಾಡಲು ನೆಟ್ಟಿಗರ ಡಿಮ್ಯಾಂಡ್!
ಇನ್ನು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಸ್ಪರ್ಧಿಯಾಗಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಎರಡನೇ ಕಂಟೆಸ್ಟೆಂಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ, ಮೂರನೇ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ, ನಾಲ್ಕನೇ ಕಂಟೆಸ್ಟೆಂಟ್ ಆಗಿ ಸ್ಪೂರ್ತಿ ಗೌಡ , ಐದನೇ ಸ್ಪರ್ಧಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಸಾನ್ಯಾ ಅಯ್ಯರ್, 6ನೇ ಸ್ಪರ್ಧಿಯಾಗಿ ಕಾಮಿಡಿ ಕಿಲಾಡಿಗಳು ಶೋನಲ್ಲಿ ಜನಪ್ರಿಯರಾಗಿದ್ದ ಲೋಕೇಶ್, 7ನೇ ಸ್ಪರ್ಧಿಯಾಗಿ ಮಾಡೆಲ್, ಡ್ಯಾನ್ಸರ್, ರಾಜಸ್ಥಾನದ ಹುಡುಗಿ ಕಿರಣ್ ಯೋಗೇಶ್ವರ್ , 8ನೇ ಸ್ಪರ್ಧಿಯಾಗಿ ನಟ ರಾಕೇಶ್ ಅಡಿಗ , 9 ನೇ ಸ್ಪರ್ಧಿಯಾಗಿ ಅಕ್ಷತಾ ಕುಕ್ಕಿ, 10ನೇ ಸ್ಪರ್ಧಿಯಾಗಿ ನಟಿ ಚೈತ್ರಾ ಹಳ್ಳಿಕೇರಿ, 11ನೇ ಸ್ಪರ್ಧಿಯಾಗಿ ಉದಯ್ ಅಲಿಯಾಸ್ ವಿವೇಕ್, 12ನೇ ಸ್ಪರ್ಧಿಯಾಗಿ ಜಯಶ್ರೀ ಆರಾಧ್ಯ, 13ನೇ ಸ್ಪರ್ಧಿಯಾಗಿ ನಟ ಅರ್ಜುನ್ ರಮೇಶ್ , 14ನೇ ಸ್ಪರ್ಧಿಯಾಗಿ ಎಂಟಿವಿ ರೋಡೀಸ್ 18 ಕಂಟೆಸ್ಟೆಂಟ್ ನಂದು , 15ನೇ ಸ್ಪರ್ಧಿಯಾಗಿ ಎಂಟಿವಿ ರೋಡೀಸ್ 18 ಕಂಟೆಸ್ಟೆಂಟ್ ಜಶ್ವಂತ್ ಬೋಪಣ್ಣ , 16ನೇ ಸ್ಪರ್ಧಿಯಾಗಿ ಸುದ್ದಿ ನಿರೂಪಕ ಸೋಮಣ್ಣ ಮಾಚಿಮಡ ಅವರು ಎಂಟ್ರಿ ಕೊಟ್ಟಿದ್ದರು.
Bigg Boss OTT; ಜಯಶ್ರೀ ಕೆನ್ನೆಗೆ ರಾಕೇಶ್ ಕಿಸ್ ಮಾಡಿದ್ರೆ ಸೋನು ಗೌಡಗೆ ಯಾಕೆ ಹೊಟ್ಟೆಕಿಚ್ಚು?
ಎಲ್ಲಾ ರಿಯಾಲಿಟಿ ಶೋಗಳ ಬಿಗ್‍ಬಾಸ್ | ಬರ್ತಿದೆ ಸೀಸನ್ ಒಂಭತ್ತು pic.twitter.com/A89IUtv4FU
— Colors Kannada (@ColorsKannada)ಹೀಗೆ ಬಿಗ್‌ಬಾಸ್ ಒಟಿಟಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ಸದ್ಯಕ್ಕೆ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ, ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಸಾನ್ಯಾ ಅಯ್ಯರ್, ಸಂಖ್ಯಾಶಾಸ್ತ್ರ ಖ್ಯಾತಿಯ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿವಾಡ, ರೂಪೇಶ್ ಶೆಟ್ಟಿ, ರಾಕೇಶ್, ಜಯಶ್ರೀ ಆರಾಧ್ಯ, ಪ್ರೇಮಿಗಳಾಗಿರುವ ಜಶ್ವಂತ್ ಬೋಪಣ್ಣ ಮತ್ತು ನಂದು ಉಳಿದುಕೊಂಡಿದ್ದಾರೆ.